ಕಳವಾಗಿದ್ದ ನವಜಾತ ಶಿಶು 20 ದಿನಗಳ ಬಳಿಕ ಪತ್ತೆ; ಬಸ್ ನಿಲ್ದಾಣದಲ್ಲಿ ವೃದ್ಧೆ ಕೈಗೆ ಮಗು ಕೊಟ್ಟು ಪರಾರಿಯಾದ ಮಹಿಳೆ
ಬಸ್ ನಿಲ್ದಾಣದಲ್ಲಿ ನಿಂತಿದ್ದ ವೃದ್ಧೆಯೊಬ್ಬರ ಕೈಗೆ ಮಗು ಕೊಟ್ಟು ಮಹಿಳೆ ಪರಾರಿ ಆಗಿದ್ದಾರೆ. ಬಳಿಕ, ಸ್ಥಳಕ್ಕೆ ದಾವಣಗೆರೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ವೈದ್ಯಕೀಯ ಪರೀಕ್ಷೆ ಬಳಿಕ ಪೋಷಕರಿಗೆ ಮಗು ಹಸ್ತಾಂತರ ಮಾಡಲಾಗುತ್ತದೆ.
ದಾವಣಗೆರೆ: ಬರೋಬ್ಬರಿ 20 ದಿನಗಳ ಹಿಂದೆ ಕಳವಾಗಿದ್ದ ಮಗು ಆಶ್ಚರ್ಯಕರ ರೀತಿಯಲ್ಲಿ ಪತ್ತೆಯಾದ ಘಟನೆ ದಾವಣಗೆರೆಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ. ಬಸ್ ನಿಲ್ದಾಣದಲ್ಲಿ ನಿಂತಿದ್ದ ವೃದ್ಧೆಯೊಬ್ಬರ ಕೈಗೆ ಮಗು ಕೊಟ್ಟು ಮಹಿಳೆ ಪರಾರಿ ಆಗಿದ್ದಾರೆ. ಬಳಿಕ, ಸ್ಥಳಕ್ಕೆ ದಾವಣಗೆರೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ವೈದ್ಯಕೀಯ ಪರೀಕ್ಷೆ ಬಳಿಕ ಪೋಷಕರಿಗೆ ಮಗು ಹಸ್ತಾಂತರ ಮಾಡಲಾಗುತ್ತದೆ. ಯಾರ ಮಗು ಎಂದು ಖಚಿತವಾದ ಬಳಿಕ ಮಗುವನ್ನು ಹಸ್ತಾಂತರ ಮಾಡಲಿದ್ದಾರೆ. ದಾವಣಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ 20 ದಿನಗಳ ಹಿಂದೆ ಮಗು ಕಳ್ಳತನವಾಗಿತ್ತು. ಮಾರ್ಚ್ 16ರಂದು ದಾವಣಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಮಗು ಕಳವು ಮಾಡಲಾಗಿತ್ತು. ಇಸ್ಮಾಯಿಲ್ ಜಬೀವುಲ್ಲಾ, ಉಮೇಸಲ್ಮಾ ದಂಪತಿ ಮಗು ಇದೀಗ ಮತ್ತೆ ಮಡಿಲು ಸೇರಿದೆ. ವಿಜಯನಗರ ಜಿಲ್ಲೆಯ ಹರಪನಹಳ್ಳಿ ಮೂಲದ ಇಸ್ಮಾಯಿಲ್ ಜಬೀವುಲ್ಲಾ ಹಾಗೂ ಉಮೇಸಲ್ಮಾ ದಂಪತಿಗಳ ಗಂಡು ಮಗು ಕಳ್ಳತನವಾಗಿತ್ತು.
ದಾವಣಗೆರೆ: ಕುಡಿಯುವ ನೀರನ್ನು ಕಲುಷಿತಗೊಳಿಸುತ್ತಿರುವ ಕಿಡಿಗೇಡಿಗಳು
ಕುಡಿಯುವ ನೀರನ್ನು ಕಿಡಿಗೇಡಿಗಳು ಕಲುಷಿತಗೊಳಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಜಮಾಪುರದಲ್ಲಿ ನೀರಿನ ಟ್ಯಾಂಕ್‌ಗೆ ಕಿಡಿಗೇಡಿಗಳು ಕಸ ತುಂಬಿದ್ದಾರೆ. ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಜಮಾಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಕಳೆದ 3 ತಿಂಗಳಿಂದ ನೀರು ಕಲುಷಿತ ಮಾಡುತ್ತಿರುವ ಹಿನ್ನೆಲೆ ತೋರಣಗಟ್ಟೆ ಗ್ರಾಮ ಪಂಚಾಯತಿ ಪಿಡಿಒ ಜಗಳೂರು ಠಾಣೆಗೆ ದೂರು ನೀಡಿದ್ದಾರೆ.
ಚಿತ್ರದುರ್ಗ: ಗ್ಯಾರೇಜ್‌ನಲ್ಲಿ ಅಗ್ನಿ ಅವಘಡ
ಮುರುಘಾ ಮಠದ ಬಳಿಯಿರುವ ಗ್ಯಾರೇಜ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದ ಘಟನೆ ನಡೆದಿದೆ. ಗ್ಯಾರೇಜ್‌ನಲ್ಲಿ ಇದ್ದ 2 ಲಾರಿ, 1 ಕಾರು ಬೆಂಕಿಗಾಹುತಿ ಆಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಚಿತ್ರದುರ್ಗ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನೂ ಓದಿ: Crime News: ರಾತ್ರಿ ಬಸ್ನಲ್ಲಿ ಮೈ-ಕೈ ಮುಟ್ಟಿದವನಿಗೆ ಪಿನ್ನಲ್ಲಿ ಚುಚ್ಚಿ, ಪೊಲೀಸ್ ಠಾಣೆಗೆ ಎಳೆದೊಯ್ದ ಮಹಿಳೆ
ಇದನ್ನೂ ಓದಿ: Bengaluru Crime: ವಾಕಿಂಗ್ ಮಾಡುವ ಮಹಿಳೆಯರ ಪೋಟೋ ವಿಡಿಯೋ ತೆಗೆಯುತ್ತಿದ್ದ ವ್ಯಕ್ತಿಯ ಬಂಧನ