ದಾವಣಗೆರೆಯಲ್ಲಿ ಸುದ್ದಿ ವಾಹಿನಿಗಳ ಹೆಸರಲ್ಲಿ ಸುಲಿಗೆ ಮಾಡುತ್ತಿದ್ದ ಆರೋಪಿಗಳು ಅರೆಸ್ಟ್!
ದಾವಣಗೆರೆ ಜಿಲ್ಲೆಯ ಹರಿಹರ ಗ್ರಾಮಾಂತರ ಠಾಣೆಯ ಪೊಲೀಸರ ಕಾರ್ಯಾಚರಣೆಯಲ್ಲಿ ರಾಘವೇಂದ್ರ ಅಲಿಯಾಸ್ ರಾಘು, ಅಣ್ಣಪ್ಪ, ಸಂತೋಷ ಗುಡಿಮನಿ ಹಾಗೂ ಪಕ್ಕಿರೇಶ್ ಎಂಬುವವರು ಅರೆಸ್ಟ್ ಆಗಿದ್ದಾರೆ.
ದಾವಣಗೆರೆ: ಸುದ್ದಿ ವಾಹಿನಿಗಳ (News Channels) ಹೆಸರಲ್ಲಿ ಸುಲಿಗೆ (Extortion) ಮಾಡುತ್ತಿದ್ದ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ದಾವಣಗೆರೆ ಜಿಲ್ಲೆಯ ಹರಿಹರ ಗ್ರಾಮಾಂತರ ಠಾಣೆಯ ಪೊಲೀಸರ ಕಾರ್ಯಾಚರಣೆಯಲ್ಲಿ ರಾಘವೇಂದ್ರ ಅಲಿಯಾಸ್ ರಾಘು, ಅಣ್ಣಪ್ಪ, ಸಂತೋಷ ಗುಡಿಮನಿ ಹಾಗೂ ಪಕ್ಕಿರೇಶ್ ಎಂಬುವವರು ಅರೆಸ್ಟ್ ಆಗಿದ್ದಾರೆ. ಬಂಧಿತ ಆರೋಪಿಗಳು ಖಾಸಗಿ ಸುದ್ದಿ ವಾಹಿನಿಗಳ ಪ್ರತಿನಿಧಿಗಳೆಂದು ಹಣಕ್ಕೆ ಬೇಡಿಕೆ ಇಟ್ಟಿದ್ದರು. ರೈತನೊಬ್ಬ ಮಣ್ಣು ತುಂಬುವ ಸ್ಥಳಕ್ಕೆ ಹೋಗಿ ಮಣ್ಣು ತುಂಬುವುದು ಕಾನೂನು ಬಾಹಿರ ಅಂತ ಹೇಳಿ ಸುದ್ದಿ ಪ್ರಸಾರ ಮಾಡದಿರಲು 50 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದರು.
ಈ ವಿಚಾರ ಪೊಲೀಸರ ಗಮನಕ್ಕೆ ಬಂದ ಹಿನ್ನೆಲೆ ಆರೋಪಿಗಳು ನಕಲಿ ಪತ್ರಕರ್ತರು ಅಂತ ಗೊತ್ತಾಗಿದೆ. ನಂತರ ಆರೋಪಿಗಳನ್ನ ವಶಕ್ಕೆ ಪಡೆದಿದ್ದಾರೆ. ಸಾಬ್ ಜಾನ್ ಎಂಬ ಇನ್ನೊಬ್ಬ ಆರೋಪಿ ಪರಾರಿಯಾಗಿದ್ದಾನೆ. ಬಂಧಿತ ಆರೋಪಿಗಳು ಹರಿಹರ ತಾಲೂಕಿನ ವಿವಿಧ ಗ್ರಾಮದ ನಿವಾಸಿಗಳು.
ಬಿಜೆಪಿ ಮುಖಂಡನನ್ನು ತರಾಟೆಗೆ ತೆಗೆದುಕೊಂಡ ದಲಿತ ಮುಖಂಡರು: ಬಿಜೆಪಿ ಮುಖಂಡನನ್ನು ದಲಿತ ಮುಖಂಡರು ತರಾಟೆಗೆ ತೆಗೆದುಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಿಜೆಪಿ ಮುಖಂಡ ದಾವಣಗೆರೆ ಜಿಲ್ಲೆಯ ಮಾಯಕೊಂಡ ಎಸ್ಸಿ ಮೀಸಲು ಕ್ಷೇತ್ರಕ್ಕೆ ಸ್ಪರ್ಧೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ದಲಿತ ಮುಖಂಡ ಕುಂದವಾಡ ಮಂಜುನಾಥ ಮಾಜಿ ಶಾಸಕ ಬಿಪಿ ಹರೀಶ್ ಸಮ್ಮುಖದಲ್ಲಿ ಬಿಜೆಪಿ ಮುಖಂಡ ವಾಗೀಶ್ ಸ್ವಾಮಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಡೀಸೆಲ್ ಕಳ್ಳನ ಮೇಲೆ ಗುಂಡು ಹಾರಿಸಿದ ಪೊಲೀಸರು: ಡೀಸೆಲ್ ಕಳ್ಳನ ಮೇಲೆ ಬೆಂಗಳೂರಿನ ಜಿಗಣಿ ಠಾಣೆ ಪೊಲೀಸರು ಗುಂಡು ಹಾರಿಸಿದ್ದಾರೆ. ಶ್ರೀನಿವಾಸ್ ಅಲಿಯಾಸ್ ರಾಜು ಕಾಲಿಗೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಜಿಗಣಿಯ ಡಿಎಲ್‌ಎಫ್ ಬಳಿ ಘಟನೆ ನಡೆದಿದೆ. ಆರೋಪಿ ರಸ್ತೆಬದಿ ನಿಲ್ಲಿಸಿದ್ದ ವಾಹನಗಳಲ್ಲಿ ಡೀಸೆಲ್ ಕದಿಯುತಿದ್ದ. ಆರೋಪಿಗಳನ್ನ ಬಂಧಿಸುವ ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಿದ್ದರು. ಈ ವೇಳೆ ಒಬ್ಬ ಆರೋಪಿಗೆ ಪೊಲೀಸರು ಗುಂಡು ಹಾರಿಸಿ, ಇಬ್ಬರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ
Shreyas Iyer: ಅನುಭವಿಗಳ ವೈಫಲ್ಯ: ಅಬ್ಬರಿಸಿದ್ದು ಮಾತ್ರ 4ನೇ ಟೆಸ್ಟ್ ಪಂದ್ಯವಾಡುತ್ತಿರುವ ಶ್ರೇಯಸ್ ಅಯ್ಯರ್
Crime News: ಅನುಮಾನಾಸ್ಪದವಾಗಿ ವ್ಯಕ್ತಿ ಸಾವು; ಕಾರಿನಲ್ಲಿ ಸುಟ್ಟು ಕರಕಲಾದ ವ್ಯಕ್ತಿಯ ಮೃತದೇಹ
Published On - 9:20 am, Sun, 13 March 22