AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾವಿನಲ್ಲೂ ಒಂದಾದ ಆತ್ಮೀಯ ಸ್ನೇಹಿತರು: ರಸ್ತೆ ಅಪಘಾತದಲ್ಲಿ ಮೃತಪಟ್ಟ ಹಾವೇರಿ ಯುವಕರ ಅಂತ್ಯಕ್ರಿಯೆ ಒಟ್ಟಿಗೇ ನೆರವೇರಿಸಿದ ಪೋಷಕರು

ಹಾವೇರಿ ತಾಲೂಕಿನ ಮರೋಳ ಗ್ರಾಮದಲ್ಲಿ ಇಬ್ಬರು ಆತ್ಮೀಯ ಸ್ನೇಹಿತರಾದ ಅಭಿಷೇಕ್ ಮತ್ತು ಮುತ್ತು ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಕುಷ್ಟಗಿ-ಗಜೇಂದ್ರಗಡ ರಸ್ತೆಯಲ್ಲಿ ಸಂಭವಿಸಿದ ದುರಂತದಲ್ಲಿ ಸಾವಿಗೀಡಾದ ಇವರ ಅಂತ್ಯಕ್ರಿಯೆಯನ್ನು ಪೋಷಕರು ಒಂದೇ ಕಡೆ, ಒಟ್ಟಿಗೇ ನೆರವೇರಿಸಿದ್ದಾರೆ. ಇವರ ದುರಂತ ಸಾವು ಮತ್ತು ಒಂದೇ ಕಡೆ ಅಂತ್ಯಕ್ರಿಯೆ ಇಡೀ ಗ್ರಾಮವನ್ನು ಕಣ್ಣೀರ ಕಡಲಲ್ಲಿ ಮುಳುಗಿಸಿದೆ.

ಸಾವಿನಲ್ಲೂ ಒಂದಾದ ಆತ್ಮೀಯ ಸ್ನೇಹಿತರು: ರಸ್ತೆ ಅಪಘಾತದಲ್ಲಿ ಮೃತಪಟ್ಟ ಹಾವೇರಿ ಯುವಕರ ಅಂತ್ಯಕ್ರಿಯೆ ಒಟ್ಟಿಗೇ ನೆರವೇರಿಸಿದ ಪೋಷಕರು
ಸಾವಿನಲ್ಲೂ ಒಂದಾದ ಸ್ನೇಹಿತರು
ಅಕ್ಷಯ್​ ಪಲ್ಲಮಜಲು​​
|

Updated on: Nov 15, 2026 | 8:14 PM

Share

ಹಾವೇರಿ, ನ.15; ಗಂಡ ಹೆಂಡತಿ, ಅಕ್ಕ-ತಂಗಿ, ಅಣ್ಣ-ತಮ್ಮ, ಪ್ರೇಮಿಗಳು ಸಾವಿನ್ನಲ್ಲೂ ಒಂದಾಗಿರುವ ಘಟನೆಗಳು ಅದೆಷ್ಟೋ ಇದೆ. ಆದರೆ ಜೊತೆಯಲ್ಲೇ ಓಡಾಡುತ್ತಾ, ಸುಖ-ದುಃಖ ಹಂಚಿಕೊಳ್ಳುತ್ತಾ ಅನ್ಯೋನ್ಯವಾಗಿದ್ದ ಇಬ್ಬರು ಆತ್ಮೀಯ ಗೆಳೆಯರು ಭೀಕರ ರಸ್ತೆ ಅಪಘಾತದಲ್ಲಿ ದಾರುಣವಾಗಿ ಮೃತಪಟ್ಟು ಸಾವಿನಲ್ಲೂ ಒಂದಾದ ಮನಮಿಡಿಯುವ ಘಟನೆ ಹಾವೇರಿ ತಾಲೂಕಿನ ಮರೋಳ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಅಭಿಷೇಕ್ ಮಾಗಡಿ ಹಾಗೂ ಮುತ್ತು ಹುಲಿಕಟ್ಟಿ ಎಂದು ಗುರುತಿಸಲಾಗಿದೆ. ಇಬ್ಬರ ಅಂತ್ಯಕ್ರಿಯೆಯನ್ನು ಪೋಷಕರು ಸ್ವಗ್ರಾಮ ಮರೋಳದಲ್ಲಿ ಒಂದೇ ಕಡೆ, ಒಟ್ಟಿಗೇ ನೆರವೇರಿಸಿದ್ದು, ಇಡೀ ಗ್ರಾಮವೇ ಕಣ್ಣೀರ ಕಡಲಲ್ಲಿ ಮುಳುಗಿತ್ತು.

ಕುಷ್ಟಗಿ-ಗಜೇಂದ್ರಗಡ ರಸ್ತೆಯಲ್ಲಿ ದುರ್ಘಟನೆ: ಮರೋಳ ಗ್ರಾಮದ ನಿವಾಸಿಗಳಾದ ಅಭಿಷೇಕ್ ಮಾಗಡಿ ಮತ್ತು ಮುತ್ತು ಹುಲಿಕಟ್ಟಿ ಬಾಲ್ಯದಿಂದಲೂ ಅತ್ಯಂತ ಆತ್ಮೀಯ ಸ್ನೇಹಿತರಾಗಿದ್ದರು. ಎಂದಿನಂತೆ ವೈಯಕ್ತಿಕ ಕೆಲಸದ ನಿಮಿತ್ತ ಇಬ್ಬರೂ ಒಂದೇ ಬೈಕ್‌ನಲ್ಲಿ ಕುಷ್ಟಗಿಗೆ ತೆರಳಿದ್ದರು. ಕುಷ್ಟಗಿಯಲ್ಲಿ ಕೆಲಸ ಮುಗಿಸಿಕೊಂಡು ಸ್ವಗ್ರಾಮಕ್ಕೆ ವಾಪಸ್ ಬರುತ್ತಿದ್ದ ವೇಳೆ, ಕುಷ್ಟಗಿ-ಗಜೇಂದ್ರಗಡ ರಸ್ತೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರೂ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಇದನ್ನೂ ಓದಿ: ಅನ್ನದಾತರ ಬದುಕಿನೊಂದಿಗೆ ಚೆಲ್ಲಾಟ: ಹೆಚ್ಚಿನ ಬೆಲೆ ಆಮಿಷವೊಡ್ಡಿ 40ಕ್ಕೂ ಹೆಚ್ಚು ರೈತರಿಂದ ಭತ್ತ ಖರೀದಿಸಿ 1.30 ಕೋಟಿ ರೂ. ವಂಚನೆ ಆರೋಪ

ಒಂದೇ ಕಡೆ ನಡೆದ ಗೆಳೆಯರ ಅಂತ್ಯಕ್ರಿಯೆ: ಕಣ್ಣೀರಿಟ್ಟ ಗ್ರಾಮಸ್ಥರು ಹಾಗೂ ಸ್ನೇಹಿತರು

ಭವಿಷ್ಯದ ಕನಸು ಕಾಣುತ್ತಿದ್ದ ಮಕ್ಕಳ ಅಕಾಲಿಕ ಮರಣದ ಸುದ್ದಿ ತಿಳಿಯುತ್ತಿದ್ದಂತೆ ಎರಡೂ ಕುಟುಂಬಗಳ ಪೋಷಕರ ಆಕ್ರಂದನ ಮುಗಿಲುಮುಟ್ಟಿತ್ತು. ಮೃತದೇಹಗಳು ಸ್ವಗ್ರಾಮ ಮರೋಳಕ್ಕೆ ಬರುತ್ತಿದ್ದಂತೆ ಇಡೀ ಗ್ರಾಮದಲ್ಲಿ ನೀರವ ಮೌನ ಹಾಗೂ ಶೋಕದ ವಾತಾವರಣ ಆವರಿಸಿತ್ತು. ಬದುಕಿದ್ದಾಗ ಸದಾ ಜೊತೆಯಲ್ಲೇ ಇರುತ್ತಿದ್ದ ಅಭಿಷೇಕ್ ಮತ್ತು ಮುತ್ತು ಅವರ ಸ್ನೇಹಕ್ಕೆ ಗೌರವ ಸೂಚಿಸುವಂತೆ, ಪೋಷಕರು ಹಾಗೂ ಗ್ರಾಮಸ್ಥರು ಇಬ್ಬರು ಸ್ನೇಹಿತರ ಶವಸಂಸ್ಕಾರವನ್ನು ಒಂದೇ ಸ್ಥಳದಲ್ಲಿ ಒಟ್ಟಿಗೇ ನೆರವೇರಿಸಿದರು. ಅನ್ಯೋನ್ಯವಾಗಿದ್ದ ಗೆಳೆಯರ ಅಂತಿಮ ದರ್ಶನ ಪಡೆದ ಇತರೆ ಸ್ನೇಹಿತರು ಹಾಗೂ ಗ್ರಾಮಸ್ಥರು ಕಣ್ಣೀರು ಹಾಕುತ್ತಾ ಭಾರವಾದ ಹೃದಯದಿಂದ ವಿದಾಯ ಹೇಳಿದರು.

ವರದಿ: ಅಣ್ಣಪ್ಪ ಬಾರ್ಕಿ

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಕ್ಷಯ್​ ಪಲ್ಲಮಜಲು​​
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
ಪ್ರಾಸ ಬಳಸಿ ಸ್ಪರ್ಧಿಗಳ ವ್ಯಕ್ತಿತ್ವ ವಿವರಿಸಿದ ಮಾಡರ್ನ್ ಕವಿ ಮಂಜ: ವಿಡಿಯೋ
ಪ್ರಾಸ ಬಳಸಿ ಸ್ಪರ್ಧಿಗಳ ವ್ಯಕ್ತಿತ್ವ ವಿವರಿಸಿದ ಮಾಡರ್ನ್ ಕವಿ ಮಂಜ: ವಿಡಿಯೋ
ಅಧ್ಯಕ್ಷ ಸ್ಥಾನದಲ್ಲಿದ್ದರೂ ಮೈಕ್ ಆಫ್ ಮಾಡಿದ್ದಕ್ಕೆ ಶಾಸಕ ಕೆಂಡಾಮಂಡಲ
ಅಧ್ಯಕ್ಷ ಸ್ಥಾನದಲ್ಲಿದ್ದರೂ ಮೈಕ್ ಆಫ್ ಮಾಡಿದ್ದಕ್ಕೆ ಶಾಸಕ ಕೆಂಡಾಮಂಡಲ
‘ಯಶಸ್ ನಯವಂಚಕ, ಚಿಲ್ಲರೆ ಬುದ್ಧಿ’: ಸುದೀಪ್ ಎದುರಲ್ಲೇ ಆರೋಪಗಳ ಸುರಿಮಳೆ
‘ಯಶಸ್ ನಯವಂಚಕ, ಚಿಲ್ಲರೆ ಬುದ್ಧಿ’: ಸುದೀಪ್ ಎದುರಲ್ಲೇ ಆರೋಪಗಳ ಸುರಿಮಳೆ
ಬಿರ್ಸಾ ಮುಂಡಾ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ಪ್ರಧಾನಿ ಮೋದಿ
ಬಿರ್ಸಾ ಮುಂಡಾ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ಪ್ರಧಾನಿ ಮೋದಿ
ಮೋದಿ ಬಂದ ರೋಡಿಗೆ ಮಾತ್ರ ಥಳಥಳ ಡಾಂಬರ್, ಉಳಿದ ರಸ್ತೆ ತುಂಬಾ ನೂರಾರು ಗುಂಡಿ
ಮೋದಿ ಬಂದ ರೋಡಿಗೆ ಮಾತ್ರ ಥಳಥಳ ಡಾಂಬರ್, ಉಳಿದ ರಸ್ತೆ ತುಂಬಾ ನೂರಾರು ಗುಂಡಿ
ಹೊಸ ಶರ್ಟ್ ಕತ್ತರಿಸಲು ಹಿಂದೇಟು:ಬನಿಯನ್‌ನಲ್ಲೇ KASಪರೀಕ್ಷೆ ಬರೆದ ಅಭ್ಯರ್ಥಿ
ಹೊಸ ಶರ್ಟ್ ಕತ್ತರಿಸಲು ಹಿಂದೇಟು:ಬನಿಯನ್‌ನಲ್ಲೇ KASಪರೀಕ್ಷೆ ಬರೆದ ಅಭ್ಯರ್ಥಿ
ಬಾಳೆಗೊನೆಯಲ್ಲಿ ಡ್ರಗ್ ಸಾಗಾಟ: ಪ್ರಗತಿಪರ ಯುವ ರೈತನ ಕರಾಳ ಮುಖ ಬಯಲು
ಬಾಳೆಗೊನೆಯಲ್ಲಿ ಡ್ರಗ್ ಸಾಗಾಟ: ಪ್ರಗತಿಪರ ಯುವ ರೈತನ ಕರಾಳ ಮುಖ ಬಯಲು
ಕಾಡಾನೆ ದಾಳಿಗೆ ಮಹಿಳೆ ಬಲಿ: ತೀವ್ರಗೊಂಡ ಚೌಡಹಳ್ಳಿ ಗ್ರಾಮಸ್ಥರ ಪ್ರತಿಭಟನೆ
ಕಾಡಾನೆ ದಾಳಿಗೆ ಮಹಿಳೆ ಬಲಿ: ತೀವ್ರಗೊಂಡ ಚೌಡಹಳ್ಳಿ ಗ್ರಾಮಸ್ಥರ ಪ್ರತಿಭಟನೆ
ಕೆಎಎಸ್ ಪರೀಕ್ಷೆ: ಅಕ್ರಮ ತಡೆಯಲು ಬೆಂಗಳೂರು ಕೇಂದ್ರಗಳಲ್ಲಿ ಬಿಗಿ ಭದ್ರತೆ
ಕೆಎಎಸ್ ಪರೀಕ್ಷೆ: ಅಕ್ರಮ ತಡೆಯಲು ಬೆಂಗಳೂರು ಕೇಂದ್ರಗಳಲ್ಲಿ ಬಿಗಿ ಭದ್ರತೆ
ಹಿರಿಯೂರು ಉಪಚುನಾವಣೆಗೆ NDA ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಗೊಂದಲ
ಹಿರಿಯೂರು ಉಪಚುನಾವಣೆಗೆ NDA ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಗೊಂದಲ