Davanagere: ಆರ್ಟಿಐ ಕಾರ್ಯಕರ್ತನ ಹತ್ಯೆ: ಕೊಲೆಯಾದ ಮರುದಿನವೇ ಗ್ರಾ.ಪಂ ಖಾತೆಯಿಂದ 21 ಲಕ್ಷ ರೂ ದೋಚಿಕೊಂಡು ಹೋದ ಪಿಡಿಓ
ಜಗಳೂರು ತಾಲೂಕಿನ ಹಿರೇಮಲ್ಲನಹೊಳೆ ಗ್ರಾಮ ಪಂಚಾಯತಿಯಲ್ಲಿ ಪಿಡಿಓ ಆಗಿದ್ದ ಆರ್ಟಿಐ ಕಾರ್ಯಕರ್ತನ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಪಿಡಿಓ ಎಟಿ ನಾಗರಾಜ್ ಪಂಚಾಯತ್ ಖಾತೆಯಿಂದ 21 ಲಕ್ಷ ರೂಪಾಯಿ ಬಿಡುಗಡೆ ಮಾಡಿಕೊಂಡು ನಾಪತ್ತೆಯಾಗಿದ್ದಾನೆ.
ದಾವಣಗೆರೆ: ಜಗಳೂರು ತಾಲೂಕಿನ ಹೊಸಕೆರೆ ಡಾಬಾದಲ್ಲಿ ಆರ್ಟಿಐ ಕಾರ್ಯಕರ್ತನನ್ನು ಹಳೆ ದ್ವೇಷದ ಹಿನ್ನಲೆ ಗುಂಪೊಂದು ಹಲ್ಲೆ ಮಾಡಿ, ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆ ಮಾಡಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆಯ ಪ್ರಮುಖ ಆರೋಪಿ ತಾಲೂಕಿನ ಹಿರೇಮಲ್ಲನಹೊಳೆ ಗ್ರಾಮ ಪಂಚಾಯತಿ ಪಿಡಿಓ ನಾಗರಾಜ್ ಹತ್ಯೆಯಾದ ಮರುದಿನವೇ ಪಂಚಾಯತಿ ಖಾತೆಯಿಂದ 21 ಲಕ್ಷ ರೂಪಾಯಿ ಬಿಡುಗಡೆ ಮಾಡಿಕೊಂಡು ನಾಪತ್ತೆಯಾಗಿದ್ದಾನೆ. ಇದಕ್ಕೆ ಪಂಚಾಯತಿ ಅಧ್ಯಕ್ಷೆ ಸಾಥ್ ನೀಡಿದ್ದಾರೆ ಎಂದು ಆರೋಪಿಸಿ ಹಿರೇಮಲ್ಲನಹೊಳೆ ಗ್ರಾಮ ಪಂಚಾಯತಿಯ 19 ಜನ ಸದಸ್ಯರು ತಹಶಿಲ್ದಾರಗೆ ದೂರು ನೀಡಿದ್ದಾರೆ.
ಇದೇ ಜ.7 ರಂದು ಸಂಜೆ ಜಗಳೂರು ತಾಲೂಕಿನ ಹೊಸಕೆರೆ ಡಾಬಾದಲ್ಲಿ ಆರ್ಟಿಐ ಕಾರ್ಯಕರ್ತ ರಾಮಕೃಷ್ಣನನ್ನ ಹಳೇ ದ್ವೇಷದ ಹಿನ್ನೆಲೆ ಗ್ಯಾಂಗ್ಯೊಂದು ಕಬ್ಬಿಣದ ರಾಡ್ನಿಂದ ಹೊಡೆದು ಕಲ್ಲು ಎತ್ತಿಹಾಕಿ ಕೊಲೆ ಮಾಡಲಾಗಿತ್ತು. ಈ ಹತ್ಯೆಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯತಿ ಪಿಡಿಓ ಪ್ರಮುಖ ಆರೋಪಿ ಎಂದು ಸಂಬಂಧಿಕ್ಕರು ಆರೋಪಿಸಿದ್ದರು. ಇದಕ್ಕೆ ಪುಷ್ಠಿ ಎಂಬಂತೆ ಪಿಡಿಓ ನಾಗರಾಜ್, ರಾಮಕೃಷ್ಣ ಹತ್ಯೆಯಾದ ಮರುದಿನವೇ ಪಂಚಾಯತಿ ಖಾತೆಯಿಂದ 21 ಲಕ್ಷ ರೂಪಾಯಿ ಹಣ ಬಿಡುಗಡೆ ಮಾಡಿಕೊಂಡು ಪರಾರಿಯಾಗಿದ್ದಾನೆ. ಇದಕ್ಕೆ ಪಂಚಾಯತ್ ಅಧ್ಯಕ್ಷೆ ಸಾಥ್ ನೀಡಿದ್ದು ಎಂದು ಆರೋಪಿಸಿದ ಸದಸ್ಯರು. ಪಂಚಾಯತ್ ರಾಜ್ ಇಲಾಖೆ ಹಾಗೂ ಪೊಲೀಸರಿಗೆ ದೂರು ನೀಡಲು ನಿರ್ಧರಿಸಿದ್ದಾರೆ.
ಇದನ್ನೂ ಓದಿ:Davanagere: ಆರ್ಟಿಐ ಕಾರ್ಯಕರ್ತನ ಬರ್ಬರ ಕೊಲೆ; ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
ಇನ್ನು ಕೊಲೆಯಾದ ಗೌರಿಪುರ ಗ್ರಾಮದ ನಿವಾಸಿ ರಾಮಕೃಷ್ಣ ಒಬ್ಬ ಆರ್ಟಿಐ ಕಾರ್ಯಕರ್ತನಾಗಿದ್ದು, ಭ್ರಷ್ಟರು ಆತನನ್ನ ಕಂಡರೆ ಸಾಕು ಬೇವರುತ್ತಿದ್ದರು. ಕಾರಣ ಕೈಯಲ್ಲಿ ಖಚಿತ ಮಾಹಿತಿ ಪಡೆದು ಭ್ರಷ್ಟರನ್ನ ಜೈಲಿಗೆ ಕಳುಹಿಸಲು ಆತ ಪ್ರತಿಜ್ಞೆ ಮಾಡಿದ್ದ. ಅದೇ ಹಳೇ ದ್ವೇಷದ ಹಿನ್ನೆಲೆ ಡಾಬಾದಲ್ಲಿ ಊಟ ಮಾಡಲು ಬಂದಿದ್ದ ರಾಮಕೃಷ್ಣನ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ತಡ ರಾತ್ರಿ ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿಬಿ ರಿಷ್ಯಂತ್ ಬರುತ್ತಿದ್ದಂತೆ ಕೊಲೆಯಾದ ವ್ಯಕ್ತಿಯ ಸಂಬಂಧಿಕರು ಹಾಗೂ ಸ್ನೇಹಿತರು ಆರೋಪಿಗಳಿಗೆ ಶಿಕ್ಷೆ ಕೊಡಿಸುವಂತೆ ಎಸ್ಪಿ ಮುಂದೆ ಕೈ ಮುಗಿದು ಬೇಡಿಕೊಂಡ ಘಟನೆ ನಡೆದಿದೆ. ಇದರಿಂದ ಇದೊಂದು ಹಳೆ ದ್ವೇಷದ ಹಿನ್ನೆಲೆಯಿಂದ ನಡೆದ ಕೊಲೆ ಆಗಿರುವ ಬಗ್ಗೆ ಘಟನೆ ನಡೆದಾಗಲೇ ಪೊಲೀಸರಿಗೆ ಶಂಕೆ ವ್ಯಕ್ತವಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ 24 ವರ್ಷದ ಅರ್ಜುನ್ ಹಾಗೂ ಪ್ರಶಾಂತ ಎಂಬ ಇಬ್ಬರನ್ನ ಪೊಲೀಸರು ಬಂಧಿಸಿದ್ದಾರೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ ಮಾಡಿ