ರಸ್ತೆ ಕಾಮಗಾರಿ ಆರಂಭ; ರಸ್ತೆ ನಿರ್ಮಿಸದೇ ಮದುವೆ ಆಗಲ್ಲ ಎಂದ ಯುವತಿಯ ಛಲಕ್ಕೆ ಸಿಕ್ಕಿತು ಪ್ರತಿಫಲ
ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ನಡುರಸ್ತೆಯಲ್ಲಿ ತಮ್ಮ ಕಾರ್ ನಿಲ್ಲಿಸಿ ನಡೆದುಕೊಂಡು ಹೋಗಿ ಗ್ರಾಮ ತಲುಪಿದ್ದರು.
ದಾವಣಗೆರೆ: ಗ್ರಾಮಕ್ಕೆ ರಸ್ತೆಯಾಗುವವರೆಗೂ ಮದುವೆಯಾಗುವುದಿಲ್ಲ ಎಂದು ಪಣ ತೊಟ್ಟಿದ್ದ ಯುವತಿಯ ಆಸೆ ಅಂತೂ ಈಡೇರತೊಡಗಿದೆ. ದಾವಣಗೆರೆ ತಾಲೂಕಿನ ಎಚ್.ರಾಂಪುರ ಗ್ರಾಮಕ್ಕೆ ರಸ್ತೆ ಕಾಮಗಾರಿ ಆರಂಭಗೊಂಡಿದೆ. ನಿನ್ನೆಯಷ್ಟೇ (ಸೆಪ್ಟೆಂಬರ್ 16) ಜಿಲ್ಲಾಧಿಕಾರಿ ಗ್ರಾಮಕ್ಕೆ ಭೇಟಿ ನೀಡಿ ಕಾಮಗಾರಿ ಆರಂಭಿಸುವ ಬಗ್ಗೆ ಭರವಸೆ ನೀಡಿದ್ದು. ಈ ಬೆನ್ನಲ್ಲೆ ಇಂದು ರಸ್ತೆ ಕಾಮಗಾರಿ ಆರಂಭಗೊಂಡಿದೆ. ಸ್ವತಃ ಜಿಲ್ಲಾ ಪಂಚಾಯತ ಸಿಇಓ ಮಹಾಂತೇಶ ದ್ಯಾಮಕ್ಕನ್ನವರ ಸಮ್ಮುಖದಲ್ಲಿ ಕಾಮಗಾರಿ ನಡೆಯುತ್ತಿದೆ.
ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ನಡುರಸ್ತೆಯಲ್ಲಿ ತಮ್ಮ ಕಾರ್ ನಿಲ್ಲಿಸಿ ನಡೆದುಕೊಂಡು ಹೋಗಿ ಗ್ರಾಮ ತಲುಪಿದ್ದರು. ಬಳಿಕ ಯುವತಿ ಬಿಂದು ಜೊತೆ ಮಾತನಾಡಿ ಗ್ರಾಮದ ಸಮಸ್ಯೆ ಬಗೆಹರಿಸುವಂತೆ ಭರವಸೆ ನೀಡಿದ್ದರು.
ಈ ವೇಳೆ ಅವರು ನಿಮ್ಮೂರಿಗೆ ರಸ್ತೆ ಮಾಡಿಸುತ್ತೇನೆ, ಬಸ್ ವ್ಯವಸ್ಥೆ ಮಾಡುತ್ತೇನೆ. ಜೊತೆಗೆ ನಿನಗೆ ಮದ್ವೆ ಕೂಡಾ ಮಾಡಿಸುತ್ತೇನೆ. ಒಳ್ಳೆ ಗಂಡು ಹುಡುಕಿ ಮದ್ವೆ ಮಾಡಿಸುವೆ. ನಿನ್ನ ಬಗ್ಗೆ ಗೊತ್ತಾಗಿದೆ. ನಿಮ್ಮೂರಲ್ಲಿಯೇ ಬಂದಿವೆ. ಆದಷ್ಟು ಬೇಗ ಮದ್ವೆ ಕೂಡಾ ಮಾಡಿಸುವೆ ಎಂದು ಬಿಂದುಗೆ ಮಹಾಂತೇಶ ಬೀಳಗಿ ಭರವಸೆ ನೀಡಿದ್ದರು. ರಾಂಪುರ ಗ್ರಾಮಕ್ಕೆ ಭೇಟಿ ನೀಡಿದ ವೇಳೆ ಬಿಂದು ಜೊತೆ ಪೋನ್ ನಲ್ಲಿ ಮಾತಾಡಿದ ಜಿಲ್ಲಾಧಿಕಾರಿ ಗ್ರಾಮಕ್ಕೆ ಬೇಕಾದ ಎಲ್ಲ ವ್ಯವಸ್ಥೆ ಮಾಡುವೆ. ನಾಳೆಯಿಂದಲೇ ರಸ್ತೆ ಕಾಮಗಾರಿ ಆರಂಭ ಮಾಡಲಾಗುವುದು ಎಂದಿದ್ದಾರೆ. ಖಾಸಗಿ ಶಾಲೆಯಲ್ಲಿ ಶಿಕ್ಷಕಿ ಆಗಿರುವ ಬಿಂದು ಸದ್ಯ ಬಾಗಲಕೋಟೆ ಜಿಲ್ಲೆಯ ಕೂಡಲ ಸಂಗಮದಲ್ಲಿ ಇದ್ದಾರೆ.
ಘಟನೆ ಹಿನ್ನೆಲೆ: ದಾವಣಗೆರೆ ತಾಲೂಕಿನ ಮಾಯಕೊಂಡ ಬಳಿ ಇರುವ ರಾಂಪುರ ಗ್ರಾಮದ ಯುವತಿ ಬಿಂದು ನಮ್ಮೂರು ಕಾಡು, ಗುಡ್ಡಗಾಡಿನ ಮಧ್ಯೆ ಇರುವ ಕುಗ್ರಾಮ. ಕೆಟ್ಟ ರಸ್ತೆಗಳು ದಶಕಗಳಿಂದ ಸುಧಾರಣೆ ಆಗಿಲ್ಲ, ಗ್ರಾಮದಲ್ಲಿ ಮೂಲ ಸೌಕರ್ಯದ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ತಮ್ಮೂರಿಗೆ ಯಾರು ಹೆಣ್ಣು ಕೊಡಲ್ಲ. ಹೀಗಾಗಿ ರಸ್ತೆಯಾಗೋವರೆಗೂ ನಾನು ಮದ್ವೆ ಆಗಲ್ಲ ಎಂದು ಪತ್ರ ಬರೆದು ಆಕ್ರೋಶ ವ್ಯಕ್ತಪಡಿಸಿದ್ದರು.
ಸಿಎಂ, ಪಿಎಂವರೆಗೂ ಪತ್ರ ಬರೆದರೂ ಪ್ರಯೋಜನವಾಗಿರಲಿಲ್ಲ. ಸದ್ಯ ಡಿಸಿ ಮಹಾಂತೇಶ ಬೀಳಗಿ ನಡುರಸ್ತೆಯಲ್ಲಿ ಕಾರು ನಿಲ್ಲಿಸಿ ಕಾಲ್ನಡಿಗೆಯಲ್ಲೇ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಪರಿಶೀಲಿಸಿ ಗ್ರಾಮದ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ.
ಇದನ್ನೂ ಓದಿ:
(Davanagere Road Construction work started on h rampur village young lady says did not marry until her village have road)