ಭದ್ರಾವತಿಯಲ್ಲಿ ಅಪ್ರಾಪ್ತನ ಕಿಡ್ನಾಪ್, 10 ಲಕ್ಷಕ್ಕೆ ಬೇಡಿಕೆ; 24 ಘಂಟೆಗಳಲ್ಲಿ ಕಿಡ್ನಾಪ್ ಪ್ರಕರಣ ಭೇದಿಸಿದ ಪೊಲೀಸರು

ಉಕ್ಕಿನ ನಗರಿ ಭದ್ರಾವತಿಯಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡಿಕೊಂಡಿದ್ದ ಮಹ್ಮದ್ ಅಜರ್ ಎಂಬಾತನ ಮಗನನ್ನು ಒಂದು ಗ್ಯಾಂಗ್ ಅಪರಹಣ ಮಾಡಿದ್ದು. ಕೇವಲ 24 ಗಂಟೆಯೊಳಗೆ ಪ್ರಕರಣ ಭೇಧಿಸಿ ಸೈ ಎನಿಸಿಕೊಂಡ ಪೊಲೀಸರು.

ಭದ್ರಾವತಿಯಲ್ಲಿ ಅಪ್ರಾಪ್ತನ ಕಿಡ್ನಾಪ್, 10 ಲಕ್ಷಕ್ಕೆ ಬೇಡಿಕೆ; 24 ಘಂಟೆಗಳಲ್ಲಿ ಕಿಡ್ನಾಪ್ ಪ್ರಕರಣ ಭೇದಿಸಿದ ಪೊಲೀಸರು
ಪ್ರಕರಣ ಭೇಧಿಸಿದ ಭದ್ರಾವತಿ ಪೊಲೀಸರು
Follow us
TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on: Jan 09, 2023 | 8:59 PM

ಶಿವಮೊಗ್ಗ: ಭದ್ರಾವತಿ ತಾಲೂಕಿನ ಬೊಮ್ಮಕಟ್ಟೆಯಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡಿಕೊಂಡಿದ್ದ ಮಹ್ಮದ್ ಅಜರ್ ಎಂಬಾತನ 16 ವಯಸ್ಸಿನ ಮಗನನ್ನ ಐವರು ಸೇರಿ ಕಿಡ್ನಾಪ್ ಮಾಡಿ 10 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಕೂಡಲೇ ಅಜರ್​ ಪೊಲೀಸ್​ ಠಾಣೆಗೆ ದೂರು ನೀಡಿದ್ದು, ಕೇವಲ 24 ಗಂಟೆಯೊಳಗೆ ಪೊಲೀಸರು ಮಿಂಚಿನ ಕಾರ್ಯಾಚರಣೆ ಮಾಡಿ ಸಾಗರದ ಬಳಿ ಭದ್ರಾವತಿಯ ಮುಭಾರಕ್ ಅಲಿಯಾಸ್ ಡಿಚ್ಚಿ ಹಾಗೂ ಆತನ ಸಹಚರರಾದ ಸಾಗರದ ಜಾಬೀರ್ ಭಾಷಾ, ಅಬ್ದುಲ್ ಸಲಾಂ, ಇರ್ಫಾನ್ ಮತ್ತು ಶಿವಮೊಗ್ಗದ ಮಸ್ತಫಾನನ್ನು ಬಂಧಿಸಿ ಅಪಹರಣಕ್ಕೊಳಗಾದ ಬಾಲಕನನ್ನು ಸುರಕ್ಷಿತವಾಗಿ ಆತನ ಕುಟುಂಬಕ್ಕೆ ಒಪ್ಪಿಸಿದ್ದಾರೆ.

ಅಪಹರಣಕ್ಕೊಳಗಾದ ಬಾಲಕ ಶಾಲೆಯನ್ನ ಬಿಟ್ಟು ಎಳನೀರು ಮಾರಾಟದ ವ್ಯಾಪಾರ ಮಾಡಿಕೊಂಡಿದ್ದನು. ತಂದೆ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿರುವುದರಿಂದ ಹಣ ಇದೆ ಎನ್ನುವುದು ಬಹುತೇಕರಿಗೆ ಗೊತ್ತಿರುವ ಸಂಗತಿ ಆಗಿತ್ತು. ಈ ನಡುವೆ ಭದ್ರಾವತಿಯ ರೌಡಿ ಮುಬಾರಕ್ ಅಲಿಯಾಸ್ ಡಿಚ್ಚಿ ಮತ್ತು ಆತನ ನಾಲ್ವರು ಸಹಚರರು ಸೇರಿಕೊಂಡು ರಿಯಲ್ ಎಸ್ಟೇಟ್ ವ್ಯವಹಾರ ಮಾಡಿಕೊಂಡಿದ್ದ ಮಹ್ಮದ್ ಅಜರ್ ಮಗನನ್ನು ಎಳನೀರು ವ್ಯಾಪಾರ ಮಾಡುವ ಸಂದರ್ಭದಲ್ಲಿ ಕಿಡ್ನಾಪ್ ಮಾಡುತ್ತಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರಿಗೆ ಶಾಕ್ ಆಗಿತ್ತು. ಕಿಡ್ನಾಪ್ ಆದ ಸ್ವಲ್ಪ ಸಮಯದಲ್ಲಿ ರೌಡಿ ಮುಭಾರಕ್ ಅಲಿಯಾಸ್ ಡಿಚ್ಚಿ, ಮಹ್ಮದ್ ಅಜರ್​ಗೆ ಒಂದು ಸಂದೇಶ ರವಾನಿಸಿದರು. ನಿನ್ನ ಮಗನ ಕಿಡ್ನಾಪ್ ಆಗಿದೆ. ಮಗ ಜೀವಂತವಾಗಿ ವಾಪಾಸ್ ಬರಬೇಕೆಂದರೆ 10 ಲಕ್ಷ ಹಣ ಕೊಡಬೇಕೆಂದು ಬೇಡಿಕೆ ಇಟ್ಟಿದ್ದನು.

ಕಿಡ್ನಾಪ್ ಕೇಸ್ ಎನ್ನುತ್ತಲೇ ಹೈಅಲರ್ಟ್​ ಆದ ಪೊಲೀಸರು

ಕಿಡ್ನಾಪರ್ಸ್​ ಕರೆಬಂದ ಕೂಡಲೇ ಅಜರ್​ ಭದ್ರಾವತಿ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರು. ಕಿಡ್ನಾಪ್ ಕೇಸ್ ಎನ್ನುತ್ತಲೇ ಎಸ್ಪಿ ಮಿಥುನ್ ಕುಮಾರ್ ಹೈ ಅಲರ್ಟ್ ಆಗಿದ್ದರು. ಕೂಡಲೇ ಭದ್ರಾವತಿಯ ಎಎಸ್ಪಿ ಹಿತೇಂದ್ರ ನೇತೃತ್ವದಲ್ಲಿ ಒಂದು ವಿಶೇಷ ಪೊಲೀಸ್ ತಂಡ ರಚನೆ ಮಾಡಿದ್ದರು. ಇಡಿಯೋಸ್ ಕಾರ್​ನಲ್ಲಿ ಬಂದಿದ್ದ ಕಿಡ್ನಾಪರ್ಸ್ ಅಪ್ರಾಪ್ತನನ್ನು ಭದ್ರಾವತಿಯಿಂದ ಕಿಡ್ನಾಪ್ ಮಾಡಿಕೊಂಡು ಅಲ್ಲಿಂದ ಎಸ್ಕೇಪ್ ಆಗಿದ್ದರು. ಕಿಡ್ನಾಪ್ ಕೇಸ್ ದಾಖಲು ಆಗುತ್ತಿದ್ದಂತೆ ತನಿಖಾ ತಂಡವು ತನ್ನ ಆಪರೇಶನ್​ ಆರಂಭಿಸಿತು. ಆತ ಕಿಡ್ನಾಪ್ ಆದ ಸ್ಥಳ ಮತ್ತು ಬಂದಿರುವ ಕಾಲ್ ಟವರ್ ಲೋಕೇಶನ್ ಹಾಗೂ ಸಿಸಿ ಕ್ಯಾಮರಾ ಪರಿಶೀಲನೆ ಮಾಡಿದರು.

ಹೀಗೆ ಕಿಡ್ನಾಪ್ ಮಾಡಿದ ಕಾರ್ ಭದ್ರಾವತಿಯಿಂದ ಶಿವಮೊಗ್ಗ ಮೂಲಕ ಸಾಗರದತ್ತ ಹೋಗುತ್ತಿರುವುದು ಪೊಲೀಸರಿಗೆ ಗೊತ್ತಾಗಿದೆ. ಈ ನಡುವೆ ಕಿಡ್ನಾಪ್​ರ್ಸ್​ಗೆ ಹಣ ಕೊಡುವುದಾಗಿ ತಂದೆಯು ಭರವಸೆ ಕೊಡುತ್ತಿದ್ದನು. ಇದೇ ಸಮಯದಲ್ಲಿ ಪೊಲೀಸರು ಮಿಂಚಿನ ಕಾರ್ಯಾಚರಣೆ ಮಾಡಿ ಸಾಗರದ ಬಳಿ ಭದ್ರಾವತಿಯ ಮುಭಾರಕ್ ಅಲಿಯಾಸ್ ಡಿಚ್ಚಿ ಆತನ ಸಹಚರರಾದ ಸಾಗರದ ಜಾಬೀರ್ ಭಾಷಾ, ಅಬ್ದುಲ್ ಸಲಾಂ, ಇರ್ಫಾನ್ ಮತ್ತು ಶಿವಮೊಗ್ಗದ ಮಸ್ತಫಾನನ್ನು ಬಂಧಿಸುತ್ತಾರೆ. ಇವರ ಜೊತೆಗಿದ್ದ ಕಿಡ್ನಾಪ್ ಆದ ಅಪ್ರಾಪ್ತನನ್ನು ಅಪಹರಣಕಾರರಿಂದ ಬಚಾವ್ ಮಾಡಲು ಯಶಸ್ವಿಯಾಗುತ್ತಾರೆ. ಅಪಹರಣ ಆದ ಅಪ್ರಾಪ್ತನನ್ನು ಸುರಕ್ಷಿತವಾಗಿ ಭದ್ರಾವತಿಗೆ ಪೊಲೀಸರು ಕರೆದುಕೊಂಡು ಬರುತ್ತಾರೆ. ಮಗನ ಕಿಡ್ನಾಪ್​ನಿಂದ ಆತಂಕದಲ್ಲಿದ್ದ ಕುಟುಂಬಸ್ಥರು ಮತ್ತು ಸಂಬಂಧಿಕರಿಗೆ ದೊಡ್ಡ ಆತಂಕ ದೂರಾಗುತ್ತದೆ. ಭದ್ರಾವತಿಯ ಪೊಲೀಸರ ಈ ಮಿಂಚಿನ ಕಾರ್ಯಾಚರಣೆಗೆ ಎಸ್ಪಿ ಮಿಥುನ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:Nigeria: ಬಂಧೂಕುಧಾರಿಗಳಿಂದ ರೈಲ್ವೆ ನಿಲ್ದಾಣದ ಮೇಲೆ ದಾಳಿ, 30ಕ್ಕೂ ಹೆಚ್ಚು ಮಂದಿಯ ಅಪಹರಣ

ಅಪ್ರಾಪ್ತನ ಕಿಡ್ನಾಪ್ ಮಾಡಿ ಸುಲಭವಾಗಿ 10 ಲಕ್ಷ ಗಳಿಸಲು ಹೋಗಿದ್ದ ಐವರು ಈಗ ಜೈಲು ಸೇರುವಂತಾಗಿದೆ. ಭದ್ರಾವತಿ ಪೊಲೀಸರ ಸಮಯ ಪ್ರಜ್ಚೆ ಮತ್ತು ಎಚ್ಚರಿಕೆಯಿಂದ ಕೇವಲ 24 ಘಂಟೆಯಲ್ಲಿ ಕಿಡ್ನಾಪರ್ಸ್ ರನ್ನು ಪತ್ತೆ ಹಚ್ಚಲು ಯಶಸ್ವಿಯಾಗಿದ್ದಾರೆ. ಈ ಮೂಲಕ ಕಿಡ್ನಾಪ್ ಪ್ರಕರಣವು ಸುಖಾಂತ್ಯ ಕಂಡಿದೆ..

ವರದಿ: ಬಸವರಾಜ್ ಯರಗಣವಿ ಟವಿ9 ಶಿವಮೊಗ್ಗ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ