ಹೊನ್ನಾಳಿ ತಾಲೂಕಿನ ಹುಣಸಘಟ್ಟ ಗ್ರಾಮದಲ್ಲಿ ಕತ್ತು ಹಿಸುಕಿ ವ್ಯಕ್ತಿಯ ಕೊಲೆ
ಹಣದ ವಿಚಾರಕ್ಕೆ ಈತನನ್ನು ದುಷ್ಕರ್ಮಿಗಳು ಹತ್ಯೆಗೈದಿರುವುದಾಗಿ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಹೊನ್ನಾಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ನಜೀರ್ವುಲ್ಲಾ ಕೊಲೆಯಾದ ವ್ಯಕ್ತಿ
ದಾವಣಗೆರೆ: ವ್ಯಕ್ತಿಯ ಕತ್ತು ಕತ್ತರಿಸಿ ಕೊಲೆ ಮಾಡಿದ ಘಟನೆ ಹೊನ್ನಾಳಿ ತಾಲೂಕಿನ ಹುಣಸಘಟ್ಟ ಗ್ರಾಮದ ಟಿಪ್ಪು ಸರ್ಕಲ್ ಬಳಿ ನಡೆದಿದೆ. ಕೊಲೆಯಾದ ವ್ಯಕ್ತಿ ನಜೀರ್ವುಲ್ಲಾ (46) ಎಂದು ತಿಳಿದುಬಂದಿದೆ.
ನಜೀರ್ವುಲ್ಲಾ ಮದುವೆಯಾಗಿರಲಿಲ್ಲ. ತಂದೆ ತಾಯಿ ಇರಲಿಲ್ಲ. ಒಂಟಿ ಜೀವನ ನಡೆಸುತ್ತಿದ್ದ. ತನಗೆಂದು ಸ್ವಂತ ಮನೆ ಇಲ್ಲದೇ, ಗ್ರಾಮದ ಶಾಲೆ ಅಥವಾ ಖಾಸಗಿ ಕಟ್ಟಡಗಳಲ್ಲಿ ಮಲಗುತ್ತಿದ್ದ.
ಹಣದ ವಿಚಾರಕ್ಕೆ ಈತನನ್ನು ದುಷ್ಕರ್ಮಿಗಳು ಹತ್ಯೆಗೈದಿರುವುದಾಗಿ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಹೊನ್ನಾಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
Published On - 11:56 am, Sun, 20 December 20