Mangaluru News: ಮಹಿಳೆಯರಿಗೆ ಉಚಿತ ಬಸ್​ ಪ್ರಯಾಣ ಸೌಲಭ್ಯ; ಕರಾವಳಿ ಜಿಲ್ಲೆಗಳ ಖಾಸಗಿ ಬಸ್​ಗಳಿಗೆ ನಷ್ಟದ ಆತಂಕ

ದಕ್ಷಿಣ ಕನ್ನಡ ಜಿಲ್ಲಾ ಸಿಟಿ ಬಸ್ ಮಾಲೀಕರ ಸಂಘದ ಸದಸ್ಯರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಡೀಸೆಲ್ ಸಬ್ಸಿಡಿ ರೂಪದಲ್ಲಿ ಪರಿಹಾರ ನೀಡುವ ಅಗತ್ಯವನ್ನು ಮನವರಿಕೆ ಮಾಡಿಕೊಡಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Mangaluru News: ಮಹಿಳೆಯರಿಗೆ ಉಚಿತ ಬಸ್​ ಪ್ರಯಾಣ ಸೌಲಭ್ಯ; ಕರಾವಳಿ ಜಿಲ್ಲೆಗಳ ಖಾಸಗಿ ಬಸ್​ಗಳಿಗೆ ನಷ್ಟದ ಆತಂಕ
ಖಾಸಗಿ ಬಸ್​​ಗಳು (ಸಾಂದರ್ಭಿಕ ಚಿತ್ರ)
Follow us
ಗಣಪತಿ ಶರ್ಮ
|

Updated on: Jun 02, 2023 | 9:18 PM

ಮಂಗಳೂರು: ಕೆಎಸ್​ಆರ್​ಟಿಸಿ ಬಸ್​ಗಳಲ್ಲಿ (KSRTC Bus) ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅನುವು ಮಾಡಿಕೊಡುವ ‘ಶಕ್ತಿ’ ಯೋಜನೆಯನ್ನು (Shakti Scheme) ಜೂನ್ 11ರಿಂದ ಆರಂಭ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದು, ಕರಾವಳಿ ಕರ್ನಾಟಕ ಭಾಗದ ಖಾಸಗಿ ಬಸ್​​ ನಿರ್ವಾಹಕರನ್ನು ಚಿಂತೆಗೀಡು ಮಾಡಿದೆ. ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಘೋಷಿಸಿರುವುದು ಖಾಸಗಿ ಬಸ್​ಗಳಿಗೆ ಹೊರೆಯಾಗುವ ಸಾಧ್ಯತೆಯಿದೆ. ಕರಾವಳಿ ಜಿಲ್ಲೆಗಳಲ್ಲಿ ಖಾಸಗಿ ಬಸ್​ಗಳ ಸಂಖ್ಯೆಯೇ ಹೆಚ್ಚಿದೆ. ಸರ್ಕಾರದ ಯೋಜನೆಯಿಂದ ಖಾಸಗಿ ಬಸ್‌ಗಳ ಲಾಭದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಈ ಮಧ್ಯೆ, ದಕ್ಷಿಣ ಕನ್ನಡ ಜಿಲ್ಲಾ ಸಿಟಿ ಬಸ್ ಮಾಲೀಕರ ಸಂಘದ ಸದಸ್ಯರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಡೀಸೆಲ್ ಸಬ್ಸಿಡಿ ರೂಪದಲ್ಲಿ ಪರಿಹಾರ ನೀಡುವ ಅಗತ್ಯವನ್ನು ಮನವರಿಕೆ ಮಾಡಿಕೊಡಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರವಾದ ಮಂಗಳೂರು ನಗರವೊಂದರಲ್ಲೇ ಸುಮಾರು 328 ಬಸ್‌ಗಳನ್ನು ಖಾಸಗಿ ನಿರ್ವಾಹಕರು ನಡೆಸುತ್ತಿದ್ದು, 68 ಬಸ್‌ಗಳು ಗ್ರಾಮಾಂತರ ಪ್ರದೇಶದಲ್ಲಿ ಕಾಂಟ್ರಾಕ್ಟ್ ಕ್ಯಾರೇಜ್ ಆಧಾರದ ಮೇಲೆ ಕಾರ್ಯಾಚರಿಸುತ್ತಿವೆ. ಇಲ್ಲಿ ಖಾಸಗಿ ಬಸ್ ನಿರ್ವಾಹಕರೊಂದಿಗೆ ಕೆಎಸ್​​​ಆರ್​​ಟಿಸಿ ನೇರ ಪೈಪೋಟಿ ನಡೆಸುತ್ತಿದೆ.

ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಪ್ರಯಾಣ ಉಚಿತವಾದರೆ, ತಮ್ಮ ಆದಾಯದ ಪ್ರಮುಖ ಮೂಲವಾಗಿರುವ ಮಹಿಳೆಯರು ಸರ್ಕಾರಿ ಬಸ್‌ಗಳಲ್ಲೇ ತೆರಳಬಹುದು ಎಂದು ಖಾಸಗಿ ಬಸ್ ನಿರ್ವಾಹಕರು ಆತಂಕಕ್ಕೊಳಗಾಗಿದ್ದಾರೆ.

ಇದನ್ನೂ ಓದಿ: Shakti Scheme: ಜೂನ್ 11ರಿಂದ ಮಹಿಳೆಯರಿಗೆ ಉಚಿತ ಪ್ರಯಾಣ; ಸಿದ್ದರಾಮಯ್ಯ ಘೋಷಣೆ, ಯಾವೆಲ್ಲ ಬಸ್​​ಗಳಲ್ಲಿ?

ಕಾಂಗ್ರೆಸ್ ಪಕ್ಷವು ಸರ್ಕಾರಿ ಬಸ್​ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಗ್ಯಾರಂಟಿ ನೀಡಿದ್ದು, ಉಡುಪಿ, ದಕ್ಷಿಣ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳ ಜನರು ಹೆಚ್ಚಾಗಿ ಖಾಸಗಿ ಬಸ್​ಗಳನ್ನು ಅವಲಂಬಿಸಿರುವುದರಿಂದ ಈ ಮೂರು ಜಿಲ್ಲೆಗಳಲ್ಲಿ ಖಾಸಗಿ ಬಸ್​ಗಳಲ್ಲಿಯೂ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಬೇಕು ಎಂದು ಮಾಜಿ ಸಚಿವ, ಬಿಜೆಪಿ ನಾಯಕ ಸುನಿಲ್ ಕುಮಾರ್ ಒತ್ತಾಯಿಸಿದ್ದರು.

ಇದನ್ನೂ ಓದಿ: ಖಾಸಗಿ ಬಸ್​ಗಳಲ್ಲಿಯೂ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಿ: ಸುನಿಲ್ ಕುಮಾರ್

ಈ ಬಗ್ಗೆ ಟ್ವೀಟ್ ಮಾಡಿದ್ದ ಸುನಿಲ್ ಕುಮಾರ್, ಉಡುಪಿ, ದಕ್ಷಿಣ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಯ ಬಹುತೇಕ ಭಾಗಗಳಿಗೆ ಸಾರಿಗೆ ಸಂಪರ್ಕ ಲಭ್ಯವಾಗುವುದು ಖಾಸಗಿ ಬಸ್​ಗಳ ಮೂಲಕ. ಇಲ್ಲಿ ಸರ್ಕಾರಿ ಬಸ್ ಸೇವೆ ಲಭ್ಯವಿಲ್ಲ. ಆದರೆ ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ನೀಡುವ ಉಚಿತ ಬಸ್ ಸೇವೆಯನ್ನು ಸರ್ಕಾರಿ ಸಾರಿಗೆ ಸಂಸ್ಥೆಗೆ ಮಾತ್ರ ಸೀಮಿತಗೊಳಿಸಲು ನಿರ್ಧರಿಸಿದೆ. ಇದರಿಂದ ಈ ಭಾಗದ ಜನರಿಗೆ ಅನ್ಯಾಯವಾಗಲಿದ್ದು, ಸರ್ಕಾರ ಈ ಮೂರು ಜಿಲ್ಲೆಗಳಲ್ಲಿ ಖಾಸಗಿ ಬಸ್ ಗಳಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಬೇಕು ಎಂದು ಉಲ್ಲೇಖಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಸ್ತೆ ದಾಟುವಾಗ ಬಸ್ ಡಿಕ್ಕಿ ಹೊಡೆದು ಕಾಲೇಜು ಯುವತಿ ಭೀಕರ ಸಾವು
ರಸ್ತೆ ದಾಟುವಾಗ ಬಸ್ ಡಿಕ್ಕಿ ಹೊಡೆದು ಕಾಲೇಜು ಯುವತಿ ಭೀಕರ ಸಾವು
ಬೃಹತ್ ಹೆಬ್ಬಾವನ್ನು ಮೈಗೆಲ್ಲ ಸುತ್ತಿಕೊಂಡ ವಿಡಿಯೋ ನೋಡಿದರೆ ಶಾಕ್ ಗ್ಯಾರಂಟಿ
ಬೃಹತ್ ಹೆಬ್ಬಾವನ್ನು ಮೈಗೆಲ್ಲ ಸುತ್ತಿಕೊಂಡ ವಿಡಿಯೋ ನೋಡಿದರೆ ಶಾಕ್ ಗ್ಯಾರಂಟಿ
ಮಕ್ಕಳು ಕ್ರೀಡಾಪಟುಗಳಾಗಿದ್ದರೆ ಕೃಪಾಂಕ ನೀಡುವ ಬಗ್ಗೆ ಪರಾಮರ್ಶೆ: ಸಿಎಂ
ಮಕ್ಕಳು ಕ್ರೀಡಾಪಟುಗಳಾಗಿದ್ದರೆ ಕೃಪಾಂಕ ನೀಡುವ ಬಗ್ಗೆ ಪರಾಮರ್ಶೆ: ಸಿಎಂ
ಡ್ಯಾನ್ಸ್ ವೇದಿಕೆಯಾಗಿ ಬದಲಾದ ಬಿಗ್ ಬಾಸ್ ಮನೆ; ಧರ್ಮ-ಐಶೂ ಮಸ್ತ್ ಕುಣಿತ
ಡ್ಯಾನ್ಸ್ ವೇದಿಕೆಯಾಗಿ ಬದಲಾದ ಬಿಗ್ ಬಾಸ್ ಮನೆ; ಧರ್ಮ-ಐಶೂ ಮಸ್ತ್ ಕುಣಿತ
ಯತೀಂದ್ರ ಸಿದ್ದರಾಮಯ್ಯಗೆ ಸಂವಿಧಾನ ಕೈಯಲ್ಲಿ ಹಿಡಿಯುವ ನೈತಿಕತೆ ಇಲ್ಲ: ಅಶೋಕ
ಯತೀಂದ್ರ ಸಿದ್ದರಾಮಯ್ಯಗೆ ಸಂವಿಧಾನ ಕೈಯಲ್ಲಿ ಹಿಡಿಯುವ ನೈತಿಕತೆ ಇಲ್ಲ: ಅಶೋಕ
ಮಹಾರಾಷ್ಟ್ರದ ಪನ್ವೇಲ್​ನಲ್ಲಿ ಇಸ್ಕಾನ್​ನಿಂದ ಮೋದಿಗೆ ವಿಶೇಷ ಸ್ವಾಗತ
ಮಹಾರಾಷ್ಟ್ರದ ಪನ್ವೇಲ್​ನಲ್ಲಿ ಇಸ್ಕಾನ್​ನಿಂದ ಮೋದಿಗೆ ವಿಶೇಷ ಸ್ವಾಗತ
ಬಸ್​​ನಿಂದ ಎಳೆದೊಯ್ದು ಕಂಡಕ್ಟರ್ ಮೇಲೆ ಮಾರಣಾಂತಿಕ ಹಲ್ಲೆ
ಬಸ್​​ನಿಂದ ಎಳೆದೊಯ್ದು ಕಂಡಕ್ಟರ್ ಮೇಲೆ ಮಾರಣಾಂತಿಕ ಹಲ್ಲೆ
ಲೈಸೆನ್ಸ್ ಹಂಚಿಕೆಯಲ್ಲಿ ಅವ್ಯಾಹತ ಭ್ರಷ್ಟಾಚಾರ: ಗುರುಸ್ವಾಮಿ, ಸಂಘದ ಅಧ್ಯಕ್ಷ
ಲೈಸೆನ್ಸ್ ಹಂಚಿಕೆಯಲ್ಲಿ ಅವ್ಯಾಹತ ಭ್ರಷ್ಟಾಚಾರ: ಗುರುಸ್ವಾಮಿ, ಸಂಘದ ಅಧ್ಯಕ್ಷ
ಕೊವಿಡ್ ಹಗರಣದ ತನಿಖೆಗೆ SIT ರಚನೆ: ಡಾ ಸಿಎನ್ ಮಂಜುನಾಥ್​ಗೂ ಸಂಕಷ್ಟ?
ಕೊವಿಡ್ ಹಗರಣದ ತನಿಖೆಗೆ SIT ರಚನೆ: ಡಾ ಸಿಎನ್ ಮಂಜುನಾಥ್​ಗೂ ಸಂಕಷ್ಟ?
ಫಲಿತಾಂಶಕ್ಕೆ ಮೊದಲೇ ಗೂಬೆ ಕೂರಿಸುವ ಕೆಲಸ ಶುರುಮಾಡಿದ ಯೋಗೇಶ್ವರ್
ಫಲಿತಾಂಶಕ್ಕೆ ಮೊದಲೇ ಗೂಬೆ ಕೂರಿಸುವ ಕೆಲಸ ಶುರುಮಾಡಿದ ಯೋಗೇಶ್ವರ್