ಉಚ್ಚೆಂಗಮ್ಮ ಜಾತ್ರೆ: ಮುತ್ತು ಕಟ್ಟುವ ಪದ್ಧತಿಗೆ ಬ್ರೇಕ್ ಹಾಕಲು ಬಳ್ಳಾರಿ ಜಿಲ್ಲಾಡಳಿತ ದಿಟ್ಟ ಹೆಜ್ಜೆ!

|

Updated on: Feb 03, 2020 | 2:02 PM

ದಾವಣಗೆರೆ: ಬೃಹದಾಕಾರದ ಬೆಟ್ಟ.. ಬೆಟ್ಟ ಹತ್ತಿ ಭಕ್ತಿಯ ಪರಾಕಾಷ್ಠೆ ಮೆರೀತಿರೋ ಭಕ್ತಸಾಗರ. ಪ್ರತಿ ವರ್ಷ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗದಲ್ಲಿ ಉಚ್ಚೆಂಗಮ್ಮ ದೇವಿ ಜಾತ್ರೆ ನಡೆಯುತ್ತೆ. ಉಚ್ಚೆಂಗಮ್ಮ ಜಾತ್ರೆ ಅಂದ್ರೆ ತುಂಬಾನೇ ಫೇಮಸ್. ಆದ್ರಿಲ್ಲಿ ಕಳೆದ ಹಲವು ಶತಮಾನಗಳಿಂದ ಅಮಾಯಕ ಯುವತಿಯರಿಗೆ ಮುತ್ತುಕಟ್ಟಿ ದೇವಿಗೆ ಬಿಡುವ ಪದ್ಧತಿ ಜಾರಿಯಲ್ಲಿತ್ತು. ಅದ್ರಲ್ಲೂ ಜಾತ್ರೆಯಲ್ಲೇ ಹೆಚ್ಚಾಗಿ ಇದು ನಡೀತಿತ್ತು. ಅದಕ್ಕೆ ಸಾಕ್ಷಿಯೆಂಬಂತೆ ಈಗಲೂ ಬಹುತೇಕ ಗ್ರಾಮಗಳಲ್ಲಿ ದೇವದಾಸಿಯರು ಕಣ್ಣಿಗೆ ಬೀಳ್ತಾರೆ. ಈ ಅನಿಷ್ಠ ಪದ್ಧತಿಗೆ ಕಡಿವಾಣ ಹಾಕಲು 2017ರಲ್ಲಿ […]

ಉಚ್ಚೆಂಗಮ್ಮ ಜಾತ್ರೆ: ಮುತ್ತು ಕಟ್ಟುವ ಪದ್ಧತಿಗೆ ಬ್ರೇಕ್ ಹಾಕಲು ಬಳ್ಳಾರಿ ಜಿಲ್ಲಾಡಳಿತ ದಿಟ್ಟ ಹೆಜ್ಜೆ!
Follow us on

ದಾವಣಗೆರೆ: ಬೃಹದಾಕಾರದ ಬೆಟ್ಟ.. ಬೆಟ್ಟ ಹತ್ತಿ ಭಕ್ತಿಯ ಪರಾಕಾಷ್ಠೆ ಮೆರೀತಿರೋ ಭಕ್ತಸಾಗರ. ಪ್ರತಿ ವರ್ಷ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗದಲ್ಲಿ ಉಚ್ಚೆಂಗಮ್ಮ ದೇವಿ ಜಾತ್ರೆ ನಡೆಯುತ್ತೆ. ಉಚ್ಚೆಂಗಮ್ಮ ಜಾತ್ರೆ ಅಂದ್ರೆ ತುಂಬಾನೇ ಫೇಮಸ್.

ಆದ್ರಿಲ್ಲಿ ಕಳೆದ ಹಲವು ಶತಮಾನಗಳಿಂದ ಅಮಾಯಕ ಯುವತಿಯರಿಗೆ ಮುತ್ತುಕಟ್ಟಿ ದೇವಿಗೆ ಬಿಡುವ ಪದ್ಧತಿ ಜಾರಿಯಲ್ಲಿತ್ತು. ಅದ್ರಲ್ಲೂ ಜಾತ್ರೆಯಲ್ಲೇ ಹೆಚ್ಚಾಗಿ ಇದು ನಡೀತಿತ್ತು. ಅದಕ್ಕೆ ಸಾಕ್ಷಿಯೆಂಬಂತೆ ಈಗಲೂ ಬಹುತೇಕ ಗ್ರಾಮಗಳಲ್ಲಿ ದೇವದಾಸಿಯರು ಕಣ್ಣಿಗೆ ಬೀಳ್ತಾರೆ.

ಈ ಅನಿಷ್ಠ ಪದ್ಧತಿಗೆ ಕಡಿವಾಣ ಹಾಕಲು 2017ರಲ್ಲಿ ಸುಪ್ರೀಂಕೋರ್ಟ್​ ಆದೇಶಿಸಿತ್ತು. ಇದೀಗ ಫೆಬ್ರವರಿ 8 ಮತ್ತು 9ರಂದು ಮತ್ತೆ ಜಾತ್ರೆ ಬಂದಿದೆ. ಹೀಗಾಗಿ ಅಗತ್ಯ ವ್ಯವಸ್ಥೆ ಮಾಡಿಕೊಂಡಿರೋ ಜಿಲ್ಲಾಡಳಿತ ಬೆಟ್ಟದ ಸುತ್ತ ಸಿಸಿ ಕ್ಯಾಮರಾ ಅಳವಡಿಸಲು ಮುಂದಾಗಿದೆ. ಈ ಮೂಲಕ ಮುತ್ತು ಕಟ್ಟುವ ಪದ್ಧತಿಗೆ ಸಂಪೂರ್ಣ ಬ್ರೇಕ್ ಹಾಕಲು ಪಣ ತೊಟ್ಟಿದೆ.

ಅಂದ್ಹಾಗೆ ಇತ್ತೀಚೆಗಷ್ಟೇ ಮುತ್ತು ಕಟ್ಟುವ ಪ್ರಕರಣವೊಂದು ಬೆಳಕಿಗೆ ಬಂದಿತ್ತು. ಹರಪನಹಳ್ಳಿ ತಾಲೂಕಿನ ಹಳ್ಳಿಯೊಂದರಲ್ಲಿ ಯುವತಿಯನ್ನ ದೇವರಿಗೆ ಬಿಡಲಾಗಿತ್ತು. ನಂತರ ವಿಚಾರ ಬಹಿರಂಗವಾಗಿ ಯುವತಿಯನ್ನ ಸಂಬಂಧಿಕರರೊಂದಿಗೆ ಮದ್ವೆ ಮಾಡಿಸಿದ್ರು. ಹೀಗಾಗಿ ಜಾತ್ರೆ ಸಮಯದಲ್ಲಿ ಮತ್ತೆ ಅಂಥ ಪ್ರಕರಣಗಳು ಮರುಕಳಿಸದಂತೆ ನೋಡಿಕೊಳ್ಳಲು ಜಿಲ್ಲಾಡಳಿತ ಶತಪ್ರಯತ್ನ ಮಾಡ್ತಿದೆ.

ಒಟ್ನಲ್ಲಿ, ಜಾತ್ರೆ ವೇಳೆಯಲ್ಲಿ ಸಾವಿರಾರು ಜನ ಸೇರುತ್ತಾರೆ. ಅವರ ಮೇಲೆ ನಿಗಾ ಇಡೋದೇ ದೊಡ್ಡ ಚಾಲೆಂಜ್. ಹೀಗಾಗಿ ಒಂದ್ಕಡೆ ಸುಪ್ರೀಂಕೋರ್ಟ್ ಆದೇಶ ಪಾಲಿಸೋ ಅನಿವಾರ್ಯತೆ. ಮತ್ತೊಂದ್ಕಡೆ ಅನಿಷ್ಠ ಪದ್ಧತಿಯನ್ನ ಬೇರು ಸಹಿತ ಕಿತ್ತುಹಾಕಲು ಬಳ್ಳಾರಿ ಜಿಲ್ಲಾಡಳಿತ ದಿಟ್ಟ ಹೆಜ್ಜೆ ಇಡ್ತಿದೆ.