ವಾಗೀಶ್ ಸ್ವಾಮಿಗೆ ಟಿಕೆಟ್ ಇಲ್ಲ ಎಂದ ಸಿದ್ದೇಶ್ವರ: ರೇಣುಕಾಚಾರ್ಯ ಆಪ್ತರಿಗೆ ಹಿನ್ನಡೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 28, 2022 | 11:36 AM

ಮೀಸಲು ಕ್ಷೇತ್ರದಲ್ಲಿ ಮುಂದಿನ ಬಿಜೆಪಿ ಅಭ್ಯರ್ಥಿ ಎಂದು ಕೆಲವರು ಓಡಾಡುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಕೆಲವರು ಬೇಡ ಜಂಗಮ ಎಸ್​ಸಿ ಎಂದು ಜಾತಿ ಪ್ರಮಾಣ ಪತ್ರಗಳನ್ನು ಪಡೆದಿದ್ದಾರೆ. ಅಂಥವರಿಗೆ ಬಿಜೆಪಿ ಟಿಕೆಟ್ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ವಾಗೀಶ್ ಸ್ವಾಮಿಗೆ ಟಿಕೆಟ್ ಇಲ್ಲ ಎಂದ ಸಿದ್ದೇಶ್ವರ: ರೇಣುಕಾಚಾರ್ಯ ಆಪ್ತರಿಗೆ ಹಿನ್ನಡೆ
ಶಾಸಕ ಎಂ.ಪಿ.ರೇಣುಕಾಚಾರ್ಯ ಮತ್ತು ಸಂಸದ ಜಿ.ಎಂ.ಸಿದ್ದೇಶ್ವರ
Follow us on

ದಾವಣಗೆರೆ: ಬೇಡಜಂಗಮ ಎಸ್​ಸಿ ಪ್ರಮಾಣ ಪತ್ರ ಪಡೆದವರಿಗೆ ಬಿಜೆಪಿ ಟಿಕೆಟ್ ಕೊಡಲು ಆಗುವುದಿಲ್ಲ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಸ್ಪಷ್ಟಪಡಿಸಿದರು. ಮೀಸಲು ಕ್ಷೇತ್ರದಲ್ಲಿ ಮುಂದಿನ ಬಿಜೆಪಿ ಅಭ್ಯರ್ಥಿ ಎಂದು ಕೆಲವರು ಓಡಾಡುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಕೆಲವರು ಬೇಡ ಜಂಗಮ ಎಸ್​ಸಿ ಎಂದು ಜಾತಿ ಪ್ರಮಾಣ ಪತ್ರಗಳನ್ನು ಪಡೆದಿದ್ದಾರೆ. ಅಂಥವರಿಗೆ ಬಿಜೆಪಿ ಟಿಕೆಟ್ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಬೇಡ ಜಂಗಮ ಜಾತಿ ಪ್ರಮಾಣಪತ್ರ ಪಡೆದವರಿಗೆ ಟಿಕೆಟ್ ಕೊಟ್ಟು ದೊಡ್ಡ ಸಮುದಾಯವಾದ ದಲಿತರನ್ನು ಎದುರು ಹಾಕಿಕೊಳ್ಳಲು ಆಗುವುದಿಲ್ಲ. ವಾಗೀಶ್ ಸ್ವಾಮಿಗೆ ಬಿಜೆಪಿ ಟಿಕೆಟ್ ಕೊಡುವುದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದೇವೆ ಎಂದರು. ವಾಗೀಶ್ ಸ್ವಾಮಿ ಅವರು ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ.

ಭಯವಿಲ್ಲದೆ ಪರೀಕ್ಷೆ ಬರೆಯಿರಿ

ಹೈಕೋರ್ಟ್ ಆದೇಶ ಪಾಲನೆ ಮಾಡಿ, ಯಾವುದೇ ತಾವುದೇ ಭಯವಿಲ್ಲದೆ ಪರೀಕ್ಷೆ ಬರೆಯಿರಿ. ದಾವಣಗೆರೆ ಸಂಸದ ಜಿಎಂ ಸಿದ್ದೇಶ್ವರ ಎಸ್ಎಸ್ಎಲ್​ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಶುಭಹಾರೈಕೆ. ಈಗಾಗಲೇ ಹಿಜಾಬ್ ವಿಚಾರವಾಗಿ ಹೈಕೋರ್ಟ್ ತೀರ್ಪು ನೀಡಿದೆ. ನ್ಯಾಯಾಲಯದ ತೀರ್ಪು ಗೌರವಿಸಬೇಕಾದ್ದು ಪ್ರತಿಯೊಬ್ಬರ ಜವಾಬ್ದಾರಿ. ಹೈಕೋರ್ಟ್ ತೀರ್ಪಿನಂತೆ ನಡೆದುಕೊಂಡು ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಿ, ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದ ಸಂಸದ ಜಿಎಂ ಸಿದ್ದೇಶ್ವರ ಕರೆ ನೀಡಿದ್ದಾರೆ.

ನನ್ನ ತಪ್ಪಿದ್ದರೆ ನೇಣಿಗೆ ಹಾಕಲಿ -ಶಾಸಕ ಎಂ.ಪಿ.ರೇಣುಕಾಚಾರ್ಯ

ಬೆಂಗಳೂರು: ನನ್ನ ಮಗಳ ಜಾತಿ ಪ್ರಮಾಣ ಪತ್ರ ವಿಚಾರದಲ್ಲಿ ತನಿಖೆ ಆಗಲಿ. ನನ್ನ ತಪ್ಪಿದ್ದರೆ ನೇಣಿಗೆ ಹಾಕಲಿ ಎಂದು ದಾವಣಗೆರೆಯಲ್ಲಿ ಶಾಸಕ ಎಂ.ಪಿ.ರೇಣುಕಾಚಾರ್ಯ(MP Renukacharya) ಆಕ್ರೋಶ ಹೊರ ಹಾಕಿದ್ದಾರೆ. ನನ್ನ ಬಗ್ಗೆ ಯಾವುದೇ ಆರೋಪ ಮಾಡಿದ್ರೂ ಸಹಿಸಿಕೊಳ್ಳುತ್ತೇನೆ. ನನ್ನ ಮಗಳನ್ನ ಈ ವಿವಾದದಲ್ಲಿ ಎಳೆದು ತರುವುದನ್ನ ನಾನು ಸಹಿಸಲ್ಲ ಎಂದಿದ್ದಾರೆ.

ಶಾಸಕ ರೇಣುಕಾಚಾರ್ಯ ಪುತ್ರಿಯ ಜಾತಿ ಪ್ರಮಾಣ ಪತ್ರದ ವಿವಾದ ಇನ್ನಷ್ಟು ತೀವ್ರತೆ ಪಡೆದುಕೊಳ್ಳುತ್ತಿದೆ. ಸ್ವಪಕ್ಷದ ಶಾಸಕರೇ ರೇಣುಕಾಚಾರ್ಯ ವಿರುದ್ಧ ತಿರುಗಿ ಬಿದ್ದಿದ್ದಾರೆ. ಜೊತೆಗೆ ಬಿಜೆಪಿ ಜಿಲ್ಲಾ ಕೋರ್ ಕಮಿಟಿಯಲ್ಲಿ ಸಹ ಈ ಬಗ್ಗೆ ಬಿಸಿ ಬಿಸಿ ಚರ್ಚೆ ಆಗುತ್ತಿದೆ. ಆದ್ರೆ ನನ್ನ ಪುತ್ರಿ ಒಂಬತ್ತನೇ ತರಗತಿ ಓದುತ್ತಿರುವಾಗ ಸಹೋದರ ಸಹಿ ಮಾಡಿಸಿ ಬೇಡ ಜಂಗಮ ಪ್ರಮಾಣ ಪತ್ರ ಪಡೆದಿದ್ದಾನೆ ಎಂಬುದು ರೇಣುಕಾಚಾರ್ಯ ವಾದ. ಆದ್ರೆ ಜಾತಿ ಹೆಸರಿನಲ್ಲಿ ಆ ನಾಲ್ವತ್ತು ಲಕ್ಷ ಹಣ ಎಲ್ಲಿ ಎಂಬ ಹತ್ತಾರು ಸಂಶಯಗಳು ರೇಣುಕಾಚಾರ್ಯ ಸುತ್ತ ಸುತ್ತಿಕೊಳ್ಳುತ್ತಿವೆ. ಈಗ ಶಾಸಕ ರೇಣುಕಾಚಾರ್ಯ ಜಾತಿ ಜಗಳದ ಕೇಂದ್ರ ಬಿಂದು ಆಗಿದ್ದಾರೆ.

ಇದನ್ನೂ ಓದಿ: ನನ್ನ ಮಗಳ ಜಾತಿ ಪ್ರಮಾಣ ಪತ್ರ ವಿಚಾರದಲ್ಲಿ ತನಿಖೆ ಆಗಲಿ, ನನ್ನ ತಪ್ಪಿದ್ದರೆ ನೇಣಿಗೆ ಹಾಕಲಿ -ಶಾಸಕ ಎಂ.ಪಿ.ರೇಣುಕಾಚಾರ್ಯ

ಇದನ್ನೂ ಓದಿ: ಪ್ರತಿ ವರ್ಷ ಮಾರ್ಚ್ 16ರಂದು ಜಗದ್ಗುರು ರೇಣುಕಾಚಾರ್ಯ ಜಯಂತಿ ಆಚರಣೆ; ರಾಜ್ಯ ಸರ್ಕಾರದಿಂದ ಆದೇಶ ಪ್ರಕಟ