ದಾವಣಗೆರೆ: ಪಿಯುಸಿ ವಿದ್ಯಾರ್ಥಿ ಮಿಥುನ್(18) ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ (Davangere PUC student suicide). ಸಾವಿಗೂ ಮೊದಲು ಮಿಥುನ್ ಆತ್ಮಹತ್ಯೆಗೆ ಪ್ರೇರಣೆ ನೀಡುವ ಭಯಾನಕ ಗೇಮ್ ಗಳನ್ನು ಮೊಬೈಲ್ ನಲ್ಲಿ ವೀಕ್ಷಿಸಿದ್ದ (mobile game addiction). ನನ್ನ ಆತ್ಮಹತ್ಯೆಗೆ ಯಾರೂ ಕಾರಣರಲ್ಲ ಎಂದೂ ಡೆತ್ನೋಟ್ ಬರೆದು ದೇಹದ ವಿವಿಧ ಕಡೆ ಚಾಕುವಿನಿಂದ ಇರಿದುಕೊಂಡು, ಬಳಿಕ ಏಪ್ರಿಲ್ 23 ರಂದು ಕಟ್ಟಡದಿಂದ ಹಾರಿ ಅತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸದ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ (Davangere SP CB Ryshyanth) ಮಾಹಿತಿ ನೀಡಿದ್ದಾರೆ.
ದಾವಣಗೆರೆ ನಗರದ ಅರುಣಾ ಸರ್ಕಲ್ ಬಳಿಯ ಪಿಸಾಳೆ ಕಾಂಪೌಂಡ್ ನಲ್ಲಿ ಎರಡನೇ ಮಹಡಿಯಿಂದ ಹಾರಿ ಪ್ರಾಣ ಬಿಟ್ಟ ಪಿಯು ವಿದ್ಯಾರ್ಥಿ ಅಂದು ಬೆಳಿಗ್ಗೆ ಪರೀಕ್ಷೆಗೆ ಹೋಗಬೇಕಾಗಿದ್ದ. ಸಾವನ್ನಪ್ಪುವ ಮೊದಲು ಆತ್ಮಹತ್ಯೆಗೆ ಪ್ರೇರಣೆ ನೀಡುವ ಭಯಾನಕ ಗೇಮ್ ನೋಡಿದ್ದ. ಪೊಲೀಸ್ ತನಿಖೆಯಿಂದ ಇದೆಲ್ಲಾ ಬಯಲಾಗಿದೆ. ಮೊಬೈಲ್ ನಲ್ಲಿ ಭಯಾನಕ ಗೇಮ್ ನೋಡುವ ಚಟ ವಿದ್ಯಾರ್ಥಿಗಳನ್ನ ಬಲಿಪಡೆಯುತ್ತಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ವಿಧಿ ವಿಜ್ಞಾನ ಪ್ರಯೋಗಾಲದಿಂದ ವರದಿ ಬಂದ ಬಳಿಕ ಸ್ಪಷ್ಟ ಚಿತ್ರಣ ಸಿಗಲಿದೆ.
ರಸ್ತೆ ಅಪಘಾತದಲ್ಲಿ ತಾಯಿ-ಮಗು ಸ್ಥಳದಲ್ಲೇ ದುರ್ಮರಣ:
ದಾವಣಗೆರೆಯ ಕುಂದುವಾಡ ಬಳಿ ಹೆದ್ದಾರಿಯಲ್ಲಿ ರಸ್ತೆ ಅಪಘಾತದಲ್ಲಿ ತಾಯಿ-ಮಗು ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ. ಬೈಕ್ ಸ್ಕಿಡ್ ಆಗಿ ಲಾರಿ ಚಕ್ರಕ್ಕೆ ಸಿಲುಕಿ ತಾಯಿ ಮತ್ತು ಮಗು ಅಸುನೀಗಿದೆ. ಮತ್ತೊಬ್ಬನ ಸ್ಥಿತಿ ಗಂಭೀರವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲುಮಾಡಲಾಗಿದೆ. ರಸ್ತೆ ಕಾಮಗಾರಿ ವಿಳಂಬ ಹಿನ್ನೆಲೆ ಅಪಘಾತಗಳು ಸಂಭವಿಸುತ್ತಿವೆ ಎಂದು ಸ್ಥಳೀಯ ಗ್ರಾಮಸ್ಥರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಕಾಮಗಾರಿ ಶೀಘ್ರ ಮುಗಿಸುವಂತೆ ಸ್ಥಳೀಯರು ಒತ್ತಾಯ ಮಾಡಿದರು.
ಹೇಮಾವತಿ ತೀರದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ:
ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಹೆಬ್ಬರಿಗೆ ಸಮೀಪ ಹೇಮಾವತಿ ನದಿ ತೀರದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಕಳೆದ 10 ದಿನಗಳ ಹಿಂದೆ ಸಾವನ್ನಪ್ಪಿರುವ ಶಂಕೆ ವ್ಯಕಕ್ತವಾಗಿದೆ. ಬಣಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Also Read:
Lord Ganesha: ಇಂದು ಬುಧವಾರ ಗಣಪತಿಗೆ ಈ ವಸ್ತುಗಳ ಅರ್ಪಿಸಿದರೆ, ಗಣೇಶ ಸಂತುಷ್ಟನಾಗಿ ಶುಭ ತರುವುದು ಖಚಿತ
Also Read:
ಪಿಎಸ್ಐ ನೇಮಕಾತಿ ಪರೀಕ್ಷೆ ರದ್ದು ಹಿನ್ನೆಲೆ ಪರೀಕ್ಷೆ ರದ್ದು ಪ್ರಶ್ನಿಸಿ ಕೆಎಟಿ ಮೊರೆ ಹೋದ ಅಭ್ಯರ್ಥಿಗಳು
Published On - 2:31 pm, Wed, 4 May 22