Galaxy S21 FE 5G: ಸ್ಯಾಮ್​ಸಂಗ್​ನಿಂದ ಸರ್​ಪ್ರೈಸ್: ನಾಳೆವೇ ಭಾರತದಲ್ಲಿ ರಿಲೀಸ್ ಆಗಲಿದೆ ಬಹುನಿರೀಕ್ಷಿತ ಗ್ಯಾಲಕ್ಸಿ S21 FE ಫೋನ್

Samsung Galaxy S21 FE 5G India launch: ಸ್ಯಾಮ್‌ಸಂಗ್‌ ಗ್ಯಾಲಕ್ಸಿ S21 FE ಸ್ಮಾರ್ಟ್‌ಫೋನ್‌ ಜಾಗತಿಕವಾಗಿ USD 699 ಗಳಿಗೆ ಲಭ್ಯವಿದೆ. ಅಂದರೆ ಭಾರತದಲ್ಲಿ ಇದರ ಬೆಲೆ ಅಂದಾಜು 48,000 ರೂ. ಯಿಂದ 49,000 ರೂ. ಇರಬಹುದು ಎನ್ನಲಾಗಿದೆ.

Galaxy S21 FE 5G: ಸ್ಯಾಮ್​ಸಂಗ್​ನಿಂದ ಸರ್​ಪ್ರೈಸ್: ನಾಳೆವೇ ಭಾರತದಲ್ಲಿ ರಿಲೀಸ್ ಆಗಲಿದೆ ಬಹುನಿರೀಕ್ಷಿತ ಗ್ಯಾಲಕ್ಸಿ S21 FE ಫೋನ್
Samsung Galaxy S21 FE 5G
Follow us
TV9 Web
| Updated By: Vinay Bhat

Updated on: Jan 09, 2022 | 12:15 PM

ದಕ್ಷಿಣ ಕೊರಿಯಾದ ಪ್ರಸಿದ್ಧ ಟೆಕ್‌ ಕಂಪನಿ ಸ್ಯಾಮ್‌ಸಂಗ್‌ (Samsung) 2022ನೇ ವರ್ಷದ ಮೊದಲ ಸ್ಮಾರ್ಟ್​ಫೋನನ್ನು ಇತ್ತೀಚೆಗಷ್ಟೆ ವಿದೇಶದಲ್ಲಿ ಅನಾವರಣ ಮಾಡಿತ್ತು. ಬಹುನಿರೀಕ್ಷಿತ ಗ್ಯಾಲಕ್ಸಿ ಎಸ್​21 ಎಫ್​ಇ 5ಜಿ (Samsung Galaxy S21 FE 5G) ಸ್ಮಾರ್ಟ್‌ಫೋನ್‌ ಕಳೆದ ವಾರ ಯುಎಸ್, ಯುಕೆ ಮತ್ತು ಯರೋಪ್​ನಲ್ಲಿ ಬಿಡುಗಡೆ ಆಗಿತ್ತು. ಇದೀಗ ಸದ್ದಿಲ್ಲದೆ ಭಾರತದಲ್ಲೂ ಈ ಫೋನ್ ಲಾಂಚ್ ಮಾಡಲು ಸ್ಯಾಮ್​ಸಂಗ್ ನಿರ್ಧಿಸಿದೆ. ಅಚ್ಚರಿ ಎಂಬಂತೆ ನಾಳೆಯೇ (ಜ. 10) ಗ್ಯಾಲಕ್ಸಿ S21 FE 5G ಸ್ಮಾರ್ಟ್‌ಫೋನ್‌ ಭಾರತದಲ್ಲಿ ಬಿಡುಗಡೆ ಆಲಿದೆ. ಅತ್ಯಂತ ಬಲಿಷ್ಠವಾದ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 888 SoC ಪ್ರೊಸೆಸರ್‌ (Qualcomm Snapdragon), ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌, 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಈ ಫೋನ್ ಹೊಂದಿದೆ.

ಬೆಲೆ ಎಷ್ಟು?:

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S21 FE ಸ್ಮಾರ್ಟ್‌ಫೋನ್‌ ಜಾಗತಿಕವಾಗಿ USD 699 ಗಳಿಗೆ ಲಭ್ಯವಿದೆ. ಅಂದರೆ ಭಾರತದಲ್ಲಿ ಇದರ ಬೆಲೆ ಅಂದಾಜು 48,000 ರೂ. ಯಿಂದ 49,000 ರೂ. ಇರಬಹುದು ಎನ್ನಲಾಗಿದೆ. ಇದು 6GB RAM ಮತ್ತು 128GB ಸ್ಟೋರೆಜ್, 8GB RAM ಮತ್ತು 128GB ಸ್ಟೋರೆಜ್ ಹಾಗೂ 8GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯದ ಮೂರು ವೇರಿಯೆಂಟ್‌ ಆಯ್ಕೆಗಳಲ್ಲಿ ಖರೀದಿಗೆ ಸಿಗಲಿದೆ. ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್​ನಲ್ಲಿ ಇದರ ಟೀಸರ್ ರಿಲೀಸ್ ಆಗದೆ.

ಏನು ವಿಶೇಷತೆ?:

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S21 FE 5G ಸ್ಮಾರ್ಟ್‌ಫೋನ್‌ 2340×1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.4-ಇಂಚಿನ AMOLED ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್‌ ಮತ್ತು 240Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಅನ್ನು ಬೆಂಬಲಿಸುತ್ತದೆ. ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 888 SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದೆ. ಇದು ಒನ್‌ ಯುಐ 4.0 ಆಧಾರಿತ ಆಂಡ್ರಾಯ್ಡ್‌ 12 ಔಟ್ ಆಫ್ ದಿ ಬಾಕ್ಸ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 6GB ಮತ್ತು 128GB, 8GB ಮತ್ತು 128GB, ಹಾಗೂ 8GB ಮತ್ತು 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯದ ಮೂರು ವೇರಿಯೆಂಟ್‌ ಆಯ್ಕೆಗಳನ್ನು ಪಡೆದುಕೊಂಡಿದೆ.

ಇನ್ನು ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 12MP ಸೆನ್ಸಾರ್‌ ಸಾಮರ್ಥ್ಯವನ್ನು ಹೊಂದಿದೆ. ಎರಡನೇ ಕ್ಯಾಮೆರಾ 12MP ಅಲ್ಟ್ರಾವೈಡ್‌ ಸೆನ್ಸಾರ್‌ ಅನ್ನು ಹೊಂದಿದೆ. ಇನ್ನು ಮೂರನೇ ಕ್ಯಾಮೆರಾ 8MP 3x ಟೆಲಿಫೋಟೋ ಸೆನ್ಸಾರ್‌ ಅನ್ನು ಒಳಗೊಂಡಿದೆ. ಇದಲ್ಲದೆ 32MP ಫಿಕ್ಸೆಡ್ ಫೋಕಸ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇನ್ನು ಕ್ಯಾಮೆರಾ ಬಂಪ್ ಅನ್ನು ಮ್ಯಾಟ್-ಫಿನಿಶ್ ಬ್ಯಾಕ್ ಪ್ಯಾನೆಲ್‌ಗೆ ಸಂಯೋಜಿಸಲಾಗಿದೆ. ಫ್ಲ್ಯಾಶ್ ಮಾಡ್ಯೂಲ್ ಅನ್ನು ಕ್ಯಾಮರಾ ಲೈಟ್‌ ಹೊರಗೆ ಇರಿಸಲಾಗಿದೆ.

ದೀರ್ಘ ಬಾಳಿಕೆಯ 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು 25W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 15W ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್‌, ಬ್ಲೂಟೂತ್‌, ವೈಫೈ, ಯುಎಸ್‌ಬಿ ಸಿ ಪೋರ್ಟ್‌ಗಳನ್ನು ಒಳಗೊಂಡಿದೆ.

Best Looking Smartphones: ನನಗೆ ಸ್ಟೈಲಿಶ್ ಸ್ಮಾರ್ಟ್​ಫೋನ್ ಬೇಕು ಎಂಬವರಿಗೆ ಇಲ್ಲಿದೆ ನೋಡಿ ಅತ್ಯುತ್ತಮ ಆಯ್ಕೆ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ