ದಾವಣಗೆರೆಯ ಈ ಗ್ರಾಮದಲ್ಲಿ ದೀಪಾವಳಿ ಹಬ್ಬ ಆಚರಿಸೋಲ್ಲ, ಕಾರಣವೇನು?

| Updated By: ಆಯೇಷಾ ಬಾನು

Updated on: Nov 12, 2023 | 9:06 AM

ಈ ಊರಲ್ಲಿ ಯಾಕೇ ಬೆಳಕಿನ ಹಬ್ಬ ಆಚರಿಸಲ್ಲ ಎಂಬ ಅಚ್ಚರಿ ನಿಮ್ಮನ್ನು ಕಾಡಬಹುದು. ಏಕೆಂದರೆ ಇಲ್ಲಿ ಕೆಲ ಬೆಡಗು ಸಮುದಾಯದ ಜನ ಮಾತ್ರ ಈ ದೀಪಾವಳಿ ಮಾಡೋಲ್ಲ. ಉಳಿದ ಶೇ.30ರಷ್ಟು ಜನ ಈ ಹಬ್ಬ ಆಚರಿಸುತ್ತಾರೆ. ಯಾಕೆ ಈ ಬೆಡಗು ಸಮುದಾಯ ದೀಪಾವಳಿ ಆಚರಿಸಲ್ಲ ಎಂಬ ಪ್ರಶ್ನೆಗೆ ಕಾರಣ ಇಲ್ಲಿದೆ.

ದಾವಣಗೆರೆಯ ಈ ಗ್ರಾಮದಲ್ಲಿ ದೀಪಾವಳಿ ಹಬ್ಬ ಆಚರಿಸೋಲ್ಲ, ಕಾರಣವೇನು?
ದೀಪಾವಳಿ ಆಚರಿಸದ ಗ್ರಾಮ
Follow us on

ದಾವಣಗೆರೆ, ನ.12: ದೀಪಾವಳಿ ಹಬ್ಬ ಬಂತೆಂದರೆ ಸಾಕು ಮನೆಗಳೆಲ್ಲ ದೀಪದ ಬೆಳಕಿನಲ್ಲಿ (Deepavali) ಕಂಗೊಳಿಸುತ್ತಿರುತ್ತೆ. ಧರ್ಮದ ಭೇದ-ಭಾವ ಮರೆತು ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ. ದೀಪಾವಳಿ ಇರೋದೆ ಪಟಾಕಿ ಹೊಡೆಯೋಕೆ ಎಂದು ಸರ್ಕಾರದ ಆದೇಶವನ್ನೂ ಪಕ್ಕಕ್ಕೆ ಇಡುವವರನ್ನು ನಾವು ನೋಡಿದ್ದೇವೆ. ಇಡೀ ಈ ದೇಶದ ನೆಲದಲ್ಲಿ ಒಂದಲ್ಲ ಒಂದು ಕಡೆ ಈ ಬೆಳಕಿನ ಹಬ್ಬ ದೀಪಾವಳಿಯನ್ನು ಉತ್ಸಾಹ, ಹುಮ್ಮಸ್ಸು, ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಆದರೆ ದಾವಣಗೆರೆ (Davanagere) ತಾಲೂಕಿನ ಲೋಕಿಕೆರೆ ಗ್ರಾಮದಲ್ಲಿ ಮಾತ್ರ ದೀಪಾವಳಿ ಹಬ್ಬನ್ನೆ ಆಚರಿಸಲ್ಲ. ಗ್ರಾಮದ ಶೇಖಡಾ 70 ರಷ್ಟು ಜನ ದೀಪಾವಳಿ ಆಚರಿಸಲ್ಲ, ಉಳಿದ 30ರಷ್ಟು ಜನ ಮಾತ್ರ ದೀಪಾವಳಿ ಆಚರಿಸುತ್ತಾರೆ.

ದೀಪಾವಳಿ ಆಚರಿಸದಿರಲು ಕಾರಣವೇನು?

ಈ ಊರಲ್ಲಿ ಯಾಕೇ ಬೆಳಕಿನ ಹಬ್ಬ ಆಚರಿಸಲ್ಲ ಎಂಬ ಅಚ್ಚರಿ ನಿಮ್ಮನ್ನು ಕಾಡಬಹುದು. ಏಕೆಂದರೆ ಇಲ್ಲಿ ಕೆಲ ಬೆಡಗು ಸಮುದಾಯದ ಜನ ಮಾತ್ರ ಈ ದೀಪಾವಳಿ ಮಾಡೋಲ್ಲ. ಉಳಿದ ಶೇ.30ರಷ್ಟು ಜನ ಈ ಹಬ್ಬ ಆಚರಿಸುತ್ತಾರೆ. ಯಾಕೆ ಈ ಬೆಡಗು ಸಮುದಾಯ ದೀಪಾವಳಿ ಆಚರಿಸಲ್ಲ ಎಂದರೆ ದೀಪಾವಳಿ ಹಬ್ಬಕ್ಕೆ ಬೇಕಾಗುವ ಕಾಶಿ ಹುಲ್ಲು, ಬ್ರಹ್ಮ ದಂಡೆ, ಹಟ್ಟಿ ತರಲು ಹೋದ ಊರಿನ ಕೆಲವರು ಮನೆಗೆ ಬರಲೇ ಇಲ್ಲ. ಎಷ್ಟೇ ಕಾದರೂ ಹೋದವರು ವಾಪಸ್ ಬರಲಿಲ್ಲ. ಆಗ ಬೆಡಗು ಸಮುದಾಯದ ಜನ ಅವರಿಲ್ಲದೇ ಹಬ್ಬ ಮಾಡುವುದು ಹೇಗೆ ಎಂಬ ಆತಂಕ ಎದುರಾಯಿತು. ಹಬ್ಬ ಆಚರಿಸದೇ ಆ ಹಿರಿಯರ ಪೂಜೆಯನ್ನು ಹಾಲುಮತದ ಕುರುಬ ಸಮುದಾಯದ ಸಾವಂತ್ಲಾರು, ಬೆಡಗಿನ ಕುಟುಂಬಗಳು ದಸರಾ ಮುನ್ನ ಮಹಾಲಯ ಅಮಾವಾಸ್ಯೆ ದಿನ ಮಾಡುತ್ತಾ ಬಂದರು.

ಇದನ್ನೂ ಓದಿ: ದೀಪಾವಳಿ ಹಬ್ಬ: ಕೆಆರ್​ ಮಾರ್ಕೆಟ್​ನಲ್ಲಿ ಖರೀದಿ ಜೋರು, ಹೂವು, ಹಣ್ಣುಗಳ ದರ ಏರಿಕೆ

ಕೆಲ ನಾಯಕ ಸಮಾಜದ ಮಳೇಲರು ಬೆಡಗಿನ ಕುಟುಂಬ ಊರು ಆಂಜನೇಯ ತೇರಿನ ದಿನ ಹಿರಿಯರ ಪೂಜೆ ಸಲ್ಲಿಸಿ ಗೌರವಿಸುವ ಪದ್ದತಿ ಇದೆ. ಪರಿಶಿಷ್ಟ ಮಾದಿಗ ಸಮುದಾಯ ಸಾವಂತ್ಲಾರು ಬೆಡಗಿನ ಕುಟುಂಬಗಳು ಸಹ ಪಿತೃ ಪಕ್ಷ ಮಹಾಲಯ ಅಮಾವಾಸ್ಯೆ ದಿನದಂದು ಹಿರಿಯರ ಹಬ್ಬವನ್ನು ಆಚರಿಸುತ್ತಾರೆ. ಈಗಲಾದರೂ ನೀವು ನಿಮ್ಮ ಅಕ್ಕ ಪಕ್ಕದ ನಿಮ್ಮೂರ ಜನರನ್ನು ನೋಡಿ ಆದರೂ ಹಬ್ಬ ಮಾಡಬಹುದಲ್ಲವೇ ಎಂದರೇ ನಮ್ ಅಜ್ಜರು ,ಅಪ್ಪರು ಹಬ್ಬ ಮಾಡಿಲ್ಲ ಅಂದ್ರೇ, ನಾವು ಮಾಡಲ್ಲ. ನಮ್ ಮಕ್ಕಳ ಮರಿಗೆ ಏನಾರ ಅನಾಹುತ ಆದರೆ ಹೇಂಗ್ರಿ. ಅವರು ಬಿಟ್ಟೂಕೋತ ಬಂದ್ರು ನಾವು ಹಾಂಗೇ ಬಂದಿವಿ ನೋಡ್ರೀ ಎಂದು ಈ ಊರಿನ ಜನ ಉತ್ತರಿಸುತ್ತಾರೆ.

ದಾವಣಗೆರೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ