AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

NASA: ವಿಶ್ವದ ರಹಸ್ಯ ಅರಿಯುವ ಪ್ರಯತ್ನದಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟ ನಾಸಾ; ಇಲ್ಲಿದೆ ಕುತೂಹಲಕಾರಿ ಮಾಹಿತಿ

James Webb space telescope: ನಾಸಾದ ಬಹುನಿರೀಕ್ಷಿತ ಯೋಜನೆ ‘ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್​​’ನ ಮಿರರ್​ಗಳನ್ನು ಜೋಡಿಸಲಾಗಿದ್ದು, ದೂರದರ್ಶಕ ಸಿದ್ಧಗೊಂಡಿದೆ. ಈ ಯೋಜನೆಯ ಕುರಿತ ಮಾಹಿತಿ ಇಲ್ಲಿದೆ.

NASA: ವಿಶ್ವದ ರಹಸ್ಯ ಅರಿಯುವ ಪ್ರಯತ್ನದಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟ ನಾಸಾ; ಇಲ್ಲಿದೆ ಕುತೂಹಲಕಾರಿ ಮಾಹಿತಿ
ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್
TV9 Web
| Updated By: shivaprasad.hs|

Updated on: Jan 09, 2022 | 11:43 AM

Share

ಬಾಹ್ಯಾಕಾಶ ಅಧ್ಯಯನದಲ್ಲಿ ಮಹತ್ವದ ಪಾತ್ರ ನಿರ್ವಹಿಸಲಿರುವ ನಾಸಾದ ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್​ನ ಕನ್ನಡಿಗಳನ್ನು (ಮಿರರ್) ಜೋಡಿಸಲಾಗಿದ್ದು ಅಂತಿಮ ರೂಪ ಪಡೆದುಕೊಂಡಿದೆ. ಡಿಸೆಂಬರ್ 25ರಂದು ಇದನ್ನು ಉಡಾವಣೆ ಮಾಡಲಾಗಿತ್ತು. ಎರಡು ವಾರಗಳ ತರುವಾಯು ಇದೀಗ ಮಹತ್ವದ ಮೈಲಿಗಲ್ಲನ್ನು ತಲುಪಿರುವ ನಾಸಾ ಅದರ ಅಂತಿಮ ಜೋಡಣೆಯನ್ನು ಪೂರ್ಣಗೊಳಿಸಿದ್ದು, ಸಂಪೂರ್ಣವಾಗಿ ನಿಯೋಜಿಸಿದೆ. ಈ ಕುರಿತು ನಾಸಾ ಮಾಹಿತಿ ನೀಡಿದ್ದು, ಸಂತಸ ಹಂಚಿಕೊಂಡಿದೆ. ‘‘ಎರಡು ವಾರಗಳ ನಂತರ ಯಶಸ್ವಿಯಾಗಿ ಟೆಲಿಸ್ಕೋಪ್​ನ ಕನ್ನಡಿಗಳನ್ನು (ಮಿರರ್) ಕೂರಿಸಲಾಗಿದೆ. ಈ ಮೂಲಕ ಟೆಲಿಸ್ಕೋಪ್ ಸಂಪೂರ್ಣ ಸಿದ್ಧವಾಗಿದೆ’’ ಎಂದು ಹೇಳಿದೆ.

ದಕ್ಷಿಣ ಅಮೇರಿಕಾದ ಫ್ರೆಂಚ್ ಗಯಾನಾದಿಂದ ಈ ದೂರದರ್ಶಕ (ಟೆಲಿಸ್ಕೋಪ್) ಹೊತ್ತ ರಾಕೆಟ್ ಡಿಸೆಂಬರ್ 25ರಂದು ಪ್ರಯಾಣಿಸಿತ್ತು. ರಾಕೆಟ್ ಕೋನ್ ಆಕಾರದಲ್ಲಿ ಇದ್ದಿದ್ದರಿಂದ ಅತ್ಯಂತ ಶಕ್ತಿಶಾಲಿಯಾದ ದೊಡ್ಡ ಟೆಲಿಸ್ಕೋಪ್​ಅನ್ನು ಪೂರ್ಣಪ್ರಮಾಣದಲ್ಲಿ ಕೂರಿಸಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ಅದನ್ನು ಮಡಿಸಿ (ಫೋಲ್ಡ್) ಕಳುಹಿಸಲಾಗಿತ್ತು. ಇದೀಗ ಎರಡು ವಾರಗಳ ಪ್ರಯತ್ನದ ನಂತರ ಟೆಲಿಸ್ಕೋಪ್​ ಸಿದ್ಧಗೊಂಡಿದೆ. ರಾಕೆಟ್ ಸದ್ಯ ಅದರ ಅಂತಿಮ ಕಕ್ಷೆಯತ್ತ ಪ್ರಯಾಣಿಸುತ್ತಿದ್ದು, ಅದು ಸುಮಾರು 1.5 ಮಿಲಿಯನ್ ಕಿಲೋಮೀಟರ್ ದೂರವಿದೆ.

ಈ ದೂರದರ್ಶಕದ ಮಹತ್ವವೇನು? ಇನ್ಫ್ರಾರೆಡ್ ಟೆಕ್ನಾಲಜಿ ಮೂಲಕ ಗ್ಯಾಲಕ್ಸಿಯ ಮೊದಲ ನಕ್ಷತ್ರಗಳನ್ನು ನೋಡಲು ಈ ಟೆಲಿಸ್ಕೋಪ್​ನಿಂದ ಸಾಧ್ಯವಾಗಲಿದೆ. ಅಂದರೆ 13.5 ಬಿಲಿಯನ್ ವರ್ಷಗಳ ಹಿಂದೆ ತಯಾರಾದ ನಕ್ಷತ್ರಗಳನ್ನು ನೋಡುತ್ತಾ, ವಿಶ್ವದ ಸೃಷ್ಟಿಯ ರಹಸ್ಯವನ್ನು ಅರಿಯಲು ಇದು ಸಹಾಯಕವಾಗಲಿದೆ. ಬಿಗ್ ಬ್ಯಾಂಗ್ ಸಂದರ್ಭದಲ್ಲಿ ರೂಪುಗೊಂಡ ಗ್ಯಾಲಕ್ಸಿಗಳು, ನಕ್ಷತ್ರದ ಮೂಲಕ ಇದುವರೆಗೆ ತಿಳಿಯದ ಸೃಷ್ಟಿಯ ರಹಸ್ಯ ಇದರಿಂದ ಅರಿಯಬಹುದು ಎನ್ನಲಾಗಿದೆ. ಇಷ್ಟೇ ಅಲ್ಲದೇ ಸೌರವ್ಯೂಹದಾಚೆ ಇರುವ ನಕ್ಷತ್ರಗಳ, ಗ್ರಹಗಳನ್ನು ನೋಡಲು ಹಾಗೂ ಅಧ್ಯಯನ ಮಾಡಲು ಇದರಿಂದ ಸಾಧ್ಯವಾಗಲಿದೆ. ಇದುವರೆಗೆ ಈ ಮಾದರಿಯ ಯಾಔಉದೇ ಟೆಲಿಸ್ಕೋಪ್ ಲಭ್ಯವಿರಲಿಲ್ಲ. ಆದ್ದರಿಂದ ಎಂದೂ ಕಾಣಿಸಿಕೊಳ್ಳದ ಹೊಸ ಜಾಗಗಳ ಚಿತ್ರಗಳನ್ನು ಈ ಟೆಲಿಸ್ಕೋಪ್ ಮೂಲಕ ಸೆರೆಹಿಡಿಯಬಹುದು. ಆದ್ದರಿಂದ ಈ ಯೋಜನೆ ಬಹಳ ಮಹತ್ವದ್ದು ಮತ್ತು ಕುತೂಹಲದ್ದೆನಿಸಿದೆ.

ಈ ಟೆಲಿಸ್ಕೋಪ್ ಕಾರ್ಯ ನಿರ್ವಹಿಸುವುದು ಎಂದಿನಿಂದ? ಬಹಳ ಕುತೂಹಲ ಕೆರಳಿಸಿರುವ ಈ ವೆಬ್ ಸ್ಪೇಸ್ ಟೆಲಿಸ್ಕೋಪ್ ಕಾರ್ಯನಿರ್ವಹಿಸಲು ಸಮಯಾವಕಾಶ ಬೇಕಾಗಲಿದೆ. ನಾವು ಈ ಹಾದಿಯಲ್ಲಿ ಇನ್ನೂ ಬಹಳ ದೂರ ಸಾಗಬೇಕಿದೆ ಎಂದು ನಾಸಾ ಹೇಳಿದೆ. 2022ರ ಜೂನ್​ನಲ್ಲಿ ಈ ದೂರದರ್ಶಕ ಮೊದಲ ಚಿತ್ರವನ್ನು ಸೆರೆಹಿಡಿದು ಕಳುಹಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ:

ಈ ಗ್ರಹದಲ್ಲಿ ಪ್ರತಿ 16 ಗಂಟೆಗೊಮ್ಮೆ ಹೊಸ ವರ್ಷ!; ವಿಜ್ಞಾನಿಗಳು ಕಂಡುಹಿಡಿದ ಹೊಸ ಗ್ರಹದ ಮಾಹಿತಿ ಇಲ್ಲಿದೆ

Virat Kohli: ಒಂದು ಇನ್​ಸ್ಟಾಗ್ರಾಮ್ ಪೋಸ್ಟ್​ಗೆ ವಿರಾಟ್ ಕೊಹ್ಲಿ ಪಡೆಯುವ ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರಾ

ಹತ್ತು ನಿಮಿಷಗಳಲ್ಲಿ ಅನುಮತಿ ತರುತ್ತೇನೆಂದವರು ಯಾಕೆ ಸುಮ್ಮನಿದ್ದಾರೆ?ಸುರೇಶ್
ಹತ್ತು ನಿಮಿಷಗಳಲ್ಲಿ ಅನುಮತಿ ತರುತ್ತೇನೆಂದವರು ಯಾಕೆ ಸುಮ್ಮನಿದ್ದಾರೆ?ಸುರೇಶ್
ನನ್ನದು ಶಿಸ್ತು ಬದ್ಧ ಬದುಕು, ಊಟದಲ್ಲಿ ಬಹಳ ಕಟ್ಟುನಿಟ್ಟು: ಭಾವನಾ
ನನ್ನದು ಶಿಸ್ತು ಬದ್ಧ ಬದುಕು, ಊಟದಲ್ಲಿ ಬಹಳ ಕಟ್ಟುನಿಟ್ಟು: ಭಾವನಾ
ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಕುಸಿತ
ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಕುಸಿತ
ಕುಮಾರಸ್ವಾಮಿ ಕುರಿತ ಪ್ರಶ್ನೆಯನ್ನು ಶಿವಕುಮಾರ್ ಅಸಡ್ಡೆ ಮಾಡಿದರು!
ಕುಮಾರಸ್ವಾಮಿ ಕುರಿತ ಪ್ರಶ್ನೆಯನ್ನು ಶಿವಕುಮಾರ್ ಅಸಡ್ಡೆ ಮಾಡಿದರು!
ವಿಡಿಯೋ: ಪೊಲೀಸರೆದುರೇ ಗಾಳಿಯಲ್ಲಿ ಗುಂಡು ಹಾರಿಸಿದ ರಮೇಶ್ ಜಾರಕಿಹೊಳಿ ಪುತ್ರ
ವಿಡಿಯೋ: ಪೊಲೀಸರೆದುರೇ ಗಾಳಿಯಲ್ಲಿ ಗುಂಡು ಹಾರಿಸಿದ ರಮೇಶ್ ಜಾರಕಿಹೊಳಿ ಪುತ್ರ
ಮದುವೆಯಾಗದೆ ತಾಯಿ ಆಗಲಿರುವ ಭಾವನ, ನಿರ್ಧಾರದ ಬಗ್ಗೆ ಮೊದಲ ಪ್ರತಿಕ್ರಿಯೆ
ಮದುವೆಯಾಗದೆ ತಾಯಿ ಆಗಲಿರುವ ಭಾವನ, ನಿರ್ಧಾರದ ಬಗ್ಗೆ ಮೊದಲ ಪ್ರತಿಕ್ರಿಯೆ
ರಸ್ತೆಯಲ್ಲಿ ನಿಂತಿದ್ದವನಿಗೆ ಅಟ್ಟಾಡಿಸಿಕೊಂಡು ಹಲ್ಲೆ: ವಿಡಿಯೋ ನೋಡಿ
ರಸ್ತೆಯಲ್ಲಿ ನಿಂತಿದ್ದವನಿಗೆ ಅಟ್ಟಾಡಿಸಿಕೊಂಡು ಹಲ್ಲೆ: ವಿಡಿಯೋ ನೋಡಿ
ಈಗಲೂ ಮಾತಿಗೆ ಬದ್ಧ; ಕೇಂದ್ರದಿಂದ ಅನುಮೋದನೆ ಕೊಡಿಸಲು ಸಿದ್ಧ: ಹೆಚ್ಡಿಕೆ
ಈಗಲೂ ಮಾತಿಗೆ ಬದ್ಧ; ಕೇಂದ್ರದಿಂದ ಅನುಮೋದನೆ ಕೊಡಿಸಲು ಸಿದ್ಧ: ಹೆಚ್ಡಿಕೆ
ಕೊಲೆ ಆರೋಪಿ ಮಹೇಶ್​ಗೆ ಗರ್ಭಧರಿಸಿದ್ದ ಹೆಂಡತಿ ಶುಭಾ ಮೇಲೆ ಸದಾ ಅನುಮಾನ
ಕೊಲೆ ಆರೋಪಿ ಮಹೇಶ್​ಗೆ ಗರ್ಭಧರಿಸಿದ್ದ ಹೆಂಡತಿ ಶುಭಾ ಮೇಲೆ ಸದಾ ಅನುಮಾನ
‘ಮ್ಯಾಕ್ಸ್ 2’ ಸಿನಿಮಾ ಯಾವಾಗ? ಅಪ್​ಡೇಟ್ ಕೊಟ್ಟ ಸುದೀಪ್
‘ಮ್ಯಾಕ್ಸ್ 2’ ಸಿನಿಮಾ ಯಾವಾಗ? ಅಪ್​ಡೇಟ್ ಕೊಟ್ಟ ಸುದೀಪ್