Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಳೆಯಿಂದ ಭಾರಿ ಅವಾಂತರ; ಧರೆಗುರುಳಿದ ವಿದ್ಯುತ್ ಕಂಬ, ಮರಗಳು, ಬೆಳೆ ನಾಶದಿಂದ ಕಂಗಾಲಾದ ರೈತರು

ಅಪಾರ ಪ್ರಮಾಣದ ಒಣ ದ್ರಾಕ್ಷಿ, ಮಾವು ಬೆಳೆ ನಾಶವಾಗಿದೆ. ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣದಲ್ಲಿ ಆಲಿಕಲ್ಲು ಮಳೆಯಿಂದ 10ಕ್ಕೂ ಹೆಚ್ಚು ವಿದ್ಯುತ್ ಕಂಬ, ಟ್ರಾನ್ಸ್ಫಾರ್ಮರ್ ಧರೆಗುರಳಿವೆ. ಗಾಳಿಗೆ 50ಕ್ಕೂ ಹೆಚ್ಚು ಮನೆಗಳಿಗ ಹಾಕಿದ್ದ ಶೀಟ್‌ಗಳು ಹಾರಿಹೋಗಿವೆ.

ಮಳೆಯಿಂದ ಭಾರಿ ಅವಾಂತರ; ಧರೆಗುರುಳಿದ ವಿದ್ಯುತ್ ಕಂಬ, ಮರಗಳು, ಬೆಳೆ ನಾಶದಿಂದ ಕಂಗಾಲಾದ ರೈತರು
ಮಳೆಯಿಂದ ಭಾರಿ ಅವಾಂತರ
Follow us
TV9 Web
| Updated By: ಆಯೇಷಾ ಬಾನು

Updated on: Apr 16, 2022 | 9:32 AM

ಚಿಕ್ಕೋಡಿ: ನಿನ್ನೆ ರಾಜ್ಯದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಅನೇಕ ಕಡೆ ಭಾರಿ ಅನಾಹುತಗಳಾಗಿವೆ. ಚಿಕ್ಕೋಡಿ ಉಪವಿಭಾಗದಲ್ಲಿ ಅಕಾಲಿಕ ಮಳೆಯಿಂದ ಅಪಾರ ಹಾನಿಯಾಗಿದೆ. ರಾಯಬಾಗ, ಕಾಗವಾಡ, ಅಥಣಿ ತಾಲೂಕಿನಲ್ಲಿ ಗಾಳಿಸಹಿತ ಮಳೆಯಾಗಿದ್ದು ಅಥಣಿ, ಕಾಗವಾಡ ಭಾಗದಲ್ಲಿ ಹಲವು ಮರಗಳು ಧರೆಗುರಳಿವೆ. ಅಪಾರ ಪ್ರಮಾಣದ ಒಣ ದ್ರಾಕ್ಷಿ, ಮಾವು ಬೆಳೆ ನಾಶವಾಗಿದೆ. ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣದಲ್ಲಿ ಆಲಿಕಲ್ಲು ಮಳೆಯಿಂದ 10ಕ್ಕೂ ಹೆಚ್ಚು ವಿದ್ಯುತ್ ಕಂಬ, ಟ್ರಾನ್ಸ್ಫಾರ್ಮರ್ ಧರೆಗುರಳಿವೆ. ಗಾಳಿಗೆ 50ಕ್ಕೂ ಹೆಚ್ಚು ಮನೆಗಳಿಗ ಹಾಕಿದ್ದ ಶೀಟ್‌ಗಳು ಹಾರಿಹೋಗಿವೆ.

ಮುರಿದು ಬಿದ್ದ ಮರದ ಕೊಂಬೆ ಎತ್ತು ಸಾವು ಮೈಸೂರಿನ ಹೆಚ್.ಡಿ.ಕೋಟೆ ತಾಲೂಕಿನ ಹೈರಿಗೆ ಗ್ರಾಮದಲ್ಲಿ ಗಾಳಿ ಸಹಿತ ಮಳೆಗೆ ಮರದ ಕೊಂಬೆ ಮುರಿದುಬಿದ್ದು ಎತ್ತು ಮೃತಪಟ್ಟ ಘಟನೆ ನಡೆದಿದೆ. ಎತ್ತಿನಗಾಡಿಗೆ ಕಟ್ಟಿದ್ದ ಒಂದು ಎತ್ತು ಮೃತಪಟ್ಟಿದ್ದು ಮತ್ತೊಂದು ಎತ್ತು ಪಾರಾಗಿದೆ. ರೈತ ಜವರಯ್ಯಗೆ ಸಣ್ಣಪುಟ್ಟ ಗಾಯಗಳಾಗಿವೆ.

ಗಾಳಿಸಹಿತ ಭಾರಿ ಮಳೆಗೆ 7 ಎಕರೆಯಲ್ಲಿದ್ದ ಬಾಳೆ ಬೆಳೆ ನಾಶ ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಹೈರಿಗೆ ಗ್ರಾಮದಲ್ಲಿ ಗಾಳಿಸಹಿತ ಭಾರಿ ಮಳೆಗೆ ಲಕ್ಷಾಂತರ ರೂ. ಮೌಲ್ಯದ ಬೆಳೆ ನಾಶವಾಗಿದೆ. ರೈತರಾದ ಮರಿಗೌಡ, ಮಾದೇಗೌಡರಿಗೆ ಸೇರಿದ ಸುಮಾರು 7 ಎಕರೆ ಪ್ರದೇಶದಲ್ಲಿದ್ದ ಬಾಳೆ ಬೆಳೆ ನಾಶವಾಗಿದೆ. ಗೊನೆ ಬಿಡುವ ಹಂತದಲ್ಲಿದ್ದ ಬಾಳೆ ತೋಟ ನಾಶ ಹಿನ್ನೆಲೆ ಸೂಕ್ತ ಪರಿಹಾರ ನೀಡುವಂತೆ ಸರ್ಕಾರಕ್ಕೆ ರೈತರು ಒತ್ತಾಯಿಸಿದ್ದಾರೆ.

100ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ರಾಜಾಕಾಲುವೆ ನೀರು ಬೆಂಗಳೂರು ನಗರದಲ್ಲಿ ಸಂಜೆಯಿಂದ ಶುರುವಾದ ಮಳೆ, ಮಧ್ಯರಾತ್ರಿ ತನಕ ಸುರಿಯಿತು. ಇದ್ರಿಂದಾಗಿ, ಚಿಕ್ಕಲಸಂದ್ರ, ಕತ್ರಿಗುಪ್ಪೆ, ಗಣೇಶ ಮಂದಿರ, ಉತ್ತರಹಳ್ಳಿ ವಾರ್ಡ್ಗಳಲ್ಲಿ ನೆರೆ ತಲೆದೋರಿತ್ತು. ಅದ್ರಲ್ಲೂ, ಕಾಮಾಕ್ಯ ಲೇಔಟ್ನಲ್ಲಿ 100 ಕ್ಕೂ ಹೆಚ್ಚು ಮನೆಗಳಿಗೆ ರಾಜಕಾಲುವೆ ನೀರು ನುಗ್ಗಿತ್ತು. ಕೆಲ ಮನೆಗಳಲ್ಲಿ ಐದು ಅಡಿಯಷ್ಟು ನೀರು ನಿಂತಿತ್ತು. ಮನೆಯಲ್ಲಿದ್ದ ಸಿಲಿಂಡರ್, ಬೀರು, ಟಿವಿಯೆಲ್ಲ ನೀರು ಪಾಲಾಗಿದ್ವು. ಈ ಪೈಕಿ ಪಾನಿಪುರಿ ಅಂಗಡಿ ಇಟ್ಕೊಂಡಿದ್ದವರ ಮನೆ, ಮಳೆ ನೀರಿನಿಂದಾಗಿ ಜರ್ಝರಿತವಾಗಿತ್ತು.

ಇನ್ನು, ಏರ್ಪೋರ್ಟ್ ಟ್ಯಾಕ್ಸಿ ಓಡಿಸಿಕೊಂಡಿದ್ದ ಶಶಿಕುಮಾರ್ ನಿನ್ನೆ ಸಂಜೆ ಅಕ್ಕನ ಜತೆ ಕೆಜಿಎಫ್ ಮೂವಿ ನೋಡೋಕೆ ಹೋಗಿದ್ರು.. ಆದ್ರೆ, ಭಾರಿ ಮಳೆಗೆ ಕಾರು ಕೊಚ್ಚಿಕೊಂಡು ಹೋಗಿ ಮತ್ತೊಂದು ಕಾರಿನ ಮೇಲೆ ಬಿದ್ದಿತ್ತು. ಬೈಕ್ ಕೂಡ ಉರುಳಿಬಿದ್ದು, ಕಾರು ಹಾಳಾಗಿತ್ತು. ತಮ್ಮನ ಕಾರು ಛಿದ್ರ ಛಿದ್ರವಾಗಿದ್ದ ನೋಡಿ ಅಕ್ಕ ಗೋಳಾಡಿದ್ರು.

ಇದನ್ನೂ ಓದಿ: ‘ಕೆಜಿಎಫ್​ 2’ ಬ್ಲಾಕ್​ ಬಸ್ಟರ್​ ಗೆಲುವು ಕಂಡ ಬಳಿಕ ‘ಪುಷ್ಪ 2’ ಚಿತ್ರತಂಡಕ್ಕೆ ಚಿಂತೆ ಶುರು; ಏನಿದು ಟಾಕ್​?

Health Tips: ಬಾಯಿ ತೆರೆದು ಮಲಗುವ ಅಭ್ಯಾಸ ಇದೆಯೇ? ಅದರಿಂದ ಆಗುವ ಆರೋಗ್ಯ ಸಮಸ್ಯೆಗಳ ಬಗ್ಗೆ ತಿಳಿಯಿರಿ