ದಾವಣಗೆರೆಯ ದಾರುಣ ಘಟನೆ: ಆಂಬುಲೆನ್ಸ್​ನಲ್ಲಿ ಆಕ್ಸಿಜನ್ ಕೊರತೆಯಿಂದಾಗಿ ಕೊನೆಯುಸಿರೆಳೆದ ನವಜಾತ ಶಿಶು

| Updated By: ಡಾ. ಭಾಸ್ಕರ ಹೆಗಡೆ

Updated on: Apr 09, 2022 | 1:12 PM

Oxygen: ನಿನ್ನೆ ತಡರಾತ್ರಿ 2 ಗಂಟೆಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆ ಗರ್ಭಿಣಿ ಸ್ವಾತಿಯನ್ನು ಬಸವಪಟ್ಟಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಂಬಂಧಿಕರು ದಾಖಲಿಸಿದರು. ಇಂದು ಬೆಳಗ್ಗೆ 7 ಗಂಟೆಗೆ ಹೆರಿಗೆಯಾಗಿದ್ದು, ಮಗುವಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆ ಹೆಚ್ಚಿನ ಚಿಕಿತ್ಸೆಗಾಗಿ ಹೊನ್ನಾಳಿಗೆ ಕರೆದೊಯ್ಯಲು ಪೋಷಕರು ಮುಂದಾದರು. ಆದರೆ ಅಂಬುಲೆನ್ಸ್ ‌ನಲ್ಲಿ ಅಕ್ಸಿಜನ್ ಇರಲಿಲ್ಲ,

ದಾವಣಗೆರೆಯ ದಾರುಣ ಘಟನೆ: ಆಂಬುಲೆನ್ಸ್​ನಲ್ಲಿ ಆಕ್ಸಿಜನ್ ಕೊರತೆಯಿಂದಾಗಿ ಕೊನೆಯುಸಿರೆಳೆದ ನವಜಾತ ಶಿಶು
ದಾರುಣ: ದಾವಣಗೆರೆ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಆಂಬುಲೆನ್ಸ್​ನಲ್ಲಿಆಕ್ಸಿಜನ್ ಕೊರತೆಯಿಂದಾಗಿ ಕೊನೆಯುಸಿರೆಳೆದ ಅದಾಗತಾನೆ ಹುಟ್ಟಿದ್ದ ಮಗು
Follow us on

ದಾವಣಗೆರೆ: ರಾಜ್ಯದ ಗ್ರಾಮೀಣ ಭಾಗದಲ್ಲಿ ನಿನ್ನೆ ತಡರಾತ್ರಿ 2 ಗಂಟೆಗೆ ಮಹಿಳೆಯೊಬ್ಬರಿಗೆ ಹೆರಿಗೆಯಾಗಿದ್ದು, ನವಜಾತ ಶಿಶುವಿನಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಾಗ, ಆ ಮಗುವನ್ನು ಮತ್ತೊಮದು ಆಸ್ಪತ್ರೆ ಸಾಗಿಸುವಾಗ ಆಂಬುಲೆನ್ಸ್​ನಲ್ಲಿ ಆಕ್ಸಿಜನ್ ಕೊರತೆಯುಂಟಾಗಿದ್ದು (Lack of Oxygen in Ambulance), ಆ ನವಜಾತ ಶಿಶು (Neonatal Baby) ಸಾವಿಗೀಡಾಗಿರುವ ದಾರುಣ ಘಟನೆ ನಡೆದಿದೆ. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಬಸವಪಟ್ಟಣದಲ್ಲಿ ಈ ಘಟನೆ ನಡೆದಿದೆ. ಶೃಂಗಾರಬಾಬು ತಾಂಡಾದ ಹಾಲೇಶ್-ಸ್ವಾತಿ ದಂಪತಿಯ ಮೊದಲ ಮಗು ಆಂಬುಲೆನ್ಸ್​ನಲ್ಲಿಆಕ್ಸಿಜನ್ ಕೊರತೆಯಿಂದಾಗಿ ಕೊನೆಯುಸಿರೆಳೆದಿದೆ (Davanagere).

ನಿನ್ನೆ ತಡರಾತ್ರಿ 2 ಗಂಟೆಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆ ಗರ್ಭಿಣಿ ಸ್ವಾತಿಯನ್ನು ಬಸವಪಟ್ಟಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಂಬಂಧಿಕರು ದಾಖಲಿಸಿದರು. ಇಂದು ಬೆಳಗ್ಗೆ 7 ಗಂಟೆಗೆ ಹೆರಿಗೆಯಾಗಿದ್ದು, ಮಗುವಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆ ಹೆಚ್ಚಿನ ಚಿಕಿತ್ಸೆಗಾಗಿ ಹೊನ್ನಾಳಿಗೆ ಕರೆದೊಯ್ಯಲು ಪೋಷಕರು ಮುಂದಾದರು. ಆದರೆ ಅಂಬುಲೆನ್ಸ್ ‌ನಲ್ಲಿ ಅಕ್ಸಿಜನ್ ಇಲ್ಲ, ಬೇರೊಂದು ಅಂಬುಲೆನ್ಸ್ ದಾರಿ ಮಧ್ಯೆ ಬರುತ್ತದೆ ಎಂದು ಚಾಲಕ‌ ಕರೆದೊಯ್ದಿದ್ದಾನೆ. ಆದರೆ ಹೊನ್ನಾಳಿಗೆ ಹೋಗುವುದರೊಳಗೆ ಉಸಿರಾಟದ ತೊಂದರೆ ಬಿಗಡಾಯಿಸಿ, ಮಗು ಸಾವನ್ನಪ್ಪಿದೆ. ಇದರಿಂದ ರೊಚ್ಚಿಗೆದ್ದ ಪೋಷಕರು ಆಸ್ಪತ್ರೆಯ ಮುಂಭಾಗ ಪ್ರತಿಭಟನೆ ಮಾಡಿದರು. ಸ್ಥಳಕ್ಕೆ ಬಸವಪಟ್ಟಣ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು.

Also Read:
Ram Navami 2022: ಶ್ರೀ ರಾಮ ನವಮಿಯ ಆಧ್ಯಾತ್ಮಿಕ ಮಹತ್ವ, ಪೂಜಾ ಮುಹೂರ್ತ, ಆಯೋಧ್ಯೆಯ ಅರ್ಥವೂ ವಿವರಿಸಲಾಗಿದೆ

Also Read:
ಕೋಲಾರದಲ್ಲಿ ಶ್ರೀರಾಮ ಶೋಭಾಯಾತ್ರೆ ಮೇಲೆ ಕಲ್ಲು ತೂರಾಟ ಪ್ರಕರಣ; ಮೂರು ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಆದೇಶ

Published On - 1:07 pm, Sat, 9 April 22