ದಾವಣಗೆರೆ: ಕೊವಿಡ್ ಭೀತಿ ಹಿನ್ನಲೆ ಜನವರಿ 14, 15ರಂದು ಹರಿಹರದ ಪಂಚಮಸಾಲಿ ಮಠದಲ್ಲಿ ಆಯೋಜಿಸಲಾಗಿದ್ದ ಜಾತ್ರೆಯನ್ನು ರದ್ದು ಮಾಡಲಾಗಿದೆ. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಸಿಎಂ ಬಸವರಾಜ್ ಬೊಮ್ಮಾಯಿ (Basavaraj Bommai) ಆಗಮಿಸಬೇಕಿದ್ದ ಜಾತ್ರೆಯನ್ನು ಉಪರಾಷ್ಟ್ರಪತಿಯವರ ಮನವಿ ಮೇರೆಗೆ ಮುಂದೂಡಲಾಗಿದೆ. ಕೊವಿಡ್ ನಿಯಮ ಕಾಪಾಡುವುದು ಎಲ್ಲರ ಕರ್ತವ್ಯ ಹೀಗಾಗಿ ಜನವರಿ 14, 15 ರಂದು ಮನೆಯಲ್ಲಿ ರುದ್ರಾಕ್ಷಿ ಹಿಡಿದು ಹರ ಜಪ ಮಾಡಲಾಗುವುದು ಎಂದು ದಾವಣಗೆರೆ ಜಿಲ್ಲೆ ಹರಿಹರದಲ್ಲಿ ವಚನಾನಂದ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.
ಬೆಂಗಳೂರು: ಸಾರ್ವಜನಿಕರಲ್ಲಿ ಪಾಸಿಟಿವಿಟಿ ರೇಟ್ ಕಂಡು ಜನರಲ್ಲಿ ಆತಂಕ
ಬೆಂಗಳೂರಿನಲ್ಲಿ ಕೊರೊನಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ. ಹೀಗಾಗಿ ಬೆಂಗಳೂರು ದಕ್ಷಿಣ ವಲಯದಲ್ಲಿ ಹೆಚ್ಚು ಜನರು ಕೊವಿಡ್ ಪರೀಕ್ಷೆಗೆ ಆಗಮಿಸುತ್ತಿದ್ದಾರೆ. ಆರ್ಎಟಿ ಟೆಸ್ಟ್ ಮಾಡಿಸಿದ್ದ 44 ಜನರ ಪೈಕಿ 12 ಜನರಿಗೆ ಪಾಸಿಟಿವ್ ಆಗಿದೆ ಎಂದು ಆರೋಗ್ಯ ಇಲಾಖೆ ಉನ್ನತ ಮೂಲಗಳಿಂದ ಮಾಹಿತಿ ದೊರೆತಿದೆ.
ದಕ್ಷಿಣ ವಲಯ ಜೊನ್ನಲ್ಲಿ ಇಂದಿನ ಕೊರೊನಾ ಪ್ರಕರಣಗಳ ಮಾಹಿತಿ
ಆಡುಗುಡಿ 52, ಬಿಟಿಎಂ ಲೇಔಟ್ 52, ಈಜಿಪುರ 55, ಜಕ್ಕಸಂದ್ರ 20, ಕೋರಮಂಗಲ 113, ಲಕ್ಕಸಂದ್ರ 14, ಮತ್ತು ಇನ್ನಿತರ 14. ಹೀಗೆ ಒಟ್ಟು 425 ಕೇಸ್ಗಳು ಪತ್ತೆ ಆಗಿವೆ.
ಚಾಮರಾಜನಗರ: ಓಂ ಶಕ್ತಿಗೆ ಹೋಗಿಬಂದಿದ್ದ 17 ಜನರಿಗೆ ಕೊರೊನಾ ಪಾಸಿಟಿವ್
ಚಾಮರಾಜನಗರ ಜಿಲ್ಲೆಯಲ್ಲಿ 17 ಜನರಿಗೆ ಕೊವಿಡ್ ಸೋಂಕು ದೃಢಪಟ್ಟಿದೆ. ಓಂ ಶಕ್ತಿಗೆ ಹೋಗಿಬಂದಿದ್ದ 17 ಭಕ್ತರಿಗೆ ಪಾಸಿಟಿವ್ ಬಂದಿದ್ದರಿಂದ ಜನರಲ್ಲಿ ಭೀತಿ ಎದುರಾಗಿದೆ. ಹನೂರು ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಆದರೆ ಸೋಂಕಿನ ಪ್ರಮಾಣ ಹೆಚ್ಚುತ್ತಿದ್ದರೂ ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿದೆ.
ಇದನ್ನೂ ಓದಿ:
ಪಂಚಮಸಾಲಿ ಮೀಸಲಾತಿ: ಸರ್ಕಾರಕ್ಕೆ ಲೈಫ್ಲೈನ್ ನೀಡಿದ್ದೇವೆ ಎಂದ ವಚನಾನಂದ ಸ್ವಾಮೀಜಿ
Published On - 4:56 pm, Mon, 10 January 22