ಇಂದಿಗೂ ಈ ಗ್ರಾಮಸ್ಥರ ನೆಮ್ಮದಿ ಆಳು ಮಾಡಿದೆ 30 ವರ್ಷದ ಹಿಂದಿನ ಅದೊಂದು ವ್ಯವಹಾರ

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಸೋಗಿಲು ಗ್ರಾಮದಲ್ಲಿ ರಸ್ತೆ ವಿವಾದದಿಂದ ಗ್ರಾಮಸ್ಥರ ನೆಮ್ಮದಿ ಹಾಳಾಗಿದೆ. ಕೆಲ ಜನರು ರಸ್ತೆ ತಡೆದು ಬೇಲಿ ಹಾಕಿದ್ದು, ಮಕ್ಕಳು ಶಾಲೆಗೆ ಹೋಗಲಾಗದೆ, ವೃದ್ಧರು ಓಡಾಡಲಾಗದೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದು, ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದಿಗೂ ಈ ಗ್ರಾಮಸ್ಥರ ನೆಮ್ಮದಿ ಆಳು ಮಾಡಿದೆ 30 ವರ್ಷದ ಹಿಂದಿನ ಅದೊಂದು ವ್ಯವಹಾರ
ರಸ್ತೆ ವಿವಾದ
Edited By:

Updated on: Nov 23, 2025 | 4:03 PM

ದಾವಣಗೆರೆ, ನವೆಂಬರ್​ 23: ಅದು ಪುಟ್ಟ ಕುಗ್ರಾಮ (village), ನೂರಾರು ವರ್ಷದಿಂದ ಅಲ್ಲಿರುವ ಜನರು ಅಣ್ಣ ತಮ್ಮಂದಿರಂತೆ ಬಾಳುತ್ತಿದ್ದಾರೆ. ಆದರೆ ಕಳೆದ 30 ವರ್ಷದ ಹಿಂದೆ ನಡೆದ ಒಂದು ವ್ಯವಹಾರ ಇಂದು ಆ ಗ್ರಾಮಸ್ಥರ ನೆಮ್ಮದಿಯನ್ನು ಆಳು ಮಾಡಿದೆ. ಕಾನೂನಾತ್ಮಕವಾಗಿ ಇತ್ಯರ್ಥ ಮಾಡಿಕೊಳ್ಳಲು ರೆಡಿ ಇದ್ದವರಿಗೆ, ಓಡಾಡಲು ರಸ್ತೆ (Road) ಇಲ್ಲದಂತಾಗಿದೆ. ನಮಗೆ ನ್ಯಾಯ ಕೊಡಿಸಿ ಅಂತಾ ಕಂಡ ಕಂಡವರನ್ನು ಕೈಮುಗಿದು ಬೇಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಷ್ಟಕ್ಕೂ ನಡೆದಿದ್ದಾದರೂ ಏನೆಂದು ತಿಳಿಯಲು ಮುಂದೆ ಓದಿ.

ರಸ್ತೆಗೆ ಬೇಲಿ

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಸೋಗಿಲು ಗ್ರಾಮದಲ್ಲಿ ಘಟನೆ ನಡೆದಿದೆ. ಓಡಾಡುವ ರಸ್ತೆ ನಮಗೆ ಸಂಬಂಧಪಟ್ಟಿದ್ದು ಎಂದು ಮಂಜಪ್ಪ, ಹಾಲೇಶ್, ಅಣ್ಣಪ್ಪ, ಹನಮಂತ, ಸುನೀಲ್ ಎನ್ನುವವರು ಓಡುವ ರಸ್ತೆಗೆ ಬೇಲಿ ಹಾಕಿದ್ದಾರಂತೆ. ಇದರಿಂದ ಗ್ರಾಮದಲ್ಲಿ ಮಹಿಳೆಯರು, ಮಕ್ಕಳು, ವೃದ್ಧರು ಓಡಾಡುವುದು ದುಸ್ತರವಾಗಿದೆ.

ಇದನ್ನೂ ಓದಿ: ದಾವಣಗೆರೆ: ಹರಿಹರದ ಮನೆಯಲ್ಲಿ ಟೈಲ್ಸ್ ಕೆಳಗೆ ನಿಗೂಢ ಶಾಖ! ಬೆಚ್ಚಿಬಿದ್ದ ಮನೆ ಮಂದಿ

ಮಕ್ಕಳು ಶಾಲೆಗೆ ಹೋಗಲು ಆಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕೇಳುವುದಕ್ಕೆ ಹೋದರೆ ರಸ್ತೆ ನಮ್ಮದು, ನೀವು ಸುಳ್ಳು ದಾಖಲೆ ತೋರಿಸಿ ನಮಗೆ ಯಾಮಾರಿಸುತ್ತಿದ್ದಿರಿ, ನಿಮಗೆ ಯಾರು ಕೊಟ್ಟಿದ್ದಾರೆ ಅವರನ್ನು ಕರೆದುಕೊಂಡು ಬನ್ನಿ ಎನ್ನುತ್ತಾರೆ. ಗ್ರಾಮದ ಎರಡು ಬದಿಯಲ್ಲಿ ತಗಡಿನ ಬೇಲಿ ಹಾಕಿದ್ದಾರಂತೆ, ಜನರು ಅಕ್ಕಪಕ್ಕದ ಚರಂಡಿಯಲ್ಲಿ ದಾಟಿ ಹೋಗುತ್ತಿದ್ದಾರೆ. ನಮಗೆ ಓಡಾಡುವುದಕ್ಕೆ ದಾರಿ ಬೇಕು, ನ್ಯಾಯವಾಗಿ ಇದ್ದರೆ ಅವರು ತೆಗೆದುಕೊಳ್ಳಲಿ ಎಂದು ಗ್ರಾಮಸ್ಥರಾದ ಕಮಲಮ್ಮ ಅವರು ಹೇಳಿದ್ದಾರೆ.

ಏನಿದು ಬೇಲಿ ವಿವಾದ?

ಇದು 1992 ರಿಂದ ಹಂತಹಂತವಾಗಿ 2002 ರವರೆಗೆ ಸುಮಾರು 14 ಕುಟುಂಬದವರು ಕ್ರಮೇಣ, ಭೂಮಿಯನ್ನು ಖರೀದಿ ಮಾಡಿದ್ದಾರೆ. ಕ್ರಯಾ ಪತ್ರ ಸಹ ಇದೆ. ಗ್ರಾಮ ಪಂಚಾಯತ್ ವತಿಯಿಂದ ಮನೆ ಸೇರಿದಂತೆ ಮೂಲಭೂತ ಸೌಕರ್ಯ ನೀಡಲಾಗಿದೆ. ಆದರೆ ಈಗ ಅದಕ್ಕೆ ತೊಡಕು ಎದುರಾಗಿದೆ. ಒತ್ತುವರಿ ಮಾಡಿಕೊಂಡಿದ್ದಿರಾ ಎಂದು ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪ ಮಾಡುತ್ತಿದ್ದಾರೆ.

ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಒಬ್ಬರ ಮೇಲೊಬ್ಬರು ಆರೋಪ ಮಾಡಿ ಪಲಾಯನ ಮಾಡುವ ಕೆಲಸ ಮಾಡುತ್ತಿದ್ದಾರಂತೆ. ಗ್ರಾಮ ಪಂಚಾಯತ್ ಸಹ ಮಧ್ಯಸ್ಥಿಕೆ ವಹಿಸಿ ರಸ್ತೆ ಅಳತೆ ಮಾಡಿಸೋಣ ಎಂದರೆ ಅದಕ್ಕೆ ಒಪ್ಪುತ್ತಿಲ್ಲವಂತೆ. ಅಳತೆ ಆಗದೆ ತಿರ್ಮಾನ ಮಾಡೋಣ ಎಂದು ಕರೆಯುತ್ತಾರಂತೆ, ಅಳತೆ ಮಾಡಲು ಬೀಡದೆ, ಜನರಿಗೆ ಓಡಾಡಲು ದಾರಿಯನ್ನು ಕೊಡದೆ ಸಮಸ್ಯೆ ಉದ್ಭವ ಆಗುವಂತೆ ಮಾಡುತ್ತಿದ್ದಾರಂತೆ.

ಇದನ್ನೂ ಓದಿ: ಕೋರ್ಟ್​​ನಲ್ಲೇ ಕಂಕಣಬಲ: 2 ವರ್ಷಗಳಲ್ಲಿ ಒಂದಾಯ್ತು ಒಡೆದು ಹೋದ 180 ಸಂಸಾರ, ಏಕಕಾಲದಲ್ಲಿ ಒಂದಾದ 8 ಜೋಡಿ

ಈ ಎಲ್ಲದರಿಂದ ರೋಸಿ ಹೋದ ಗ್ರಾಮಸ್ಥರು ಈ ಹಿಂದೆ ಕೋರ್ಟ್ ಮೆಟ್ಟಿಲೇರಿದ್ದರಂತೆ. ಈ ವೇಳೆ ತಾವೇ ಕೇಸ್ ಹಿಂಪಡೆದಿದ್ದರಂತೆ. ಈಗ ಮತ್ತೆ ಹಳೆ ವರಸೆ ಆರಂಭಿಸಿದ್ದಾರೆ. ಇದರಿಂದ ಸುಮಾರು 15 ಕುಟುಂಬಗಳಿಗೆ ಸಂಕಷ್ಟ ಎದುರಾಗಿದೆ.

ಒಟ್ಟಾರೆ ಈ ಗ್ರಾಮದ ಜಾಗದ ವಿವಾದ ಸಂಬಂಧ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದು, ಇನ್ನಾದರೂ ಎಚ್ಚೆತ್ತು ಸಮಸ್ಯೆ ಇತ್ಯರ್ಥ ಮಾಡಲು ಮುಂದಾಗುತ್ತಾರಾ ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:53 pm, Sun, 23 November 25