Sign In

By signing in or creating an account, you agree with Associated Broadcasting Company's Terms & Conditions and Privacy Policy.

Davanagere: ಆರ್​ಟಿಐ ಕಾರ್ಯಕರ್ತನ ಬರ್ಬರ ಕೊಲೆ; ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

RTI activist murder: ಜಗಳೂರು ತಾಲೂಕಿನ ಹೊಸಕೆರೆ ಡಾಬಾದಲ್ಲಿ ಆರ್​ಟಿಐ ಕಾರ್ಯಕರ್ತನನ್ನು ಹಳೆ ದ್ವೇಷದ ಹಿನ್ನಲೆ ಗುಂಪೊಂದು ಹಲ್ಲೆ ಮಾಡಿ, ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆ ಮಾಡಲಾಗಿದೆ.

Davanagere: ಆರ್​ಟಿಐ ಕಾರ್ಯಕರ್ತನ ಬರ್ಬರ ಕೊಲೆ; ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
ಮೃತ ರಾಮಕೃಷ್ಣ(30)
Follow us
TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on: Jan 09, 2023 | 11:02 PM

ದಾವಣಗೆರೆ: ಜಿಲ್ಲೆಯ ಜಗಳೂರು ತಾಲೂಕಿನ ಹೊಸಕೆರೆ ಬಳಿಯ ಡಾಬಾದಲ್ಲಿ ಗೌರಿಪುರ ಗ್ರಾಮದ ನಿವಾಸಿ ರಾಮಕೃಷ್ಣ(30) ಎಂಬಾತನನ್ನು ಹಳೇ ದ್ವೇಷದ ಹಿನ್ನೆಲೆ ಗ್ಯಾಂಗ್​ಯೊಂದು ಕಬ್ಬಿಣದ ರಾಡ್​ನಿಂದ ಹೊಡೆದು ಕಲ್ಲು ಎತ್ತಿಹಾಕಿ ಕೊಲೆ ಮಾಡಿದೆ. ಕುಟುಂಬ ಸದಸ್ಯರ ಅಕ್ರಂದನ ಮುಗಿಲು ಮುಟ್ಟಿದೆ. ಇನ್ನು ಕೊಲೆ ಆರೋಪಿಗಳಲ್ಲಿ ಓರ್ವ ವ್ಯಕ್ತ ಪಿಡಿಓ ಸಂಬಂಧಿಯಂತೆ. ಇದೇ ಕಾರಣಕ್ಕೆ ಪಿಡಿಓ ಕೊಲೆ ಮಾಡಿಸಿದ್ದಾನೆ ಎಂದು ವ್ಯಕ್ತಿಯ ಸಂಬಂಧಿಕರು ಆರೋಪಿಸಿದ್ದಾರೆ.

ಇನ್ನು ಕೊಲೆಯಾದ ಗೌರಿಪುರ ಗ್ರಾಮದ ನಿವಾಸಿ ರಾಮಕೃಷ್ಣ ಒಬ್ಬ ಆರ್​ಟಿಐ ಕಾರ್ಯಕರ್ತನಾಗಿದ್ದು, ಭ್ರಷ್ಟರು ಆತನನ್ನ ‌ಕಂಡರೆ ಸಾಕು ಬೇವರುತ್ತಿದ್ದರು. ಕಾರಣ ಕೈಯಲ್ಲಿ ‌ಖಚಿತ ಮಾಹಿತಿ ಪಡೆದು ಭ್ರಷ್ಟರನ್ನ ಜೈಲಿಗೆ ಕಳುಹಿಸಲು ಆತ ಪ್ರತಿಜ್ಞೆ ಮಾಡಿದ್ದ. ಅದೇ ಹಳೇ ದ್ವೇಷದ ಹಿನ್ನೆಲೆ ಡಾಬಾದಲ್ಲಿ ಊಟಮಾಡಲು ಬಂದ ರಾಮಕೃಷ್ಣನ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ಇನ್ನು ಇತ ಕೂಡ ಬಾಡಿ ಬಿಲ್ಡರ್ ತರಹ ಇದ್ದು, ಅನಿರೀಕ್ಷಿತವಾಗಿ ಏಕಕಾಲಕ್ಕೆ ದಾಳಿ ಮಾಡಿದ ಹಿನ್ನೆಲೆ ತಲೆ ಸೇರಿದಂತೆ ಹಲವಾರು ಕಡೆ ಕಬ್ಬಿಣದ ರಾಡ್​ನಿಂದ ದಾಳಿ ಮಾಡಿ ನಂತರ ಕಲ್ಲು ಎತ್ತಿಹಾಕಿ ಪರಾರಿ ಆರೋಪಿಗಳು ಪರಾರಿ ಆಗಿದ್ದಾರೆ.

ತಡ ರಾತ್ರಿ ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿಬಿ ರಿಷ್ಯಂತ್ ಬರುತ್ತಿದ್ದಂತೆ ಕೊಲೆಯಾದ ವ್ಯಕ್ತಿಯ ಸಂಬಂಧಿಕರು ಹಾಗೂ ಸ್ನೇಹಿತರು ಆರೋಪಿಗಳಿಗೆ ಶಿಕ್ಷೆ ಕೊಡಿಸುವಂತೆ ಎಸ್ಪಿ ಮುಂದೆ ಕೈ ಮುಗಿದು ಬೇಡಿಕೊಂಡ ಘಟನೆ ನಡೆದಿದೆ. ಇದರಿಂದ ಇದೊಂದು ಹಳೆ ದ್ವೇಷದ ಹಿನ್ನೆಲೆಯಿಂದ ನಡೆದ ಕೊಲೆ ಆಗಿರುವ ಬಗ್ಗೆ ಘಟನೆ ನಡೆದಾಗಲೇ ಪೊಲೀಸರಿಗೆ ಶಂಕೆ ವ್ಯಕ್ತವಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ 24 ವರ್ಷದ ಅರ್ಜುನ್ ಹಾಗೂ ಪ್ರಶಾಂತ ಎಂಬ ಇಬ್ಬರನ್ನ ಪೊಲೀಸರು‌ ಬಂಧಿಸಿದ್ದಾರೆ. ಆರೋಪಿಗಳನ್ನ ಬಂಧಿಸುವ ತನಕ ನಾವು ಶವ ಸಂಸ್ಕಾರ ಮಾಡುವುದಿಲ್ಲವೆಂದು ಸಂಬಂಧಿಕರು ಹಟಕ್ಕೆ ಬಿದ್ದಿದ್ದರು.

ಇದನ್ನೂ ಓದಿ:Delhi Crime: ಪ್ರೇಯಸಿಯ ಪತಿಯ ಕತ್ತು ಸೀಳಿ ಕೊಲೆ ಮಾಡಿ ದೇಹವ ಸುಟ್ಟು ಹಾಕಿದ ಯುವಕ

ಆರೋಪಿಗಳ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದು, ಎಂಟರಿಂದ ಹತ್ತು ಜನ ಇದ್ದರು ಎಂಬ ಮಾಹಿತಿಯನ್ನ ಪೊಲೀಸರು ಸಂಗ್ರಹಿಸಿದ್ದಾರೆ. ಪ್ರಮುಖ ಆರೋಪಿ ಕೃಷ್ಣ ಸೇರಿ‌ ಬಹುತೇಕರು ತಲೆ ಮರೆಸಿಕೊಂಡಿದ್ದಾರೆ. ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ತಂಡ ರಚನೆ ಮಾಡಲಾಗಿದೆ. ಮಾಹಿತಿ ಹಕ್ಕು ಕಾಯ್ದೆಯಡಿ ವಿವಿಧ ಪಂಚಾಯಿತ್​ನಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ಮಾಹಿತಿ ಕೇಳಿದ್ದು‌ ಕೊಲೆಗೆ ಕಾರಣ ಎನ್ನಲಾಗಿದೆ. ಜೊತೆಗೆ ಹಣಕಾಸಿನ ವ್ಯವಹಾರದ ಹಿನ್ನೆಲೆ ಈ ಹತ್ಯೆ ನಡೆದಿರಬಹುದು ಎಂಬ ಮಾತುಗಳು‌ ಕೂಡ ಕೇಳಿ ಬಂದಿವೆ.

ವರದಿ: ಬಸವರಾಜ್ ದೊಡ್ಮನಿ ಟಿವಿ9 ದಾವಣಗೆರೆ

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ ಮಾಡಿ

ಎಲ್ಲರ ಆಶೀರ್ವಾದ ಮಗ ದರ್ಶನ್ ಮೇಲಿರಲಿ: ಮೀನಾ ತೂಗುದೀಪ
ಎಲ್ಲರ ಆಶೀರ್ವಾದ ಮಗ ದರ್ಶನ್ ಮೇಲಿರಲಿ: ಮೀನಾ ತೂಗುದೀಪ
ಹೊಸಪಕ್ಷ ಕಟ್ಟುವ ಕುರಿತು ಯತ್ನಾಳ್ ಮನಸ್ಸಿನಲ್ಲಿರೋದು ಗೊತ್ತಿಲ್ಲ: ನಿರಾಣಿ
ಹೊಸಪಕ್ಷ ಕಟ್ಟುವ ಕುರಿತು ಯತ್ನಾಳ್ ಮನಸ್ಸಿನಲ್ಲಿರೋದು ಗೊತ್ತಿಲ್ಲ: ನಿರಾಣಿ
ಮಾತಾಡಿದ್ದು ನಿರಾಣಿ, ಆಸ್ಥೆಯಿಂದ ಕೇಳಿಸಿಕೊಂಡಿದ್ದು ಶಿವಕುಮಾರ್!
ಮಾತಾಡಿದ್ದು ನಿರಾಣಿ, ಆಸ್ಥೆಯಿಂದ ಕೇಳಿಸಿಕೊಂಡಿದ್ದು ಶಿವಕುಮಾರ್!
ಬೆಲೆಯೇರಿಕೆ ಎಲ್ಲ ಕಡೆ ಆಗುತ್ತಿದೆ, ಕೇವಲ ಕರ್ನಾಟಕ ಮಾತ್ರ ಅಲ್ಲ: ಜಾರಕಿಹೊಳಿ
ಬೆಲೆಯೇರಿಕೆ ಎಲ್ಲ ಕಡೆ ಆಗುತ್ತಿದೆ, ಕೇವಲ ಕರ್ನಾಟಕ ಮಾತ್ರ ಅಲ್ಲ: ಜಾರಕಿಹೊಳಿ
ಬ್ಯಾಗ್ ಕದಿಯಲು ಹೋಗಿ ತನ್ನ ಜೀವಕ್ಕೇ ಕುತ್ತು ತಂದುಕೊಂಡ ಕಳ್ಳ
ಬ್ಯಾಗ್ ಕದಿಯಲು ಹೋಗಿ ತನ್ನ ಜೀವಕ್ಕೇ ಕುತ್ತು ತಂದುಕೊಂಡ ಕಳ್ಳ
ಐಪಿಎಲ್ ಮ್ಯಾಚ್ ನೋಡಲು ಹೋಗೋ ಮುನ್ನ ಸಂಚಾರ ಪೊಲೀಸರ ಈ ಸಲಹೆ ಗಮನಿಸಿ
ಐಪಿಎಲ್ ಮ್ಯಾಚ್ ನೋಡಲು ಹೋಗೋ ಮುನ್ನ ಸಂಚಾರ ಪೊಲೀಸರ ಈ ಸಲಹೆ ಗಮನಿಸಿ
ತಾವು ರಾಷ್ಟ್ರೀಯ ಪಕ್ಷವೆಂಬ ಹಮ್ಮು ಬಿಜೆಪಿ ನಾಯಕರಿಗಿರಬಹುದು: ಸುರೇಶ್ ಬಾಬು
ತಾವು ರಾಷ್ಟ್ರೀಯ ಪಕ್ಷವೆಂಬ ಹಮ್ಮು ಬಿಜೆಪಿ ನಾಯಕರಿಗಿರಬಹುದು: ಸುರೇಶ್ ಬಾಬು
ಸರ್ಕಾರದ ಏಜೆಂಟ್​​​ನಂತೆ ವರ್ತಿಸುವ ಸ್ಪೀಕರ್​ಗೆ ಧಿಕ್ಕಾರ: ಪ್ರತಿಭಟನೆಕಾರರು
ಸರ್ಕಾರದ ಏಜೆಂಟ್​​​ನಂತೆ ವರ್ತಿಸುವ ಸ್ಪೀಕರ್​ಗೆ ಧಿಕ್ಕಾರ: ಪ್ರತಿಭಟನೆಕಾರರು
ಪೊಲೀಸರ ನಿಸ್ವಾರ್ಥ ಸೇವೆ ಮತ್ತು ದಕ್ಷತೆಗೆ ಮುಖ್ಯಮಂತ್ರಿ ಮೆಚ್ಚುಗೆ
ಪೊಲೀಸರ ನಿಸ್ವಾರ್ಥ ಸೇವೆ ಮತ್ತು ದಕ್ಷತೆಗೆ ಮುಖ್ಯಮಂತ್ರಿ ಮೆಚ್ಚುಗೆ
ಬೆಂಗಳೂರು: ಸರ್ಕಾರಿ ಶಾಲೆ ಮಕ್ಕಳಿಂದ ಟಾಯ್ಲೆಟ್ ಕ್ಲೀನ್ ಮಾಡಿಸಿದ ಹೆಚ್​ಎಂ
ಬೆಂಗಳೂರು: ಸರ್ಕಾರಿ ಶಾಲೆ ಮಕ್ಕಳಿಂದ ಟಾಯ್ಲೆಟ್ ಕ್ಲೀನ್ ಮಾಡಿಸಿದ ಹೆಚ್​ಎಂ