ದಾವಣಗೆರೆ: ಆರ್​ಟಿಐ ಕಾರ್ಯಕರ್ತ ಹತ್ಯೆ ಪ್ರಕರಣ; ಕೋರ್ಟ್​​ಗೆ ಶರಣಾದ ಆರೋಪಿ ಪಿಡಿಒ ಎ.ಟಿ.ನಾಗರಾಜ್

| Updated By: ಕಿರಣ್ ಹನುಮಂತ್​ ಮಾದಾರ್

Updated on: Jan 13, 2023 | 10:15 AM

ಜಗಳೂರು ತಾಲೂಕಿನ ಹೊಸಕೆರೆ ಧಾಬಾ ಬಳಿ ಕಲ್ಲು ಎತ್ತಿಹಾಕಿ ಆರ್​ಟಿಐ ಕಾರ್ಯಕರ್ತ ಜಿ.ಪಿ.ರಾಮಕೃಷ್ಣನನ್ನ ಹತ್ಯೆ ಮಾಡಲಾಗಿದ್ದು. ತಲೆ ಮರೆಸಿಕೊಂಡಿದ್ದ ಪ್ರಮುಖ ಆರೋಪಿ ಪಿಡಿಒ ಎ.ಟಿ.ನಾಗರಾಜ್ ಇದೀಗ ಕೋರ್ಟ್​​ಗೆ ಶರಣಾಗಿದ್ದಾನೆ.

ದಾವಣಗೆರೆ: ಆರ್​ಟಿಐ ಕಾರ್ಯಕರ್ತ ಹತ್ಯೆ ಪ್ರಕರಣ; ಕೋರ್ಟ್​​ಗೆ ಶರಣಾದ ಆರೋಪಿ ಪಿಡಿಒ ಎ.ಟಿ.ನಾಗರಾಜ್
ಹತ್ಯೆ ಆರೋಪಿ ಪಿಡಿಓ ನಾಗರಾಜ್​ ಕೋರ್ಟ್​ಗೆ ಹಾಜರು
Follow us on

ದಾವಣಗೆರೆ: ಜಿಲ್ಲೆಯ ಜಗಳೂರು ತಾಲೂಕಿನ ಹೊಸಕೆರೆ ಧಾಬಾ ಬಳಿ ಆರ್​ಟಿಐ ಕಾರ್ಯಕರ್ತ ಜಿ.ಪಿ.ರಾಮಕೃಷ್ಣ ಎಂಬುವವನನ್ನ ಹಲ್ಲೆ ಮಾಡಿ ಕೊಲೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಹಿರೇಮಲ್ಲನಹೊಳೆ ಗ್ರಾಮ ಪಂಚಾಯಿತಿ ಪಿಡಿಒ ಎ.ಟಿ.ನಾಗರಾಜ್ ತಲೆಮರೆಸಿಕೊಂಡಿದ್ದನು. ಆದರೆ ಇದೀಗ ದಾವಣಗೆರೆ 2ನೇ ಹೆಚ್ಚುವರಿ ಜಿಲ್ಲಾ ಕೋರ್ಟ್​​ನಲ್ಲಿ ಶರಣಾಗಿದ್ದಾನೆ. ನ್ಯಾಯಾಲಯ ಆರೋಪಿ ನಾಗರಾಜನನ್ನ ಪೊಲೀಸರ ವಶಕ್ಕೆ ನೀಡಿದೆ.

ಜಿಲ್ಲೆಯ ಜಗಳೂರು ತಾಲೂಕಿನ ಹೊಸಕೆರೆ ಬಳಿಯ ಡಾಬಾದಲ್ಲಿ ಜ.7ರಂದು ಗೌರಿಪುರ ಗ್ರಾಮದ ನಿವಾಸಿ ರಾಮಕೃಷ್ಣ(30) ಎಂಬಾತನನ್ನು ಹಳೇ ದ್ವೇಷದ ಹಿನ್ನೆಲೆ ಗ್ಯಾಂಗ್​ಯೊಂದು ಕಬ್ಬಿಣದ ರಾಡ್​ನಿಂದ ಹೊಡೆದು ಕಲ್ಲು ಎತ್ತಿಹಾಕಿ ಕೊಲೆ ಮಾಡಿತ್ತು. ಕೊಲೆ ಆರೋಪಿಗಳಲ್ಲಿ ಓರ್ವ ವ್ಯಕ್ತ ಪಿಡಿಓ ಸಂಬಂಧಿಯಾಗಿದ್ದನು. ಇದೇ ಕಾರಣಕ್ಕೆ ಪಿಡಿಓ ಎ.ಟಿ.ನಾಗರಾಜ್​ನೇ ಕೊಲೆ ಮಾಡಿಸಿದ್ದಾನೆ ಎಂದು ವ್ಯಕ್ತಿಯ ಸಂಬಂಧಿಕರು ಆರೋಪಿಸಿದ್ದರು. ಇನ್ನು ಕೊಲೆಯಾದ ಗೌರಿಪುರ ಗ್ರಾಮದ ನಿವಾಸಿ ರಾಮಕೃಷ್ಣ ಒಬ್ಬ ಆರ್​ಟಿಐ ಕಾರ್ಯಕರ್ತನಾಗಿದ್ದು, ಭ್ರಷ್ಟರು ಆತನನ್ನ ‌ಕಂಡರೆ ಸಾಕು ಬೇವರುತ್ತಿದ್ದರು. ಕಾರಣ ಕೈಯಲ್ಲಿ ‌ಖಚಿತ ಮಾಹಿತಿ ಪಡೆದು ಭ್ರಷ್ಟರನ್ನ ಜೈಲಿಗೆ ಕಳುಹಿಸಲು ಆತ ಪ್ರತಿಜ್ಞೆ ಮಾಡಿದ್ದನಂತೆ.

ಅದೇ ಹಳೇ ದ್ವೇಷದ ಹಿನ್ನೆಲೆ ಡಾಬಾದಲ್ಲಿ ಊಟಮಾಡಲು ಬಂದ ರಾಮಕೃಷ್ಣನ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ಇನ್ನು ಇತ ಕೂಡ ಬಾಡಿ ಬಿಲ್ಡರ್ ತರಹ ಇದ್ದು, ಅನಿರೀಕ್ಷಿತವಾಗಿ ಏಕಕಾಲಕ್ಕೆ ಗುಂಪು ದಾಳಿ ಮಾಡಿದ ಹಿನ್ನೆಲೆ ತಲೆ ಸೇರಿದಂತೆ ಹಲವಾರು ಕಡೆ ಕಬ್ಬಿಣದ ರಾಡ್​ನಿಂದ ಹಲ್ಲೆ ಮಾಡಿ ನಂತರ ಕಲ್ಲು ಎತ್ತಿಹಾಕಿ ಆರೋಪಿಗಳು ಪರಾರಿಯಾಗಿದ್ದರು. ತಡ ರಾತ್ರಿ ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿಬಿ ರಿಷ್ಯಂತ್ ಬರುತ್ತಿದ್ದಂತೆ ಕೊಲೆಯಾದ ವ್ಯಕ್ತಿಯ ಸಂಬಂಧಿಕರು ಹಾಗೂ ಸ್ನೇಹಿತರು ಆರೋಪಿಗಳಿಗೆ ಶಿಕ್ಷೆ ಕೊಡಿಸುವಂತೆ ಎಸ್ಪಿ ಮುಂದೆ ಕೈ ಮುಗಿದು ಬೇಡಿಕೊಂಡಿದ್ದರು. ಇದರಿಂದ ಇದೊಂದು ಹಳೆ ದ್ವೇಷದ ಹಿನ್ನೆಲೆಯಿಂದ ನಡೆದ ಕೊಲೆ ಆಗಿರುವ ಬಗ್ಗೆ ಘಟನೆ ನಡೆದಾಗಲೇ ಪೊಲೀಸರಿಗೆ ಶಂಕೆ ವ್ಯಕ್ತವಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ 24 ವರ್ಷದ ಅರ್ಜುನ್ ಹಾಗೂ ಪ್ರಶಾಂತ ಎಂಬ ಇಬ್ಬರನ್ನ ಪೊಲೀಸರು‌ ಬಂಧಿಸಿದ್ದರು. ಆರೋಪಿಗಳನ್ನ ಬಂಧಿಸುವ ತನಕ ನಾವು ಶವ ಸಂಸ್ಕಾರ ಮಾಡುವುದಿಲ್ಲವೆಂದು ಸಂಬಂಧಿಕರು ಹಟಕ್ಕೆ ಬಿದ್ದಿದ್ದರು.

ಇದನ್ನೂ ಓದಿ:Ramanagara: ವರ್ಷದ ನಂತರ ಸಿಕ್ತು ಅಪರಿಚಿತ ಮಹಿಳೆಯ ಕೊಲೆ ಪ್ರಕರಣದ ಸುಳಿವು, ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚನೆ

ಆರೋಪಿಗಳ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದು, ಎಂಟರಿಂದ ಹತ್ತು ಜನ ಇದ್ದರು ಎಂಬ ಮಾಹಿತಿಯನ್ನ ಪೊಲೀಸರು ಸಂಗ್ರಹಿಸಿದ್ದಾರೆ. ಪ್ರಮುಖ ಆರೋಪಿ ಕೃಷ್ಣ ಸೇರಿ‌ ಬಹುತೇಕರು ತಲೆ ಮರೆಸಿಕೊಂಡಿದ್ದಾರೆ. ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ತಂಡ ರಚನೆ ಮಾಡಲಾಗಿದೆ. ಮಾಹಿತಿ ಹಕ್ಕು ಕಾಯ್ದೆಯಡಿ ವಿವಿಧ ಪಂಚಾಯಿತ್​ನಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ಮಾಹಿತಿ ಕೇಳಿದ್ದು‌ ಕೊಲೆಗೆ ಕಾರಣ ಎನ್ನಲಾಗಿದೆ. ಜೊತೆಗೆ ಹಣಕಾಸಿನ ವ್ಯವಹಾರದ ಹಿನ್ನೆಲೆ ಈ ಹತ್ಯೆ ನಡೆದಿರಬಹುದು ಎಂಬ ಮಾತುಗಳು‌ ಕೂಡ ಕೇಳಿ ಬಂದಿವೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ