ದಾವಣಗೆರೆ: ರಸ್ತೆ ದುರಂತದಲ್ಲಿ ಮೃತಪಟ್ಟಿದ್ದ ಮೂರು ಜನ ಯುವಕರ ಪ್ರಕರಣಕ್ಕೆ ಹೊಸತಿರುವು; ಉದ್ದೇಶಪೂರ್ವಕವಾಗಿ ಯುವಕರ ಮೇಲೆ ಲಾರಿ ಹತ್ತಿಸಿದ ಶಂಕೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 12, 2023 | 9:05 AM

ದಾವಣಗೆರೆ ತಾಲೂಕಿನ ಕಾಟಿಹಳ್ಳಿ ಗ್ರಾಮದಲ್ಲಿನ ದೇವಿ ಕಾರ್ಯದಲ್ಲಿ ಭರ್ಜರಿ ಮಟನ್ ಊಟ ಮುಗಿಸಿ ಮನೆಗೆ ವಾಪಸ್ಸಾಗುವಾಗ 3 ಜನ ಸ್ನೇಹಿತರಿದ್ದ ಬೈಕ್​ಗೆ ಅಪರಿಚಿತ ಲಾರಿಯೊಂದು ಡಿಕ್ಕಿ ಹೊಡೆದಿತ್ತು, ಆದರೀಗ ಈ ಕೇಸ್​ಗೆ ಟ್ವಿಸ್ಟ್​ ಸಿಕ್ಕಿದ್ದು, ಉದ್ದೇಶಪೂರ್ವಕವಾಗಿಯೇ ಡಿಕ್ಕಿ ಹೊಡೆಯಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.

ದಾವಣಗೆರೆ: ರಸ್ತೆ ದುರಂತದಲ್ಲಿ ಮೃತಪಟ್ಟಿದ್ದ ಮೂರು ಜನ ಯುವಕರ ಪ್ರಕರಣಕ್ಕೆ ಹೊಸತಿರುವು; ಉದ್ದೇಶಪೂರ್ವಕವಾಗಿ ಯುವಕರ ಮೇಲೆ ಲಾರಿ ಹತ್ತಿಸಿದ ಶಂಕೆ
ದಾವಣಗೆರೆ ಬೈಕ್ ದುರಂತಕ್ಕೆ ಹೊಸ ಟ್ವಿಸ್ಟ್​
Follow us on

ದಾವಣಗೆರೆ: ನಿನ್ನೆ(ಫೆ.11)ಎರಡು ಬೈಕ್​ಗಳಲ್ಲಿ ಆರು ಜನ ಯುವಕರು ಕಾಟೀಹಳ್ಳಿ ಮಟನ್ ಊಟಕ್ಕೆ ಹೋಗಿದ್ದು, ವಾಪಾಸ್​ ಮನೆಗೆ ಬರುವಾಗ ಲಾರಿ ಹರಿದು 3 ಜನ ಯುವಕರಾದ ರಾಮನಗರದ ಪರಶುರಾಮ್ (24) ಸಂದೇಶ (23 ಹಾಗೂ ಶಿವಕುಮಾರ(26) ಸಾವನ್ನಪ್ಪಿರುವ ಘಟನೆ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಉದ್ದೇಶಪೂರ್ವಕವಾಗಿ ಲಾರಿ ಚಾಲಕನು ಯುವಕರ ಮೇಲೆ ಲಾರಿ ಹತ್ತಿಸಿದ ಶಂಕೆ ಇದೀಗ ವ್ಯಕ್ತವಾಗಿದ್ದು, ಸಿಸಿ ಕ್ಯಾಮರಾದಲ್ಲಿ ಲಾರಿ ನಿಂತಿರುವ ದೃಶ್ಯ ಮಾತ್ರ ದಾಖಲಾಗಿದೆ. ಜೊತೆಗೆ ಘಟನಾ ಸ್ಥಳದಲ್ಲಿ ಕಬ್ಬಿಣದ ರಾಡ್ ಪತ್ತೆಯಾಗಿದ್ದು, ಸ್ಥಳೀಯರ ಹಾಗೂ ಸಂಬಂಧಿಕರ ಶಂಕೆ ಹಿನ್ನೆಲೆ ತನಿಖೆ ಆರಂಭಿಸಿದ ದಾವಣಗೆರೆ ಗ್ರಾಮಾಂತರ ಠಾಣೆ ಪೊಲೀಸರು. ದುರ್ಘಟನೆಗೂ ಮುನ್ನ ಹೊಡೆದಾಟವಾಗಿದೆ ಎನ್ನಲಾಗುತ್ತಿದೆ. ಆರು ಜನರಲ್ಲಿ ಮೂರು ಯುವಕರ ಸಾವನ್ನಪ್ಪಿದ್ದಾರೆ. ಇಬ್ಬರು ನಾಪತ್ತೆಯಾಗಿದ್ದು, ಓರ್ವನನ್ನ ಪೊಲೀಸರು ವಿಚಾರಣೆಗೆ ಒಳಪಡಿಸಲಾಗಿದೆ. ಆತನಿಂದ ಹೆಚ್ಚಿನ ಮಾಹಿತಿ ಸಿಗುವ ಸಾಧ್ಯತೆಯಿದೆ.

ಇನ್ನು ಮೂರು ಜನ ಯುವಕರ ಸಾವಿಗೆ ದಾವಣಗೆರೆ ತಾಲೂಕಿನ ಅನಗೋಡ ಬಳಿಯ ರಾಷ್ಟ್ರೀಯ ಹೆದ್ದಾರಿ 48 ಸಾಕ್ಷಿ ಆಗಿದೆ. ಇನ್ನು ಎದೆಎತ್ತರಕ್ಕೆ ಬೆಳೆದು ನಿಂತಿದ್ದ ಮಕ್ಕಳನ್ನು ಕಳೆದುಕೊಂಡ ಹೆತ್ತವರ ಆಕ್ರಂಧನ ಮುಗಿಲು ಮುಟ್ಟಿದೆ. ಅಪರಿಚಿತ ವಾಹನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿದ್ದ ಯುವಕರು ಮನೆಗೆ ಸೇರುವ ಮುನ್ನ ಮಸಣ ಸೇರಿದ್ದಾರೆ. ಅದರೆ ಮಕ್ಕಳು ಮನೆಗೆ ವಾಪಾಸ್ಸಾಗಲಿದ್ದಾರೆಂದು ಕಾದು ಕೂತಿದ್ದ ಹೆತ್ತವರಿಗೆ ಮಕ್ಕಳ ಸಾವಿನ ಸುದ್ದಿ ಸಿಡಿಲು ಬಡಿದಂತೆ ಆಗಿದೆ.‌ ದಾವಣಗೆರೆಯ ರಾಮನಗರದ ನಿವಾಸಿಗಳಾದ ಮೂರು ಜನ ಮೃತ ಯುವಕರು ದಾವಣಗೆರೆ ತಾಲೂಕಿನ ಕಾಟಿಹಳ್ಳಿ ಗ್ರಾಮದಲ್ಲಿ ದೇವಿ ಕಾರ್ಯದಲ್ಲಿ ಭರ್ಜರಿ ಮಟನ್ ಊಟ ಮುಗಿಸಿ ಮನೆಗೆ ವಾಪಸ್ಸಾಗುವಾಗ ಅಪಘಾತದಲ್ಲಿ ದುರಂತ ಅಂತ್ಯ ಕಂಡಿದ್ದಾರೆ.

ಇದನ್ನೂ ಓದಿ:ಉತ್ತರ ಕನ್ನಡ: ಅಪರೂಪದ ಪಕ್ಷಿ ಪ್ರಭೇದ ಹಾರ್ನಬಿಲ್ ಹಕ್ಕಿಹಬ್ಬವನ್ನ ಜಿಲ್ಲೆಯ ದಾಂಡೇಲಿಯಲ್ಲಿ ಆಯೋಜಿಸಲಾಗಿದ್ದು, ಅದರ ಝಲಕ್​ ಇಲ್ಲಿದೆ ನೋಡಿ

ಮೃತ ಮಗನಾದ ಸಂದೇಶ್​ನನ್ನು ನೋಡಲು ಶವಗಾರಕ್ಕೆ ಆಗಮಿಸಿದ್ದ ತಾಯಿಯ ಆಕ್ರಂಧನ ಮುಗಿಲು ಮುಟ್ಟಿತ್ತು. ಮೃತ ಸಂದೇಶನನ್ನು ನೋಡಲು ಪಟ್ಟು ಹಿಡಿದಿದ್ದ ತಾಯಿ ಮಗನ ಹಣೆಗೆ ಮುತ್ತಿಟ್ಟು ತಾಯಿ ಮಮತೆ ತೋರಿದ್ದು, ಅಲ್ಲಿ ನೆರೆದವರ ಕಣ್ಣೀರು ತರಿಸುವಂತ್ತಿತ್ತು.‌ ಮೃತ ಮೂರು ಜನ ಯುವಕರು ತಮ್ಮ ಹೆತ್ತವರಿಗೆ ಒಬ್ಬೊಬ್ಬರೆ ಮಕ್ಕಳಾಗಿದ್ದರಿಂದ ಅಯ್ಯೋ ಮಗನೇ ನನಗೆ ಬಿಟ್ಟು ಹೊರಟು ಹೋದ ಎಂಬ ತಾಯಿಯ ಗೋಳು ಕೇಳುವರ್ಯಾರು ಎಂಬತಾಗಿದೆ.‌ ಇದೇ ವೇಳೆ ಪ್ರತಿಕ್ರಿಯಿಸಿದ ಮೃತ ಶಿವು ಸಹೋದರಿ ರಾತ್ರಿ ಎರಡು ಗಂಟೆಗೆ ದೂರವಾಣಿ ಕರೆ ಬಂದಿತ್ತು, ನನ್ನ ತಮ್ಮ ಅಪಘಾತದಲ್ಲಿ ಸಾವನಪ್ಪಿದ್ದಾನೆ ಅಂದ್ರು, ನಮ್ಮ ತಂದೆ ಕೂಲಿ ಕೆಲಸ ಮಾಡ್ತಿದ್ದರು. ಮೃತರಾದ ಪರಶುರಾಮ್, ಶಿವು, ಸಂದೇಶ್ ಮೂರು ಜನ ಹುಟ್ಟಿನಿಂದಲೂ ಚಡ್ಡಿ ದೋಸ್ತ್​ಗಳಂತೆ. ಇಲ್ಲೆ ಹೋಗಿ ಬರ್ತಿನಿ ಅಂದವರು ಶವವಾಗಿ ಮನೆ ಸೇರಿರುವುದು ಇಡೀ ಕುಟುಂಬಗಳಲ್ಲಿ ದುಃಖ ಮಡುಗಟ್ಟಿದೆ. ಮೂರು ಜನ ಕೂಲಿ ಕೆಲಸ ಮಾಡಿ ಮನೆಗೆ ಆಧಾರವಾಗಿದ್ದವರಿಲ್ಲದೆ ಇಡೀ ಕುಟುಂಬಗಳು ಹೈರಾಣಾಗಿವೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ