AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Lord Ganesha: ಇಂದು ಬುಧವಾರ ಗಣಪತಿಗೆ ಈ ವಸ್ತುಗಳ ಅರ್ಪಿಸಿದರೆ, ಗಣೇಶ ಸಂತುಷ್ಟನಾಗಿ ಶುಭ ತರುವುದು ಖಚಿತ

ಹಿಂದೂ ಧರ್ಮದಲ್ಲಿ ಬುಧವಾರದ ದಿನ ಗಣಪತಿಗೆ ಅರ್ಪಿತವಾಗಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಎಲ್ಲಾ ದೇವರು ಮತ್ತು ದೇವತೆಗಳ ಪೈಕಿ ಗಣಪತಿಯನ್ನು ಮೊದಲು ಪೂಜಿಸಲಾಗುತ್ತದೆ. ಆದ್ದರಿಂದ, ಯಾವುದೇ ಶುಭ ಕಾರ್ಯದಲ್ಲಿ ಮೊದಲನೆಯದಾಗಿ, ಗಣೇಶನನ್ನು ಪೂಜಿಸಲಾಗುತ್ತದೆ. ಬುಧವಾರದಂದು ಗಣೇಶನನ್ನು ಪೂಜಿಸುವುದರಿಂದ ಆಗುವ ಲಾಭಗಳು ದ್ವಿಗುಣಗೊಳ್ಳುತ್ತವೆ ಎಂದು ನಂಬಲಾಗಿದೆ. ಏಕೆಂದರೆ ಗಣೇಶನು ಸಹ ಶಿವನಿಗೆ ತುಂಬಾ ಪ್ರಿಯನಾಗಿರುತ್ತಾನೆ. ಗಣೇಶನು ಬುಧ ಗ್ರಹದ ಬುದ್ಧಿಕಾರಕ ದೇವ. ಗಣೇಶನನ್ನು ಬುಧವಾರ ಪೂಜಿಸುವುದರಿಂದ ಆತನು ಸಂತಸಗೊಂಡು ಭಕ್ತರ ದುಃಖವನ್ನು ತೆಗೆದುಹಾಕುತ್ತಾನೆ. ಗಣಪತಿಯನ್ನು ಸಂತಸಗೊಳಿಸಲು ಬುಧವಾರ ನಾವು […]

Lord Ganesha: ಇಂದು ಬುಧವಾರ ಗಣಪತಿಗೆ ಈ  ವಸ್ತುಗಳ ಅರ್ಪಿಸಿದರೆ, ಗಣೇಶ ಸಂತುಷ್ಟನಾಗಿ ಶುಭ ತರುವುದು ಖಚಿತ
ಇಂದು ಬುಧವಾರ ಗಣಪತಿಗೆ ಈ ವಸ್ತುಗಳ ಅರ್ಪಿಸಿದರೆ, ಗಣೇಶ ಸಂತುಷ್ಟನಾಗಿ ಶುಭ ತರುವುದು ಖಚಿತ
TV9 Web
| Edited By: |

Updated on: May 04, 2022 | 6:06 AM

Share

ಹಿಂದೂ ಧರ್ಮದಲ್ಲಿ ಬುಧವಾರದ ದಿನ ಗಣಪತಿಗೆ ಅರ್ಪಿತವಾಗಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಎಲ್ಲಾ ದೇವರು ಮತ್ತು ದೇವತೆಗಳ ಪೈಕಿ ಗಣಪತಿಯನ್ನು ಮೊದಲು ಪೂಜಿಸಲಾಗುತ್ತದೆ. ಆದ್ದರಿಂದ, ಯಾವುದೇ ಶುಭ ಕಾರ್ಯದಲ್ಲಿ ಮೊದಲನೆಯದಾಗಿ, ಗಣೇಶನನ್ನು ಪೂಜಿಸಲಾಗುತ್ತದೆ. ಬುಧವಾರದಂದು ಗಣೇಶನನ್ನು ಪೂಜಿಸುವುದರಿಂದ ಆಗುವ ಲಾಭಗಳು ದ್ವಿಗುಣಗೊಳ್ಳುತ್ತವೆ ಎಂದು ನಂಬಲಾಗಿದೆ. ಏಕೆಂದರೆ ಗಣೇಶನು ಸಹ ಶಿವನಿಗೆ ತುಂಬಾ ಪ್ರಿಯನಾಗಿರುತ್ತಾನೆ. ಗಣೇಶನು ಬುಧ ಗ್ರಹದ ಬುದ್ಧಿಕಾರಕ ದೇವ. ಗಣೇಶನನ್ನು ಬುಧವಾರ ಪೂಜಿಸುವುದರಿಂದ ಆತನು ಸಂತಸಗೊಂಡು ಭಕ್ತರ ದುಃಖವನ್ನು ತೆಗೆದುಹಾಕುತ್ತಾನೆ. ಗಣಪತಿಯನ್ನು ಸಂತಸಗೊಳಿಸಲು ಬುಧವಾರ ನಾವು ಏನು ಮಾಡಬೇಕು ಗೊತ್ತೇ?

  1. ಕೆಂಪು ಸಿಂಧೂರ ಹೊಂದಿರುವ ತಿಲಕ: ಗಣೇಶನಿಗೆ ಕೆಂಪು ಬಣ್ಣ ಎಂದರೆ ಬಹಳ ಇಷ್ಟ. ಆದ್ದರಿಂದ, ಗಣಪತಿ ದೇವನ ಆರಾಧನೆಯಲ್ಲಿ ಬುಧವಾರ ಕೆಂಪು ಸಿಂಧೂರ ತಿಲಕವನ್ನು ದೇವನಿಗೆ ಹಚ್ಚಿ, ನೀವು ಹಣೆಗೆ ಕೆಂಪು ಸಿಂಧೂರವನ್ನಿಟ್ಟುಕೊಂಡು ಆತನನ್ನು ಪೂಜಿಸಿ. ಆದರೆ ತಿಲಕವನ್ನು ಹಚ್ಚಿಕೊಳ್ಳುವಾಗ ಮೊದಲು ಗಣೇಶನಿಗೆ ಹಚ್ಚಿ ನಂತರ ನೀವು ಹಚ್ಚಿಕೊಳ್ಳಬೇಕು. ಇದರಿಂದ ಸದಾಕಾಲ ಗಣೇಶನ ಅನುಗ್ರಹ ಭಕ್ತರ ಮೇಲಿರುತ್ತದೆ.
  2. ದೂರ್ವೆಯನ್ನು ಅರ್ಪಿಸಿ: ಗಣಪತಿಯ ಆರಾಧನೆಯಲ್ಲಿ ದೂರ್ವಾವನ್ನು ಅರ್ಪಿಸಬೇಕು. ಏಕೆಂದರೆ ದೂರ್ವಾ (ಗರಿಕೆ) ಅವನಿಗೆ ತುಂಬಾ ಪ್ರಿಯ. ಗಣಪತಿ ದೇವನಿಗೆ ಇದನ್ನು ಅರ್ಪಿಸುವ ಮೂಲಕ ಬಹಳ ಬೇಗ ಸಂತೋಷಪಡುತ್ತಾನೆ. ಗಣೇಶನ ತಲೆಯ ಮೇಲೆ ದೂರ್ವಾವನ್ನು ಅರ್ಪಿಸಬೇಕು ಎಂಬುದನ್ನು ಭಕ್ತರು ನೆನಪಿನಲ್ಲಿಟ್ಟುಕೊಳ್ಳಬೇಕು.
  3. ​ಶಮಿ ಪತ್ರೆಯನ್ನು ಅರ್ಪಿಸಿ: ಶಮಿ ಪತ್ರೆ ಗಣೇಶನಿಗೆ ತುಂಬಾ ಪ್ರಿಯವಾದ ಪತ್ರೆವಾಗಿದೆ. ಆದ್ದರಿಂದ, ಬುಧವಾರ ಗಣೇಶನಿಗೆ ಶಮಿ ಪತ್ರೆಯನ್ನು ಅರ್ಪಿಸಿ. ನೀವು ಬುಧವಾರ ಗಣೇಶನಿಗೆ ಶಮಿಯನ್ನು ಅರ್ಪಿಸುವುದರಿಂದ ನಿಮ್ಮ ಮನೆಯಲ್ಲಿ ಸಂತೋಷ, ಸಂಪತ್ತು ಮತ್ತು ಶಾಂತಿ ತುಂಬಿಕೊಂಡಿರುತ್ತದೆ. ಶಮಿ (ಬನ್ನಿ) ವೃಕ್ಷ ಶನೈಶ್ಚರ ಸ್ವಾಮಿಯ ಪ್ರತೀಕ. ಇದನ್ನು ಗಣಪತಿಗೆ ಅರ್ಪಿಸುವುದರಿಂದ ಸ್ವಾಮಿಯು ಸಂತುಷ್ಟನಾಗುತ್ತಾನೆ ಹಾಗೂ ತನ್ನ ಪ್ರಭಾವವನ್ನು ಕಡಿಮೆ ಮಾಡುತ್ತಾರೆ.
  4. ​ಅನ್ನವನ್ನು ಅರ್ಪಿಸಿ: ಹಿಂದೂ ಧರ್ಮದಲ್ಲಿ, ಪೂಜೆಯ ಸಮಯದಲ್ಲಿ ಅಕ್ಕಿಯನ್ನು ಅಕ್ಷತೆಯನ್ನಾಗಿ ದೇವರಿಗೆ ಅರ್ಪಿಸುತ್ತಾರೆ. ಯಾಕೆಂದರೆ ಪೂಜೆಯಲ್ಲಿ ಅಕ್ಕಿಯನ್ನು ಬಹಳ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಭಗವಾನ್‌ ಗಣೇಶನಿಗೂ ಕೂಡ ಅಕ್ಕಿಯೆಂದರೆ ಬಲು ಪ್ರೀತಿ. ಆದರೆ ಒಣ ಅಕ್ಕಿಯನ್ನು ಗಣಪತಿಗೆ ನೀಡಬಾರದು. ಗಣೇಶನ ಆರಾಧನೆಯ ಸಮಯದಲ್ಲಿ ಅವರಿಗೆ ಅನ್ನವನ್ನು ಅರ್ಪಿಸಬೇಕು. ಇದರಿಂದ ಸಂತಸಗೊಂಡ ಅವನು ನಿಮಗೆ ಅಪೇಕ್ಷಿತ ಫಲಿತಾಂಶವನ್ನು ನೀಡುತ್ತಾನೆ ಮತ್ತು ತನ್ನ ಭಕ್ತರನ್ನು ಆಶೀರ್ವದಿಸುತ್ತಾನೆ.
  5. ತುಪ್ಪ, ಬೆಲ್ಲವನ್ನು ಅರ್ಪಿಸಿ: ತುಪ್ಪ, ಬೆಲ್ಲವನ್ನು ಗಣೇಶನಿಗೆ ಬುಧವಾರ ಅರ್ಪಿಸಬೇಕು. ಭಗವಾನ್ ಶ್ರೀ ಗಣೇಶನು ಇದರಿಂದ ಬಹಳ ಸಂತೋಷಪಡುತ್ತಾನೆ. ಗಣೇಶ ದೇವನ ಕೃಪೆಯಿಂದ ಮನೆಯಲ್ಲಿ ಹಣಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ನಿವಾರಣೆ ಪಡೆಯಬಹುದು. ಅಷ್ಟು ಮಾತ್ರವಲ್ಲ, ಇದರಿಂದ ನಿಮ್ಮ ಜೀವನದಲ್ಲಿ ಸಂತೋಷವೂ ಬರುತ್ತದೆ. (ಬರೆಹ -ವಾಟ್ಸಪ್ ಸಂದೇಶ)