ಹುಡುಗಿಗೆ ಮೆಸೆಜ್ ಮಾಡಿದ ಎಂಬ ಕಾರಣಕ್ಕೆ ದಲಿತ ಯುವಕನ ಮೇಲೆ ಮಾರಣಾಂತಿಕ ಹಲ್ಲೆ; ದಾವಣಗೆರೆಯಲ್ಲಿ ಅಮಾನವೀಯ ಘಟನೆ

Davangere: ಹುಡುಗಿಗೆ ಮೆಸೆಜ್ ಮಾಡಿದ ಎಂಬ ಒಂದೇ ಕಾರಣಕ್ಕೆ ದಲಿತ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ದಾವಣಗೆರೆ ತಾಲೂಕಿನ ಅತ್ತಿಗೆರೆ ಗ್ರಾಮದಲ್ಲಿ ನಡೆದಿದೆ.

ಹುಡುಗಿಗೆ ಮೆಸೆಜ್ ಮಾಡಿದ ಎಂಬ ಕಾರಣಕ್ಕೆ ದಲಿತ ಯುವಕನ ಮೇಲೆ ಮಾರಣಾಂತಿಕ ಹಲ್ಲೆ; ದಾವಣಗೆರೆಯಲ್ಲಿ ಅಮಾನವೀಯ ಘಟನೆ
ಸಾಂದರ್ಭಿಕ ಚಿತ್ರ
Image Credit source: DNA
Updated By: ವಿವೇಕ ಬಿರಾದಾರ

Updated on: May 16, 2022 | 11:40 AM

ದಾವಣಗೆರೆ: ಹುಡುಗಿಗೆ ಮೆಸೆಜ್ ಮಾಡಿದ ಎಂಬ ಒಂದೇ ಕಾರಣಕ್ಕೆ ದಲಿತ (Dalit) ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ದಾವಣಗೆರೆ (Davangere) ತಾಲೂಕಿನ ಅತ್ತಿಗೆರೆ ಗ್ರಾಮದಲ್ಲಿ ನಡೆದಿದೆ. ಗಣೇಶ (20) ಗಾಯಗೊಂಡ ದಲಿತ ಯುವಕ. ಗ್ರಾಮದ ಗ್ರಾಪಂ ಸದಸ್ಯ ಬಾಬಣ್ಣ, ಕಾರ್ತೀಕ್ ಹಾಗೂ ಹರೀಶ್ ಸೇರಿ ಅರವತ್ತಕ್ಕೂ ಹೆಚ್ಚು ಜನ ಸವರ್ಣೀಯರು ದಲಿತ ಯುವಕನ ಮೇಲೆ ಹಲ್ಲೆ ಮಾಡಿದ್ದಾರೆ. ಯುವಕನಿಗೆ ಎರಡು ದಿನ ಚಿತ್ರ ಹಿಂಸೆ ನೀಡಿ, ಅರೇ ಬೆತ್ತಲೆಗೊಳಿಸಿ ಗ್ರಾಮದಲ್ಲಿ ಮೆರವಣಿಗೆ ಮಾಡಿದ್ದಾರೆ. ಈ ಅಮಾನವೀಯ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹಲ್ಲೆಯಿಂದ ತೀವ್ರಗಾಯಗೊಂಡ ದಲಿತ ಯುವಕನಿಗೆ ಜಿಲ್ಲಾ ಆಸ್ಪತ್ರೆ ಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದಲಿತ ಯುವಕ ಗಣೇಶನನ್ನು ಹಾಗೂ ಆತನ‌ ತಾಯಿಯನ್ನ ಎರಡು ಹಗಲು ಒಂದು ರಾತ್ರಿ ಕಲ್ಯಾಣ ಮಂಟಪದಲ್ಲಿ ಕುಡಿಟ್ಟು ಹಿಂಸಿಸಲಾಗಿದೆ. ಯುವಕನ ಸಂಬಂಧಿಕರು ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳ ಬಂಧನಕ್ಕೆ ಸಂಬಂಧಿಕರು ಆಗ್ರಹಿಸುತ್ತಿದ್ದಾರೆ.

ಆದರೆ ಹುಡುಗಿಯೇ ಮೊದಲು ಮೆಸೆಜ್ ಮಾಡಿದ್ದು ಎಂದು ಪೊಲೀಸರ ನಿರ್ಲಕ್ಷ್ಯವಹಿಸಿದ್ದಾರೆ. ಗಾಯಾಳು ಯುವಕನ ಮೊಬೈಲ್ ಪರಿಶೀಲನೆ ಮಾಡಿದಾಗ ಯುವಕನಿಗೆ ಹುಡುಗಿಯೇ ಮೊದಲು ಹೈ ಅಂತಾ ಮೆಸೆಜ್ ಮಾಡಿದ್ದಳು. ಈ ವಿಚಾರ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಆದರೆ ಪೊಲೀಸರು ನಂತರ ವಿಚಾರಣೆ ಮಾಡುವುದಾಗಿ ಹೇಳಿ ಯುವಕನನ್ನ ಹುಡುಗಿ ಸಂಬಂಧಿಕರ ಜೊತೆ ಕಳುಸಿದ್ದರು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.  ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 11:40 am, Mon, 16 May 22