ದಾವಣಗೆರೆ: ಹಿಂದೂ ದೇವರ ಜಾತ್ರೆಗಳಿಗೆ ಅನ್ಯಧರ್ಮದ ವ್ಯಾಪಾರಸ್ಥರಿಗೆ ಅವಕಾಶ ಕೊಡಬಾರದೆಂಬ ಕೂಗು ರಾಜ್ಯದೆಲ್ಲೆಡೆ ಕೇಳಿ ಬರುತ್ತಿದೆ. ಈ ವಿವಾದಕ್ಕೆ ಸಂಬಂಧಿಸಿ ಹೊಸದೊಂದು ಹೋರಾಟಕ್ಕೆ ಮುಸ್ಲಿಂ ಮಹಿಳೆಯರು ನಾಂದಿಯಾಡಿದ್ದಾರೆ. ದಾವಣಗೆರೆ ಅರಳಿಮರದ ಸರ್ಕಲ್ ನಲ್ಲಿ ಮುಸ್ಲಿಂ ಮಹಿಳೆಯರು ಮೌನ ಪ್ರತಿಭಟನೆ ನಡೆಸಿದ್ದಾರೆ.
ಹಿಂದೂ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ, ಬಹಿಷ್ಕಾರದಂತಹ ಬೆಳವಣಿಗೆಗಳನ್ನ ಖಂಡಿಸಿ ದಾವಣಗೆರೆ ನಗರದ ಅರಳಿಮರದ ಸರ್ಕಲ್ನಲ್ಲಿ ಮುಸ್ಲಿಂ ಮಹಿಳೆಯರು ಮೌನ ಧರಣಿ ನಡೆಸಿದ್ದಾರೆ. ಹಿಜಾಬ್ ಹೆಸರಲ್ಲಿ ನಡೆಯುತ್ತಿರುವ ಬೆಳವಣಿಗೆ ನಿಲ್ಲಬೇಕು. ಎಲ್ಲರೂ ಬದುಕುವಂಥ ವಾತಾವರಣ ನಿರ್ಮಾಣವಾಗಲಿ. ರಾಜ್ಯದಲ್ಲಿ ಶಾಂತಿ ನೆಲೆಸುವವರೆಗೂ ಪ್ರತಿಭಟನೆ ನಿಲ್ಲಲ್ಲ ಎಂದು ದಾವಣಗೆರೆಯಲ್ಲಿ ಮುಸ್ಲಿಮ್ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಸವರಾಜ್ ಬೊಮ್ಮಾಯಿ ಎಲ್ಲರ ಮುಖ್ಯಮಂತ್ರಿ. ಕೇವಲ ಒಂದು ಕೋಮು ಪಂಗಡಕ್ಕೆ ಮಾತ್ರ ಸೀಮಿತವಲ್ಲ. ಹಿಜಾಬ್ ವಿಚಾರಕ್ಕೆ ಸಂಬಂಧಪಟ್ಟ ಬಹಿಷ್ಕಾರದಂತಹ ಚಟುವಟಿಕೆ ನಡೆಯುತ್ತಿದೆ. ಬಹಿಷ್ಕಾರದ ಹೆಸರಿನಲ್ಲಿ ಬಡವರ ಶೋಷಣೆಯಾಗುತ್ತಿದೆ. ಸಂವಿಧಾನ ಬದ್ಧ ಪ್ರತಿಭಟನೆ ಮಾಡುತ್ತಿದ್ದೇವೆ. ನನ್ನ ದೇಶದಲ್ಲಿ ಆಶಾಂತಿ ವಾತಾವರಣ ಕದಡುವ ಪ್ರಯತ್ನದ ವಿರುದ್ಧ ನನ್ನ ಪ್ರತಿಭಟನೆ. ಇದು ಎಲ್ಲಿಯವೆರಗೆ ನಡೆಯುತ್ತೋ ನಮಗೆ ಗೊತ್ತಿಲ್ಲ ರಾಜ್ಯದಲ್ಲಿ ಶಾಂತಿ ನೆಲಸುವವರೆಗೂ ನನ್ನ ಪ್ರತಿಭಟನೆ ಎಂದು ಮಹಿಳೆ ತಿಳಿಸಿದ್ದಾರೆ.
ಹಿಂದೂ ಜಾತ್ರೆಗಳಲ್ಲಿ ಮುಸ್ಲಿಮರ ವ್ಯಾಪಾರಕ್ಕಿಲ್ಲ ಜಾಗ, ಭಜರಂಗ ದಳದಿಂದ ಕ್ಯಾಂಪೇನ್
ಹಿಜಾಬ್(Hijab) ಸಂಬಂಧ ಹೈಕೋರ್ಟ್(High Court) ತೀರ್ಪು ಹೊರ ಬೀಳುತ್ತಿದ್ದಂತೆ ಕೆಲ ಮುಸ್ಲಿಮರು ತೀರ್ಪನ್ನು ವಿರೋಧಿಸಿದ್ದರು. ಭಟ್ಕಳದಲ್ಲಿ ಮುಸ್ಲಿಂ ವರ್ತಕರು ಅಂಗಡಿಗಳನ್ನು ಮುಚ್ಚಿ ವಿರೋಧ ವ್ಯಕ್ತಪಡಿಸಿದ್ದರು. ಹೈಕೋರ್ಟ್ ಆದೇಶ ವಿರೋಧಿಸಿ ಧರಣಿಗೆ ಕರೆ ನೀಡಿದ್ದರು. ಹೀಗಾಗಿ ಕಾಪು ಮಾರಿ ಪೂಜೆಯಲ್ಲಿ(Kapu mari puja) ಮುಸ್ಲಿಂ ವ್ಯಾಪಾರಿಗಳಿಗೆ ವ್ಯಾಪಾರಕ್ಕೆ ಅವಕಾಶ ನೀಡದಂತೆ ಹಿಂದೂ ಸಂಘಟನೆಗಳು ಒತ್ತಾಯ ಮಾಡಿವೆ. ಉಡುಪಿ ಜಿಲ್ಲೆಯ ಕಾಪು ತಾಲೂಕಿನಲ್ಲಿರುವ ಮಾರಿಗುಡಿ ಹರಾಜಿನಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡಿಲ್ಲ. ಹಿಂದೂ ದೇಗುಲಗಳಲ್ಲಿ ಮುಸ್ಲಿಮರಿಗೆ ವ್ಯಾಪಾರಕ್ಕೆ ಅವಕಾಶ ನೀಡದಂತೆ ವಿವಿಧ ದೇಗುಲಗಳ ಮುಂದೆ ಬೇಡಿಕೆ ಇಡಲಾಗಿದೆ. ಮಂಗಳೂರಿನ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ಹೇರಲಾಗಿದೆ.
ಹಿಂದೂ ಜಾತ್ರೆಗಳಲ್ಲಿ ಮುಸ್ಲಿಮರಿಗೆ ವ್ಯಾಪಾರಕ್ಕೆ ನಿರ್ಬಂಧ ಹಿನ್ನೆಲೆ ಶಿವಮೊಗ್ಗ ನಗರದ ಪ್ರಸಿದ್ಧ ಮಾರಿಕಾಂಬ ಜಾತ್ರೆಯಲ್ಲೂ ನಿರ್ಬಂಧ ಹೇರಲಾಗಿದೆ. ಬಜರಂಗದಳ ಕಾರ್ಯಕರ್ತರ ಹರ್ಷ ಕೊಲೆ ಪರಿಣಾಮ ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಮಾರಿಕಾಂಬ ಜಾತ್ರೆಯನ್ನು ಇಂದಿನಿಂದ ಆರಂಭಿಸಲಾಗಿದೆ. ಜಾತ್ರೆಯಲ್ಲಿ ಕೇವಲ ಹಿಂದೂ ವ್ಯಾಪಾರಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ ಈ ಬಗ್ಗೆ ಬಜರಂಗದಳ ಮುಖಂಡ ದೀನ್ ದಯಾಳ್ ಮಾಹಿತಿ ನೀಡಿದ್ದಾರೆ.
ನಮ್ಮ ಸಮುದಾಯ ಶಿಕ್ಷಣದಿಂದ ವಂಚಿತರಾಗಬಾರದು: ಮುಸ್ಲಿಂ ಸಮುದಾಯಕ್ಕೆ ಉಡುಪಿ ಖಾಜಿ ಕಿವಿಮಾತು
Published On - 5:17 pm, Sun, 27 March 22