ಕೌಟುಂಬಿಕ ಕಲಹ: ಟಿಕ್ ​ಟಾಕ್​ನಲ್ಲಿ ವಿಡಿಯೋ ಮಾಡಿ ವ್ಯಕ್ತಿ ಆತ್ಮಹತ್ಯೆ

|

Updated on: Feb 07, 2020 | 2:03 PM

ದಾವಣಗೆರೆ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಟಿಕ್ ಟಾಕ್​ನಲ್ಲಿ ವಿಡಿಯೋ ಮಾಡಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಮಾಗನಹಳ್ಳಿ ಗ್ರಾಮದಲ್ಲಿ ನಡೆದಿದೆ. ನೇಣು ಬಿಗಿದುಕೊಂಡು ನಾಗರಾಜ್(34) ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೊದಲು ಟಿಕ್​ ಟಾಕ್​ನಲ್ಲಿ ನೇಣು ಹಾಕಿಕೊಳ್ಳುವುದನ್ನು ವಿಡಿಯೋ ಮಾಡಿದ್ದಾನೆ. ನಂತರ ವಿಡಿಯೋ ‌ಪೋಸ್ಟ್ ಮಾಡಿ ಮನೆಯಲ್ಲೇ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾನೆ. ನೇಣು ಬಿಗಿದುಕೊಂಡ ವಿಡಿಯೋ ಟಿಕ್​ ಟಾಕ್​ನಲ್ಲಿ ವೈರಲ್ ಆಗಿದೆ. ಈತನ ಹುಚ್ಚಾಟಕ್ಕೆ ಮೂವರು ಹೆಣ್ಣು ಮಕ್ಕಳು ತಂದೆಯಿಲ್ಲದೆ ಅನಾಥರಾಗಿದ್ದಾರೆ. ಘಟನೆ ಸಂಬಂಧ ದಾವಣಗೆರೆ ಗ್ರಾಮಾಂತರ ಪೊಲೀಸ್ […]

ಕೌಟುಂಬಿಕ ಕಲಹ: ಟಿಕ್ ​ಟಾಕ್​ನಲ್ಲಿ ವಿಡಿಯೋ ಮಾಡಿ ವ್ಯಕ್ತಿ ಆತ್ಮಹತ್ಯೆ
Follow us on

ದಾವಣಗೆರೆ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಟಿಕ್ ಟಾಕ್​ನಲ್ಲಿ ವಿಡಿಯೋ ಮಾಡಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಮಾಗನಹಳ್ಳಿ ಗ್ರಾಮದಲ್ಲಿ ನಡೆದಿದೆ. ನೇಣು ಬಿಗಿದುಕೊಂಡು ನಾಗರಾಜ್(34) ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮೊದಲು ಟಿಕ್​ ಟಾಕ್​ನಲ್ಲಿ ನೇಣು ಹಾಕಿಕೊಳ್ಳುವುದನ್ನು ವಿಡಿಯೋ ಮಾಡಿದ್ದಾನೆ. ನಂತರ ವಿಡಿಯೋ ‌ಪೋಸ್ಟ್ ಮಾಡಿ ಮನೆಯಲ್ಲೇ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾನೆ. ನೇಣು ಬಿಗಿದುಕೊಂಡ ವಿಡಿಯೋ ಟಿಕ್​ ಟಾಕ್​ನಲ್ಲಿ ವೈರಲ್ ಆಗಿದೆ. ಈತನ ಹುಚ್ಚಾಟಕ್ಕೆ ಮೂವರು ಹೆಣ್ಣು ಮಕ್ಕಳು ತಂದೆಯಿಲ್ಲದೆ ಅನಾಥರಾಗಿದ್ದಾರೆ. ಘಟನೆ ಸಂಬಂಧ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.