ದಾವಣಗೆರೆ ಮಹಾನಗರ ಪಾಲಿಕೆ ಬಜೆಟ್ನಲ್ಲೂ ಸಹ ಕಿವಿಗೆ ಹೂವು ಇಟ್ಟಕೊಂಡು ಬಂದ ಕಾಂಗ್ರೆಸ್ ಸದಸ್ಯರು
ಇಂದು(ಫೆ.21) ದಾವಣಗೆರೆ ಬಜೆಟ್ ಸಭೆ ನಡೆದಿದ್ದು, ಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ಕಿವಿ ಮೇಲೆ ಹೂ ಇಟ್ಟುಕೊಂಡು ಬಂದು ಧರಣಿ ನಡೆಸಿದ್ದಾರೆ.
ದಾವಣಗೆರೆ: ಇದೇ ತಿಂಗಳ 17 ರಂದು ಸಿಎಂ ಬೊಮ್ಮಾಯಿಯವರು ತಮ್ಮ ಆಡಳಿತಾವಧಿಯ ಕೊನೆಯ ಬಜೆಟ್ನ್ನು ಮಂಡಿಸಿದ್ದಾರೆ. ಈ ವೇಳೆ ಬಜೆಟ್ ಅಧಿವೇಶನಕ್ಕೆ ಕಾಂಗ್ರೆಸ್ ನಾಯಕರು ಕಿವಿಯ ಮೇಲೆ ಹೂ ಇಟ್ಟುಕೊಂಡು ಬರುವ ಮೂಲಕ ರಾಜ್ಯದ ಜನರ ಕಿವಿಗೆ ಹೂ ಇಡುವ ಬಜೆಟ್ ಇದಾಗಿದೆ ಎಂದಿದ್ದರು. ಇದೀಗ ದಾವಣಗೆರೆ ಮಹಾನಗರ ಪಾಲಿಕೆಯ ಬಜೆಟ್ನಲ್ಲೂ ಕಾಂಗ್ರೆಸ್ ಸದಸ್ಯರು ಕಿವಿಗೆ ಹೂವು ಇಟ್ಟಕೊಂಡು ಧರಣಿ ಮಾಡಿದ್ದಾರೆ.
ಇನ್ನು ಇಂದು(ಫೆ.21) ದಾವಣಗೆರೆಯ ಬಜೆಟ್ ಸಭೆ ನಡೆದಿದ್ದು, ಮೇಯರ್ ಜಯಮ್ಮ ಗೋಪಿನಾಯ್ಕ ಅವರ ಪರವಾಗಿ ಸ್ಥಾಯಿ ಸಮಿತಿ ಅಧ್ಯಕ್ಷ ಸೋಗಿ ಶಾಂತಕುಮಾರ 557 ಕೋಟಿ ರೂಪಾಯಿ ಬಜೆಟ್ ಮಂಡಿಸಿದರು. ಈ ವೇಳೆ ಕಾಂಗ್ರೆಸ್ ಸದಸ್ಯರು ಪ್ರತಿ ಪಕ್ಷ ನಾಯಕ ಸಿದ್ದರಾಮಯ್ಯ ರೀತಿಯಲ್ಲಿ ದಾಸವಾಳ ಸೇರಿದಂತೆ ವಿವಿಧ ಬಣ್ಣದ ಹೂವುಗಳನ್ನ ಕಿವಿಗೆ ಹಾಕಿಕೊಂಡು ಬಂದು ಗಮನ ಸೆಳೆದಿದ್ದಾರೆ. ಸಭೆಗೆ ಕಿವಿಯಲ್ಲಿ ಹೂವು ಇಟ್ಟುಕೊಂಡು ಬಂದ ಕಾಂಗ್ರೆಸ್ ಸದಸ್ಯರು ಆದಾಯದ ಮೂಲ ಇರುವುದು ಆಸ್ತಿ ತೆರಿಗೆಯಿಂದ, ಅದು ಮೂವತ್ತು ಕೋಟಿ ರೂಪಾಯಿ ಇದೆ. ಹೆಚ್ಚುವರಿ ಜನರಿಗೆ ತೆರಿಗೆ ಹಾಕುವುದನ್ನ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ