ಹರಿಹರ ಉಕ್ಕಡಗಾತ್ರಿ ಅಜ್ಜಯ್ಯ ರಥೋತ್ಸವಕ್ಕೆ ಲಕ್ಷಾಂತರ ಜನ ಬಂದರು, ಶತಮಾನದ ಹಿಂದೆ ನಡೆದಿತ್ತು ಇಲ್ಲೊಂದು ಪವಾಡ!

| Updated By: ಸಾಧು ಶ್ರೀನಾಥ್​

Updated on: Jan 12, 2024 | 1:54 PM

ಹರಿಹರ ತಾಲೂಕಿನ ಉಕ್ಕಡಗಾತ್ರಿ ಅಜ್ಜಯ್ಯ ಜಾತ್ರೆ ಗುರುವಾರ ನಡೆಯಿತು. ವಿಶೇಷವಾಗಿ ಪ್ರತಿ ಅಮಾವಾಸ್ಯೆ ಅಂದ್ರೆ ಇಲ್ಲಿ ಭಕ್ತ ಸಾಗರವೇ ಸೇರುತ್ತಾರೆ. ಕೆಲವರ ಬಾಳಿನಲ್ಲಿ ಕವಿದ ಕತ್ತಲೇ ದೂರವಾಗಿ ಬೆಳಕು ಬರುತ್ತದೆ ಎಂಬ ನಂಬಿಕೆ. ಮೇಲಾಗಿ ರೈತರು ಭೂಮಿ ತಾಯಿಗೆ ಪೂಜೆ ಸಲ್ಲಿಸುವುದು ಇದೆ ಅಮಾವಾಸ್ಯೆ ದಿನ.

ಹರಿಹರ ಉಕ್ಕಡಗಾತ್ರಿ ಅಜ್ಜಯ್ಯ ರಥೋತ್ಸವಕ್ಕೆ ಲಕ್ಷಾಂತರ ಜನ ಬಂದರು, ಶತಮಾನದ ಹಿಂದೆ ನಡೆದಿತ್ತು ಇಲ್ಲೊಂದು ಪವಾಡ!
ಹರಿಹರ ಉಕ್ಕಡಗಾತ್ರಿ ಅಜ್ಜಯ್ಯ ರಥೋತ್ಸವಕ್ಕೆ ಲಕ್ಷಾಂತರ ಜನ ಬಂದರು
Follow us on

ಉಕ್ಕಡಗಾತ್ರಿ ಅಜ್ಜಯ್ಯ ಎಂದು ಇಡಿ ರಾಜ್ಯಕ್ಕೆ ಗೊತ್ತು. ದೆವ್ವ ಭೂತಗಳ ಕಾಟದಿಂದ ಬೇಸತ್ತವರಿಗೆ ಇಲ್ಲಿ ಚಿಕಿತ್ಸೆ ಜೊತೆಗೆ ಅಜ್ಜಯ್ಯನ ಪವಾಡದಿಂದ ವಿಶೇಷ ಚಮತ್ಕಾರಗಳು ನಡೆಯುತ್ತವೆ. ಇಂತಹ ಅಜ್ಜಯ್ಯ ರಥೋತ್ಸವ ನಿನ್ನೆ ಗುರುವಾರ ನಡೆಯಿತು. ಲಕ್ಷಾಂತರ ಜನ ಸೇರಿದ್ದರು. ವಿಶೇಷವಾಗಿ ದೆವ್ವ ಭೂತಗಳ ಕಾಟ ಇರುವ ಜನ ಮೈ ಚಳಿ ಬಿಟ್ಟು ಕುಣಿಯುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಇಲ್ಲಿ ವಿವಿಧ ಸೇವೆಗಳು ಇರುತ್ತವೆ. ಇಂತಹ ಸೇವೆಗಳನ್ನ ಮಾಡಿದರೆ ದೆವ್ವ ಭೂತ ಅಥವಾ ಪ್ರೇತಗಳ ಭೀತಿಯಿಂದ ಬಳಲುತ್ತಿರುವ ಜನರು ವಾಸಿಯಾಗಿ ಮನೆಗೆ ಹೋಗುತ್ತಾರೆ. ಇದ ಏಳ್ಳು ಅಮಾವಾಸ್ಯೆ ಬಲು ಪ್ರಸಿದ್ಧಿ.

ಇದು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಉಕ್ಕಡಗಾತ್ರಿ. ತಂಗಭದ್ರ ನದಿಯ ದಂಡೆ ಮೇಲೆ ಇರುವ ಗ್ರಾಮ ಇತ್ತೀಚಿಗೆ ಜಗತ್ ಪ್ರಸಿದ್ಧವಾಗಿದೆ. ಇಲ್ಲಿನ ದೇವರ ಹೆಸರು ಕರಿ ಬಸವೇಶ್ವರ ಗ್ರಾಮೀಣ ಭಾಷೆಯಲ್ಲಿ ಕರಿಬಸಜ್ಜ ಅಥವಾ ಅಜ್ಜಯ್ಯ ಎನ್ನುತ್ತಾರೆ. ಇಲ್ಲಿನ ಅಜ್ಜಯ್ಯ ಪ್ರಸಿದ್ಧ ಪವಾಡ ಪುರುಷ. ಈತ ಶತಮಾನದ ಹಿಂದೆ ಇಲ್ಲೊಂದು ಪವಾಡ ಮಾಡಿದ್ದ. ಮಹಿಳೆಯೊಬ್ಬಳು ದೆವ್ವದ ಕಾಟದಿಂದ ಬಳಲುತ್ತಿದ್ದಳು. ಇಂತಹ ಮಹಿಳೆಗೆ ತನ್ನ ಶಕ್ತಿಯಿಂದ ಕಾಯಿಲೆ ವಾಸ ಮಾಡಿದನಂತೆ.

ಹೀಗಾಗಿ ಇಲ್ಲಿ ವಿಶೇಷಗಳಿಂದಲೂ ಜನ ಬರುವುದುಂಟು. ಇಂತಹ ಅಜ್ಜಯ್ಯ ಜಾತ್ರೆ ಗುರುವಾರ ನಡೆಯಿತು. ವಿಶೇಷವಾಗಿ ಪ್ರತಿ ಅಮಾವಾಸ್ಯೆ ಅಂದ್ರೆ ಇಲ್ಲಿ ಭಕ್ತ ಸಾಗರವೇ ಸೇರುತ್ತಾರೆ. ಅದರಲ್ಲಿ ವಿಶೇಷವಾಗಿ ಏಳ್ಳು ಅಮಾವಾಸ್ಯೆ ಅಂದ್ರೆ ಕೆಲವರ ಬಾಳಿನಲ್ಲಿ ಕವಿದ ಕತ್ತಲೇ ದೂರವಾಗಿ ಬೆಳಕು ಬರುತ್ತದೆ ಎಂಬ ನಂಬಿಕೆ. ಮೇಲಾಗಿ ರೈತರು ಭೂಮಿ ತಾಯಿಗೆ ಪೂಜೆ ಸಲ್ಲಿಸುವುದು ಇದೆ ಅಮಾವಾಸ್ಯೆ ದಿನ. ಇಲ್ಲಿಗೆ ಬರುವ ಬಹುತೇಕರು ಪಕ್ಕದ ತುಂಗ ಭದ್ರ ನದಿಯಲ್ಲಿ ಪುಣ್ಯ ಸ್ನಾನ ಮಾಡಿ ಹರಕೆ ಒಪ್ಪಿಸುತ್ತಾರೆ. ವ್ಯಕ್ತಿಯ ಜೀವನದ ಪ್ರತಿಯೊಂದು ಕಷ್ಟಗಳಿಗೆ ಇಲ್ಲಿ ಪರಿಹಾರ ಸಿಗುತ್ತದೆ ಎಂಬುದು ಜನರ ನಂಬಿಕೆ.

Also Read: ಹಂಪಿಯಲ್ಲಿ ಚಾರ್ತುಮಾಸ ತಪಸ್ಸು ನಡೆಸಿದ ಶ್ರೀರಾಮ.. ಸೀತೆಯನ್ನು ಮರಳಿ ಪಡೆಯಲು ವಿರೂಪಾಕ್ಷ ದೇವರ ಆರ್ಶೀವಾದ ಪಡೆದರಂತೆ!

ಇಲ್ಲಿನ ಸೇವೆಗಳು ಕಾಯಿಲೆ ಇರುವ ಜನರು ಒಂದು ತಿಂಗಳ ಅಥವಾ ಆರು ತಿಂಗಳ ಕಾಲ ದೇವಸ್ಥಾನದಲ್ಲಿಯೇ ಇರುತ್ತಾರೆ. ಒಟ್ಟಾರೆ ನಟ ಸುದೀಪ್ ಸೇರಿದಂತೆ ವರ್ಷವಿಡಿ ಲಕ್ಷಾಂತರ ಜನ ಇಲ್ಲಿಗೆ ಬರುತ್ತಾರೆ. ಮೇಲಾಗಿ ತಮ್ಮ ರೋಗ ವಾಸಿಯಾಗುವ ತನಕ ನೂರಾರು ರೋಗಿಗಳು ಇದೇ ಸ್ಥಳದಲ್ಲಿ ತಿಂಗಳ ಗಟ್ಟಲೆ ವಾಸವಾಗಿರುತ್ತಾರೆ. ಇಂತಹವರಿಗೆ ಎಳ್ಳು ಅಮಾವಾಸ್ಯೆ ದಿನ ಕಾಯಿಲೆ ವಾಸಿಯಾಗುತ್ತದೆ ಎಂಬುದು ನಂಬಿಕೆ. ಹೀಗಾಗಿ ಎಳ್ಳು ಅಮಾವಾಸ್ಯೆಗೆ ಭಾರೀ ಮಹತ್ವವಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ