ದುರ್ಗಾಂಬಾ ದೇವಸ್ಥಾನದ ಗಂಟೆಗಳೇ ನ್ಯಾಯ ಪಂಚಾಯಿತಿ ಸಂಕೇತ; ಇಂದಿಗೂ ಪುರಾಣ ಪ್ರಸಿದ್ಧ ಸನ್ನಿವೇಶಗಳು ಜೀವಂತ

ಕರಿ ಕಲ್ಲು ಬಿದ್ದ ಸ್ಥಳದಲ್ಲಿಯೇ ನನಗೆ ದೇವಸ್ಥಾನ ಕಟ್ಟು ಎಂದು ಬಳೆಗಾರನಿಗೆ ಕನಸಿನಲ್ಲಿ ಬಂದು ದೇವಿ ಹೇಳಿದಳಂತೆ. ಹೀಗಾಗಿ ಇಂದು ಸುಕ್ಷೇತ್ರ ದುರ್ಗಾಂಭಿಕಾ ದೇವಸ್ಥಾನವಾಗಿ ಇಲ್ಲಿ ನಿರ್ಮಾಣವಾಗಿದೆ.

ದುರ್ಗಾಂಬಾ ದೇವಸ್ಥಾನದ ಗಂಟೆಗಳೇ ನ್ಯಾಯ ಪಂಚಾಯಿತಿ ಸಂಕೇತ; ಇಂದಿಗೂ ಪುರಾಣ ಪ್ರಸಿದ್ಧ ಸನ್ನಿವೇಶಗಳು ಜೀವಂತ
ದುರ್ಗಾಂಬಿಕ ದೇವಸ್ಥಾನ
Follow us
TV9 Web
| Updated By: preethi shettigar

Updated on: Aug 17, 2021 | 8:49 AM

ದಾವಣಗೆರೆ: ಪುರಾತನ ಕಾಲದ ಅನೇಕ ಘಟನೆಗಳು, ಸನ್ನಿವೇಶಗಳು, ನಡೆದ ಪವಾಡಗಳು ಇಂದಿಗೂ ನಮ್ಮನ್ನು ಕಾಡುತ್ತಿದೆ. ಅಂತೆಯೇ ದಾವಣಗೆರೆಯಲ್ಲಿ ಶತಮಾನಗಳ ಹಿಂದೆ ನಡೆದ ಒಂದು ಪವಾಡ ಜನರೊಂದಿಗೆ ಇಂದು ಅಚ್ಚಳಿಯದೆಯೇ ಉಳಿದಿದೆ. ಅದೇ ದುರ್ಗಮ್ಮ ದೇವಿಯ ಮಹಿಮೆ. ಕರಿ ಕಲ್ಲು ರೂಪದಲ್ಲಿ ಸಿಕ್ಕ ದೇವಿ ಜಿಲ್ಲೆಯ ಹತ್ತಾರು ಸಮಸ್ಯೆಗಳಿಗೆ ಮುಕ್ತಿ ನೀಡಿದ್ದಾಳೆ. ಹಾಗಿದ್ದರೆ ಏನು ಈ ಕರಿ ಕಲ್ಲಿನ ದೇವಿ ಮಹಿಮೆ ಎಂದು ಪ್ರಶ್ನಿಸುವವರಿಗೆ ಇಲ್ಲಿದೆ ಉತ್ತರ.

ಶತಮಾನಗಳ ಹಿಂದಿನ ಸನ್ನಿವೇಶ ಆಗ ಬರಗಾಲದಿಂದ ಜನ ತತ್ತರಿಸಿದ್ದರು. ಮೇಲಾಗಿ ಪ್ಲೇಗ್ ರೋಗದಿಂದ ಸಾವಿರಾರು ಜನ ಸಾವನ್ನುಪ್ಪುತ್ತಿದ್ದರು. ಬಹುತೇಕ ಕಡೆ ಸಾವಿನ ಭಯದಿಂದ ಗ್ರಾಮಗಳನ್ನು ಬಿಟ್ಟು ಹೋಗುತ್ತಿದ್ದರು. ಕಾರಣ ಅಕ್ಕ ಪಕ್ಕದ ಮನೆಯಲ್ಲಿ ದಿನ ಬೆಳಗಾದರೆ ಸಾವಿನ ಸುದ್ದಿ. ಇನ್ನೊಂದು ಕಡೆ ಸಕಾಲಕ್ಕೆ ಮಳೆಯಾಗದೇ ಭೀಕರ ಬರ. ಇಂತಹ ಪರಿಸ್ಥಿತಿಯಲ್ಲಿ ಬಳೆಗಾರ, ಕುಂಬಾರ, ಕಂಬಾರ, ಕ್ಷರೀಕ, ಹೂಗಾರ, ಸಮಗಾರ ಹೀಗೆ ಆಯಗಾರ ಸಮಾಜಗಳು ತೀವ್ರ ಸಂಕಷ್ಟದಲ್ಲಿದ್ದವು.

ಬಳೆಗಾರನಿಗೆ ತಂದ ಭಾಗ್ಯ ಈ ಸಮಾಜಗಳಿಗೆ ಸ್ವಂತ ಜಮೀನು ಇರುವುದು ಕಡಿಮೆ. ಆದರೆ ರೈತರೇ ಇವರ ಆಸರೆ. ಹೀಗಾಗಿ ರೈತರಿಗಿಂತ ಹೆಚ್ಚಾಗಿ ಈ ಸಮಾಜದವರೆ ಮಳೆ ಆಗಲಿ ಎಂದು ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಹೀಗೆ ಬಳೆಗಾರ ಸಾಯಿಬಣ್ಣ ಎಂಬಂತಾ ಹಳ್ಳಿ ಹಳ್ಳಿ ತಿರುಗಾಡಿ ಬಳೆ ಮಾರಾಟ ಮಾಡುತ್ತಿದ್ದ. ನಿತ್ಯ ಹತ್ತಾರು ಕಿಲೋ ಮೀಟರ್ ಕಾಲು ನಡಿಗೆಯಲ್ಲಿ ಸುತ್ತುತ್ತಿದ್ದ. ಹೀಗೆ ಒಂದು ದಿನ ಇಡಿ ದಿನ ಸುತ್ತಾಡಿದರು ಒಂದು ಬಿಡಿಗಾಸು ಸಿಗಲಿಲ್ಲ. ಸುಸ್ತಾಗಿ ಒಂದು ಮರದ ಕೆಳಗೆ ಕುಳಿತಿದ್ದ. ಅಲ್ಲೊಂದು ಕಲ್ಲು ಇತ್ತು. ಆದು ಆತನಿಗೆ ಆಕರ್ಷಕವಾಗಿ ಕಂಡಿತ್ತು. ಹೀಗೆ ಆಕರ್ಷಕವಾಗಿ ಕಂಡ ಕಲ್ಲಿಗೆ ಕೈ ಮುಗಿದು ನನ್ನ ಬಳೆಗಳು ವ್ಯಾಪಾರ ಚೆನ್ನಾಗಿ ಆದರೆ ನಿನಗೆ ಐದು ಬಳೆ ಅರ್ಪಿಸುವೇ ಎಂದು ಹೇಳಿದರು. ಹೀಗೆ ಹೋದ ಬಳಿಗಾರ ತನ್ನೆಲ್ಲಾ ಬಳೆಗಳನ್ನು ಮಾರಾಟ ಮಾಡುತ್ತಾನೆ.

ಆಗ ಜನ ದುಡ್ಡು ಕೊಡುತ್ತಿರಲಿಲ್ಲ. ದವಸ-ಧಾನ್ಯಗಳನ್ನು ಕೊಡುತ್ತಿದ್ದರು. ಹೀಗಾಗಿ ಇದನ್ನು ತೆಗೆದುಕೊಂಡು ಹೋಗುವುದು ಕಷ್ಟವಾಗುತ್ತದೆ ಎಂದು ಒಂದು ಚಕ್ಕಡಿ ಗೊತ್ತು ಮಾಡಿ ಆ ಚಕ್ಕಡಿಯಲ್ಲಿ ಜನ ಕೊಟ್ಟ ಕಾಳು ಕಡಿ ಹಾಕಿಕೊಂಡು ಬರುತ್ತಾರೆ. ಹೀಗೆ ಬರುವಾಗ ತಾನು ಬೇಡಿಕೊಂಡ ಕರಿ ಕಲ್ಲು ಸಹ ಎತ್ತಿಕೊಂಡು ಚಕ್ಕಡಿಯಲ್ಲಿ ಇಟ್ಟುಕೊಳ್ಳುತ್ತಾನೆ. ಕರಿ ಕಲ್ಲು ಮತ್ತು ಕಾಳು ಕಡಿ ಹೊತ್ತು ಹೊಂಡ ಚಕ್ಕಡಿ ಸುಮಾರು 26 ಕಿಲೋ ಮೀಟರ್ ಸಂಚರಿಸುತ್ತದೆ. ಒಂದು ನಿಗದಿತ ಸ್ಥಳಕ್ಕೆ ಬಂದ ಮೇಲೆ ಚಕ್ಕಡಿ ಕಳಚಿಕೊಂಡು ಮುರಿದು ಬಿಳುತ್ತದೆ. ಮುಂದೆ ಹೋಗದ ಸ್ಥಿತಿಯಲ್ಲಿ ಮುರಿಯುತ್ತದೆ. ಇದೇ ವೇಳೆ ಚಕ್ಕಡಿಯಲ್ಲಿನ ಕರಿ ಕಲ್ಲು ಸಹ ಬಿಳುತ್ತದೆ. ಈ ಕರಿ ಕಲ್ಲು ಬಿದ್ದ ಸ್ಥಳದಲ್ಲಿಯೇ ನನಗೆ ದೇವಸ್ಥಾನ ಕಟ್ಟು ಎಂದು ಬಳೆಗಾರನಿಗೆ ಕನಸಿನಲ್ಲಿ ಬಂದು ದೇವಿ ಹೇಳಿದಳಂತೆ. ಹೀಗಾಗಿ ಇಂದು ಸುಕ್ಷೇತ್ರ ದುರ್ಗಾಂಭಿಕಾ ದೇವಸ್ಥಾನವಾಗಿ ಇಲ್ಲಿ ನಿರ್ಮಾಣವಾಗಿದೆ.

ದುರ್ಗಮ್ಮ ದೇವಿಯ ಮಹಿಮೆ ಇನ್ನೇರಡು ತಿಂಗಳಿಗೆ ಈ ಸುಕ್ಷೇತ್ರ ಬೆಳಕಿಗೆ ಒಂದು ಶತಮಾನವಾಗುತ್ತದೆ. ವಾಣಿಜ್ಯ ನಗರಿ ದಾವಣಗೆರೆಯಲ್ಲಿ ದುರ್ಗಮ್ಮ ದೇವಿಯ ಮಹಿಮೆ ಹೇಳತೀರದು. ದುರ್ಗಮ್ಮ ಮೂಲತಃ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ದುಗ್ಗಾವತಿ ದುರ್ಗಮ್ಮ ಎಂದೇ ಪ್ರಸಿದ್ಧಿ. ಬಳೆಗಾರ ಸಾಯಿಬಣ್ಣ ದುಗ್ಗಾವತಿಗೆ ಬಳೆ ವ್ಯಾಪಾರಕ್ಕೆ ಹೋದಾಗ ಆತನಿಗೆ ಅಲ್ಲಿ ದೇವಿ ರೀತಿಯಲ್ಲಿ ಕಂಡ ಕರಿ ಕಲ್ಲು ದಾವಣಗೆರೆಗೆ ಚಕ್ಕಡಿಯಲ್ಲಿ ಇಟ್ಟುಕೊಂಡು ಬರುತ್ತಾನೆ. ಹೀಗೆ ತಂದ ಕಲ್ಲು ಈಗ ದೇವಸ್ಥಾನವಾಗಿದೆ.

ದೇವಿಯ ಗಂಟೆಯೇ ನ್ಯಾಯದೇವತೆ ಮೊದಲು ದುಗ್ಗಮ್ಮ ಎನ್ನಲಾಗುತ್ತಿತ್ತು. ನಂತರ ದುರ್ಗಾಂಬಾ ದೇವಿ ಎಂದು ಭಕ್ತರು ಹೆಸರಿನಲ್ಲಿ ಆಧುನೀಕತೆ ತಂದರು. ಈ ಕ್ಷೇತ್ರ ಬೆಳೆಯಲು ಇನ್ನೊಂದು ಕಾರಣ ಅಂದರೆ ಇಲ್ಲಿ ನಡೆಯುತ್ತಿರುವ ಪವಾಡಗಳು. ಮಳೆಯಾಗಲಿಲ್ಲ ಅಂತಾ ಜನರು ಸಂಕಷ್ಟ ಅನುಭವಿಸಿದವರು ದೇವಸ್ಥಾನದ ಅಂಗಳದಲ್ಲಿ ಐದು ಭಾನುವಾರ ಸಂತೆ ಮಾಡಿದರೇ ಮಳೆ ಪಕ್ಕಾ ಬಂದೇ ಬರುತ್ತದೆ. ಮಕ್ಕಳಾಗಲಿಲ್ಲ ಎಂದು ಹರಕೆ ಹೊತ್ತರೇ ಅಂತಹ ಬಹುತೇಕರಿಗೆ ಸಂತಾನ ಭಾಗ್ಯ ಪ್ರಾಪ್ತಿಯಾಗಿದೆ. ಮೇಲಾಗಿ ದಾವಣಗೆರೆ ಬಹುತೇಕ ವ್ಯಾಜ್ಯಗಳು ನಡೆದರೇ ದೇವಿಯ ಗಂಟೆಯೇ ನ್ಯಾಯದೇವತೆ ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ.

temple

ದುರ್ಗಾಂಬಿಕ ದೇವಸ್ಥಾನದ

ಎರಡು ಕಡೆಯವರು ನನ್ನದೇ ಸತ್ಯ ಅಂತಾ ಗಂಟೆ ಬಡಿಯುತ್ತಾರೆ. ಹೀಗೆ ಬಡಿದ ಬಳಿಕ ತಪ್ಪು ಮಾಡಿದವರಿಗೆ ಶಿಕ್ಷೆ ಖಂಡಿತಾ ಆಗುತ್ತದೆ. ಇದೇ ಕಾರಣಕ್ಕೆ ದುರ್ಗಾಂಬಾ ದೇವಿಯ ಕ್ಷೇತ್ರ ದೇಶ ವಿದೇಶದಲ್ಲಿ ಖ್ಯಾತಿಗಳಿಸಿದೆ. ಎರಡು ವರ್ಷಕ್ಕೊಮ್ಮೆ ದೇಶದಲ್ಲಿ ವಿಶೇಷವಾದ ಜಾತ್ರೆ ಇಲ್ಲಿ ನಡೆಯುತ್ತದೆ. ಇಲ್ಲಿ ಬೆಳಿಗ್ಗೆ ಎರಡು ಗಂಟೆಯಿಂದ ಹರಕೆ ತಿರಿಸುವುದು ಸಂಪ್ರದಾಯವಾಗಿ ಬೆಳೆದುಕೊಂಡು ಬಂದಿದೆ ಎನ್ನುತ್ತಾರೆ ಇಲ್ಲಿನ ಗ್ರಾಮಸ್ಥರು.

ವರದಿ: ಬಸವರಾಜ್ ದೊಡ್ಮನಿ

ಇದನ್ನೂ ಓದಿ: ಉಜ್ಜೈನ್ ದೇವಾಲಯದಲ್ಲಿ ಕೊವಿಡ್ ಮಾನದಂಡ ಉಲ್ಲಂಘನೆ; ಕಾಲ್ತುಳಿತದಲ್ಲಿ ಹಲವರಿಗೆ ಗಾಯ

Ramappa Temple ಯುನೆಸ್ಕೊ ವಿಶ್ವ ಪಾರಂಪರಿಕ ತಾಣ ಪಟ್ಟಿಯಲ್ಲಿ ತೆಲಂಗಾಣದ ರಾಮಪ್ಪ ದೇವಾಲಯ; ಪ್ರಧಾನಿ ಮೋದಿ ಅಭಿನಂದನೆ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ