Karnataka Assembly Polls 2023: ದಾವಣಗೆರೆ ಜಿಲ್ಲೆಯಿಂದ 13 ರೌಡಿಶೀಟರ್​ಗಳ ಗಡಿಪಾರು

|

Updated on: Apr 09, 2023 | 12:19 PM

ರಾಜ್ಯ ವಿಧಾನಸಭೆ ಚುನಾವಣೆಗೆ ಈಗಾಗಲೇ ದಿನಾಂಕ ನಿಗದಿಯಾಗಿದೆ. ಅದರಂತೆ ಚುನಾವಣೆ ಸಮಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಈಗಾಗಲೇ ಸೂಕ್ತ ಕ್ರಮ‌ಕೈಗೊಳ್ಳಲಾಗಿದ್ದು, 13 ರೌಡಿಶೀಟರ್​ಗಳನ್ನ ಗಡಿಪಾರು ಮಾಡಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಆದೇಶ ಹೊರಡಿಸಿದ್ದಾರೆ.

Karnataka Assembly Polls 2023:  ದಾವಣಗೆರೆ ಜಿಲ್ಲೆಯಿಂದ 13 ರೌಡಿಶೀಟರ್​ಗಳ ಗಡಿಪಾರು
ದಾವಣಗೆರೆ ಎಸ್​ಪಿ
Follow us on

ದಾವಣಗೆರೆ: ರಾಜ್ಯ ವಿಧಾನಸಭೆ ಚುನಾವಣೆಗೆ ಈಗಾಗಲೇ ದಿನಾಂಕ ನಿಗದಿಯಾಗಿದೆ. ಅದರಂತೆ ಚುನಾವಣೆ ಸಮಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಈಗಾಗಲೇ ಸೂಕ್ತ ಕ್ರಮ‌ಕೈಗೊಳ್ಳಲಾಗಿದ್ದು, 13 ರೌಡಿಶೀಟರ್​ಗಳನ್ನ ಗಡಿಪಾರು ಮಾಡಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಆದೇಶ ಹೊರಡಿಸಿದ್ದಾರೆ. ಜೊತೆಗೆ 22 ರೌಡಿಶೀಟರ್​ಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗಿದ್ದು, ನಟೋರಿಯಸ್ ರೌಡಿ​ಗಳನ್ನು ಕರೆಸಿ ತಾಕೀತು ಮಾಡಲಾಗಿದೆ ಎಂದು ಹೇಳಿದ್ದಾರೆ.

ಗಡಿಪಾರು ಆದ ರೌಡಿಗಳು ಠಾಣೆಗೆ ಹೋಗಿ ಸಹಿ

ಹೌದು ಜಿಲ್ಲೆಯಿಂದ ಗಡಿಪಾರು ಆದ ರೌಡಿಗಳು ನಿಗದಿಪಡಿಸಿದ ಆಯಾ ಠಾಣೆಗೆ ಹೋಗಿ ಸಹಿ ಮಾಡಬೇಕು. ಠಾಣೆಗೆ ಹೋಗಿ ಸಹಿ ಮಾಡದಿದ್ರೆ ಜೈಲಿಗೆ ಕಳುಹಿಸಲಾಗುವುದು ಎಂದು ಖಡಕ್​ ಸೂಚನೆ ನೀಡಿದ್ದಾರೆ. ಜೊತೆಗೆ ಎಲ್ಲಾ ರೌಡಿಶೀಟರ್​ಗಳ ಬಗ್ಗೆ ಸೂಕ್ತ ಮಾಹಿತಿ ಸಂಗ್ರಹಿಸಲಾಗಿದ್ದು, ಯಾವುದೇ ಸಮಾಜ ಘಾತುಕ ಕಾರ್ಯಗಳಲ್ಲಿ ಅಥವಾ ಚುನಾವಣೆ ವೇಳೆ ಶಾಂತಿಗೆ ಬಂಗ ಬರುವ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಾರೆ ಎಂಬ ವಿಚಾರ ಗೊತ್ತಾದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಇದನ್ನೂ ಓದಿ:Karnataka Elections: ಮ್ಯಾಗಿ ಮಾದರಿಯಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಿದ ಕರ್ನಾಟಕ ಮುಖ್ಯ ಚುನಾವಣಾಧಿಕಾರಿ

ಜಾಹೀರಾತು ಪ್ರಕಟಿಸಲು ಚುನಾವಣಾ ಅಧಿಕಾರಿಗಳ ಪೂರ್ವಾನುಮತಿ ಕಡ್ಡಾಯ

ಚುನಾವಣೆ ವೇಳೆ ಮಾಧ್ಯಮಗಳು ಯಾವುದೇ ಜಾಹೀರಾತು ಪ್ರಕಟಿಸಬೇಕು ಎಂದರೂ ಕೂಡ ಚುನಾವಣಾ ಅಧಿಕಾರಿಗಳ ಪೂರ್ವಾನುಮತಿಯನ್ನ ಪಡೆಯಬೇಕು ತಪ್ಪಿದ್ದಲ್ಲಿ ಕ್ರಮ‌ಕೈಗೊಳ್ಳಲಾಗುವುದು ಎಂದು ದಾವಣಗೆರೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿ ಶಿವಾನಂದ ಕಾಪಶಿ ಎಚ್ಚರಿಕೆ ನೀಡಿದರು. ಮೇಲಾಗಿ ಒಂದೇ ಪಕ್ಷದ ಅಥವಾ ಒಂದೇ ವ್ಯಕ್ತಿಯ ಪರವಾಗಿ ಸುದ್ದಿ ಪ್ರಕಟಿಸುವುದು ನಿಷೇಧ. ಎಲ್ಲ ಪಕ್ಷದ ಅಭ್ಯರ್ಥಿಗಳಿಗೆ ಸಮಾನ ಅವಕಾಶ ನೀಡಬೇಕು ಎಂದರು.

ಚುನಾವಣಾಧಿಕಾರಿಗಳಿಂದ ಎಲ್ಲ ಸುದ್ದಿಗಳ ಮೇಲೆ ನಿಗಾ

ಹೌದು ಚುನಾವಣಾಧಿಕಾರಿಗಳಿಂದ ಎಲ್ಲ ಸುದ್ದಿಗಳ ಮೇಲೆ ನಿಗಾ ಇಡಲಾಗಿದೆ. ಯಾವುದೇ ಪತ್ರಿಕೆ ಅಥವಾ ವಿದ್ಯುನ್ಮಾನ ಮಾಧ್ಯಮಗಳು ಆದಷ್ಟು ಎಚ್ಚರಿಕೆಯಿಂದ ಸುದ್ದಿ ಪ್ರಕಟಿಸಬೇಕು. ಮೇಲಾಗಿ ಒಂದು ಸುದ್ದಿ ಒಂದೇ ರೀತಿ ಒಂದೇ ತಲೆ ಬರಹದಲ್ಲಿ ಬೇರೆ ಬೇರೆ ಮಾಧ್ಯಮಗಳಲ್ಲಿ ಬಂದರೂ ಅದನ್ನ ಗಮನಿಸಲಾಗುವುದು. ವರದಿಗಾರಿಕೆಯಲ್ಲಿ ಚುನಾವಣೆ ವೇಳೆ ಸಮತೋಲನ ಇರಲಿ ಎಂದು ಡಿಸಿ ಶಿವಾನಂದ ಕಾಪಶಿಯವರು ಹೇಳಿದರು.

ಇನ್ನಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ