ಲಿಕ್ಕರ್​​ ಶಾಪ್​ ನಡೆಸಲು ಕಟ್ಟಡ ಬಾಡಿಗೆ ಕೊಡದ ಮಾಲೀಕ, ಕುಟುಂಬಸ್ಥರ ಮೇಲೆ ಪುರಸಭೆ ಸದಸ್ಯನಿಂದ ಅಮಾನುಷ ಹಲ್ಲೆ

ಮದ್ಯದಂಗಡಿ) ನಡೆಸಲು ಬಿಲ್ಡಿಂಗ್ ಬಾಡಿಗೆ ಕೊಡದ ಮಾಲೀಕ ಹಾಗೂ ಆತನ ಕುಟುಂಬಸ್ಥರ ಮೇಲೆ ಪುರಸಭೆ ‘ಕೈ’ ಸದಸ್ಯ ಮರಣಾಂತಿಕ ಹಲ್ಲೆ ನಡೆಸಿದ ಘಟನೆ ದಾವಣಗೆರೆ(Davanagere) ಚನ್ನಗಿರಿ ಪಟ್ಟಣದಲ್ಲಿ ನಡೆದಿದೆ. ಸಧ್ಯ ಗಾಯಾಳುಗಳು ಶಿವಮೊಗ್ಗ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಲಿಕ್ಕರ್​​ ಶಾಪ್​ ನಡೆಸಲು ಕಟ್ಟಡ ಬಾಡಿಗೆ ಕೊಡದ ಮಾಲೀಕ, ಕುಟುಂಬಸ್ಥರ ಮೇಲೆ ಪುರಸಭೆ ಸದಸ್ಯನಿಂದ ಅಮಾನುಷ ಹಲ್ಲೆ
ಪುರಸಭೆ ‘ಕೈ’ ಸದಸ್ಯ ಶ್ರೀಕಾಂತ್ ಚೌಹಾಣ್​
Edited By:

Updated on: Oct 07, 2024 | 8:03 PM

ದಾವಣಗೆರೆ, ಅ.07: ಲಿಕ್ಕರ್ ಶಾಪ್(ಮದ್ಯದಂಗಡಿ) ನಡೆಸಲು ಬಿಲ್ಡಿಂಗ್ ಬಾಡಿಗೆ ಕೊಡದ ಮಾಲೀಕ ಹಾಗೂ ಆತನ ಕುಟುಂಬಸ್ಥರ ಮೇಲೆ ಪುರಸಭೆ ‘ಕೈ’ ಸದಸ್ಯ ಮರಣಾಂತಿಕ ಹಲ್ಲೆ ನಡೆಸಿದ ಘಟನೆ ದಾವಣಗೆರೆ(Davanagere) ಚನ್ನಗಿರಿ ಪಟ್ಟಣದಲ್ಲಿ ನಡೆದಿದೆ. ಹೌದು, ಕಟ್ಟಡ ಮಾಲೀಕ ರುದ್ರೋಜಿರಾವ್, ಆತನ ಕುಟುಂಬ ಸದಸ್ಯರಾದ ಶ್ವೇತಾ, ರಾಹುಲ್, ಶಿವಾಜಿ ಎಂಬುವವರ ಮೇಲೆ ಪೊಲೀಸರ ಮುಂದೆಯೇ ಪುರಸಭೆ ‘ಕೈ’ ಸದಸ್ಯ ಶ್ರೀಕಾಂತ್ ಚೌಹಾಣ್​ ಮತ್ತು ಆತನ 50 ಸಹಚರರಿಂದ ಹಲ್ಲೆ ನಡೆದಿದೆ.

ಘಟನೆ ವಿವರ

ಚನ್ನಗಿರಿ ಪಟ್ಟಣದ ಬಸ್ ಸ್ಟ್ಯಾಂಡ್ ಸಮೀಪ 3 ಅಂತಸ್ತಿನ ಸ್ವಂತ ಕಟ್ಟಡದ ಮಾಲೀಕತ್ವ ಹೊಂದಿರುವ ರುದ್ರೋಜಿರಾವ್,
ಪುರಸಭೆ ಕಾಂಗ್ರೆಸ್ ಸದಸ್ಯನಿಗೆ 3 ಅಂತಸ್ತು ಕಟ್ಟಡದಲ್ಲಿ 2 ಅಂತಸ್ತಗಳನ್ನು ಬಾಡಿಗೆ ನೀಡಿದ್ದ. ಕಳೆದ 12 ವರ್ಷಗಳಿಂದ ಶ್ರೀಕಾಂತ್ ಚೌಹ್ವಾಣ್​ಗೆ ಸೇರಿದ ಭವಾನಿ ಲಿಕ್ಕರ್ ಶಾಪ್ ಇದೇ ಕಟ್ಟಡದಲ್ಲಿ ನಡೆಯುತ್ತಿತ್ತು. ಇತ್ತಿಚೆಗೆ ಪ್ರತಿವರ್ಷ ಭವಾನಿ ಲಿಕ್ಕರ್ ಶಾಪ್ ರಿನಿವಲ್ ಮಾಡುವಾಗ ಬಿಲ್ಡಿಂಗ್ ಮಾಲೀಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಬದಲಿಗೆ ಬಿಲ್ಡಿಂಗ್ ಮಾಲೀಕ ರುದ್ರೋಜಿರಾವ್ ಅವರ ಸಹಿ ನಕಲಿ ಮಾಡಿ ರಿನಿವಲ್ ಮಾಡಲಾಗಿದೆ.

ಇದನ್ನೂ ಓದಿ:ಮಹಿಳಾ PSI ಮೇಲೆ ಹಲ್ಲೆ; ಕಾನ್ಸಸ್ಟೇಬಲ್ ವಿರುದ್ದ ಗಂಭೀರ ಆರೋಪ

ಇದನ್ನು ಪ್ರಶ್ನಿಸಿದ ರುದ್ರೋಜಿರಾವ್, ಶ್ರೀಕಾಂತ್ ಚೌಹ್ವಾಣ್ ಮೇಲೆ ಜಿಲ್ಲಾಧಿಕಾರಿ ಸೇರಿದಂತೆ ಅಬಕಾರಿ ಆಯುಕ್ತರಿಗೆ ದೂರು ನೀಡಿದ್ದಾರೆ. ಇದರಿಂದ ಕೆರಳಿದ ಶ್ರೀಕಾಂತ್ ಚೌಹ್ವಾಣ್, ತಮ್ಮ ಬೆಂಬಲಿಗರ ಪಡೆಯನ್ನು ಕಟ್ಟಿಕೊಂಡು ಬಂದು ಕಗತೂರು ಕ್ರಾಸ್​ನಲ್ಲಿ ಹೋಟೆಲ್ ನಡೆಸುತ್ತಿದ್ದ ರುದ್ರೋಜಿರಾವ್ ಕುಟುಂಬದ ಮೇಲೆ ಹಲ್ಲೆ ನಡೆಸಿದ್ದಾರೆ. ನಂತರ ಆಸ್ಪತ್ರೆಗೆ ತೆರಳಿದ ಸಂದರ್ಭದಲ್ಲಿ ಪೊಲೀಸರ ಮುಂದೆಯೇ ರುದ್ರೋಜಿರಾವ್ ಮೇಲೆ ,ಮತ್ತೊಮ್ಮೆ ಹಲ್ಲೆ ಮಾಡಿದ್ದಾರೆ.

ಈ ಬಗ್ಗೆ ಶ್ರೀಕಾಂತ್ ಚೌಹ್ವಾಣ್ ಸಹಚರರ ಮೇಲೆ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸ್ ಮುಂದೆ ಹಲ್ಲೆ ನಡೆದರೂ ಯಾವ ಕ್ರಮ ಕೈಗೊಳ್ಳದೇ ಅಸಹಾಯಕತೆ ವ್ಯಕ್ತಪಡಿಸಿದ ಪೊಲೀಸ್, ಕಾಂಗ್ರೆಸ್ ಕಾರ್ಪೊರೇಟರ್ ಗೂಂಡಾ ವರ್ತನೆಗೆ ಅಮಾಯಕ ಕುಟುಂಬ ಬೆದರಿದೆ. ರುದ್ರೋಜಿರಾವ್ ಹಾಗೂ ಕುಟುಂಬ ಸದಸ್ಯರು ಶಿವಮೊಗ್ಗ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ