ಸಿದ್ದರಾಮಯ್ಯ ಸಂಪುಟದಲ್ಲಿ ಲಂಬಾಣಿ ಶಾಸಕರಿಗಿಲ್ಲ ಸ್ಥಾನ: ಸರ್ದಾರ್ ಸೇವಾಲಾಲ್ ಸ್ವಾಮೀಜಿ ಆಕ್ರೋಶ
ಸಿದ್ದರಾಮಯ್ಯ ಸಂಪುಟದಲ್ಲಿ ಲಂಬಾಣಿ ಶಾಸಕರಿಗೆ ಸ್ಥಾನ ನೀಡದಿರುವ ಬಗ್ಗೆ ದಾವಣಗೆರೆ ನಗರದಲ್ಲಿ ಸರ್ದಾರ್ ಸೇವಲಾಲ್ ಸ್ವಾಮೀಜಿ ಆಕ್ರೋಶ ಹೊರಹಾಕಿದ್ದಾರೆ. ಯಾವುದೇ ಸರ್ಕಾರ ಬಂದರೂ ಲಂಬಾಣಿ ಶಾಸಕರಿಗೆ ಸ್ಥಾನ ನೀಡುತ್ತಿದ್ದರು. ಆದರೆ ಈಗ ಅವಕಾಶ ನೀಡದೇ ಸಂಪುಟ ರಚನೆ ಮಾಡಿದ್ದು ತಪ್ಪು ಎಂದರು.
ಬೆಂಗಳೂರು, ಅ.21: ಸಿದ್ದರಾಮಯ್ಯ (Siddaramaiah) ಸಂಪುಟದಲ್ಲಿ ಲಂಬಾಣಿ ಶಾಸಕರಿಗೆ ಸ್ಥಾನ ನೀಡದಿರುವ ಬಗ್ಗೆ ದಾವಣಗೆರೆ (Davanagere) ನಗರದಲ್ಲಿ ಸರ್ದಾರ್ ಸೇವಲಾಲ್ ಸ್ವಾಮೀಜಿ ಆಕ್ರೋಶ ಹೊರಹಾಕಿದ್ದಾರೆ. ಪ್ರತಿ ಸರ್ಕಾರದಲ್ಲಿ ಲಂಬಾಣಿಗೆ ಆದ್ಯತೆ ನೀಡಲಾಗಿತ್ತು. ಅದರೆ ಈಗ ಮಾತ್ರ ಅನ್ಯಾಯ ಆಗಿದೆ. ಕಾಟಾಚಾರಕ್ಕೆ ರುದ್ರಪ್ಪ ಅವರಿಗೆ ಲಮಾಣಿಗೆ ವಿಧಾನಸಭೆಯ ಉಪಾಧ್ಯಕ್ಷರನ್ನಾಗಿ ಮಾಡಲಾಗಿದೆ. ತಕ್ಷಣ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.
ಜಾತಿ ಜನಗಣತಿ ವರದಿ ಬಿಡುಗಡೆ ಬಗ್ಗೆ ಮಾತನಾಡಿದ ಅವರು, ಆದಷ್ಟು ಬೇಗ ಸರ್ಕಾರ ಜಾತಿ ಜನಗಣತಿ ವರದಿ ಬಹಿರಂಗಪಡಿಸಲಿ. ಜಾತಿ ಜನಗಣತಿಯಿಂದ ಪ್ರತಿಯೊಬ್ಬರಿಗೂ ನ್ಯಾಯ ಸಿಗಲಿದೆ ಎಂದರು.
ಇದನ್ನೂ ಓದಿ: ದಾವಣಗೆರೆಯಲ್ಲಿ ಘೋರ ದುರಂತ: ಗರಡಿ ಮನೆಯಲ್ಲೇ ಬಾಲಕಿ ಆತ್ಮಹತ್ಯೆ, ಕುಸ್ತಿಪಟು ಆಸೆ ನುಚ್ಚುನೂರು
ಮುಂಬರುವ ಲೋಕಸಭೆ ಚುನಾವಣೆ ವೇಳೆ ಚಿತ್ರದುರ್ಗ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರಕ್ಕೆ ಲಂಬಾಣಿಗಳಿಗೆ ಕಾಂಗ್ರೆಸ್ ಟಿಕೆಟ್ ನೀಡಬೇಕು. ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಲಂಬಾಣಿ ಸಮಾಜದವರನ್ನ ಉಪ ಕುಲಪತಿಗಳನ್ನಾಗಿ ನೇಮಕ ಮಾಡಬೇಕೆಂದು ಆಗ್ರಹಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ