AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೋಟರ್ ಐಡಿ ಪರಿಷ್ಕರಣೆ ಅಕ್ರಮ ಪ್ರಕರಣ, ಪ್ರಜಾಪ್ರಭುತ್ವ ಎತ್ತಸಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ನಿವೃತ್ತ ನ್ಯಾ.ಸಂತೋಷ ಹೆಗ್ಡೆ

ಚುನಾವಣಾ ಆಯೋಗ ಸ್ವತಂತ್ರ ಸಂಸ್ಥೆಯಾಗಿದ್ದರೂ ಅವ್ಯವಹಾರ ಆಗಿದೆ. ಪ್ರಜಾಪ್ರಭುತ್ವ ಎತ್ತಸಾಗುತ್ತಿದೆ ಎಂಬುದು ಅರ್ಥವಾಗುತ್ತಿಲ್ಲವೆಂದು ನಿವೃತ್ತ ನ್ಯಾ.ಸಂತೋಷ ಹೆಗ್ಡೆ ಬೇಸರ ವ್ಯಕ್ತಪಡಿಸಿದ್ದಾರೆ.

ವೋಟರ್ ಐಡಿ ಪರಿಷ್ಕರಣೆ ಅಕ್ರಮ ಪ್ರಕರಣ, ಪ್ರಜಾಪ್ರಭುತ್ವ ಎತ್ತಸಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ನಿವೃತ್ತ ನ್ಯಾ.ಸಂತೋಷ ಹೆಗ್ಡೆ
ನಿವೃತ್ತ ನ್ಯಾ.ಸಂತೋಷ ಹೆಗ್ಡೆ
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on:Dec 01, 2022 | 2:59 PM

Share

ದಾವಣಗೆರೆ: ವೋಟರ್​ ಐಡಿ (voter ID) ಅಕ್ರಮ ಕಾನೂನಿಗೆ ವಿರುದ್ಧವಾಗಿದೆ. ಚುನಾವಣಾ ಆಯೋಗ ಸ್ವತಂತ್ರ ಸಂಸ್ಥೆಯಾಗಿದ್ದರೂ ಅವ್ಯವಹಾರ ಆಗಿದೆ. ಪ್ರಜಾಪ್ರಭುತ್ವ ಎತ್ತಸಾಗುತ್ತಿದೆ ಎಂಬುದು ಅರ್ಥವಾಗುತ್ತಿಲ್ಲವೆಂದು ನಿವೃತ್ತ ನ್ಯಾ.ಸಂತೋಷ ಹೆಗ್ಡೆ (Retired Justice Santosh Hegde) ಬೇಸರ ವ್ಯಕ್ತಪಡಿಸಿದ್ದಾರೆ. ದಾವಣಗೆರೆ ಜಿಲ್ಲಾಧಿಕಾರಿಗಳ ಕಚೇರಿಯ ತುಂಗಭದ್ರ ಸಭಾಂಗಣದಲ್ಲಿ ಇಂದು (ಡಿ.1) ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,  ವೋಟರ್​ ಐಡಿ ಅಕ್ರಮ ಪ್ರಕರಣ ಈ ನೆಲದ ಕಾನೂನುಗಳಿಗೆ ವಿರುದ್ದವಾಗಿದೆ. ಸಂವಿಧಾನಕ್ಕೆ ವಿರುದ್ದವಾಗಿದೆ. ಯಾರು ಇದ‌ನ್ನ ಸರಿ ಅಂತ ಒಪ್ಪಿಕೊಳ್ಳುವ ಹಾಗಿಲ್ಲ. ಪ್ರಜಾಪ್ರಭುತ್ವ ಮಟ್ಟ ಎತ್ತಾ ಸಾಗುತ್ತಿದೆ ಅರ್ಥ ಆಗುತ್ತಿಲ್ಲ ಎಂದು ನಿವೃತ್ತ ನ್ಯಾ.ಸಂತೋಷ ಹೆಗ್ಡೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಡಿ ವ್ಯವಸ್ಥೆಯೇ ಹಾಳಾಗಿದೆ, ಶ್ರೀಮಂತಿಕೆ ಹಾಗೂ ಅಧಿಕಾರಕ್ಕೆ ಮಾತ್ರ ಬೆಲೆ

ಜಗತ್ತಿನಲ್ಲಿ ಎಲ್ಲ ರೋಗಕ್ಕೂ ಔಷಧಿ ಇದೆ. ಆದರೆ ದುರಾಸೆಗೆ ಮಾತ್ರ ಔಷಧಿ ಇಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆ ಕೆಲವರರಿಂದ ಕೆಲವರಿಗಾಗಿ ಇರುವ ವ್ಯವಸ್ಥೆ ಆಗಿದೆ‌.‌ ಇಂದು ಎಲ್ಲ ರಂಗದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಭ್ರಷ್ಟಾಚಾರದಲ್ಲಿ ಶಾಮೀಲಾದ ಮೂರು ಜನ ಸಿಎಂಗಳ ಬಗ್ಗೆ ನ್ಯಾಯಾಲಯ ವರದಿ ಸಲ್ಲಿಸಿದ್ದೆ. ಆದರೆ ಸೂಕ್ತ ಕ್ರಮ‌ ಆಗಲಿಲ್ಲ. ಪ್ರಮಾಣಿಕರ ಬಗ್ಗೆ ಈ ಸಮಾಜದಲ್ಲಿ ಅಸಡ್ಡೆ ಶುರುವಾಗಿದೆ. ಅದನ್ನ ಕಂಡ್ರೆ ತಾನು ತಿನ್ನಲ್ಲ, ‌ನಮಗೂ ತಿನ್ನಲು ಬಿಡಲ್ಲ ಎನ್ನುತ್ತಿದ್ದಾರೆ ಜನ. ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಹಾಗೂ ಮಾಧ್ಯ‌ಮ‌‌ ಕ್ಷೇತ್ರಗಳಲ್ಲಿ ವ್ಯಾಪಕ‌ ಭ್ರಷ್ಟಾಚಾರ ಇದೆ. ಇದಕ್ಕೆ ಕಾರಣ ವ್ಯವಸ್ಥೆ. ಇಡಿ ವ್ಯವಸ್ಥೆಯೇ ಹಾಳಾಗಿದೆ. ಶ್ರೀಮಂತಿಕೆ ಹಾಗೂ ಅಧಿಕಾರಕ್ಕೆ ಮಾತ್ರ ಬೆಲೆ ಇದೆ. ಇದು ಬದಲಾಗಬೇಕು ಅಂದ್ರೆ ಯುವ ಜನಾಂಗ ವಿದ್ಯಾರ್ಥಿ ಸಮೂಹದ ಎಚ್ಚತ್ತು ಕೊಳ್ಳಬೇಕಿದೆ ಎಂದರು.

ಇದನ್ನೂ ಓದಿ: ರೌಡಿಗಳಿಗೂ ಬಿಜೆಪಿ ನಾಯಕರಿಗೂ ಏನು ಸಂಬಂಧ? ಮತ್ತೆ ಸರಣಿ ಟ್ವೀಟ್ ಮೂಲಕ ಕಾಂಗ್ರೆಸ್ ವಾಗ್ದಾಳಿ

ರೌಡಿಶೀಟರ್‌ಗಳು ರಾಜಕೀಯಕ್ಕೆ ಬರಬಾರದು ಇದಕ್ಕೆ ಕಡಿವಾಣ ಹಾಕಬೇಕು

ರೌಡಿಶೀಟರ್​​ಗಳನ್ನ ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳುತ್ತಿರುವ ವಿಚಾರವಾಗಿ ಅವರು ಪ್ರತಿಕ್ರಿಯೆ ನೀಡಿದ್ದು, ಎಲ್ಲರೂ ರಾಜಕೀಯಕ್ಕೆ ಬರಬೇಕು ಎಂದುಕೊಳ್ಳುತ್ತಿದ್ದಾರೆ. ಐಎಎಸ್‌ ಅಧಿಕಾರಿಗಳು, ಗೂಂಡಾಗಳು ರಾಜಕೀಯಕ್ಕೆ ಬರುತ್ತಿದ್ದಾರೆ. ಇಲ್ಲಿರುವಷ್ಟು ಸಂಪಾದನೆ ಎಲ್ಲಿಯೂ ಬರುವುದಿಲ್ಲ ಎಂದುಕೊಂಡಿದ್ದಾರೆ. ಇದೇ ಕಾರಣಕ್ಕೆ ರೌಡಿಶೀಟರ್‌ಗಳು ರಾಜಕೀಯಕ್ಕೆ ಬರುತ್ತಿದ್ದಾರೆ. ಇದಕ್ಕೆ ಕಡಿವಾಣ ಬೀಳಬೇಕು, ವ್ಯವಸ್ಥೆ ಸುಧಾರಣೆ ಆಗಬೇಕು. ಲೋಕಾಯುಕ್ತ ಈಗ ಅಧಿಕಾರ ಕೊಟ್ಟಿದ್ದಾರೆ ಅದು ಹೇಗೆ ಆಡಳಿತ ನಡೆಸುತ್ತದೆ ಎನ್ನುವುದು ಕಾದು ನೋಡೋಣ ಎಂದು ಹೇಳಿದರು.

ಇದನ್ನೂ ಓದಿ: ಜಮೀರ್ ಹಣಿಯಲು ‘ಸೈಲೆಂಟ್’ ಅಸ್ತ್ರ: ಸೈಲೆಂಟ್ ಸುನೀಲ್ ಮೂಲಕ ಸೋಲಿಸಲು ರಣತಂತ್ರ…!

ಸರಣಿ ಟ್ವೀಟ್ ಮೂಲಕ ಕಾಂಗ್ರೆಸ್ ವಾಗ್ದಾಳಿ

ಇನ್ನು ಈ ವಿಚಾರವಾಗಿ ಕಾಂಗ್ರೆಸ್ ಮತ್ತೆ ಬಿಜೆಪಿ ವಿರುದ್ಧ ಸರಣಿ ಟ್ವೀಟ್ ಮೂಲಕ ವಾಗ್ದಾಳಿ ಮಾಡಿದೆ. ರೌಡಿಗಳಿಗೂ ಬಿಜೆಪಿ ನಾಯಕರಿಗೂ ಏನು ಸಂಬಂಧ? ರೌಡಿಗಳಿಗೂ ಬಿಜೆಪಿಗೂ ಯಾವ ನಂಟು, ಏನು ವ್ಯವಹಾರ? ಎಂದು ಟ್ವೀಟ್​ ಮೂಲಕ ರಾಜ್ಯ ಕಾಂಗ್ರೆಸ್ ಘಟಕ ಬಿಜೆಪಿಗೆ ಪ್ರಶ್ನೆ ಮಾಡಿದೆ. ಈಗಾಗಲೇ ಸೈಲೆಂಟ್ ಸುನಿಲ್, ಫೈಟರ್ ರವಿ, ಬೆತ್ತನಗೆರೆ ಶಂಕರ ಮತ್ತಿತರರು ಬಿಜೆಪಿ ಜೊತೆ ಗುರುತಿಸಿಕೊಂಡಿದ್ದಾರೆ. ಆದ್ರೆ ಈಗ ವಿಲ್ಸನ್​ಗಾರ್ಡನ್​ ನಾಗ ಕೂಡ ನಿನ್ನೆ ರಾತ್ರಿ ಸಚಿವರ ಮನೆಗೆ ಭೇಟಿ ನೀಡಿದ್ದಾನೆ. ಸಚಿವ ವಿ.ಸೋಮಣ್ಣ ಮನೆಗೆ ರೌಡಿಶೀಟರ್​ ನಾಗ ಬಂದಿದ್ದೇಕೆ? ನಾಗನೂ ಬಿಜೆಪಿ ರೌಡಿ ಮೋರ್ಚಾ ಸೇರುವ ಸಂಭವವಿದೆಯೇ? ಎಂದು ಟ್ವೀಟ್ ಮೂಲಕ ಕಾಂಗ್ರೆಸ್​ ಟೀಕೆ ಮಾಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 2:56 pm, Thu, 1 December 22