ಶಿವಮೊಗ್ಗ ಭಜರಂಗದಳ ಕಾರ್ಯಕರ್ತನ ಹತ್ಯೆ ಯತ್ನ ಕೇಸ್: ಕೊಲೆ ಮಾಡುವ ಮನಸ್ಥಿತಿ ನನ್ನ ಅಣ್ಣನಿಗೆ ಇಲ್ಲ, ಸುನೀಲ್ ನನ್ನ ಚುಡಾಯಿಸ್ತಿದ್ದ -ಕಣ್ಣೀರಿಟ್ಟ ಸಮೀರ್ ತಂಗಿ

ಸಾಗರದಲ್ಲಿ ಆರೋಪಿ ಸಮೀರ್ ಸಹೋದರಿ ಸಭಾ ಶೇಕ್ ಮತ್ತು ಸಂಬಂಧಿಕರು ಸುದ್ದಿಗೋಷ್ಠಿ ನಡೆಸಿದ್ದಾರೆ. ಪತ್ರಿಕಾಗೋಷ್ಠಿ ವೇಳೆ ಸಭಾ ಕಣ್ಣೀರು ಹಾಕಿದ್ದಾರೆ.

ಶಿವಮೊಗ್ಗ ಭಜರಂಗದಳ ಕಾರ್ಯಕರ್ತನ ಹತ್ಯೆ ಯತ್ನ ಕೇಸ್: ಕೊಲೆ ಮಾಡುವ ಮನಸ್ಥಿತಿ ನನ್ನ ಅಣ್ಣನಿಗೆ ಇಲ್ಲ, ಸುನೀಲ್ ನನ್ನ ಚುಡಾಯಿಸ್ತಿದ್ದ -ಕಣ್ಣೀರಿಟ್ಟ ಸಮೀರ್ ತಂಗಿ
ಆರೋಪಿ ಸಮೀರ್ ತಂಗಿ ಸುದ್ದಿಗೋಷ್ಠಿ
Follow us
TV9 Web
| Updated By: ಆಯೇಷಾ ಬಾನು

Updated on:Jan 10, 2023 | 1:27 PM

ಶಿವಮೊಗ್ಗ: ಜಿಲ್ಲೆಯ ಸಾಗರದ ಭಜರಂಗದಳ ಸಹ ಸಂಚಾಲಕ ಸುನೀಲ್‌ ಮೇಲೆ ಸಮೀರ್ ಎಂಬವನಿಂದ ಹತ್ಯೆಗೆ ಯತ್ನ ನಡೆದಿದ್ದು ಪೊಲೀಸರು ಸಮೀರ್​ನನ್ನು ಬಂಧಿಸಿದ್ದಾರೆ. ಕೋಮು ದಳ್ಳುರಿ ಎನ್ನಲಾಗುತ್ತಿದ್ದ ಈ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದ್ದು ಈ ಘಟನೆಗೆ ವೈಯಕ್ತಿಯ ಕಾರಣವಿದೆ. ಸುನೀಲ್ ಸಮೀರ್ ತಂಗಿಯನ್ನು ಚುಡಾಯಿಸಿದ್ದರಿಂದ ಸಮೀರ್ ಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗುತ್ತಿದೆ. ಸದ್ಯ ಘಟನೆ ಸಂಬಂಧ ಆರೋಪಿ ಸಮೀರ್ ಸಹೋದರಿ ಸುದ್ದಿಗೋಷ್ಠಿ ನಡೆಸಿ ಕಣ್ಣೀರು ಹಾಕಿದ್ದಾರೆ. ಹಾಗೂ ಭಜರಂಗದಳ ಕಾರ್ಯಕರ್ತ ಸುನೀಲ್ ವಿರುದ್ಧ ಆರೋಪಗಳ ಸುರಿ ಮಳೆ ಗೈದಿದ್ದಾರೆ.

ಸಾಗರದಲ್ಲಿ ಆರೋಪಿ ಸಮೀರ್ ಸಹೋದರಿ ಸಭಾ ಶೇಕ್ ಮತ್ತು ಸಂಬಂಧಿಕರು ಸುದ್ದಿಗೋಷ್ಠಿ ನಡೆಸಿದ್ದಾರೆ. ಪತ್ರಿಕಾಗೋಷ್ಠಿ ವೇಳೆ ಸಭಾ ಕಣ್ಣೀರು ಹಾಕಿದ್ದಾರೆ. ಸುನೀಲ್ ಕಳೆದ ಒಂದು ವರ್ಷದಿಂದ ಹಿಂದೆ ಬಿದ್ದಿದ್ದ. ಹಿಜಾಬ್ ಗಲಾಟೆ ಆದಾಗಿನಿಂದ ನನ್ನನ್ನು ಚುಡಾಯಿಸುತಿದ್ದ. ನನಗೆ ಬೆದರಿಕೆ ಹಾಕಿದ್ದ ಎಂದು ಸಭಾ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ಸಾಗರ ಬಜರಂಗದಳ ಕಾರ್ಯಕರ್ತ ಸುನೀಲ್ ಹತ್ಯೆಗೆ ಯತ್ನಿಸಿದ ಆರೋಪಿ ಸಮೀರ್ ಅರೆಸ್ಟ್; ಘಟನೆ ಹಿಂದಿದೆ ತಂಗಿ ವಿಚಾರ

ಬುರ್ಕಾ ತೆಗೆಯುವಂತೆ ಒತ್ತಾಯಿಸುತ್ತಿದ್ದ. ಜೊತೆಗೆ ಹಿಂದು ಧರ್ಮಕ್ಕೆ‌ ಮತಾಂತರವಾಗುವಂತೆ ಒತ್ತಾಯಿಸುತಿದ್ದ. ಸುನೀಲ್ ನನ್ನನ್ನು ಚುಡಾಯಿಸುತ್ತಿದ್ದಾನೆ ಎಂದು ನಾನು ನನ್ನ ಅಣ್ಣ ಸಮೀರ್​ಗೆ ತಿಳಿಸಿದ್ದೆ. ಈ ಬಗ್ಗೆ ಸಮೀರ್ ಹಾಗೂ ಸುನೀಲ್ ಜಗಳವಾಡಿಕೊಂಡಿರಬಹುದು. ಈ ವೇಳೆ ಹುಲ್ಲು ಕೊಯ್ಯಲು ತನ್ನೊಂದಿಗೆ ತೆಗೆದುಕೊಂಡು ಹೋಗಿದ್ದ ಮಚ್ಚನ್ನು ಹೆದರಿಸುವ ಉದ್ದೇಶದಿಂದ ಬೀಸಿರಬಹುದು. ಆದರೆ ಕೊಲೆ ಮಾಡುವ ಮನಸ್ಥಿತಿ ನನ್ನ ಅಣ್ಣನಿಗೆ ಇಲ್ಲ. ನನ್ನ ಅಣ್ಣ ಸಮೀರ್‌ನನ್ನು ಬಿಟ್ಟುಬಿಡಿ ಎಂದು ಸಮೀರ್ ಸಹೋದರಿ ಕಣ್ಣೀರುಹಾಕಿದ್ದಾರೆ. ನನ್ನ ಅಣ್ಣ ಕೊಲೆ ಮಾಡುವ ಉದ್ದೇಶದಿಂದ ಮಚ್ಚನ್ನು ಬೀಸಿಲ್ಲ. ಹೆದರಿಸುವ ಉದ್ದೇಶದಿಂದ ಮಚ್ಚನ್ನು ಬೀಸಿರಬಹುದು ಎಂದಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:27 pm, Tue, 10 January 23