ನಾನು ಬದುಕಿರುವವರೆಗೂ ಕರೆಪ್ಟ್ ಅಗೋಕ್ಕೆ ಸಾಧ್ಯವಿಲ್ಲ; ಪ್ರಾಮಾಣಿಕವಾಗಿ ಬದುಕಿ ಸಾಯುತ್ತೇನೆ -ಕೋಡಿಹಳ್ಳಿ ಚಂದ್ರಶೇಖರ

ಏಪ್ರಿಲ್ 21 ನೇ ತಾರಿಖು ಬಸವನಗುಡಿ ಮೈದಾನದಲ್ಲಿ ನಾನು ಘೋಷಣೆ ಮಾಡಿದ ರಾಜಕೀಯ ನಿಲುವುಗಳು ಕರ್ನಾಟಕದ ರಾಜಕೀಯದಲ್ಲಿ ತಲ್ಲಣ ಉಂಟು ಮಾಡಿತು - ಕೋಡಿಹಳ್ಳಿ ಚಂದ್ರಶೇಖರ್ ಅಭಿಪ್ರಾಯಪಟ್ಟರು.

ನಾನು ಬದುಕಿರುವವರೆಗೂ ಕರೆಪ್ಟ್ ಅಗೋಕ್ಕೆ ಸಾಧ್ಯವಿಲ್ಲ; ಪ್ರಾಮಾಣಿಕವಾಗಿ ಬದುಕಿ ಸಾಯುತ್ತೇನೆ -ಕೋಡಿಹಳ್ಳಿ ಚಂದ್ರಶೇಖರ
ನಾನು ಬದುಕಿರುವವರೆಗೂ ಕರೆಪ್ಟ್ ಅಗೋಕ್ಕೆ ಸಾಧ್ಯವಿಲ್ಲ; ಪ್ರಾಮಾಣಿಕವಾಗಿ ಬದುಕಿ ಸಾಯುತ್ತೇನೆ -ಕೋಡಿಹಳ್ಳಿ ಚಂದ್ರಶೇಖರ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Jul 20, 2022 | 2:29 PM

ದಾವಣಗೆರೆ: ನಾನು ಕರೆಪ್ಟ್ (corruption) ಎಂದು ನನ್ನ ವಿರುದ್ಧ ಮಾತುಗಳು ಕೇಳಿಬರುತ್ತಿವೆ. ಇಂತಹ ಆರೋಪಗಳ ಬಗ್ಗೆ ಸ್ಪಷ್ಟವಾಗಿ ನಾನು ಹೇಳೋದು ಇಷ್ಟೇ… ನಾನು ಆರೋಪಗಳನ್ನು ಆರೋಗ್ಯಕರವಾಗಿ ತೆಗೆದುಕೊಳ್ಳುತ್ತೇನೆ. ಸಮಾಜದ ನಡುವೆ ಕೆಲಸ ಮಾಡುವವನು ನಾನು. ಯಾರೋ ಕರೆಪ್ಟ್ ಅಂತಾ ಹೇಳಿದ ತಕ್ಷಣ ನಾನು ಕರೆಪ್ಟ್ ಆಗುವುದಕ್ಕೆ ಸಾಧ್ಯವಿಲ್ಲ ಎಂದು ದಾವಣಗೆರೆಯಲ್ಲಿ ಕೋಡಿಹಳ್ಳಿ ಚಂದ್ರಶೇಖರ (kodihalli chandrashekar) ಹೇಳಿದ್ದಾರೆ.

ನಾನು ಮಾನಸಿಕವಾಗಿ ಮೊದಲು ಕರೆಪ್ಟ್ ಆಗಬೇಕು. ನಂತರ ವ್ಯಕ್ತಿಗತವಾಗಿ ಕರೆಪ್ಟ್ ಆಗಬೇಕು. ನಾನು ಕರೆಪ್ಟ್ ಆಗದೇ ತಿಂಗಳುಗಟ್ಟಲೇ ನೀವು ಹೇಳುತ್ತಿದ್ರೆ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದೀರಿ ಅಂತಷ್ಟೇ. ಆದ್ರೆ ನಾನು ಬದುಕಿರುವವರೆಗೂ ಕರೆಪ್ಟ್ ಅಗೋಕ್ಕೆ ಸಾಧ್ಯವಿಲ್ಲ; ಪ್ರಾಮಾಣಿಕವಾಗಿ ಬದುಕಿ ಸಾಯುತ್ತೇನೆ. ಯಾವುದೋ ರಾಜಕೀಯ ಪಕ್ಷದ ಮುಖವಾಣಿಯಾಗಿ ಯಾವುದೋ ಚಾನಲ್ ಗಳು ಕೆಲಸ ಮಾಡೋದಾದ್ರೆ.. ನೀವು ಕೂಡ ನಿಮ್ಮ ದಾರಿ ಸರಿಮಾಡಿಕೊಳ್ಳುವ ಅವಶ್ಯಕತೆ ಇದೆ ಎಂದು ಹೇಳಬೇಕಾಗುತ್ತದೆ ನಾನು. ನಾನು ಕೂಡ ಮುಖ್ಯಮಂತ್ರಿಗಳಿಗೆ ಈ ಬಗ್ಗೆ ದೂರು ಕೊಟ್ಟಿದ್ದೇ‌ನೆ. ಇದನ್ನು ಸಂಪೂರ್ಣ ತನಿಖೆ ಮಾಡಿ. ಯಾರೋ ಕರೆಪ್ಟ್ ಇದಾರೋ ಅದರ ಬಗ್ಗೆ ತನಿಖಾ ಸಂಸ್ಥೆಯಿಂದ ತನಿಖೆ ಮಾಡಿಸಿ. ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳಿ. ಇದರಲ್ಲಿ ಸರ್ಕಾರ, ಬೇರೆ ರಾಜಕೀಯ ಪಕ್ಷಗಳ ಸ್ಟ್ರಾಟಜಿ ಇದೆ ಎಂದು ನನಗೆ ಅನ್ನಿಸುತ್ತಿದೆ ಎಂದು ಕೋಡಿಹಳ್ಳಿ ಚಂದ್ರಶೇಖರ ತಿಳಿಸಿದ್ದಾರೆ.

ಏಪ್ರಿಲ್ 21 ನೇ ತಾರಿಖು ಬಸವನಗುಡಿ ಮೈದಾನದಲ್ಲಿ ನಾನು ಘೋಷಣೆ ಮಾಡಿದ ರಾಜಕೀಯ ನಿಲುವುಗಳು ಕರ್ನಾಟಕದ ರಾಜಕೀಯದಲ್ಲಿ ತಲ್ಲಣ ಉಂಟು ಮಾಡಿತು. ನಾವು ಭ್ರಷ್ಟಾಚಾರ ಮುಕ್ತ ಆಳ್ವಿಕೆ ನೀಡುವ ಬಗ್ಗೆ ಎಎಪಿ ಜೊತೆ ಕೈಜೋಡಿಸಿದ ನಂತರ ನಮ್ಮ‌ ಮೇಲೆ ಭ್ರಷ್ಟಾಚಾರದ ಆರೋಪಗಳು ಕೇಳಿಬಂದವು. ಭ್ರಷ್ಟನಾದವನಿಗೆ ಭಯ ಇರುತ್ತೇ, ಕ್ಲಿಯರ್ ಆಗಿರುವವನಿಗೆ ಭಯ ಇರೋದಿಲ್ಲ ಎಂದು ಕೋಡಿಹಳ್ಳಿ ಚಂದ್ರಶೇಖರ್ ಅಭಿಪ್ರಾಯಪಟ್ಟರು.

ಕರ್ನಾಟಕದಲ್ಲಿ ರೈತ ಚಳುವಳಿ 42 ವರ್ಷ ಕಳೆಯುತ್ತಿದೆ. ನವಲಗುಂದ ನರಗುಂದದಲ್ಲಿ ರೈತರ ಹುತಾತ್ಮರ ಕಾರ್ಯಕ್ರಮ ನಡೆಸುತ್ತೇವೆ. ಇದುವರೆಗೆ 154 ಜನ ರೈತರು ಹುತಾತ್ಮ ಆಗಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ರೈತರು ಹುತಾತ್ಮ ದಿನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.

‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ