ರಸ್ತೆ ಆಗುವವರೆಗೂ ಮದುವೆಯಾಗಲ್ಲ ಎಂದು ಪಟ್ಟು ಹಿಡಿದ ಯುವತಿಗೆ ಗುಡ್ ನ್ಯೂಸ್; ರಸ್ತೆ ಮಾತ್ರವಲ್ಲ ನಿನ್ನ ಮದುವೆ ಕೂಡಾ ಮಾಡುತ್ತೇನೆ ಎಂದ ದಾವಣಗೆರೆ ಡಿಸಿ

ರಸ್ತೆ ಮಾಡಿಸಿ ಬಸ್ ಬಿಡುವ ವ್ಯವಸ್ಥೆ ಮಾಡುತ್ತೇನೆ. ಜೊತೆಗೆ ಮುದುವೆಯಾಗಲ್ಲ ಎಂದು ಹೇಳಿದ್ದ ಯುವತಿಗೆ ಗಂಡು ಹುಡುಕಿ ಮದುವೆ ಕೂಡಾ ಮಾಡಿಸುವೆ ಅಂತ ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ.

ರಸ್ತೆ ಆಗುವವರೆಗೂ ಮದುವೆಯಾಗಲ್ಲ ಎಂದು ಪಟ್ಟು ಹಿಡಿದ ಯುವತಿಗೆ ಗುಡ್ ನ್ಯೂಸ್; ರಸ್ತೆ ಮಾತ್ರವಲ್ಲ ನಿನ್ನ ಮದುವೆ ಕೂಡಾ ಮಾಡುತ್ತೇನೆ ಎಂದ ದಾವಣಗೆರೆ ಡಿಸಿ
ಹಾಳಾಗಿರುವ ರಸ್ತೆ, ಮದುವೆಯಾಗಲ್ಲ ಎಂದು ಪಟ್ಟು ಹಿಡಿದ ಯುವತಿ
Follow us
TV9 Web
| Updated By: sandhya thejappa

Updated on:Sep 16, 2021 | 5:40 PM

ದಾವಣಗೆರೆ: ನಮ್ಮೂರಿಗೆ ರಸ್ತೆ ಆಗುವ ತನಕ ನಾನು ಮದ್ವೆನೇ ಆಗಲ್ಲ ಎಂದು ಪಟ್ಟು ಹಿಡಿದಿದ್ದ ಯುವತಿಗೆ ಮದುವೆ ಭಾಗ್ಯ ಬಂದಿದೆ. ದಾವಣಗೆರೆ ತಾಲೂಕಿನ ರಾಂಪುರ ಗ್ರಾಮಕ್ಕೆ ಸೂಕ್ತ ರಸ್ತೆಯಿಲ್ಲ. ಹೀಗಾಗಿ ಈ ಗ್ರಾಮದ ಯುವಕ- ಯುವತಿಯರಿಗೆ ಮದುವೆ ಭಾಗ್ಯ ಇಲ್ಲದಂತಾಗಿದೆ. ಯುವತಿಯೊಬ್ಬಳು ಕೂಡ ರಸ್ತೆ ಆಗುವವರೆಗೆ ಮದುವೆ ಆಗಲ್ಲ ಅಂತ ಪಟ್ಟು ಹಿಡಿದಿದ್ದಳು. ಈಗ ಜಿಲ್ಲಾಧಿಕಾರಿ ರಾಂಪುರ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದ ಸಮಸ್ಯೆಯನ್ನು ಆಲಿಸಿದ್ದಾರೆ. ಈ ವೇಳೆ ನಾಳೆಯಿಂದಲೇ ರಸ್ತೆ ಕಾಮಗಾರಿಗೆ ಆರಂಭಕ್ಕೆ ಆದೇಶ ಮಾಡಿದ್ದಾರೆ.

ರಸ್ತೆ ಮಾಡಿಸಿ ಬಸ್ ಬಿಡುವ ವ್ಯವಸ್ಥೆ ಮಾಡುತ್ತೇನೆ. ಜೊತೆಗೆ ಮುದುವೆಯಾಗಲ್ಲ ಎಂದು ಹೇಳಿದ್ದ ಯುವತಿಗೆ ಗಂಡು ಹುಡುಕಿ ಮದುವೆ ಕೂಡಾ ಮಾಡಿಸುವೆ ಅಂತ ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ. ಅಧಿಕಾರಿಗಳ ತಂಡದೊಂದಿಗೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಗ್ರಾಮಕ್ಕೆ ನಡೆದುಕೊಂಡು ಹೋದರು. ರಸ್ತೆಯ ಸ್ಥಿತಿಯನ್ನ ಕಣ್ಣಾರೆ ಕಂಡ ಜಿಲ್ಲಾಧಿಕಾರಿ ಗ್ರಾಮದ ಬೇವಿನ ಮರದ ಕಟ್ಟೆಯ ಮೇಲೆ ಕುಳಿತು ಗ್ರಾಮದ ಪ್ರಮುಖರ ಜೊತೆ ಮಾತಾಡಿದರು. ಇದಕ್ಕೆಲ್ಲಾ ಕಾರಣ ಮದುವೆಯಾಗಲ್ಲ ಅಂತ ಪಟ್ಟು ಹಿಡಿದಿದ್ದ ಯುವತಿ ಬಿಂದು.

ಬಿಂದು ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಬಾಗಲಕೋಟೆ ಜಿಲ್ಲೆಯ ಕೂಡಲ ಸಂಗಮದಲ್ಲಿ ಕೆಲಸ ನಿರ್ವಹಿಸುತ್ತಿದ್ದಾಳೆ. ನಮ್ಮೂರಿಗೆ ರಸ್ತೆ ಆಗುವ ತನಕ ಮದುವೆ ಆಗಲ್ಲ ಎಂದು ಪ್ರಧಾನಿ ಹಾಗೂ ಮುಖ್ಯಮಂತ್ರಿಗೆ ಪತ್ರ ಬರೆದು ಸುದ್ದಿ ಮಾಡಿದ್ದಳು. ಈ ಬಗ್ಗೆ ಟಿವಿ9 ವರದಿ ಮಾಡಿತ್ತು. ವರದಿ ನೋಡಿದ ಜಿಲ್ಲಾಧಿಕಾರಿಗಳು ನೇರ ಗ್ರಾಮಕ್ಕೆ ಬಂದು ನಾಳೆಯಿಂದಲೇ ರಸ್ತೆ ಕಾಮಗಾರಿ ಆರಂಭಿಸಲು ತಿಳಿಸಿದ್ದಾರೆ. ಇದೇ ವೇಳೆ ಪತ್ರ ಬರೆದ ಬಿಂದುಳಿಗೆ ಪೋನ್ ಮಾಡಿ, ನಿಮ್ಮೂರಿಗೆ ರಸ್ತೆ, ಬಸ್ಸ್ ಹಾಗೂ ಮೊಬೈಲ್ ನೆಟ್​ವರ್ಕ್​ ವ್ಯವಸ್ಥೆ ಮಾಡುವೆ. ಜೊತೆಗೆ ನಿನಗೊಂದು ಗಂಡು ಹುಡುಕಿ ಮದುವೆ ಕೂಡಾ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ

ಸೂಕ್ತ ವ್ಯವಸ್ಥೆ ಇಲ್ಲದಕ್ಕೇ ಈ ಗ್ರಾಮದವರಿಗಿಲ್ಲ ಮದುವೆ ಭಾಗ್ಯ, ನಮ್ಮೂರಿಗೆ ರಸ್ತೆ ಆಗುವವರೆಗೂ ಮದುವೆ ಆಗಲ್ಲ ಎಂದು ಯುವತಿ ಪಟ್ಟು

ಗುಜರಾತ್​​ನಲ್ಲಿ ಸಂಪೂರ್ಣ ಹೊಸ ಕ್ಯಾಬಿನೆಟ್ ರಚನೆ ​; ರಾಜ್ಯಪಾಲರಿಗೂ ಒಲಿದ ಸಚಿವ ಸ್ಥಾನ, 24 ಮಂತ್ರಿಗಳ ಪಟ್ಟಿ ಹೀಗಿದೆ

(Davanagere District Collector has responded to the young woman who did not marry until she was on the road)

Published On - 5:27 pm, Thu, 16 September 21

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್