Crime News: ಅನುಮಾನಾಸ್ಪದವಾಗಿ ವ್ಯಕ್ತಿ ಸಾವು; ಕಾರಿನಲ್ಲಿ ಸುಟ್ಟು ಕರಕಲಾದ ವ್ಯಕ್ತಿಯ ಮೃತದೇಹ
ಕುಡುಕನಿಗೆ ರಕ್ತ ಬರುವಂತೆ ಪೊಲೀಸರು ಹೊಡೆದಿದ್ದಾರೆ. ಜಿಲ್ಲೆಯ ಮುಂಡರಗಿ ಪೊಲೀಸ್ ಠಾಣೆಯಲ್ಲಿ ರಾತ್ರಿ ಘಟನೆ ನಡೆದಿದ್ದು, ಮುಂಡರಗಿ ಪೊಲೀಸ್ ಠಾಣೆ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಆರೋಪ ಮಾಡಲಾಗಿದೆ.
ಬೆಂಗಳೂರು: ಅನುಮಾನಸ್ಪದವಾಗಿ (suspicious person) ಕಾರಿನಲ್ಲಿ ವ್ಯಕ್ತಿ ಮೃತದೇಹ ಸುಟ್ಟು ಕರಕಲಾದ ಘಟನೆ ಸಂಭವಿಸಿದೆ. ಆರ್. ಆರ್. ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ 10 ಗಂಟೆ ವೇಳಗೆ ಘಟನೆ ನಡೆದಿದೆ. ವ್ಯಕ್ತಿ ಮೃತದೇಹ ಕಾರಿನೊಳಗೆ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಕಂಡು ಬಂದಿದೆ. ಕಾರು ರಸ್ತೆಯಲ್ಲಿ ಹೊತ್ತಿ ಉರಿಯುತ್ತಿದ್ದನ್ನ ಗಮನಿಸಿದ ಸ್ಥಳೀಯರು ಮಾಹಿತಿ ನೀಡಿದ್ದಾರೆ. ನೈಸ್ ರಸ್ತೆ ಸಿಬ್ಬಂದಿ ಕೂಡಲೇ ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಕಾರಿನ ಒಳಭಾಗದಲ್ಲಿ ವ್ಯಕ್ತಿ ಮೃತದೇಹ ಸಂಪೂರ್ಣ ಸುಟ್ಟಿದೆ. ಮೃತಪಟ್ಟಿರುವ ವ್ಯಕ್ತಿ 40 ವರ್ಷದ ದರ್ಶನ್ ಎಂಬ ಮಾಹಿತಿ ಲಭ್ಯವಾಗಿದೆ. ದರ್ಶನ್ ಉತ್ತರಹಳ್ಳಿ ನಿವಾಸಿಯಾಗಿದ್ದು, ಕುಟುಂಬದವರ ಸಂಪರ್ಕ ಮಾಡಿದ್ದೇವೆ. ಬಿಪಿಓ ಕಂಪೆನಿಯಲ್ಲಿ ಅಡ್ಮಿನಾಗಿ ದರ್ಶನ್ ಕೆಲಸ ಮಾಡ್ತಿದ್ದಾಗಿ ಮಾಹಿತಿ ಸಿಕ್ಕಿದೆ. ಘಟನೆ ಕುರಿತು ಬೆಂ.ಉತ್ತರ ವಿಭಾಗ ಸಂಚಾರ ಡಿಸಿಪಿ ಸವಿತಾ ಹೇಳಿಕೆ ನೀಡಿದ್ದಾರೆ. ಸದ್ಯ ಘಟನೆ ಅನುಮಾನಾಸ್ಪದ ಕಂಡು ಬಂದಿದ್ದು, ತನಿಖೆ ನಡೆಸಲಾಗುತ್ತಿದೆ.
ಇತರೇ ಸುದ್ದಿಗಳು:
ಬೆಂಗಳೂರು: ಮದ್ಯಪಾನ ಮಾಡಿ ಟ್ರಾಫಿಕ್ ಎಎಸ್ ಐಗೆ ಬೈಕ್ ಸವಾರ ಗುದ್ದಿರುವಂತಹ ಘಟನೆ ನಡೆದಿದೆ. ಪೀಣ್ಯ ಮೇಲ್ಸೇತುವೆ ಮೇಲೆ ಘಟನೆ ನಡೆದಿದೆ. ಕರ್ತವ್ಯನಿರತ ಎಎಸ್‌ಐ ರಾಜಶೇಖರಯ್ಯಗೆ ಬೈಕ್ ಡಿಕ್ಕಿಯಾಗಿದ್ದು, ಕೈಗೆ ಗಂಭೀರ ಗಾಯವಾಗಿದೆ. ಪ್ಲೈ ಓವರ್ ಕ್ಲೋಸ್ ಇದಿದ್ದು ತಿಳಿಯದೇ ವೇಗವಾಗಿ ಬೈಕ್ ಸವಾರ ಬಂದಿದ್ದು, ಆತನನ್ನ ನಿಲ್ಲಿಸಲು ಹೋದಾಗ ಎಎಸ್ ಐ ರಾಜಶೇಖರಯ್ಯಗೆ ಡಿಕ್ಕಿ ಹೊಡೆದಿದ್ದಾನೆ. ಖಾಸಗಿ ಆಸ್ಪತ್ರೆಯಲ್ಲಿ ಎಸ್. ಐ ರಾಜಶೇಖರಯ್ಯಗೆ ಚಿಕಿತ್ಸೆ ನೀಡಲಾಗುತ್ತಿದೆ. ಬೈಕ್ ಸವಾರನನ್ನು ಯಶವಂತಪುರ ಸಂಚಾರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಗದಗ: ಕುಡುಕನಿಗೆ ರಕ್ತ ಬರುವಂತೆ ಪೊಲೀಸರು ಹೊಡೆದಿದ್ದಾರೆ. ಜಿಲ್ಲೆಯ ಮುಂಡರಗಿ ಪೊಲೀಸ್ ಠಾಣೆಯಲ್ಲಿ ರಾತ್ರಿ ಘಟನೆ ನಡೆದಿದ್ದು, ಮುಂಡರಗಿ ಪೊಲೀಸ್ ಠಾಣೆ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಆರೋಪ ಮಾಡಲಾಗಿದೆ. ಠಾಣೆಗೆ ಆಗಮಿಸಿ ಸಿಪಿಐ ಮತ್ತು ಸಿಬ್ಬಂದಿಯನ್ನು ಯುವಕನ ತಾಯಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಮೊನ್ನೆ ಹೆತ್ತವರ ಮೇಲೆ ಹಲ್ಲೆ ಮಾಡಿದ್ದಾನೆ ಅಂತ ಕಂಪ್ಲೀಟ್ ಕೊಟ್ರೆ ಕುಡಿದಿದ್ದಾನೆ ನಾವು ಮುಟ್ಟಲ್ಲ ಅಂತೀರಿ. ಈಗ್ಯಾಕೆ ನನ್ನ ಮಗನನ್ನು ಹೊಡೆದಿದ್ದೀರಿ. ಹೊಡೆಯೋಕೆ ನಿಮಗೆ ಅಧಿಕಾರ ಯಾರೂ ಕೊಟ್ರು. ತಪ್ಪು ಮಾಡಿದ್ರೆ ಕೇಸ್ ಹಾಕಿ. ಕುಡಿದ್ದಾನೆ ಅಂತ ಈ ರೀತಿ ರಕ್ತ ಬರುವಂತೆ ಯಾಕೇ ಹೊಡಿದ್ರಿ ಅಂತ ತರಾಟೆ ತೆಗೆದುಕೊಂಡಿದ್ದಾರೆ. ಡಿವೈಎಸ್ಪಿ ಅವ್ರಿಗೆ ಏಕವಚನದಲ್ಲಿ ಮಾತನಾಡಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದು, ನಾವು ಹೊಡೆದಿಲ್ಲ ಎಂದು ಸಿಪಿಐ ಸುನೀಲ್ ಸವದಿ ಹೇಳಿದರು. ಹಾಗಾದ್ರೆ ರಕ್ತ ಹೇಗೆ ಬಂತ್ತು ಅಂತ ತಾಯಿ ಪ್ರಶ್ನೆ ಮಾಡಿದ್ದು, ಪೊಲೀಸರೇ ಹೊಡೆದಿದ್ದಾರೆ ಎಂದು ಪುತ್ರ ಹೇಳಿದ್ದಾನೆ. ಮುಂಡರಗಿ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದೆ.
ಬೆಂಗಳೂರು: ಕ್ಲುಲಕ ಕಾರಣಕ್ಕೆ ವೃದ್ಧ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ನಡೆದಿದೆ. ಮನೆಯ ಮುಂದಿರುವ ಮರಕ್ಕೆ ವೃದ್ದ ನೇಣು ಹಾಕಿಕೊಂಡಿದ್ದಾನೆ. ಮಧ್ಯರಾತ್ರಿ 1:30ರ ವೇಳೆಗೆ ಘಟನೆ ನಡೆದಿದ್ದು, ಕೋದಂಡರಾಮ ವೆಂಕಟ (70) ಮೃತ ವ್ಯಕ್ತಿ. ಮರದಲ್ಲಿ ನೇತಾಡುತ್ತಿದ್ಧ ಮೃತದೇಹ ನೋಡಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಗ ಮತ್ತು ಸೊಸೆ ಜೊತೆ ವೃದ್ಧ ವಾಸವಾಗಿದ್ದ. ಮನೆಯಲ್ಲಿ ತಂದೆ ಜೊತೆ ಮಕ್ಕಳನ್ನ ಬಿಟ್ಟು ದೇವಸ್ಥಾನಕ್ಕೆ ತೆರಳಿದ್ಧ ಮಗ ಸೊಸೆ, ಈ ವೇಳೆ ಮನೆ ಮುಂದಿನ ಮರಕ್ಕೆ ನೇಣು ಹಾಕಿಕೊಂಡು ಮೃತಪಟ್ಟಿದ್ದಾರೆ. ಸ್ಥಳಕ್ಕೆ ಜೀವನಭೀಮ್ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಇದನ್ನೂ ಓದಿ:
ಕೊರೊನಾದಿಂದ ನಿಂತುಹೋಗಿದ್ದ ಮೇಲುಕೋಟೆ ವೈರಮುಡಿ ಉತ್ಸವ ಈ ಬಾರಿ ಅದ್ದೂರಿ! ಇಲ್ಲಿನ ಪುರಾಣ ಇತಿಹಾಸ ಏನು?
Published On - 7:30 am, Sun, 13 March 22