ದಾವಣಗೆರೆ: ಶಿಕ್ಷಕನ ಮೇಲೆ ಹಲ್ಲೆ ಪ್ರಕರಣ; ಘಟನಾ ಸ್ಥಳಕ್ಕೆ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಭೇಟಿ

| Updated By: ganapathi bhat

Updated on: Dec 10, 2021 | 3:36 PM

ಶಿಕ್ಷಕನಿಗೆ ಮಕ್ಕಳು ಹಲ್ಲೆ, ತೊಂದರೆ ಕೊಡುತ್ತಿರುವ ವಿಡಿಯೋ ವೈರಲ್ ಪ್ರಕರಣ ಹಿನ್ನೆಲೆ, ಘಟನಾ ಸ್ಥಳಕ್ಕೆ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಭೇಟಿ ನೀಡಿದ್ದಾರೆ. ಜೊತೆಗೆ ಪೊಲೀಸ್ ಅಧಿಕಾರಿಗಳಿಂದ ಪರಿಶೀಲನೆ ಮಾಡಲಾಗಿದೆ.

ದಾವಣಗೆರೆ: ಶಿಕ್ಷಕನ ಮೇಲೆ ಹಲ್ಲೆ ಪ್ರಕರಣ; ಘಟನಾ ಸ್ಥಳಕ್ಕೆ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಭೇಟಿ
Follow us on

ದಾವಣಗೆರೆ: ನಲ್ಲೂರು ಸರ್ಕಾರಿ ಶಾಲೆಯ ಶಿಕ್ಷಕನ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಹಲ್ಲೆ ವಿಡಿಯೋ ವೈರಲ್​ ಆಗಿ ಮಾಹಿತಿ ಹೊರಬಂದ ಹಿನ್ನೆಲೆ ಹಲ್ಲೆಗೊಳಗಾದ ಶಿಕ್ಷಕನಿಗೆ ಎದೆ ನೋವು ಕಾಣಿಸಿಕೊಂಡಿದೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದಲ್ಲಿನ ಶಾಲೆಗೆ ಬಂದ ಶಿಕ್ಷಕ ಕೆಲ ಹೊತ್ತಿನ ನಂತರ ಆಸ್ಪತ್ರೆಗೆ ತೆರಳಿದ್ದಾರೆ. ಮಾಧ್ಯಮಗಳಿಗೆ ಹೇಳಿಕೆ ನೀಡಲು ಸಂಬಂಧಿಕರು ಹಿಂಜರಿದಿದ್ದಾರೆ. ಮಕ್ಕಳಿಂದ ಕಿರಿಕಿರಿ ಅನುಭವಿಸಿದ ಶಿಕ್ಷಕನಿಗೆ ನಿವೃತ್ತಿಗೆ ಒಂದು ವರ್ಷ ಮಾತ್ರ ಬಾಕಿ ಇದೆ ಎಂದು ತಿಳಿದು ಬಂದಿದೆ. ಮೇಲಾಗಿ ಹೃದಯ ಸಂಬಂಧಿ ಕಾಯಿಲೆ ಇದೆ ಎಂದು ತಿಳಿದುಬಂದಿದೆ.

ಶಿಕ್ಷಕನಿಗೆ ಮಕ್ಕಳು ಹಲ್ಲೆ, ತೊಂದರೆ ಕೊಡುತ್ತಿರುವ ವಿಡಿಯೋ ವೈರಲ್ ಪ್ರಕರಣ ಹಿನ್ನೆಲೆ, ಘಟನಾ ಸ್ಥಳಕ್ಕೆ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಭೇಟಿ ನೀಡಿದ್ದಾರೆ. ಜೊತೆಗೆ ಪೊಲೀಸ್ ಅಧಿಕಾರಿಗಳಿಂದ ಪರಿಶೀಲನೆ ಮಾಡಲಾಗಿದೆ. ಪ್ರಕರಣದ ಬಗ್ಗೆ ಪೊಲೀಸರಿಗೆ ದೂರು ನೀಡಲು ನಿರ್ಧಾರ ಕೈಗೊಳ್ಳಲಾಗಿದೆ. ನಲ್ಲೂರು ಸರ್ಕಾರಿ ಪಿಯು ಕಾಲೇಜಿನ ಉಪ ಪ್ರಚಾರ್ಯ ಶಿವಕುಮಾರ ಟಿವಿ9ಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಹತ್ತನೇ ತರಗತಿಯ ಸಿ ಕ್ಲಾಸ್​ನ ನಾಲ್ವರು ವಿದ್ಯಾರ್ಥಿಗಳಿಂದ ಕೃತ್ಯ ಎಸಗಿತ್ತು. ಓರ್ವ ವಿದ್ಯಾರ್ಥಿ ಮೊಬೈಲ್​ನಲ್ಲಿ ಈ ವಿಡಿಯೋ ರೆಕಾರ್ಡ ಮಾಡಿ ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದ. 59 ವರ್ಷದ ಪ್ರಕಾಶ ಬೋಗಿ ಎಂಬ ಹಿಂದಿ ಶಿಕ್ಷಕನ ಮೇಲೆ ಹಲ್ಲೆ ಮಾಡಿ ವಿದ್ಯಾರ್ಥಿಗಳು ಅವಮಾನ ಮಾಡಿದ್ದರು. ನಿವೃತ್ತಿಗೆ ಒಂದು ವರ್ಷ ಬಾಕಿ ಇರುವಾಗಲೇ ಈ ಘಟನೆ ನಡೆದಿದೆ.

ವಿಜಯಪುರ: ಮಲತಾಯಿಯಿಂದ ಪತಿಯ ಮೊದಲ ಪತ್ನಿಯ ಇಬ್ಬರು ಗಂಡು ಮಕ್ಕಳ ಹತ್ಯೆಗೆ ಯತ್ನ
ಮಲತಾಯಿಯಿಂದ ಪತಿಯ ಮೊದಲ ಪತ್ನಿಯ ಇಬ್ಬರು ಗಂಡು ಮಕ್ಕಳ ಹತ್ಯೆಗೆ ಯತ್ನವಾದ ದುರ್ಘಟನೆ ನಡೆದಿದೆ. ಮೊಬೈಲ್ ಚಾರ್ಜರ್ ನಿಂದ ಹತ್ಯೆಗೆ ಯತ್ನಿಸಲಾಗಿದೆ. ಮೊಬೈಲ್ ಚಾರ್ಜರ್​​ನಿಂದ ಕತ್ತು ಬಿಗಿದು ಉಸಿರುಗಟ್ಡಿಸಿ ಕೊಲೆ ಮಾಡಲು ಮಲತಾಯಿ ಯತ್ನಿಸಿದ್ದಾರೆ. ಓರ್ವ ಗಂಡು ಮಗು ಸಾವನ್ನಪ್ಪಿದ್ದಾನೆ. ಮತ್ತೋರ್ವ ಗಂಡು ಮಗು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವಿಜಯಪುರ ತಾಲೂಕಿನ ಮಿಂಚನಾಳ ತಾಂಡಾದಲ್ಲಿ ಘಟನೆ ನಡೆದಿದೆ. ಸವಿತಾ ವಿನೋದ್ ಚೌವ್ಹಾನ್ ಎಂಬ ಮಲತಾಯಿಯಿಂದ ಕೃತ್ಯ ಎಸಗಲಾಗಿದೆ ಎಂದು ತಿಳಿದುಬಂದಿದೆ.

ಸುಮಿತ್ (5) ಮೃತ‌ ಬಾಲಕ ಆಗಿದ್ದಾನೆ. ಸಂಪತ್ (3.5) ಬಾಲಕನ ಸ್ಥಿತಿ ಗಂಭೀರವಾಗಿದೆ. ವಿಜಯಪುರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪತಿ ವಿನೋದನ ಮೊದಲ ಪತ್ನಿ ಶಾರೂಬಾಯಿಯ ಇಬ್ಬರು ಗಂಡು ಮಕ್ಕಳು ಇದ್ದರು. ಮೊದಲ ಪತ್ನಿ ಶಾರೂಬಾಯಿ ಒಂದು ವರ್ಷದ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದರು. ಮಕ್ಕಳು ಅನಾಥರಾಗಬಾರದೆಂದು ವಿನೋದ ಎರಡನೇ ವಿವಾಹವಾಗಿದ್ದರು. ಸವಿತಾ ಜೊತೆಗೆ ಕಳೆದ ಎರಡು ತಿಂಗಳ ಹಿಂದೆ ವಿವಾಹವಾಗಿದ್ದರು ಎಂದು ತಿಳಿದುಬಂದಿದೆ. ಸ್ಥಳಕ್ಕೆ ವಿಜಯಪುರ ಗ್ರಾಮೀಣ ಪೊಲೀಸರು ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ. ಮಲತಾಯಿ ಸವಿತಾಳನ್ನು‌ ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ದಾವಣಗೆರೆ: ಮದುವೆ ಕಾರ್ಯಕ್ರಮದಲ್ಲಿ ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ; ಜೆಡಿಎಸ್ ಮಾಜಿ ಶಾಸಕ ಹೆಚ್ಎಸ್ ಶಿವಶಂಕರ್ ವಿರುದ್ಧ ಆರೋಪ

ಇದನ್ನೂ ಓದಿ: ಜೆಡಿಎಸ್ ಅಭ್ಯರ್ಥಿಗೆ ಮತ ಹಾಕಿದ ಫೋಟೋ ವೈರಲ್, ಗೌಪ್ಯ ಮತದಾನ ಉಲ್ಲಂಘನೆಯಾಗಿದೆ ಎಂದು ಕಾಂಗ್ರೆಸ್ ನಾಯಕರ ಆಕ್ರೋಶ