ದಾವಣಗೆರೆ: ಕಾಡುಗೊಲ್ಲರ ಆರಾಧ್ಯ ದೈವ ಬೊಮ್ಮಕಾಟಲಿಂಗೇಶ್ವರ ಅದ್ಧೂರಿ ಜಾತ್ರೆ, ಹರಕೆ ತೀರಿಸಿ ಸಂಭ್ರಮಿಸಿದ ಭಕ್ತರು

ಕಾಡುಗೊಲ್ಲರ ವೀರಗಾರ ಶ್ರೀ ಬೊಮ್ಮಕಾಂಟಲಿಂಗೇಶ್ವರ ಸ್ವಾಮಿಯ ಪೂಜೆಯಲ್ಲಿ ಈ ಬಾರಿ ಹಿಂದಿನ ವರ್ಷಕ್ಕಿಂತ ಎರಡು ಪಟ್ಟು ಹೆಚ್ಚಿನ ಜನರು ಭಾಗಿಯಾಗಿದ್ದರು. ಭಕ್ತರು ಸಮಾಧಿಗೆ ಆಗಮಿಸಿ ತಮ್ಮ ಇಷ್ಠರ್ಥಾಗಳನ್ನ ಇಡೇರಿಸಲು ಸ್ವಾಮಿಗೆ ಹರಕೆಯನ್ನ ತೀರಿಸಿದರು. ಇನ್ನು ಕಾಡುಗೊಲ್ಲರ ವೀರಗಾರ ಶ್ರೀ ಬೊಮ್ಮಕಾಂಟಲಿಂಗೇಶ್ವರ ಸ್ವಾಮಿಯ ಪವಾಡ ಪುರುಷರು.

ದಾವಣಗೆರೆ: ಕಾಡುಗೊಲ್ಲರ ಆರಾಧ್ಯ ದೈವ ಬೊಮ್ಮಕಾಟಲಿಂಗೇಶ್ವರ ಅದ್ಧೂರಿ ಜಾತ್ರೆ, ಹರಕೆ ತೀರಿಸಿ ಸಂಭ್ರಮಿಸಿದ ಭಕ್ತರು
ಕಾಡುಗೊಲ್ಲರ ಆರಾಧ್ಯ ದೈವ ಬೊಮ್ಮಕಾಟಲಿಂಗೇಶ್ವರ
Edited By: ಆಯೇಷಾ ಬಾನು

Updated on: Sep 14, 2023 | 10:18 AM

ದಾವಣಗೆರೆ, ಸೆ.14: ಜಿಲ್ಲೆಯ ಜಗಳೂರು ತಾಲೂಕು ಕಲ್ಲೇದೇವರಪುರ ಗ್ರಾಮದ ಬಳಿ ಇರುವ ಕಾಡುಗೊಲ್ಲರ ವೀರಗಾರ ಶ್ರೀ ಬೊಮ್ಮಕಾಂಟಲಿಂಗೇಶ್ವರ ಸ್ವಾಮಿಯ ಪೂಜೆ ತುಂಬ ಅದ್ದೂರಿಯಾಗಿ ಜರುಗಿತು. ದಾವಣಗೆರೆ, ಚಿತ್ರದುರ್ಗ ಭಾಗದ ಅನೇಕ ಗ್ರಾಮಗಳಿಂದ ಸಾವಿರಾರು ಸಂಖ್ಯೆಯ ಭಕ್ತರು ಎತ್ತಿನ ಗಾಡಿ ಕಟ್ಟಿಕೊಂಡು ಕುಟುಂಬ ಸಮೇತ ಆಗಮಿಸಿ ದೇವರಿಗೆ ಹರಕೆಯನ್ನು ತೀರಿಸುವ ಸಂಪ್ರದಾಯ ಅನಾಧಿಕಾಲದಿಂದಲೂ ರೂಢಿಯಲ್ಲಿದೆ. ಪ್ರತಿ ವರ್ಷದ ಶ್ರಾವಣ ಮಾಸದ ಮುಕ್ತಾಯವಾದ ದಿನದಂದೆ ಅಣಬೂರು ಗೊಲ್ಲರಹಟ್ಟಿಯಿಂದ ನಡೆ ಮುಡಿ ಕಟ್ಟಿಕೊಂಡು ಅಣಬೂರು ಗ್ರಾಮದ ಪೂಜಾರಿಗಳು ಬೊಮ್ಮಗಟ್ಟೆ ಸಮಾಧಿಗೆ ಬಂದು ಪೂಜೆ ಸಲ್ಲಿಸುವುದು ಇಲ್ಲಿನ ಸಂಪ್ರದಾಯ.

ಕಿಕ್ಕರಿದು ಸೇರಿದ ಜನಸಾಗರ

ಕಾಡುಗೊಲ್ಲರ ವೀರಗಾರ ಶ್ರೀ ಬೊಮ್ಮಕಾಂಟಲಿಂಗೇಶ್ವರ ಸ್ವಾಮಿಯ ಪೂಜೆಯಲ್ಲಿ ಈ ಬಾರಿ ಹಿಂದಿನ ವರ್ಷಕ್ಕಿಂತ ಎರಡು ಪಟ್ಟು ಹೆಚ್ಚಿನ ಜನರು ಭಾಗಿಯಾಗಿದ್ದರು. ಭಕ್ತರು ಸಮಾಧಿಗೆ ಆಗಮಿಸಿ ತಮ್ಮ ಇಷ್ಠರ್ಥಾಗಳನ್ನ ಇಡೇರಿಸಲು ಸ್ವಾಮಿಗೆ ಹರಕೆಯನ್ನ ತೀರಿಸಿದರು. ಇನ್ನು ಕಾಡುಗೊಲ್ಲರ ವೀರಗಾರ ಶ್ರೀ ಬೊಮ್ಮಕಾಂಟಲಿಂಗೇಶ್ವರ ಸ್ವಾಮಿಯ ಪವಾಡ ಪುರುಷರು. ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಮಾಡುವಾಗ ಈ ಸಮಾಧಿಯನ್ನ ಬೇರೆ ಕಡೆ ಸ್ಥಳಾಂತರ ಮಾಡಲು ಪ್ರಯತ್ನ ಪಟ್ಟರೂ ಅದು ಸಾಧ್ಯವಾಗಲಿಲ್ಲ. ಅಷ್ಟು ಪವಾಡ ಪುರುಷ ಎಂದು ಊರಿನ ಯಜಮಾನರಾದ ಎ.ಜಿ. ಈರಪ್ಪ ಸ್ವಾಮಿಗಳ ಪವಾಡದ ಬಗ್ಗೆ ತಿಳಿಸಿದರು.

Davangere news Kadugolla god Bommalingeshwara jatre celebration by devotees

ಕಾಡುಗೊಲ್ಲರ ಆರಾಧ್ಯ ದೈವ ಬೊಮ್ಮಕಾಟಲಿಂಗೇಶ್ವರ

ಇದನ್ನೂ ಓದಿ: Karnataka Breaking Kannada News Live: ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಕುಂದಗೋಳ ಬಂದ್​ಗೆ ಕರೆ

ಶ್ರೀ ಬೊಮ್ಮಕಾಂಟಲಿಂಗೇಶ್ವರ ಸ್ವಾಮಿಗಳು ಯಾರು?

ಅಣಬೂರು ಗ್ರಾಮದ ಒಬ್ಬ ವ್ಯಕ್ತಿ ಕುರಿಕಾಯಲು ಎಂದು ಕಲ್ಲೇದೇವರಪುರಕ್ಕೆ ಬಂದಾಗ ಅಕಾಲಿಕ ಮರಣ ಹೊಂದಿದರು. ಈ ಕಾಟಪ್ಪ ಎಂಬುವ ವ್ಯಕ್ತಿಯನ್ನ ಅಲ್ಲೆ ಸಮಾಧಿ ಮಾಡಲಾಗಿದೆ. ಇಂದು ನಮ್ಮ ಸಮುದಾಯದ ಈರಗಾರನನ್ನ ನಾವು ನಮ್ಮ ಆರಾಧೈ ದೈವವಾಗಿ ಪೂಜೆ ಮಾಡುತ್ತಿದ್ದೇವೆ. ಈ ಪೂಜೆಯನ್ನ ಮಾಡುವುದರಿಂದ ಸಕಲ ಪ್ರಾಣಿ ಪಕ್ಷಿಗಳಿಗೂ ಒಳಿತಾಗುತ್ತದೆ ಎಂದು ಅಣಬೂರು ಗ್ರಾಮದ ಹಿರಿಯ ಮುಖಂಡ ಹೂವಿನ ಕಾಟಪ್ಪ ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಗ್ರಾಮದ ಹಿರಿಯರಾದ ಗೌಡ್ರು ಅಜ್ಜಪ್ಪ, ಮರಿಗುಡ್ಡಪ್ಪ, ವಿರೇಶ್ ಮಹಾಲಿಂಗಪ್ಪ, ಸೊಸೈಟಿ ಮಂಜುನಾಥ, ಲಾಯರ್ ಸಣ್ಣಕಾಟಪ್ಪ, ಗ್ರಾಮ ಪಂಚಾಯತಿ ಸದಸ್ಯರಾದ ಚಿತ್ತಪ್ಪ, ದೊಡ್ಡ ಈರಪ್ಪ, ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಜಿ ಗುಡ್ಡಪ್ಪ, ಯುವಕರಾದ ಪ್ರಶಾಂತ್ ಕುಮಾರ್ ಚೇತನ್, ಕಾಟಲಿಂಗಪ್ಪ ಹಾಗೂ ಸಾವಿರಾರು ಭಕ್ತರು ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ದಾವಣಗೆರೆಗೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಬಸವರಾಜ್​ ದೊಡ್ಡಮನಿ, ದಾವಣಗೆರೆ

ಬಸವರಾಜ್ ದೊಡಮನಿ. 2007ರಿಂದ ಟಿವಿ9 ಕನ್ನಡದ ದಾವಣಗೆರೆ ಜಿಲ್ಲಾ ವರದಿಗಾರರಾಗಿದ್ದಾರೆ. ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ತಳಕಟನಾಳದಲ್ಲಿ. ತಂದೆ ಗಂಗಪ್ಪ ದೊಡಮನಿ ಕೃಷಿಕ. ತಾಯಿ ಲಕ್ಕಮ್ಮ ದೊಡಮನಿ. ಇವರದ್ದು ನಾಟಿ ವೈದ್ಯರ ಕುಟುಂಬ. ಜನ ಜಾನುವಾರುಗಳು ರೋಗಕ್ಕೆ ಔಷಧಿ ನೀಡುವುದು ಇವರ ಕುಟುಂಬದ ಕಾಯಕ. 2000 ನಲ್ಲಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಸಮೂಹ ಸಂವಹನ‌ ಮತ್ತು ಪತ್ರಿಕೋದ್ಯಮದಲ್ಲಿ ಎಂಎ ಪದವಿ ಪಡೆದಿದ್ದಾರೆ. ವೃತ್ತಿ ಜೀವನ ಆರಂಭವಾಗಿದ್ದು ಕನ್ನಡ ಪ್ರಭ ಪತ್ರಿಕೆಯಿಂದ. ಧಾರವಾಡ ಜಿಲ್ಲಾ ವರದಿಗಾರನಾಗಿ ಸೇವೆ. ಹತ್ತಕ್ಕೂ ಹೆಚ್ಚು ಲೋಕಸಭೆ ಹಾಗೂ ವಿಧಾನ ಸಭೆ ಸದನದ ವರದಿ ಮಾಡಿದ ಅನುಭವ. ಪುಸ್ತಕ ಓದುವುದು, ಜಾನಪದ ಕಲೆ ಉಳಿವಿಗೆ ದಾಖಲೆ ಸಂಗ್ರಹಿಸಿವುದು ಇವರ ಹವ್ಯಾಸ.

Read More
Loading...
Unable to load recommendations.
Follow Us