ದಾವಣೆಗೆರೆ: ಜಿಲ್ಲೆಯ ರಾಗಿ (Millet) ಖರೀದಿ ಕೇಂದ್ರದಲ್ಲಿ ಗೋಲ್ಮಾಲ್ ನಡೆದಿರುವ ಆರೋಪ ಕೇಳಿಬಂದಿದ್ದು, ಎಪಿಎಂಸಿ ಆವರಣದಲ್ಲಿರುವ ರಾಗಿ ಖರೀದಿ ಕೇಂದ್ರಕ್ಕೆ ಇಂದು (ಏಪ್ರಿಲ್ 27) ರೈತರು (Farmers) ಮುತ್ತಿಗೆ ಹಾಕಿದ್ದಾರೆ. ಕೇಂದ್ರದಲ್ಲಿ ಮಧ್ಯವರ್ತಿಗಳ ಮೂಲಕ ಬಂದವರ ರಾಗಿ ಮಾತ್ರ ಖರೀದಿ ಮಾಡುತ್ತಾರೆ. ನೇರವಾಗಿ ಖರೀದಿ ಕೇಂದ್ರಕ್ಕೆ ಬಂದ ರೈತರ ರಾಗಿಯನ್ನು ಖರೀದಿಸಲು ನಿರಾಕರಿಸುತ್ತಿದ್ದಾರೆ ಅಂತ ಆರೋಪಿಸಿರುವ ರೈತರು ಧರಣಿ ನಡೆಸುತ್ತಿದ್ದದಾರೆ. ಆಲೂರು, ಮಲ್ಲಾಪುರ ಸೇರಿ ಹಲವು ಗ್ರಾಮಗಳಿಂದ ರೈತರು ಬಂದಿದ್ದಾರೆ.
ಖರೀದಿ ಕೇಂದ್ರದಲ್ಲಿ ಪ್ರತಿ ಕ್ವಿಂಟಾಲ್ ರಾಗಿಗೆ 3,377 ರೂ. ದರ ನಿಗದಿಯಾಗಿದೆ. ಓಪನ್ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ರಾಗಿ ದರ 1,800 ರಿಂದ 1,900 ರೂಪಾಯಿ ಇದೆ. ಕೂಡಲೇ ರಾಗಿ ಖರೀದಿ ನಿಲ್ಲಿಸಿ ನ್ಯಾಯ ಕೊಡಿಸುವಂತೆ ರೈತರು ಆಗ್ರಹಿಸುತ್ತಿದ್ದು, ಖರೀದಿ ಕೇಂದ್ರಕ್ಕೆ ನೇರವಾಗಿ ಬಂದ ರಾಗಿ ಖರೀದಿಗೆ ರೈತರು ಪಟ್ಟು ಬಿದ್ದಿದ್ದಾರೆ.
ಕಾಂಗ್ರೆಸ್ನಿಂದ ವಿನೂತನ ಪ್ರತಿಭಟನೆ:
ಹುಬ್ಬಳ್ಳಿ: ರಸ್ತೆ ದುರಸ್ಥಿಗೆ ಆಗ್ರಹಿಸಿ ಹುಬ್ಬಳ್ಳಿಯ ಕೇಶ್ವಾಪುರದಲ್ಲಿ ಕಾಂಗ್ರೆಸ್ನಿಂದ ವಿನೂತನ ಪ್ರತಿಭಟನೆ ನಡೆಯಿತು. ಗುಂಡಿ ಬಿದ್ದ ರಸ್ತೆಯಲ್ಲಿ ರಂಗೋಲಿ ಬಿಡಿಸಿ ಆಕ್ರೋಶ ಹೊರಹಾಕಿದ್ದಾರೆ. ರಸ್ತೆ ತುಂಬೆಲ್ಲ ಗುಂಡಿ ಬಿದ್ದು ಸಾರ್ವಜನಿಕರಿಗೆ ತೀರಾ ತೊಂದರೆಯಾಗುತ್ತಿದೆ. ಹೀಗಾಗಿ ಕೂಡಲೇ ರಸ್ತೆ ದುರಸ್ತಿ ಮಾಡಿಸಬೇಕೆಂದು ಒತ್ತಾಯಿಸಿದ್ದಾರೆ.
ಸರ್ಕಾರಿ ರಸ್ತೆಗೆ ಬೇಲಿ ಹಾಕಿದ ಗ್ರಾಮ ಪಂಚಾಯಿತಿ ಸದಸ್ಯ:
ತುಮಕೂರು ತಾಲೂಕಿನ ಮುದ್ದರಾಮಯ್ಯಪಾಳ್ಯ ಗ್ರಾಮದಲ್ಲಿ ಸರ್ಕಾರಿ ನಕಾಶೆ ರಸ್ತೆಗೆ ಗ್ರಾಮ ಪಂಚಾಯತಿ ಸದಸ್ಯ ಬೇಲಿ ಹಾಕಿದ್ದಾರೆ. ಗ್ರಾಮ ಪಂಚಾಯತಿ ಸದಸ್ಯ ಆನಂದ್ ಎಂಬುವರು ರಸ್ತೆಗೆ ಬೇಲಿ ಹಾಕಿ ಬಂದ್ ಮಾಡಿದ್ದಾರೆ. ಹಲವು ವರ್ಷಗಳಿಂದ ಇದ್ದ ರಸ್ತೆಗೆ ಬೇಲಿ ಹಾಕಿ ದೌರ್ಜನ್ಯ ಎಸಗಿದ್ದಾರೆ ಅಂತ ಆರೋಪ ಕೇಳಿಬಂದಿದೆ.
ಇದನ್ನೂ ಓದಿ
ನರಗುಂದ: ಸಚಿವ ಸಿಸಿ ಪಾಟೀಲ ಮನೆ ಎದುರು ಬಿಗಿ ಪೊಲೀಸ್ ಬಂದೋಬಸ್ತ್; ದಿಂಗಾಲೇಶ್ವಶ್ರೀ ಭಕ್ತರ ಆಕ್ರೋಶ
IPL 2022 VIDEO: ಏನೋ ಮಾಡ್ತೀಯಾ..? ಮೈದಾನದಲ್ಲೇ ಜಗಳಕ್ಕಿಳಿದ ಹರ್ಷಲ್-ಪರಾಗ್
Published On - 11:55 am, Wed, 27 April 22