AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊವಿಡ್‌ನಿಂದ ಮೃತಪಟ್ಟ ಕುಟುಂಬಗಳಿಗೆ ಪರಿಹಾರದ ಚೆಕ್ ವಿತರಿಸಿದ ಶಾಸಕ ಎಂ.ಪಿ. ರೇಣುಕಾಚಾರ್ಯ

ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದ ಹೊನ್ನಾಳಿ ಪುರಸಭೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ರೇಣುಕಾಚಾರ್ಯ ಮನೆ ಹಾನಿಯಾದ 394 ಫಲಾನುಭವಿಗಳಿಗೆ ಆದೇಶ ಪತ್ರ ನೀಡಿದ್ದಾರೆ. ಅದೇ ರೀತಿ‌ ನ್ಯಾಮತಿ ಎಪಿಎಂಸಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ 250 ಜನರಿಗೆ ಆದೇಶ ಪತ್ರ ನೀಡಿದ್ರು.

ಕೊವಿಡ್‌ನಿಂದ ಮೃತಪಟ್ಟ ಕುಟುಂಬಗಳಿಗೆ ಪರಿಹಾರದ ಚೆಕ್ ವಿತರಿಸಿದ ಶಾಸಕ ಎಂ.ಪಿ. ರೇಣುಕಾಚಾರ್ಯ
ಎಂಪಿ.ರೇಣುಕಾಚಾರ್ಯ
TV9 Web
| Updated By: ಆಯೇಷಾ ಬಾನು|

Updated on:Jan 02, 2022 | 8:16 AM

Share

ದಾವಣಗೆರೆ: ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ,(MP Renukacharya) ಕೊರೊನಾದಿಂದ ಮೃತಪಟ್ಟ 49 ಜನ‌ ವಾರಸುದಾರರಿಗೆ ಪರಿಹಾರ ಚೆಕ್(Compensation) ವಿತರಿಸಿದ್ದಾರೆ.

ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದ ಹೊನ್ನಾಳಿ ಪುರಸಭೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ರೇಣುಕಾಚಾರ್ಯ ಮನೆ ಹಾನಿಯಾದ 394 ಫಲಾನುಭವಿಗಳಿಗೆ ಆದೇಶ ಪತ್ರ ನೀಡಿದ್ದಾರೆ. ಅದೇ ರೀತಿ‌ ನ್ಯಾಮತಿ ಎಪಿಎಂಸಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ 250 ಜನರಿಗೆ ಆದೇಶ ಪತ್ರ ನೀಡಿದ್ರು. ಹಾಗೂ ಬೋವಿ‌ ನಿಗಮದಿಂದ 110 ಜನರಿಗೆ 50 ಸಾವಿರದ ಚೆಕ್‌ ಹಾಗೂ ದೇವರಾಜ್ ಅರಸು ನಿಗಮದಿಂದ 15 ಜನರಿಗೆ ಮೋಟರ್‌ಪಂಪ್ ಹಾಗೂ ಪರಿಕರ ನೀಡಿದ್ರು. ಸರ್ಕಾರದ ಸವಲತ್ತು ಜನರಿಗೆ ನೇರವಾಗಿ ತಲುಪಿಸಲು ಪಾರದರ್ಶಕವಾಗಿ‌ ಫಲಾನುಭವಿಗಳಿಗೆ ಸರ್ಕಾರ ಯೋಜನೆ ತಲುಪಿಸಿದ್ದಾರೆ.

ಅಡ್ಡಪಲ್ಲಕ್ಕಿ ಒತ್ತು ಭಕ್ತಿ ಸಮರ್ಪಿಸಿದ ರೇಣುಕಾಚಾರ್ಯ ಇನ್ನು ಮತ್ತೊಂದೆಡೆ ಮಾಸಡಿ‌ ಗ್ರಾಮದ‌ ಮಹೇಶ್ವರಿ ಜಾತ್ರೆಯಲ್ಲಿ‌ ಬೀರಲಿಂಗೇಶ್ವರ ಹಾಗೂ ನರಸಿಂಹ ಸ್ವಾಮಿಯ ಅಡ್ಡಪಲ್ಲಕ್ಕಿ ಒತ್ತು ರೇಣುಕಾಚಾರ್ಯ ಭಕ್ತಿ ಸಮರ್ಪಿಸಿದ್ದಾರೆ. ಭಕ್ತರೊಟ್ಟಿಗೆ ಸೇರಿ ತಾನೂ ಭಕ್ತನಾಗಿ ದೇವರಿಗೆ ಪೂಜೆ ಸಲ್ಲಿಸಿದ್ದಾರೆ.

ಸಂಭ್ರಮದಿಂದ ನಡೆದ ಬೀರಲಿಂಗೇಶ್ವರ ಕಾರ್ತೀಕೋತ್ಸವ ಜಿಲ್ಲೆಯ ಹೊನ್ನಾಳಿ ಪಟ್ಟಣ ಬೀರಲಿಂಗೇಶ್ವರ ಅಂದರೆ ಸುತ್ತಲಿನ ಪ್ರದೇಶದಲ್ಲಿ ಪ್ರಸಿದ್ಧಿ ಪಡೆದ ಪುಣ್ಯ ಕ್ಷೇತ್ರ. ರಾಜ್ಯದ ವಿವಿಧ ಭಾಗಗಳಿಂದ ಈಗ ಸಾವಿರಾರು ಭಕ್ತರು ಇಲ್ಲಿ ಬಂದು ಬೀರಲಿಂಗೇಶ್ವರನ ದರ್ಶನ ಪಡೆಯುತ್ತಾರೆ. ಸುತ್ತಲಿನ ಗ್ರಾಮದ ಹತ್ತಕ್ಕೂ ಹೆಚ್ಚು ದೇವರ ಪಲ್ಲಕ್ಕಿಗಳು ಬೀರಲಿಂಗೇಶ್ವರ ಕ್ಷೇತ್ರಕ್ಕೆ ಬರುತ್ತವೆ. ತುಂಗಾಭದ್ರರ ನದಿಗೆ ಪೂಜೆ ಸಲ್ಲಿಸುವ ಮೂಲಕ ಕಾರ್ತೀಕೋತ್ಸವ ಆರಂಭವಾಗುತ್ತದೆ. ಹೀಗೆ ತುಂಗಾಭದ್ರ ನದಿಯಿಂದ ಪೂಜೆ ಮಾಡಿ ಬಂದ ತಕ್ಷಣವೇ ಹೊನ್ನಾಳಿ ಪಟ್ಟಣದ ದುರ್ಗದ ಬಯಲಿನಲ್ಲಿ ಹಾಕಿದ ಕೆಂಡೋತ್ಸವದಲ್ಲಿ ದೇವರ ಮಕ್ಕಳೆ ಎಂದು ಕರೆಯುವ ಕುಮಾರಸ್ವಾಮೀ ಹಾಗೂ ಅಣ್ಣಪ್ಪ ಸ್ವಾಮೀ ಅವರು  ಕೆಂಡ ತುಳಿದು ಹರಕೆ ತಿರಿಸುತ್ತಾರೆ. ಇವರೇ ಮುಂದೆ ಮುಳ್ಳಿನ ಹಾಗೂ ಮೊಳೆಗಳ ಗದ್ದುಗೆ ಮೇಲೆ ಕುಳಿತು ಮುಳ್ಳುಗದ್ದಿಗೆ ಉತ್ಸವ ನಡೆಸುತ್ತಾರೆ. ಈ ಉತ್ಸವದ ಹಿನ್ನೆಲೆ ಸಾವಿರಾರು ಜನ ಭಕ್ತರು ಸುಮಾರು ಐದು ಕಿಲೋ ಮೀಟರ್ ದೂರದ ವರೆಗೆ ಕುಳಿತುಕೊಂಡು ಹರಕೆ ತಿರಿಸುತ್ತಾರೆ.

ಬೀರಲಿಂಗೇಶ್ವರ ಕಾರ್ತೀಕೋತ್ಸವಕ್ಕೆ ಗಾಳಿ ದುರ್ಗಮ್ಮ, ಸುಡಗಾಡು ಸಿದ್ಧಪ್ಪ, ಗೋಪಗೊಂಡನಹಳ್ಳಿ ಬೀರಪ್ಪ, ಹೀಗೆ ಹತ್ತಾರು ಕಡೆಯಿಂದ ದೇವರ ಪಲ್ಲಕ್ಕಿಗಳು ಸೇರಿದ್ದವು. ಇಲ್ಲಿನ ಪ್ರಮುಖ ಆಕರ್ಷಣೆ ಅಂದರೆ ಕೆಂಡೋತ್ಸವ. ದೇವರ ಮಕ್ಕಳು ಕೆಂಡೋತ್ಸವದಲ್ಲಿ ಪಾಲ್ಗೊಂಡ ಬಳಿಕ ಭಕ್ತರು ಕೆಂಡ ತುಳಿದು ತಮ್ಮ ಹರಕೆ ತಿರುಸುತ್ತಾರೆ. ಹೀಗೆ ಮೂರು ದಿನಗಳ ಕಾಲ ಇಡಿ ಹೊನ್ನಾಳಿ ಪಟ್ಟಣದಲ್ಲಿ ಉತ್ಸವ ನಡೆಯುತ್ತದೆ.

ಇದನ್ನೂ ಓದಿ: ಬೀರಲಿಂಗೇಶ್ವರ ಕಾರ್ತಿಕೋತ್ಸದ ಪ್ರಯುಕ್ತ ಕೆಂಡೋತ್ಸವ ಹಾಗೂ ಕುಸ್ತಿ; ಪೈಲ್ವಾನರಿಗೆ ಶುಭ ಹಾರೈಸಿದ ಶಾಸಕ ರೇಣುಕಾಚಾರ್ಯ

Published On - 7:33 am, Sun, 2 January 22