Duplicate gold: ನಕಲಿ ಚಿನ್ನದ ದೋಖಾ -ಬೆಣ್ಣೆ ನಗರಿ ದಾವಣಗೆರೆಯಲ್ಲಿ ಬೆಣ್ಣೆ ಮಾತುಗಳಿಗೆ ಕರಗಿ ಲಕ್ಷ ಲಕ್ಷ ರೂ ಕಳೆದುಕೊಂಡ ರೈತ!
Davanagere: ರೈತನ ಕೈಗೆ 250 ಗ್ರಾಂ ನಕಲಿ ಚಿನ್ನದ ತುಣುಕುಗಳನ್ನ ಕೊಟ್ಟು 7.5 ಲಕ್ಷ ಹಣ ಪಡೆದು ಪರಾರಿಯಾಗಿದ್ದಾನೆ. ರೈತ ಕಲ್ಲಪ್ಪನಿಗೆ ಆರೋಪಿಗಳು15 ಲಕ್ಷ ರೂಪಾಯಿ ತರುವಂತೆ ಹೇಳಿದ್ದರು. ಅದ್ರೇ ರೈತ 7.5 ಲಕ್ಷ ತಂದಿದ್ದು, ಅದನ್ನು ಕಳೆದುಕೊಂಡಿದ್ದಾನೆ.
ನಿಧಿ ಸಿಕ್ಕಿದೆ ಎಂದು ನಂಬಿಸಿ ರೈತನಿಗೆ ಪುಸಲಾಯಿಸಿದ್ರು. ಇನ್ನೇನು ತನ್ನೂರಿನಲ್ಲಿ ಇನ್ನಷ್ಟು ಜಮೀನು ಖರೀದಿ ಮಾಡಿ ಕಬ್ಬು ಬೆಳೆದು ನೋಟಿನ ಕಂತೆಗಳನ್ನ ಲೆಕ್ಕಾ ಹಾಕಬಹುದು ಎಂದು 400 ಕಿಲೋ ಮೀಟರ್ ಪ್ರಯಾಣ ಮಾಡಿ ಬಂದಿದ್ದ. ಜೊತೆಗೆ ಲಕ್ಷ ಲಕ್ಷ ರೂಪಾಯಿ ನೋಟಿನ ಕಂತೆಗಳನ್ನು ಹೊತ್ತು ತಂದಿದ್ದ. ಕೈಗೆ ಕುಂಕುಮದಲ್ಲಿ ಮಿಕ್ಸ್ ಮಾಡಿದ ಲೋಹ ಸಿಕ್ಕ ಬಳಿಕ ಆತನ ಹರ್ಷಕ್ಕೆ ಪಾರವೇ ಇರಲಿಲ್ಲ. ನಂತರ ಗೊತ್ತಾಯಿತು ಅದು ನಕಲಿ ಚಿನ್ನ ಅಂತಾ. ಹೀಗೆ ಬೆಣ್ಣೆ ನಗರಿ ದಾವಣಗೆರೆಯಲ್ಲಿ ವಾರಕ್ಕೊಂದಾದ್ರು ನಕಲಿ ಚಿನ್ನದ ದೋಖಾ (dhoka) ಇದ್ದೇ ಇರುತ್ತದೆ. ಈಗ ಈ ಪಟ್ಟಿಗೆ ಮತ್ತೊಂದು ಪ್ರಕರಣ ಇಲ್ಲಿದೆ ನೋಡಿ. ದಾವಣಗೆರೆ ಜಿಲ್ಲೆಯಲ್ಲಿ (davanagere) ನಕಲಿ ಚಿನ್ನ (Duplicate gold) ನೀಡಿ ಹಣ ಪಡೆದು ವಂಚನೆ ಮಾಡ್ತಿರುವ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಈ ರೀತಿ ನಂಬಿ ಹಣ ನೀಡಿ ಮೋಸ ಹೋಗ್ಬೇಡಿ ಜಾಗೃತರಾಗಿರಿ ಎಂದು ಪೋಲಿಸ್ ಇಲಾಖೆ ಮನವಿ ಮಾಡಿದರೂ ಕಿವಿಗೊಡದ ಜನ ಈ ನಕಲಿ ಬಂಗಾರದ ಜಾಲೆಗೆ ಬಲಿಯಾಗುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೇಬೆನ್ನೂರಿನಲ್ಲಿ ರೈತನೋರ್ವ ನಕಲಿ ಚಿನ್ನದ ಜಾಲಕ್ಕೆ ಬಲಿಯಾಗಿ 7.5 ಲಕ್ಷ ರೂಪಾಯಿ ವಂಚನೆಗೊಳಗಾಗಿರುವ ಘಟನೆ ಇಂದು ನಡೆದಿದೆ.
ಬೆಳಗಾವಿ ಜಿಲ್ಲೆಯ ಅಥಣಿ ಮೂಲದ ಕಲ್ಲಪ್ಪ ಗುಂಜಿಗಾವಿ ಎಂಬ ರೈತನಿಗೆ ವಂಚನೆಯಾಗಿದ್ದು, ಸಂತೋಷ ಎಂದು ಹೆಸರು ಹೇಳಿದ ವ್ಯಕ್ತಿಯಿಂದ ವಂಚನೆಯಾಗಿದೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೆಬೆನ್ನೂರ (santhebennur) ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಿದ್ದನಮಠ ಕ್ರಾಸ್ ಬಳಿ ನಕಲಿ ಚಿನ್ನ ನೀಡಿ ಹಣ ಪಡೆದು ವಂಚಿಸಲಾಗಿದೆ. ಮನೆಯ ಪಾಯಾ ತೆಗೆಯುವಾಗ ಚಿನ್ನದ ನಿಕ್ಷೇಪ ಪತ್ತೆಯಾಗಿದ್ದು, ಕಡಿಮೆ ದರದಲ್ಲಿ ಚಿನ್ನ ಕೊಡುವುದಾಗಿ ರೈತ ಕಲ್ಲಪ್ಪ ಗುಂಜಿಗಾವಿ ಎಂಬುವವರಿಗೆ ಪುಸಲಾಯಿಸಿ 7.5 ಲಕ್ಷ ಹಣ ಪಡೆದು ಖದೀಮರು ವಂಚನೆ ಮಾಡಿದ್ದಾರೆ. ಸಂತೋಷ್ ಎಂದು ಹೇಳಿಕೊಂಡು ಬಂದಿದ್ದ ವ್ಯಕ್ತಿ ರೈತ ಕಲ್ಲಪ್ಪನನ್ನು ಸಂತೇಬೆನ್ನೂರಿನ ಸಿದ್ದನಮಠ ಕ್ರಾಸ್ ಗೆ ಕರೆಸಿಕೊಂಡಿದ್ದಾನೆ.
ರೈತನ ಕೈಗೆ 250 ಗ್ರಾಂ ನಕಲಿ ಚಿನ್ನದ ತುಣುಕುಗಳನ್ನ ಕೊಟ್ಟು 7.5 ಲಕ್ಷ ಹಣ ಪಡೆದು ಪರಾರಿಯಾಗಿದ್ದಾನೆ. ರೈತ ಕಲ್ಲಪ್ಪನಿಗೆ ಆರೋಪಿಗಳು15 ಲಕ್ಷ ರೂಪಾಯಿ ತರುವಂತೆ ಹೇಳಿದ್ದರು. ಅದ್ರೇ ರೈತ 7.5 ಲಕ್ಷ ತಂದಿದ್ದು, ಅದನ್ನು ಕಳೆದುಕೊಂಡಿದ್ದಾನೆ. ಇದರ ಸಂಬಂಧ ಸಂತೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಣ ಕಳೆದುಕೊಂಡವರು ಮಾನಕ್ಕಂಜಿ ಹೇಳಿ ನೀಡಲು ಹಿಂದೇಟು ಹಾಕುತ್ತಾರೆ.
ಈ ಉದಾಹರಣೆ ನೋಡಿ. ತಮಿಳುನಾಡಿನಲ್ಲಿ 34, ಕೇರಳದಲ್ಲಿ 18 ಆಂಧ್ರ ಪ್ರದೇಶದಲ್ಲಿ 63 ಹಾಗೂ ಕರ್ನಾಟಕದಲ್ಲಿ 108 ಪ್ರಕರಣಗಳು. ಈ ಅಂಕಿ ಸಂಖ್ಯೆ ಕೇಳುತ್ತಿದ್ದಂತೆ ಮೈ ಜುಮ್ ಎನ್ನುತ್ತದೆ. ಕಾರಣ ಇಷ್ಟೊಂದು ಪ್ರಕರಣಗಳು ಪೊಲೀಸ್ ಠಾಣೆಯಲ್ಲಿ ನಿಮ್ಮ ವಿರುದ್ಧ ದಾಖಲಾದ್ರೆ ಎನು ಮಾಡುತ್ತೀರಿ. ಜಾಮೀನು ತೆಗೆದುಕೊಳ್ಳುವುದರಲ್ಲಿಯೇ ನಿಮ್ಮ ಜೀವನ ಕೊನೆಗೊಳ್ಳುತ್ತದೆ.
ಇದು ದಾವಣಗೆರೆ ಜಿಲ್ಲಾ ಪೊಲೀಸ್ ರಿಕಾರ್ಡ್ ನಲ್ಲಿ ಕಂಡು ಬಂದ ಪ್ರಕರಣ ಸಂಖ್ಯೆ ಬರೋಬರಿ 214. ಇದಕ್ಕೆ ಹೊಸ ಸೇರ್ಪಡೆ ಚನ್ನಗಿರಿ ತಾಲೂಕಿನ ಸಂತೆಬೆನ್ನೂರು ಪ್ರಕರಣ. ಪೊಲೀಸ್ ತನಿಖೆಯಿಂದ ಪತ್ತೆಯಾಗಿದ್ದು ಇತ್ತೀಚಿಗೆ ಇಂತಹ ನಕಲಿ ಗೋಲ್ಡ್ ದಂಧೆ ಮಾಡುವರು ಆಯಾ ರಾಜ್ಯ ಆ ಪ್ರದೇಶದ ಭಾಷೆ ಬರುವ ಜನರನ್ನ ಸಂಬಳಕೊಟ್ಟು ಗುರ್ತಿಸಿರುತ್ತಾರೆ.
ಇದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೆಬೆನ್ನೂರು ಪೊಲೀಸ್ ಠಾಣೆ ವ್ಯಾಪ್ತಿ ಹಾಗೂ ಪಕ್ಕದ ವಿಜಯ ನಗರ ಜಿಲ್ಲೆಯ ಹರಪನಹಳ್ಳಿ ಸುತ್ತಮುತ್ತ ಹತ್ತಾರು ನಕಲು ಗೋಲ್ಡ್ ಗ್ಯಾಂಗ್ ಗಳು ಕೆಲ್ಸ ಮಾಡುತ್ತಿವೆ. ಅದು ವಂಚನೆ ಅಂತಾ ಪೊಲೀಸರು ಅರಿವು ಮೂಡಿಸುವ ಕೆಲ್ಸಾ ಮಾಡುತ್ತಲೇ ಇದ್ದಾರೆ.
ಹೀಗೆ ಬೇರೆ ಬೇರೆ ವಂಚನೆ ಮಾಡಿದ ನಕಲಿ ಗೋಲ್ಡ್ ಗ್ಯಾಂಗ್ ಗಳ ಪಟ್ಟಿ ಕೂಡಾ ಪೊಲೀಸರ ಬಳಿ ಇದೆ. ಇದರ ಸಹಾಯದಿಂದ ಇತ್ತೀಚಿಗೆ ಇದೇ ಸಂತೆಬೆನ್ನೂರು ಪೊಲೀಸ್ ಠಾಣೆಯಲ್ಲಿ 10 ಲಕ್ಷ ರೂಪಾಯಿ ಆರೋಪಿಗಳನ್ನ ವಸೂಲಿ ಮಾಡಿ ಹಣ ಕಳೆದುಕೊಂಡವರಿಗೆ ನೀಡಲಾಗಿತ್ತು. ಹೀಗೆ ಹತ್ತರಲ್ಲಿ ಮೂರು ಪ್ರಕರಣಗಳು ಪತ್ತೆಯಾಗುತ್ತಿವೆ. ಆದ್ರೆ ಎಳು ಪ್ರಕರಣದಲ್ಲಿ ಹಣ ಕಳೆದುಕೊಂಡವರು ಅತಿ ಆಸೆಗೆ ಬಿದ್ದು ಬೀದಿ ಪಾಲಾದ್ರು ಅಂತಲೇ ಅರ್ಥ.
ವರದಿ: ಬಸವರಾಜ್ ದೊಡ್ಮನಿ, ಟಿವಿ9, ದಾವಣಗೆರೆ