ದಾವಣಗೆರೆ, ಫೆಬ್ರವರಿ 8: ಸಂಸದ ಡಿಕೆ ಸುರೇಶ್ ಹಾಗೂ ಶಾಸಕ ವಿನಯ ಕುಲಕರ್ಣಿ ಮಾದರಿ ದೇಶದ್ರೋಹಿ ಹೇಳಿಕೆ ನೀಡಿದವರಿಗೆ ಗುಂಡಿಕ್ಕುವ ಕಾನೂನು ತನ್ನಿ ಎಂದು ಪ್ರಧಾನಿ ನರೇಂದ್ರ ಮೋದಿಗೆ ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ (KS Eshwarappa) ಆಗ್ರಹಿಸಿದ್ದಾರೆ. ನಗರದಲ್ಲಿ ನಡೆದ ಜಿಲ್ಲಾಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ಹೀಗೆ ಬಿಡಲ್ಲ. ನಾವು ಬಿಜೆಪಿಯವರು ಪಾಕಿಸ್ತಾನವನ್ನ ಭಾರತದಲ್ಲಿ ಸೇರ್ಪಡೆ ಮಾಡಿ ಅಖಂಡ ಭಾರತ ಮಾಡುತ್ತೇವೆ. ಒಂದು ಕಡೆ ಮೋದಿ ಹಾಗೂ ಹಾಗೂ ಇನ್ನೊಂದು ಕಡೆ ಶ್ರೀರಾಮ ಚಂದ್ರ ಇದು ಬಿಜೆಪಿ ಸಿದ್ದಾಂತ ಎಂದು ಹೇಳಿದ್ದಾರೆ. ಈ ದೇಶದಲ್ಲಿ ಕಾಂಗ್ರೆಸ್ನವರಿಗೂ ಹಿಂದು ಧರ್ಮದ ಬಗ್ಗೆ ಗೌರವ ಇದೆ. ಮಾಗಡಿ ಶಾಸಕ ಬಾಲಕೃಷ್ಣ ಒಂದು ಮುತ್ತು. ಬಿಜೆಪಿ ಸಂಸದರು ಗಂಡಸರೇ ಅಲ್ಲಾ ಅಂತಾರೆ. ನಾವು ಗಂಡಸರು ಅಂತಾ ಎಲ್ಲಿ ತೊರಿಸಬೇಕು ಎಂದು ಕಿಡಿಕಾರಿದ್ದಾರೆ.
ಈ ವಿಚಾರವಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯಿಂದ ಟ್ವೀಟ್ ಮಾಡಲಾಗಿದ್ದು, ಕೇಂದ್ರ ಸರ್ಕಾರದ ಆರ್ಥಿಕ ತಾರತಮ್ಯದ ಕುರಿತು ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಅವರು ಎತ್ತಿದ ದನಿ ಇಂದು ಮಹಾ ಕ್ರಾಂತಿ ಎಬ್ಬಿಸಿದೆ.
ಕೇಂದ್ರ ಸರ್ಕಾರದ ಆರ್ಥಿಕ ತಾರತಮ್ಯದ ಕುರಿತು ಕಾಂಗ್ರೆಸ್ ಸಂಸದ @DKSureshINC ಅವರು ಎತ್ತಿದ ದನಿ ಇಂದು ಮಹಾ ಕ್ರಾಂತಿ ಎಬ್ಬಿಸಿದೆ,
ಕೇಂದ್ರ ಸರ್ಕಾರದ ಆರ್ಥಿಕ ಶೋಷಣೆಯ ವಿರುದ್ಧ ದಕ್ಷಿಣ ಭಾಗದ ರಾಜ್ಯಗಳು ಒಂದೊಂದಾಗಿಯೇ ದೆಹಲಿಯಲ್ಲಿ ನ್ಯಾಯದ ಹೋರಾಟಕ್ಕೆ ಮುಂದಾಗಿವೆ.
ಇಂತಹದೊಂದು ಜಾಗೃತಿಗೆ, ಹೋರಾಟಕ್ಕೆ ಮುನ್ನುಡಿ ಬರೆದ ಡಿ. ಕೆ ಸುರೇಶ್… pic.twitter.com/DxmBiq4xWC
— Karnataka Congress (@INCKarnataka) February 8, 2024
ಕೇಂದ್ರ ಸರ್ಕಾರದ ಆರ್ಥಿಕ ಶೋಷಣೆಯ ವಿರುದ್ಧ ದಕ್ಷಿಣ ಭಾಗದ ರಾಜ್ಯಗಳು ಒಂದೊಂದಾಗಿಯೇ ದೆಹಲಿಯಲ್ಲಿ ನ್ಯಾಯದ ಹೋರಾಟಕ್ಕೆ ಮುಂದಾಗಿವೆ. ಇಂತಹದೊಂದು ಜಾಗೃತಿಗೆ, ಹೋರಾಟಕ್ಕೆ ಮುನ್ನುಡಿ ಬರೆದ ಡಿಕೆ ಸುರೇಶ್ ಅವರು ಅಭಿನಂದನಾರ್ಹರು ಎಂದು ಬರೆದುಕೊಳ್ಳಲಾಗಿದೆ.
ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಆಡಿದ ಪ್ರತ್ಯೇಕ್ಷ ರಾಷ್ಟ್ರದ ಮಾತು ದೊಡ್ಡ ಮಟ್ಟದಲ್ಲಿ ಸಂಚಲನ ಸೃಷ್ಟಿಸಿತ್ತು. ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ವಾಕ್ಸಮರಕ್ಕೂ ವೇದಿಕೆ ಕೊಟ್ಟಿತ್ತು. ಬಿಜೆಪಿಯವರು ಡಿ.ಕೆ ಸುರೇಶ್ ಕ್ಷಮೆಗೆ ಪಟ್ಟು ಹಿಡಿದಿದ್ದರೆ ಕಾಂಗ್ರೆಸ್ನವರು ಡಿ.ಕೆ ಸುರೇಶ್ ಹೇಳಿಕೆ ಸಮರ್ಥಿಸಿಕೊಂಡು ಬಿಜೆಪಿಗೆ ತಿರುಗೇಟು ಕೊಡುತ್ತಿದ್ದಾರೆ. ಕಾಂಗ್ರೆಸ್ನಿಂದ ಸಮರ್ಥನೆಯ ಸಮರ ಹಾಗೇ ಮುಂದುವರೆದಿದೆ.
ಇದನ್ನೂ ಓದಿ: ಸಂಸದ ಡಿಕೆ ಸುರೇಶ್ ಪ್ರತ್ಯೇಕ ರಾಷ್ಟ್ರ ಹೇಳಿಕೆ: ದೂರಿನ ವಿಚಾರಣೆ ಕೈಗೆತ್ತಿಕೊಂಡ ಮಂಗಳೂರು ಕೋರ್ಟ್
ಈ ಕುರಿತಾಗಿ ಎಂಎಲ್ಸಿ ಬಿ.ಕೆ ಹರಿಪ್ರಸಾದ್ ಮಾತನಾಡಿ, ದೇಶ ಒಡೆಯುವರು ಬಿಜೆಪಿಯವರು. ದೇಶ ವಿಭಜನೆ ಮಾಡುವುದೇ ಅವರ ಕೆಲಸ. ಡಿ.ಕೆ ಸುರೇಶ್ ನಮಗೆ ಅನ್ಯಾಯ ಆಗುತ್ತಿದೆ. ಅನ್ನೋ ಧಾಟಿಯಲ್ಲಿ ಮಾತನಾಡಿದ್ದಾರೆ ಅಂತ ಸ್ಪಷ್ಟನೆ ಕೊಟ್ಟಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.