AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬರೋಬ್ಬರಿ 5.41 ಕೋಟಿ ರೂ: ಹೊಸ ತಂಡಕ್ಕೆ ಫಿಲ್ ಸಾಲ್ಟ್ ಎಂಟ್ರಿ

The Hundred: ದಿ ಹಂಡ್ರೆಡ್ ಲೀಗ್ ಶುರುವಾಗಿದ್ದು 2021 ರಲ್ಲಿ. ಈ ಟೂರ್ನಿಯಲ್ಲಿ 100 ಎಸೆತಗಳ ಪಂದ್ಯಗಳನ್ನು ಆಡಲಾಗುತ್ತದೆ. ಅಂದರೆ ಟಿ20 ಬದಲಿಗೆ ಇಲ್ಲಿ ಪ್ರತಿ ಇನಿಂಗ್ಸ್​ಗೆ 100 ಎಸೆತಗಳನ್ನು ಎಸೆಯಲಾಗುತ್ತದೆ. ಹಾಗೆಯೇ ಒಂದು ಓವರ್​ನಲ್ಲಿ 5 ಎಸೆತಗಳು ಇರುತ್ತವೆ. ಇಲ್ಲಿ ಗಮನಿಸಬೇಕಾದ ಮುಖ್ಯ ಅಂದರೆ ಒಬ್ಬ ಬೌಲರ್ ಸತತ 2 ಓವರ್ ಅಥವಾ 10 ಎಸೆತಗಳನ್ನು ಎಸೆಯಬಹುದು. ಹೀಗೆ ಹಲವು ರೀತಿಯಲ್ಲಿ ವಿಭಿನ್ನವಾಗಿ ಟೂರ್ನಿಗೆ ಐಪಿಎಲ್​​ನ ಕೆಲ ಫ್ರಾಂಚೈಸಿಗಳು ಎಂಟ್ರಿ ಕೊಟ್ಟಿರುವುದು ವಿಶೇಷ.

ಝಾಹಿರ್ ಯೂಸುಫ್
|

Updated on: Dec 15, 2025 | 7:54 AM

Share
ಇಂಗ್ಲೆಂಡ್ ತಂಡದ ವಿಕೆಟ್ ಕೀಪರ್ ಬ್ಯಾಟರ್ ಫಿಲ್ ಸಾಲ್ಟ್ ಬಿಗ್ (Phil Salt) ಡೀಲ್ ಕುದುರಿಸಿಕೊಂಡಿದ್ದಾರೆ. ಅದು ಕೂಡ ಬರೋಬ್ಬರಿ 5.41 ಕೋಟಿ ರೂ. ಒಪ್ಪಂದದೊಂದಿಗೆ. ಅಂದರೆ ಮುಂಬರುವ ಸೀಸನ್​​ನಲ್ಲಿ ಸಾಲ್ಟ್ ಹೊಸ ತಂಡವೊಂದರ ಪರ ಕಣಕ್ಕಿಳಿಯಲಿದ್ದಾರೆ.

1 / 6
ಇಂಗ್ಲೆಂಡ್​​ನಲ್ಲಿ ನಡೆಯಲಿರುವ ದಿ ಹಂಡ್ರೆಡ್ ಲೀಗ್​​​ನಲ್ಲಿ ವೆಲ್ಷ್ ಫೈರ್ ಪರ ಕಣಕ್ಕಿಳಿಯಲು ಸಾಲ್ಟ್ ಒಪ್ಪಂದ ಮಾಡಿಕೊಂಡಿದ್ದಾರೆ. ಹರಾಜಿಗೂ ಮುನ್ನ ನಡೆಯುವ ಪ್ರಿ-ಸೈನ್ ಆಯ್ಕೆಯ ಮೂಲಕ ಸಾಲ್ಟ್ ಅವರನ್ನು ಖರೀದಿಸುವಲ್ಲಿ ವೆಲ್ಷ್ ಫೈರ್ ಯಶಸ್ವಿಯಾಗಿದೆ.

2 / 6
ಇದಕ್ಕೂ ಮುನ್ನ ಫಿಲ್ ಸಾಲ್ಟ್ ದಿ ಹಂಡ್ರೆಡ್ ಲೀಗ್​​ನಲ್ಲಿ ಮ್ಯಾಂಚೆಸ್ಟರ್ ಒರಿಜಿನಲ್ಸ್ ಪರ ಕಣಕ್ಕಿಳಿಯುತ್ತಿದ್ದರು. ಇದೀಗ ಬರೋಬ್ಬರಿ 5.41 ಕೋಟಿ ರೂ. ಒಪ್ಪಂದದೊಂದಿಗೆ ಸಾಲ್ಟ್ ಅವರನ್ನು ವೆಲ್ಷ್ ಫೈರ್ ತಂಡ ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದಾರೆ. ಅದರಂತೆ 2026ರ ದಿ ಹಂಡ್ರೆಡ್ ಲೀಗ್​್ನಲ್ಲಿ ಸಾಲ್ಟ್ ವೆಲ್ಷ್ ಫೈರ್ ಪರ ಕಣಕ್ಕಿಳಿಯಲಿದ್ದಾರೆ.

3 / 6
ಇನ್ನು ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್​​ನಲ್ಲಿ ಫಿಲ್ ಸಾಲ್ಟ್ ಆರ್​​ಸಿಬಿ ಪರ ಕಣಕ್ಕಿಳಿಯಲಿದ್ದಾರೆ. 11.50 ಕೋಟಿ ರೂ.ಗೆ ಆರ್​ಸಿಬಿ ಸಾಲ್ಟ್ ಅವರನ್ನು ತಂಡದಲ್ಲೇ ಉಳಿಸಿಕೊಂಡಿದ್ದು, ಅದರಂತೆ ಮುಂದಿನ ಸೀಸನ್​​ನಲ್ಲೂ ಸಾಲ್ಟ್ ಆರಂಭಿಕನಾಗಿ ಬ್ಯಾಟ್ ಬೀಸಲಿದ್ದಾರೆ.

4 / 6
ಇನ್ನೊಂದೆಡೆ ಸನ್​ರೈಸರ್ಸ್​ ಲೀಡ್ಸ್ ತಂಡವು ಹ್ಯಾರಿ ಬ್ರೂಕ್ ಅವರನ್ನು ಬರೋಬ್ಬರಿ 5.65 ಕೋಟಿ ರೂ. ರಿಟೈನ್ ಮಾಡಿಕೊಂಡಿದೆ. ಬ್ರೂಕ್ ಕಳೆದ ಸೀಸನ್​ನಲ್ಲಿ ನಾರ್ದರ್ನ್​ ಸೂಪರ್​ಚಾರ್ಜರ್ಸ್ ಪರ ಕಣಕ್ಕಿಳಿದಿದ್ದರು. ಇದೀಗ ಈ ಫ್ರಾಂಚೈಸಿಯನ್ನು ಸನ್​ರೈಸರ್ಸ್ ಹೈದರಾಬಾದ್ ಖರೀದಿಸಿದೆ. ಅಲ್ಲದೆ ತಂಡಕ್ಕೆ ಸನ್​ರೈಸರ್ಸ್ ಲೀಡ್ಸ್ ಎಂದು ಮರುನಾಮಕರಣ ಮಾಡಿದ್ದಾರೆ. ಅದರಂತೆ ಮುಂಬರುವ ದಿ ಹಂಡ್ರೆಡ್ ಲೀಗ್​ನಲ್ಲಿ ಬ್ರೂಕ್ ಸನ್​​ರೈಸರ್ಸ್ ಲೀಡ್ಸ್ ಪರ ಕಣಕ್ಕಿಳಿಯಲಿದ್ದಾರೆ.

5 / 6
ದಿ ಹಂಡ್ರೆಡ್ ಲೀಗ್ ಎಂಬುದು 100 ಎಸೆತಗಳ ಟೂರ್ನಿ. ಅಂದರೆ 20 ಓವರ್​​ಗಳ ಬದಲಿಗೆ ಇಲ್ಲಿ ಪ್ರತಿ ಇನಿಂಗ್ಸ್​​ಗೆ 100 ಎಸೆತಗಳನ್ನು ಎಸೆಯಲಾಗುತ್ತದೆ. ಅಷ್ಟೇ ಅಲ್ಲದೆ ಈ ಟೂರ್ನಿಯಲ್ಲಿ ಒಂದು ಓವರ್​​ಗೆ 5 ಎಸೆತಗಳನ್ನು ಎಸೆಯಲಾಗುತ್ತದೆ. ಹೀಗೆ ಹಲವು ರೀತಿಯಲ್ಲಿ ಭಿನ್ನವಾಗಿರುವ ಟೂರ್ನಿಯ ಹರಾಜು ಪ್ರಕ್ರಿಯೆ ಮಾರ್ಚ್, 2026 ರಲ್ಲಿ ನಡೆಯಲಿದೆ. ಅದಕ್ಕೂ ಮುನ್ನ ಕೆಲ ಫ್ರಾಂಚೈಸಿಗಳು ಸ್ಟಾರ್ ಆಟಗಾರರನ್ನು ಪ್ರಿ-ಸೈನ್ ಮಾಡಿಕೊಳ್ಳಲು ಮುಂದಾಗಿದೆ.

6 / 6