ನಾಳೆಯ ಹವಾಮಾನ: ಚಳಿಗೆ ತತ್ತರಿಸಲಿದೆ ಕರ್ನಾಟಕದ ಉತ್ತರ; ಬೆಂಗಳೂರಲ್ಲೂ ಶೀತ ಗಾಳಿಯ ಅಬ್ಬರ
Karnataka Weather Tomorrow: ರಾಜ್ಯದಲ್ಲಿ ತಾಪಮಾನ ಗಣನೀಯವಾಗಿ ಇಳಿದಿದ್ದು, ನಾಳೆಯೂ ಭಾರಿ ಚಳಿ ಮುಂದುವರಿಯಲಿದೆ. ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಹಾಗೂ ಬೆಂಗಳೂರು ಸೇರಿದಂತೆ ಹಲವೆಡೆ ಶೀತ ಗಾಳಿ ಹೆಚ್ಚಾಗಲಿದೆ. ಬೆಂಗಳೂರಿನಲ್ಲಿ 14-18 ಡಿಗ್ರಿ ಸೆಲ್ಸಿಯಸ್ ತಾಪಮಾನ ನಿರೀಕ್ಷಿಸಲಾಗಿದೆ. ಉಳಿದೆಡೆ ಒಣ ಹವೆ ಅಥವಾ ಸಾಧಾರಣ ಚಳಿ ಇರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರು, ಡಿಸೆಂಬರ್ 15: ಕಳೆದ ಕೆಲ ದಿನಗಳಿಂದ ರಾಜ್ಯದ ತಾಪಮಾನದಲ್ಲಿ ಉಂಟಾಗಿರುವ ಗಣನೀಯ ಇಳಿಕೆಯ ಹಿನ್ನಲೆ ವಿಪರೀತ ಚಳಿಗೆ ರಾಜ್ಯದ ಮಂದಿ ನಡುಗುತ್ತಿದ್ದಾರೆ. ಈ ನಡುವೆ ಉತ್ತರ ಮತ್ತು ಕಲ್ಯಾಣ ಕರ್ನಾಟಕ ಸೇರಿ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಚಳಿಯ ಅಬ್ಬರ ನಾಳೆಯೂ ಮುಂದುವರಿಯಲಿದೆ. ಕೆಲವೆಡೆ ದಾಖಲೆಯ ಚಳಿ ಕಂಡುಬಂದರೆ ಇನ್ನು ಹಲವೆಡೆ ಸಾಮಾನ್ಯ ತಾಪಮಾನಕ್ಕಿಂತ ಕುಸಿತ ಉಂಟಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಎಲ್ಲೆಲ್ಲಿ ತೀವ್ರ ಚಳಿ?
ಬೀದರ್, ಕಲಬುರಗಿ, ವಿಜಯಪುರ, ಬೆಳಗಾವಿ ಧಾರವಾಡ, ಗದಗ, ಹಾವೇರಿ, ಕೊಪ್ಪಳ, ವಿಜಯನಗರ ಮತ್ತು ದಕ್ಷಿಣ ಒಳನಾಡಿನ ಮೈಸೂರು, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನದಲ್ಲಿ ಹೆಚ್ಚಿನ ಚಳಿ ಇರಲಿದೆ. ಬೆಂಗಳೂರು ನಗರದಲ್ಲಿಯೂ ಚುಮು ಚುಮು ಚಳಿಗೆ ಜನ ತತ್ತರಿಸಲಿದ್ದು, ನಗರದ ಕನಿಷ್ಠ ಉಷ್ಣಾಂಶ 14-18 ಡಿಗ್ರಿ ಸೆಲ್ಸಿಯಸ್ ತಲುಪುವ ಸಾಧ್ಯತೆ ಇದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಚಳಿಯೋ ಚಳಿ! ಬಾಗಲಕೋಟೆಗೆ ಆರೆಂಜ್ ಅಲರ್ಟ್
ನಿನ್ನೆ ಬೀದರ್ನಲ್ಲಿ ಕನಿಷ್ಠ ತಾಪಮಾನ
14.12.25 ರ 08.30 AM ನಿಂದ 15.12.25 ರ 08.30 AM ವರೆಗೆ ನಕ್ಷೆಗಳೊಂದಿಗೆ ಜಿಲ್ಲಾವಾರು ಸರಾಸರಿ ಕನಿಷ್ಠ, ಗರಿಷ್ಠ ಮತ್ತು ಏರಿಳಿತ ತಾಪಮಾನ(°C) ಕೋಷ್ಟಕ. District-wise Average #Minimum, #Maximum & Fluctuation #temperature (°C) table with maps from 08.30 AM of 14.12.25 to 08.30 AM of 15.12.25. #KSNDMC pic.twitter.com/gJAluUcJK2
— Karnataka State Natural Disaster Monitoring Centre (@KarnatakaSNDMC) December 15, 2025
ಬಾಗಲಕೋಟೆ 13.1 ಡಿಗ್ರಿ ಸೆಲ್ಸಿಯಸ್, ಬಳ್ಳಾರಿ 14.2 ಡಿಗ್ರಿ ಸೆಲ್ಸಿಯಸ್, ಬೆಳಗಾವಿ 12.4 ಡಿಗ್ರಿ ಸೆಲ್ಸಿಯಸ್, ಬೆಂಗಳೂರು ಗ್ರಾಮಾಂತರ 11.8 ಡಿಗ್ರಿ ಸೆಲ್ಸಿಯಸ್, ಬೆಂಗಳೂರು ನಗರ 14.6 ಡಿಗ್ರಿ ಸೆಲ್ಸಿಯಸ್, ಬೆಂಗಳೂರು ದಕ್ಷಿಣ 13.1 ಡಿಗ್ರಿ ಸೆಲ್ಸಿಯಸ್, ಬೀದರ್ 10.9 ಡಿಗ್ರಿ ಸೆಲ್ಸಿಯಸ್, ಚಾಮರಾಜನಗರ 12.2 ಡಿಗ್ರಿ ಸೆಲ್ಸಿಯಸ್, ಚಿಕ್ಕಬಳ್ಳಾಪುರ 11.7 ಡಿಗ್ರಿ ಸೆಲ್ಸಿಯಸ್, ಚಿಕ್ಕಮಗಳೂರು 12.8 ಡಿಗ್ರಿ ಸೆಲ್ಸಿಯಸ್, ಚಿತ್ರದುರ್ಗ 14.1 ಡಿಗ್ರಿ ಸೆಲ್ಸಿಯಸ್, ದಕ್ಷಿಣ ಕನ್ನಡ 18.6 ಡಿಗ್ರಿ ಸೆಲ್ಸಿಯಸ್, ದಾವಣಗೆರೆ 13.6 ಡಿಗ್ರಿ ಸೆಲ್ಸಿಯಸ್, ಧಾರವಾಡ 13.5 ಡಿಗ್ರಿ ಸೆಲ್ಸಿಯಸ್, ಗದಗ 13.2 ಡಿಗ್ರಿ ಸೆಲ್ಸಿಯಸ್, ಹಾಸನ 12.4 ಡಿಗ್ರಿ ಸೆಲ್ಸಿಯಸ್, ಹಾವೇರಿ 13.3 ಡಿಗ್ರಿ ಸೆಲ್ಸಿಯಸ್, ಕಲಬುರಗಿ 12.4 ಡಿಗ್ರಿ ಸೆಲ್ಸಿಯಸ್, ಕೊಡಗು 15.3 ಡಿಗ್ರಿ ಸೆಲ್ಸಿಯಸ್, ಕೋಲಾರ 11.9 ಡಿಗ್ರಿ ಸೆಲ್ಸಿಯಸ್, ಕೊಪ್ಪಳ 13.3 ಡಿಗ್ರಿ ಸೆಲ್ಸಿಯಸ್, ಮಂಡ್ಯ 13.4 ಡಿಗ್ರಿ ಸೆಲ್ಸಿಯಸ್, ಮೈಸೂರು 13.4 ಡಿಗ್ರಿ ಸೆಲ್ಸಿಯಸ್, ರಾಯಚೂರು 14.2 ಡಿಗ್ರಿ ಸೆಲ್ಸಿಯಸ್, ಶಿವಮೊಗ್ಗ 13 ಡಿಗ್ರಿ ಸೆಲ್ಸಿಯಸ್, ತುಮಕೂರು 12.5 ಡಿಗ್ರಿ ಸೆಲ್ಸಿಯಸ್, ಉಡುಪಿ 18 ಡಿಗ್ರಿ ಸೆಲ್ಸಿಯಸ್, ಉತ್ತರ ಕನ್ನಡ 15.7 ಡಿಗ್ರಿ ಸೆಲ್ಸಿಯಸ್, ವಿಜಯಪುರ 13.3 ಡಿಗ್ರಿ ಸೆಲ್ಸಿಯಸ್, ವಿಜಯನಗರ 12.7 ಡಿಗ್ರಿ ಸೆಲ್ಸಿಯಸ್ ಮತ್ತು ಯಾದಗಿರಿಯಲ್ಲಿ 14.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ನಿನ್ನೆ ಬೆಳಿಗ್ಗೆ 8.30ರಿಂದ ಇಂದು ಬೆಳಿಗ್ಗೆ 8.30ರ ಅವಧಿಯಲ್ಲಿ ದಾಖಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:42 pm, Mon, 15 December 25




