ದಾವಣಗೆರೆ: ಕೈ ಕೊಟ್ಟ ಮಳೆ! ಬಿಸಿಲಿನ ಬೇಗೆಗೆ ಒಣಗಿದ 12 ಸಾವಿರ ಎಕರೆ ಮೆಕ್ಕಜೋಳ ಬೆಳೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 16, 2023 | 7:07 AM

ದಾವಣಗೆರೆ ಜಿಲ್ಲೆಯಲ್ಲಿ ಮಳೆ ಅಭಾವ ಎದುರಾಗಿದ್ದರಿಂದ ರೈತ ಕಂಗಾಲಾಗಿದ್ದಾನೆ. ಸಾಲ ಸೋಲ ಮಾಡಿ, ಬಂಗಾರವನ್ನು ಅಡವಿಟ್ಟು ಕಷ್ಟಪಟ್ಟು ಬೆಳೆದಿದ್ದ ಮೆಕ್ಕೆಜೋಳ ಬೆಳೆ ನೆಲಕಚ್ಚಿದೆ. ಈ ಹಿನ್ನಲೆ ಸುಮಾರು 12 ಸಾವಿರ ಎಕರೆಯಲ್ಲಿ ಬೆಳೆದಿದ್ದ ಮೆಕ್ಕಜೋಳ ಬೆಳೆ ಓಣಗಿದ್ದು, ದಿಕ್ಕು ತೋಚದ ರೈತರು ಮನಸ್ಸನ್ನು ಕಲ್ಲುಬಂಡೆ ಮಾಡಿಕೊಂಡು ಟ್ಟ್ರ್ಯಾಕ್ಟರ್ ಮೂಲಕ ನಾಶ ಪಡಿಸಿದ್ದಾರೆ.

ದಾವಣಗೆರೆ: ಕೈ ಕೊಟ್ಟ ಮಳೆ! ಬಿಸಿಲಿನ ಬೇಗೆಗೆ ಒಣಗಿದ 12 ಸಾವಿರ ಎಕರೆ ಮೆಕ್ಕಜೋಳ ಬೆಳೆ
ದಾವಣಗೆರೆಯಲ್ಲಿ ಮೆಕ್ಕೆಜೋಳ ಬೆಳೆದು ಸಂಕಷ್ಟಕ್ಕೆ ಸಿಲುಕಿದ ರೈತರು
Follow us on

ದಾವಣಗೆರೆ, ಆ.16: ಜಿಲ್ಲೆಯಲ್ಲಿ ನಿರಂತರವಾಗಿ ಸುರಿದ ಮಳೆ ಇದ್ದಕ್ಕಿದ್ದಂತೆ ಕಾಣೆಯಾಗಿದೆ. ಮಳೆಗಾಗಿ ರೈತ ಆಗಸವನ್ನು ನೋಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಹೌದು, ದಾವಣಗೆರೆ(Davanagere) ಜಿಲ್ಲೆಯ ಹರಿಹರ ತಾಲೂಕಿನ ಭಾನುಹಳ್ಳಿಯ ರೈತರಿಗೆ ಮಳೆ ಕೈ ಕೊಟ್ಟಿದ್ದರಿಂದ ಸಾಲಸೋಲ ಮಾಡಿ 12 ಸಾವಿರ ಎಕರೆಯಲ್ಲಿ ಬೆಳೆದಿದ್ದ ಮೆಕ್ಕೆಜೋಳ(Maize) ಬೆಳೆ ನೆಲಕಚ್ಚಿದೆ. ಇಷ್ಟೊತ್ತಿಗಾಗಲೇ ಹಚ್ಚಹಸಿರಿನಿಂದ ಕಂಗೊಳಿಸಬೇಕಾಗಿದ್ದ ಮೆಕ್ಕೆಜೋಳ ಬೆಳೆ ಸಂಪೂರ್ಣವಾಗಿ ಒಣಗಿ ಹಳದಿ ಬಣ್ಣಕ್ಕೆ ತಿರುಗಿದೆ.

ಪತ್ನಿಯ ಬಂಗಾರ ಅಡವಿಟ್ಟು ಬೆಳೆದಿದ್ದ ಬೆಳೆ; ಟ್ರ್ಯಾಕ್ಟರ್ ಮೂಲಕ ನಾಶ

ಇನ್ನು ಒಂದು ಎಕರೆ ಬೆಳೆ ಬೆಳೆಯಲು ಕೂಡ ರೈತ ಗುರುಮೂರ್ತಿ ಎಂಬುವವರ ಬಳಿ ಹಣ ಇಲ್ಲವಾಗಿತ್ತು. ಹೀಗಾಗಿ ಮಡದಿಯ ಬಂಗಾರವನ್ನು ಅಡವಿಟ್ಟು, ಸಾಲಸೋಲ ಮಾಡುವ ಮೂಲಕ ಎಕರೆಗೆ 25 ಸಾವಿರದಂತೆ ಹಣ ವ್ಯಯ ಮಾಡಿ ಕಷ್ಟಪಟ್ಟು ಬೆಳೆ ಹಾಕಿದ್ದರು, ಇನ್ನೇನು ಮೆಕ್ಕಜೋಳ ಬೆಳೆಯ ಫಸಲು ಕೈ ಸೇರುವ ಹಂತದಲ್ಲಿ ಮಳೆ ಕೈಕೊಟ್ಟಿದೆ. ಇದರಿಂದ ಇಡೀ ಮೆಕ್ಕೆಜೋಳ ಬೆಳೆ ನೆಲಕಚ್ಚಿದ್ದರಿಂದ ರೈತರು ದಿಕ್ಕುತೋಚದೆ ಟ್ರ್ಯಾಕ್ಟರ್ ಮೂಲಕ ನಾಶ ಮಾಡಿದ ಘಟನೆ ನಡೆದಿದೆ.

ಇದನ್ನೂ ಓದಿ:ಬಿತ್ತಿದ್ದು ಆರು ಕೆಜಿ ಬೀಜ, ಬೆಳೆದಿದ್ದು 31 ಕ್ವಿಂಟಾಲ್ ಮೆಕ್ಕೆಜೋಳ; ಅಡಿಕೆ ತೋಟದಲ್ಲಿ ಬಂಪರ್ ಬೆಳೆಯಾಗಿ ಬಂದ ಮೆಕ್ಕೆಜೋಳ, ರೈತನ ವಿಶಿಷ್ಟ ಸಾಧನೆ

ರೈತರ ಮನವಿ

ಒಂದು ಎಕರೆಗೆ 25 ಸಾವಿರ ಹಣವನ್ನು ಖರ್ಚು ಮಾಡಲಾಗಿದೆ. ಇನ್ನು ಉಳುಮೆ ಮಾಡಲು 25 ಕ್ಕೂ ಹೆಚ್ಚು ಲೀಟರ್ ಡಿಸೇಲ್ ಕೂಡ ಖರ್ಚಾಗಿದೆ. ಇದೀಗ ಬೆಳೆ ನಾಶದಿಂದ ನಮ್ಮ ಪರಿಸ್ಥಿತಿ ಅದೋಗತಿಯಾಗಿದ್ದು, ಸಾಲಸೋಲ ಮಾಡಿ ಉಳುಮೆ ಮಾಡಿ ಬೆಳೆ ಬೆಳೆದಿದ್ದೇವೆ. ದಯವಿಟ್ಟು ಇತ್ತ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕೆಂದು ರೈತರು ಮನವಿ ಮಾಡಿದರು. ಇದರ ಜೊತೆಗೆ ಲಾವಣಿ ಪಡೆದಿರುವ ರೈತ ರಾಜು ಎಂಬುವವರು ಮಾತನಾಡಿ ‘ಜಮೀನನ್ನು ಮಾಲೀಕರಿಂದ ಎಕರೆಗೆ 07 ಸಾವಿರ ಹಣ ನೀಡಿ ಲಾವಣಿ ಮಾಡುವವರು ಕೂಡ ಒಂದು ರೀತಿಯ ಸಮಸ್ಯೆಯನ್ನು ಅನುಭವಿಸುವ ಪರಿಸ್ಥಿತಿ ನಿರ್ಮಾಣ ಆಗಿದೆ. ಸಾಕಷ್ಟು ರೈತರು ಸಾಲ ಮಾಡಿ ಜಮೀನಿನ ಮಾಲೀಕರ ಬಳಿ ಲಾವಣಿ ಮಾಡುತ್ತಿದ್ದರಿಂದ ಮೆಕ್ಕೆಜೋಳ ಬೆಳೆ ಬೆಳೆದು ನಷ್ಟ ಅನುಭವಿಸುವ ಪರಿಸ್ಥಿತಿ ನಿರ್ಮಾಣ ಆಗಿದೆ.

ನಾಲ್ಕು ವರ್ಷಗಳಿಂದ ಸಿಗದ ಬೆಳೆ ನಷ್ಟ ಪರಿಹಾರ

ಬೆಳೆ ವಿಮೆ ಸಂದಾಯ ಮಾಡುತ್ತಿರುವ ರೈತರಿಗೆ ಕಳೆದ ನಾಲ್ಕು ವರ್ಷಗಳಿಂದ ಬೆಳೆ ನಷ್ಟ ಪರಿಹಾರ ಮಾತ್ರ ಕೈ ಸೇರಿಲ್ಲ ಎಂದು ಖದ್ದಾಗಿ ರೈತರೇ ಸರ್ಕಾರದ ವಿರುದ್ಧ ದೂರಿದ್ದರು. 12 ಸಾವಿರ ಎಕರೆ ಮೆಕ್ಕೆಜೋಳ ನೆಲಕಚ್ಚಿದ್ದರೂ ಕೂಡ ಸಂಬಂಧ ಪಟ್ಟ ಅಧಿಕಾರಿಗಳು ಮಾತ್ರ ಭಾನುಹಳ್ಳಿಯತ್ತ ಗಮನಹರಿಸಿಲ್ಲ ಎಂದು ರೈತರು ಆರೋಪಿಸಿ ತಕ್ಷಣ ಅಧಿಕಾರಿಗಳು ಜಮೀನುಗಳಿಗೆ ಭೇಟಿ ನೀಡಿ ಬೆಳೆ ಪರಿಹಾರವನ್ನು ಕಲ್ಪಿಸಿಕೊಡಬೇಕೆಂದು ರಾಜ್ಯ ಸರ್ಕಾರಕ್ಕೆ ರೈತರು ಒತ್ತಾಯಿಸಿದರು.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ