ದಾವಣಗೆರೆ: ಹೆದ್ದಾರಿಯಲ್ಲಿ ಪಥ ಶಿಸ್ತು ಉಲ್ಲಂಘಿಸಿದ್ರೆ ಐದು ನೂರು ರೂಪಾಯಿ ದಂಡ ವಿಧಿಸಲಾಗುತ್ತೆ. ಹೊಸ ನಿಯಮ ನಿನ್ನೆ(ಫೆ.20) ಸಂಜೆಯಿಂದಲೇ ಜಾರಿಯಾಗಿದೆ ಎಂದು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿಬಿ ರಿಷ್ಯಂತ್ ಮಾಹಿತಿ ನೀಡಿದ್ದಾರೆ.
ಸಂಚಾರ ನಿಯಮಗಳ ಜಾಗೃತಿಗಾಗಿ ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬೈಕ್ ಜಾಥಾಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿಬಿ ರಿಷ್ಯಂತ್, ಜಿಲ್ಲೆಯ ವ್ಯಾಪ್ತಿಯಲ್ಲಿ ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರೆ-48 ಹಾಯ್ದು ಹೋಗಿದೆ. ದಾವಣಗೆರೆ ಜಿಲ್ಲೆಯ ವ್ಯಾಪ್ತಿಯ ಹೆದ್ದಾರಿಯಲ್ಲಿ ಸರ್ಕಾರ ನಿನ್ನೆ ಸಂಜೆಯಿಂದ ಪೈಲೆಟ್ ಪ್ರಾಜೆಕ್ಟ್ ಯೊಂದನ್ನ ಆರಂಭಿಸಿದೆ. ಹೆದ್ದಾರಿಯಲ್ಲಿ ಸಂಭವಿಸುತ್ತಿರುವ ದುರಂತಕ್ಕೆ ಕಡಿವಾಣ ಹಾಕುವುದು ಈ ಯೋಜನೆಯ ಉದ್ದೇಶ. ಅದೇ ಪಥ ಶಿಸ್ತು ಅಂತಾ. ದಾವಣಗೆರೆ ಜಿಲ್ಲೆಯಲ್ಲಿ ಆರು ಲೈನ್ ಹೆದ್ದಾರಿ ಇದೆ. ಆ ಕಡೆ ಮೂರು ಲೈನ್ ಈ ಕಡೆ ಮೂರು ಲೈನ್. ಈಗ ಹೊಸ ನಿಯಮದ ಪ್ರಕಾರ ಹೆಚ್ಚು ವೇಗವಾಗಿ ಹೋಗುವ ಕಾರ್ ಸೇರಿದಂತೆ ನಾಲ್ಕು ಚಕ್ರದ ವಾಹನಗಳಿಗೆ ಒಳ ಪಥ ಅಂದ್ರೆ ಇನ್ನರ್ ಲೈನ್ ನಿಗದಿ ಮಾಡಲಾಗಿದೆ. ಈ ಲೈನ್ ನಲ್ಲಿ ಭಾರಿ ವಾಹನಗಳು ಬರುವಂತಿಲ್ಲ. ಲಾರಿ ಬಸ್ಸು, ಟ್ಯಾಂಕರ್ ಸೇರಿದಂತೆ ಭಾರಿ ವಾಹನಗಳು ಸೆಕೆಂಡ್ ಲೈನ್ ನಲ್ಲಿ ಅಂದ್ರೆ ಔಟರ್ ಲೈನ್ ನಲ್ಲಿ ಹೋಗಬೇಕು. ಇದನ್ನ ಉಲ್ಲಂಘನೆ ಮಾಡಿದ್ರೆ ಐದು ನೂರು ರೂಪಾಯಿ ದಂಡ ಖಚಿತ.
ಹೆದ್ದಾರಿಯಲ್ಲಿ ದುರಂತ ತಪ್ಪಿಸಲು ಹಾಗೂ ಭಾರಿ ವಾಹನಗಳು ನಿಧಾನವಾಗಿ ಚಲಿಸುತ್ತವೆ. ಕಾರ್ ಗಳು ವೇಗವಾಗಿ ನುಸುಳಿಕೊಂಡು ಹೋಗುತ್ತವೆ. ಆಗ ದುರಂತಗಳು ಸಂಭವಿಸುತ್ತವೆ. ಹೊಸ ನಿಯಮದ ಪ್ರಕಾರ ಎರಡನೇ ಲೈನ್ ನಲ್ಲಿ ಮಾತ್ರ ಭಾರಿ ವಾಹನಗಳು ಚಲಿಸಬೇಕು. ವೇಗವಾಗಿ ಹೋಗುವ ನಾಲ್ಕು ಚಕ್ರದ ವಾಹನಗಳಿಗೆ ಇನ್ನರ್ ಲೈನ್ ಮೀಸಲು ಎಂದರು.
ದಾವಣಗೆರೆ ಜಿಲ್ಲೆಯಲ್ಲಿ ಇದು ಪೈಲೆಟ್ ಪ್ರಾಜೆಕ್ಟ್ ಆಗಿ ಶುರುವಾಗಿದೆ. ಇಲ್ಲಿ ಅನುಷ್ಠಾನ ಆಗಿದ್ದನ್ನ ನೋಡಿ ಮುಂದೆ ಎಲ್ಲ ಕಡೆ ಈ ಪದ್ದತಿ ವಿಸ್ತಾರ ಆಗಲಿದೆ. ಅಂದ್ರೆ ದಾವಣಗೆರೆ ಜಿಲ್ಲೆಯ ಹೆಬ್ಬಾಳ್ ಬಳಿ ಟೋಲ್ ಗೇಟ್ ಇದೆ. ಅದು ಬಿಟ್ಟರೇ ಹಾವೇರಿ ಜಿಲ್ಲೆ ಆರಂಭದಲ್ಲಿ ಚಳಗೆರೆ ಬಳಿ ಟೋಲ್ ಗೇಟ್ ಇದೆ. ಈ ಎರಡು ಟೋಲ್ ಗಳ ನಡುವೆ 65 ಕಿಲೋಮೀಟರ್ ದೂರವಿದೆ. ಈ ನಡುವೆ ಒಂಬತ್ತು ಕಡೆ ಸ್ವಯಂ ಚಾಲಿತ ಕ್ಯಾಮರಾ ( ಅಟೋಮ್ಯಾಟಿಕ್ ನಂಬರ್ ಪ್ಲೇಟ್ ರೆಕಗ್ನೈಷನ್ ಕ್ಯಾಮರಾ) ಅಳವಡಿಸಲಾಗಿದೆ. ಬೃಹತ್ ವಾಹನಗಳು ಪಥ ಶಿಸ್ತು ಉಲ್ಲಂಘಿಸಿದ್ರೆ ಆ ವಾಹನ ನಂಬರ್, ಸ್ಥಳ ಹಾಗೂ ಜಿಪಿಎಸ್ ಲೋಕೇಷನ್ ಇರುವ ಚಿತ್ರಗಳನ್ನ ಟೋಲ್ ಗೇಟ್ ನಲ್ಲಿ ಇರುವ ಮಲ್ಟಿ ಫಂಕ್ಷನಲ್ ಡಿವೈಸ್ ಗೆ ರವಾನಿಸುತ್ತದೆ. ಪಥ ಶಿಸ್ತು ಉಲ್ಲಂಘಿಸಿದ ವಾಹನ ಟೋಲ್ ಗೇಟ್ ಗೆ ಬಂದ ಬಳಿಕ ದಂಡ ವಿಧಿಸಲಾಗುತ್ತದೆ. ಟೋಲ್ ತಪ್ಪಿಸಿಕೊಂಡು ಮತ್ತೊಂದು ಟೋಲ್ ಗೆ ಹೋದ್ರು ಸಹ ಅಲ್ಲಿಯೂ ದಂಡ ವಿಧಿಸಲಾಗುತ್ತದೆ. ಇದು ಮುಖ್ಯವಾಗಿ ಬೃಹತ್ ವಾಹನಗಳಿಗೆ ಸೂಕ್ತ ಎಚ್ಚರಿಕೆ, ಜೊತೆಗೆ ದುರಂತ ತಪ್ಪಿಸುವ ಉದ್ದೇಶ. ಒಂಬತ್ತು ಕ್ಯಾಮರಾಗಳು ಇದ್ದ ಹಿನ್ನೆಲೆ ಹೆದ್ದಾರಿ ದರೋಡೆಯಂತಹ ಪ್ರಕರಣಗಳು ಸಹ ನಿಯಂತ್ರಣಕ್ಕೆ ಬರುವುದು ಖಚಿತ ಎಂದರು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 8:50 am, Tue, 21 February 23