ಐಟಿ ಅಧಿಕಾರಿಗಳ ಒತ್ತಡಕ್ಕೆ ಮಣಿದು ಡಿಕೆ ಶಿವಕುಮಾರ್ ನನಗೆ ಟಿಕೆಟ್ ತಪ್ಪಿಸಿದ್ದಾರೆ: ಟಿಕೆಟ್​ ಆಕಾಂಕ್ಷಿ ಗಂಭೀರ ಆರೋಪ

ದಾವಣಗೆರೆ ಜಿಲ್ಲೆಯ ಜಗಳೂರು ಎಸ್ಟಿ ಮೀಸಲು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಆಗಿದ್ದ ಮಾಜಿ ಶಾಸಕ ರಾಜೇಶ್ ಅವರು ಡಿಕೆ ಶಿವಕುಮಾರ್​ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಐಟಿ ಅಧಿಕಾರಿಗಳ ಒತ್ತಡಕ್ಕೆ ಮಣಿದು ಡಿಕೆ ಶಿವಕುಮಾರ್ ನನಗೆ ಟಿಕೆಟ್ ತಪ್ಪಿಸಿದ್ದಾರೆ: ಟಿಕೆಟ್​ ಆಕಾಂಕ್ಷಿ ಗಂಭೀರ ಆರೋಪ
ಮಾಜಿ ಶಾಸಕ ರಾಜೇಶ್
Follow us
ಆಯೇಷಾ ಬಾನು
|

Updated on: Apr 18, 2023 | 1:58 PM

ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್(DK Shivakumar) ಅವರು ಐಟಿ ಅಧಿಕಾರಿಗಳ ಒತ್ತಡಕ್ಕೆ ಮಣಿದು ನನಗೆ ಟಿಕೆಟ್ ತಪ್ಪಿಸಿದ್ದಾರೆ. ಎಲ್ಲಾ ಸರ್ವೇಗಳಲ್ಲಿ ನನ್ನ ಹೆಸರೇ ಮುಂದೆ ಇತ್ತು ಕೊನೆಗೆ ಟಿಕೆಟ್ ಕೈ ತಪ್ಪಿದ್ದು ಐಟಿ ‌ಮಹಿಮೆ ಎಂದು ಮಾಜಿ ಶಾಸಕ ಹೆಚ್ ಪಿ. ರಾಜೇಶ್(HP Rajesh) ವಾಗ್ದಾಳಿ ನಡೆಸಿದ್ದಾರೆ. ದಾವಣಗೆರೆ ಜಿಲ್ಲೆಯ ಜಗಳೂರು ಎಸ್ಟಿ ಮೀಸಲು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಆಗಿದ್ದ ಮಾಜಿ ಶಾಸಕ ರಾಜೇಶ್ ಅವರು ಡಿಕೆ ಶಿವಕುಮಾರ್​ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ದಾವಣಗೆರೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮಾಜಿ ಶಾಸಕ ರಾಜೇಶ್ ಅವರು ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ. ನಾನು ನಾಲ್ಕು ಸಲ ಚುನಾವಣೆಯಲ್ಲಿ ಸ್ಪರ್ಧಿಸಿರುವೆ. ಒಮ್ಮೆ ಶಾಸಕನಾಗಿ ಸೇವೆ ಮಾಡಿರುವೆ. ಇಂತಹ ಪರಿಸ್ಥಿತಿಯಲ್ಲಿ ಟಿಕೆಟ್ ತಪ್ಪಿದ್ದು ವಿಚಿತ್ರ. ನಂತರ ಗೊತ್ತಾಯಿತು. ಈಗ ಜಗಳೂರು ಕಾಂಗ್ರೆಸ್ ಟಿಕೆಟ್ ದೇವೇಂದ್ರಪ್ಪ ಅವರಿಗೆ ನೀಡಿದ್ದಾರೆ. ದೇವೇಂದ್ರಪ್ಪ ಅವರ ಪುತ್ರ ಡಾ. ವಿಜಯಕುಮಾರ್ ಐಆರ್​ಎಸ್ ಅಧಿಕಾರಿ. ಐಟಿ ಇಲಾಖೆಯಲ್ಲಿ ಇದ್ದಾರೆ. ಇವರು ಹಾಗೂ ಇವರ ಹಿರಿಯ ಅಧಿಕಾರಿಗಳು ಡಿಕೆಶಿ ಮೇಲೆ ಒತ್ತಡ ಹಾಕಿದ್ದಾರೆ. ಈ ಒತ್ತಡಕ್ಕೆ ನನಗೆ ಟಿಕೆಟ್ ತಪ್ಪಿದೆ‌. ನನಗೆ ಕ್ಷೇತ್ರದಲ್ಲಿ ನನ್ನದೇ ಆದ ಬೆಂಬಲಿಗರು ಇದ್ದಾರೆ. ಕಾಂಗ್ರೆಸ್ ಟಿಕೆಟ್ ತಪ್ಪಿದ್ರು ಸಹ ನಾನು ಪಕ್ಷೇತರ ಅಭ್ಯರ್ಥಿಯಾಗಿ‌ ಸ್ಪರ್ಧಿಸುವೆ ಎಂದು ರಾಜೇಶ್ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: Karnataka Assembly Polls: ನನಗೆ ಟಿಕೆಟ್ ಸಿಗದಿರಲು ಕೇವಲ ಬಿಎಲ್ ಸಂತೋಷ್ ಕಾರಣ: ಜಗದೀಶ್ ಶೆಟ್ಟರ್

ಹೆಚ್.ಪಿ. ರಾಜೇಶ್ ಮೂಲತ ರೇಷ್ಮೆ ಇಲಾಖೆಯ ಸಹಾಯ‌ ನಿರ್ದೇಶಕ. ಎಂಎಸ್ಸಿ ಓದಿದ್ದಾರೆ. ದಾವಣಗೆರೆ ಜಿಲ್ಲೆಯ ಜಗಳೂರು ಎಸ್ಟಿ‌ ಮೀಸಲು ಕ್ಷೇತ್ರ. ಇದೇ ಕಾರಣಕ್ಕೆ 2008 ರಲ್ಲಿ ಸರ್ಕಾರಿ ಉದ್ಯೋಗಕ್ಕೆ ರಾಜೀನಾಮೆ ನೀಡಿ ರಾಜಕೀಯಕ್ಕೆ ಬಂದರು. ಮೊದಲು ಬಿಜೆಪಿಯಿಂದ ಸ್ಪರ್ಧಿಸಿ ಅಲ್ಪ ಮತಗಳಲ್ಲಿ‌ ಸೋಲು ಕಂಡರು. ಇಲ್ಲಿ ಗೆದ್ದ ಕಾಂಗ್ರೆಸ್ ಶಾಸಕ ಎಸ್ ವಿ ರಾಮಚಂದ್ರ ಆಪರೇಷನ್ ಕಮಲದ ಹಿನ್ನೆಲೆ 2009ರಲ್ಲಿ ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆ ಆದ್ರು. ಈಗ ರಾಜೇಶ್ ಮತ್ತೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲಿದ್ದಾರೆ. ಇನ್ನು ಮುಂದೆ ‌2013 ರಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿ ರಾಜೇಶ್ ಗೆದ್ದು ಶಾಸಕರಾದ್ರು.‌ ಮತ್ತು 2018 ಸೋಲು ಕಂಡರು. ಹೀಗೆ ನಾಲ್ಕು ಚುನಾವಣೆ ಸ್ಪರ್ಧೆಸಿ ಒಂದರಲ್ಲಿ ಮಾತ್ರ ಗೆದ್ದ ರಾಜೇಶ್ ಈಗ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಆಗಿದ್ದರು.

ಜೆಡಿಎಸ್ ನಿಂದ ಬಂದ ದೇವೇಂದ್ರಪ್ಪ ಎಂಬುವರಿಗೆ ಟಿಕೆಟ್ ಸಿಕ್ಕಿದೆ‌. ಈ ದೇವೇಂದ್ರಪ್ಪ ಅವರು ಅನುದಾನಿತ ಶಾಲೆಯಲ್ಲಿ ಡಿ ದರ್ಜೆಯ ನೌಕರ. ಆದ್ರೆ ಮಕ್ಕಳನ್ನ ಕಷ್ಟ ಪಟ್ಟು ಓದಿಸಿದ್ದಾರೆ.‌ ಪುತ್ರ ಡಾ‌ ವಿಜಯಕುಮಾರ ಅಂತಾ ಐ ಆರ್ ಎಸ್ ಮಾಡಿಕೊಂಡು ಕರ್ನಾಟಕ ಗೋವಾ ಸರ್ಕಲ್ ನ ಐಟಿ ಅಧಿಕಾರಿ ಆಗಿದ್ದಾರೆ. ಇದೇ‌ ಪುತ್ರನ ಸಂಪರ್ಕ‌ ಡಿಕೆ ಶಿವಕುಮಾರ ಜೊತೆ ಬಳಸಿ ತಂದೆಗೆ ಟಿಕೆಟ್ ತಂದಿದ್ದಾನೆ ಎಂಬುದು ರಾಜೇಶ್ ಅವರ ಆರೋಪವಾಗಿದೆ. ಕೆಪಿಸಿಸಿ ಅಧ್ಯಕ್ಷರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದರು. ಈ ವೇಳೆ ದೇವೇಂದ್ರಪ್ಪ ಪುತ್ರ ಡಿಕೆಶಿಗೆ ಪರಿಚಯವಾದ. ನಾಲ್ವರು ಹಿರಿಯ ಅಧಿಕಾರಿಗಳಿಂದ ಡಿಕೆಶಿ ಮೇಲೆ ಪ್ರಭಾವ ಬಳಸಿ ನನಗೆ ಟಿಕೆಟ್ ತಪ್ಪಿಸಿದ್ದಾರೆ. ಸರ್ವೇಗಳಲ್ಲಿ ನನ್ನ ಹೆಸರೇ ಮುಂದಿದೆ. ಹೀಗಾಗಿ ನಾನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ ಎಂದು ರಾಜೇಶ್ ಸ್ಪಷ್ಟಪಡಿಸಿದ್ದಾರೆ.

ದಾವಣಗೆರೆಗೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ