ಬಿತ್ತಿದ್ದು ಆರು ಕೆಜಿ ಬೀಜ, ಬೆಳೆದಿದ್ದು 31 ಕ್ವಿಂಟಾಲ್ ಮೆಕ್ಕೆಜೋಳ; ಅಡಿಕೆ ತೋಟದಲ್ಲಿ ಬಂಪರ್ ಬೆಳೆಯಾಗಿ ಬಂದ ಮೆಕ್ಕೆಜೋಳ, ರೈತನ ವಿಶಿಷ್ಟ ಸಾಧನೆ

ಬಿತ್ತಿದ್ದು ಆರು ಕೆಜಿ ಬೀಜ, ಬೆಳೆದಿದ್ದು 31 ಕ್ವಿಂಟಾಲ್ ಮೆಕ್ಕೆಜೋಳ; ಅಡಿಕೆ ತೋಟದಲ್ಲಿ ಬಂಪರ್ ಬೆಳೆಯಾಗಿ ಬಂದ ಮೆಕ್ಕೆಜೋಳ, ರೈತನ ವಿಶಿಷ್ಟ ಸಾಧನೆ
ಬಿತ್ತಿದ್ದು ಆರು ಕೆಜಿ ಬೀಜ, ಬೆಳೆದಿದ್ದು 31 ಕ್ವಿಂಟಾಲ್ ಮೆಕ್ಕೆಜೋಳ

ಜಿಲ್ಲೆಯ ಚನ್ನಗಿರಿ ತಾಲೂಕಿನ ಬಸವಾಪಟ್ಟಣದ ಬಳಿ ಇರುವ ಹರೋಸಾಗರ ಗ್ರಾಮದ ವಿ. ಲಿಂಗರಾಜ್ ಇಂತಹ ಸಾಧನೆ ಮಾಡಿದ ರೈತ. ನಿರಂತರ ಪರಿಶ್ರಮ. ವಿಭಿನ್ನ ಕೃಷಿಯಿಂದ ಹೆಚ್ಚು ಚರ್ಚೆಯಲ್ಲಿ ಇರುವ ಲಿಂಗರಾಜ್ ಅವರು ಅಡಿಕೆ ತೋಟ ಮಾಡಿದ್ದಾರೆ.

TV9kannada Web Team

| Edited By: Ayesha Banu

Jan 09, 2022 | 12:07 PM

ದಾವಣಗೆರೆ: ಒಂದು ಕಾಲದಲ್ಲಿ ದಾವಣಗೆರೆ ಜಿಲ್ಲೆಯನ್ನ ಮೆಕ್ಕೆಜೋಳದ ಮೆಕ್ಕಾ ಎಂದು ಕರೆಯುತ್ತಿದ್ದರು. ರಾಜ್ಯದಲ್ಲಿಯೇ ಅತಿ ಹೆಚ್ಚು ಮೆಕ್ಕೆಜೋಳ ಬೆಳೆಯುವ ಪ್ರಮುಖ ಮೂರು ಜಿಲ್ಲೆಗಳಲ್ಲಿ ದಾವಣಗೆರೆ ಕೂಡಾ ಒಂದು. ಇತ್ತೀಚಿಗೆ ನೀರಾವರಿ ಹೆಚ್ಚಾಗಿದ್ದರಿಂದ ಅಡಿಕೆ ತೆಂಗು ಭತ್ತದ ಕ್ಷೇತ್ರ ಹೆಚ್ಚಾಗುತ್ತಿದೆ. ಆದ್ರೆ ಮೆಕ್ಕೆಜೋಳದ ಜೊತೆಗಿರುವ ರೈತನ ಸಂಬಂಧ ಮಾತ್ರ ಕಡಿಮೆ ಆಗಿಲ್ಲ. ಇಲ್ಲೊಬ್ಬ ರೈತ ತನ್ನ ಅಡಿಕೆ ತೋಟದಲ್ಲಿ ಉಪ ಬೆಳೆಯಾಗಿ ಒಂದು ಎಕರೆ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆದಿದ್ದ. ಒಂದೇ ಎಕರೆ ಪ್ರದೇಶದಲ್ಲಿ ಬರೋಬರಿ 31 ಕ್ವಿಂಟಾಲ್ ಮೆಕ್ಕೆಜೋಳ ಬೆಳೆದು ಅಚ್ಚರಿ ಮೂಡಿಸಿದ್ದಾನೆ. ಅದು ಅಡಿಕೆ ತೋಟದಲ್ಲಿನ ಉಪ ಬೆಳೆಯಾಗಿ.

ಜಿಲ್ಲೆಯ ಚನ್ನಗಿರಿ ತಾಲೂಕಿನ ಬಸವಾಪಟ್ಟಣದ ಬಳಿ ಇರುವ ಹರೋಸಾಗರ ಗ್ರಾಮದ ವಿ. ಲಿಂಗರಾಜ್ ಇಂತಹ ಸಾಧನೆ ಮಾಡಿದ ರೈತ. ನಿರಂತರ ಪರಿಶ್ರಮ. ವಿಭಿನ್ನ ಕೃಷಿಯಿಂದ ಹೆಚ್ಚು ಚರ್ಚೆಯಲ್ಲಿ ಇರುವ ಲಿಂಗರಾಜ್ ಅವರು ಅಡಿಕೆ ತೋಟ ಮಾಡಿದ್ದಾರೆ. ಅಡಿಕೆ ಮರಳು ಎರಡು ವರ್ಷಗಳಿಂದ ಬೆಳೆಯುತ್ತಿವೆ. ಹೀಗೆ ಅಡಿಕೆ ಜೊತೆಗೆ ಬಹುತೇಕ ರೈತರು ಮೆಣಸು, ಎಲೆಬಳ್ಳಿ ಸೇರಿದಂತೆ ಹತ್ತಾರು ಬೆಳೆಗಳನ್ನ ಬೆಳೆಯುತ್ತಾರೆ. ಅದೇ ರೀತಿ ಲಿಂಗರಾಜ್ ಸಹ ಅಡಿಕೆ ತೋಟದಲ್ಲಿ ಆರು ಕೆಜಿ ಮೆಕ್ಕೆಜೋಳದ ಬೀಜತಂದು ಹಾಕಿದ್ದ. ನಂತರ ಅಡಿಕೆ ಜೊತೆಗೆ ಮೆಕ್ಕೆಜೋಳಕ್ಕೆ ಬೀಜಗೊಬ್ಬರ ಹಾಕಿದ್ದ. ಅದು ಬರೋಬರಿ 31 ಕ್ವಿಂಟಾಲ್ ಇಳುವಳಿ ಬಂದಿದೆ.

ಈ ರೀತಿ 31 ಕ್ವಿಂಟಾಲ್ ಇಳುವಳಿ ಬಂದಿದ್ದು ವಿರಳ. ಇದೊಂದು ಸಾಧನೆ ಕೂಡಾ. ಮಾಮೂಲಾಗಿ ಮೆಕ್ಕೆಜೋಳ ಮುಖ್ಯ ಬೆಳೆಯಾಗಿಯೇ ಬೆಳೆದರು ಸಹ ಎಕರೆಗೆ 15 ರಿಂದ 20 ಕ್ವಿಂಟಾಲ್ ಇಳುವರಿ ಬರುತ್ತದೆ. ಆದ್ರೆ ಇಲ್ಲಿ ರೈತ ಲಿಂಗರಾಜ್ ಅವರು ಉಪ ಬೆಳೆಯಾಗಿ ಬೆಳೆದಿದ್ದಾರೆ. ಇಂತಹದರಲ್ಲಿ 31 ಕ್ವಿಂಟಾಲ್ ಇಳುವರಿ ಬಂದಿದ್ದು ಮಾತ್ರ ಒಂದು ರೀತಿ ಸಾಧನೆ. ಇತರ ರೈತರಿಗೂ ಮಾದರಿಯಾಗಿದೆ. ಹೀಗೆ ರೈತನ ಜಮೀನಿಗೆ ಕೃಷಿ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಇತರ ರೈತರನ್ನ ಕರೆತಂದು ಇಲ್ಲಿನ ಬೆಳೆಯುವ ವಿಧಾನದ ಬಗ್ಗೆ ಮಾಹಿತಿ ಕೂಡಾ ರೈತನಿಂದ ಸಂಗ್ರಹಿಸಿದ್ದರು.

ರೈತ ಲಿಂಗರಾಜ್ ಅವರು ಉಪ ಬೆಳೆಯಾಗಿ ನಿರೀಕ್ಷೆಗೂ ಮೀರಿ ಇಲ್ಲಿ ಇಳುವರಿ ತೆಗೆದಿದ್ದಾರೆ. ಮೆಕ್ಕೆಜೋಳವನ್ನೆ ಮುಖ್ಯ ಬೆಳೆಯಾಗಿ ಬೆಳೆಯುವ ರೈತರಿಗೆ ಇದು ಮಾದರಿ ಎಂದು ಬಸವಾಪಟ್ಟಣ ಕೃಷಿ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಡಾ.ಡಿ.ಎಂ.ರಂಗಸ್ವಾಮಿ ಅವರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ವರದಿ: ಬಸವರಾಜ ದೊಡ್ಮನಿ, ಟಿವಿ9 ದಾವಣಗೆರೆ

farmer corn

ಅಡಿಕೆ ತೋಟದಲ್ಲಿ ಬಂಪರ್ ಬೆಳೆಯಾಗಿ ಬಂದ ಮೆಕ್ಕೆಜೋಳ

farmer corn

ರೈತ ವಿ. ಲಿಂಗರಾಜ್

ಇದನ್ನೂ ಓದಿ: NASA: ವಿಶ್ವದ ರಹಸ್ಯ ಅರಿಯುವ ಪ್ರಯತ್ನದಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟ ನಾಸಾ; ಇಲ್ಲಿದೆ ಕುತೂಹಲಕಾರಿ ಮಾಹಿತಿ

Follow us on

Related Stories

Most Read Stories

Click on your DTH Provider to Add TV9 Kannada