ದಾವಣಗೆರೆ: ಕೋಡಿ ಹರಿದ ಐತಿಹಾಸಿಕ ಸೂಳೆಕೆರೆ; ದಶಕಗಳ ಬಳಿಕ ಸಂಭ್ರಮ
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕೆರೆಬಿಳಚಿ ಗ್ರಾಮದ ಬಳಿ ಇರುವ ಸೂಳೆಕೆರೆ ಕೋಡಿ ಹರಿದಿದೆ. ಕಳೆದ ಐದು ದಿನಗಳಿಂದ ಸುರಿದ ಮಳೆಗೆ ಭರ್ತಿಯಾಗಿ ಸೂಳೆಕೆರೆ ಕೊಡಿ ಬಿದ್ದಿದೆ. ಸೂಳೆಕೆರೆ ಭರ್ತಿಯಾಗಿದ್ದನ್ನು ನೋಡಲು ಜನ ಭೇಟಿ ನೀಡುತ್ತಿದ್ದಾರೆ.
ದಾವಣಗೆರೆ: ಐತಿಹಾಸಿಕ ಸೂಳೆಕೆರೆ ಕೋಡಿ ಹರಿದಿದೆ. ದಶಕಗಳ ಬಳಿಕ ಸೂಳೆಕೆರೆ ಅಂಗಳದಲ್ಲಿ ಸಂಭ್ರಮ ಮನೆಮಾಡಿದೆ. ಸೂಳೆಕೆರೆ ಕೋಡಿ ಹರಿದಿದೆ. ಸಾವಿರಾರು ಎಕರೆ ಪ್ರದೇಶದಲ್ಲಿ ಜಲರಾಶಿ ಹರಡಿಕೊಂಡಿದೆ. ಏಷ್ಯಾದಲ್ಲಿ ಅತಿ ದೊಡ್ಡ ಎಂಬ ಖ್ಯಾತ ಗಳಿಸಿದ ಸೂಳೆಕೆರೆ ಕೋಡಿ ಹರಿದಿದೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕೆರೆಬಿಳಚಿ ಗ್ರಾಮದ ಬಳಿ ಇರುವ ಸೂಳೆಕೆರೆ ಕೋಡಿ ಹರಿದಿದೆ. ಕಳೆದ ಐದು ದಿನಗಳಿಂದ ಸುರಿದ ಮಳೆಗೆ ಭರ್ತಿಯಾಗಿ ಸೂಳೆಕೆರೆ ಕೊಡಿ ಬಿದ್ದಿದೆ. ಸೂಳೆಕೆರೆ ಭರ್ತಿಯಾಗಿದ್ದನ್ನು ನೋಡಲು ಜನ ಭೇಟಿ ನೀಡುತ್ತಿದ್ದಾರೆ.
ಬೆಂಗಳೂರು: ಸಂಪೂರ್ಣ ಕೆರೆಯಂತಾದ ಜಕ್ಕೂರು ಬಳಿಯ ಜವಾಹರ್‌ಲಾಲ್ ನೆಹರು ವೈಜ್ಞಾನಿಕ ಸಂಶೋಧನಾ ಕೇಂದ್ರ ಬೆಂಗಳೂರಿನ ಜಕ್ಕೂರು ಬಳಿ ಇರುವ ಜವಾಹರ್‌ಲಾಲ್ ನೆಹರು ವೈಜ್ಞಾನಿಕ ಸಂಶೋಧನಾ ಕೇಂದ್ರ (JNCASR ಕ್ಯಾಂಪಸ್) ಮಳೆಯಿಂದ ಸಂಪೂರ್ಣ ಕೆರೆಯಂತಾಗಿದೆ. ನೀರು ನುಗ್ಗಿದ ಕಾರಣ ಆಡಳಿತ ಮಂಡಳಿ, ವಿದ್ಯಾರ್ಥಿಗಳು ಪರದಾಟ ಪಟ್ಟಿದ್ದಾರೆ. ಗೇಟ್ ಬಳಿ ಲೋಡ್ ಗಟ್ಟಲೆ ಮಣ್ಣು ಸುರಿದರೂ ಕ್ಯಾಂಪಸ್ ಒಳಗೆ ನೀರು ನುಗ್ಗಿದೆ. 26 ಎಕೆರೆ ವಿಸ್ತೀರ್ಣದ ಕ್ಯಾಂಪಸ್ ಸಂಪೂರ್ಣ ಜಲಾವೃತಗೊಂಡಿದೆ. ಕ್ಯಾಂಪಸ್‌ನ ಪ್ರತಿಯೊಂದು ಕಟ್ಟಡಕ್ಕೂ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಸುತ್ತಮುತ್ತಲಿನ ಕೆರೆಯ ನೀರು ಕ್ಯಾಂಪಸ್‌ಗೆ ನುಗ್ಗಿ ಅವಾಂತರ ಉಂಟಾಗಿದೆ. ಕಟ್ಟಡಗಳಲ್ಲಿದ್ದ ಪೀಠೋಪಕರಣ, ಕಂಪ್ಯೂಟರ್‌ಗಳಿಗೆ ಹಾನಿ ಆಗಿದೆ.
ಬೋಟ್ ಮೂಲಕ ಕ್ಯಾಂಪಸ್ ನಲ್ಲಿ ಸಿಬ್ಬಂದಿಗಳ ಓಡಾಟ ಸಾಗಿದೆ. ಟೀ, ಕಾಫೀ, ತಿಂಡಿ ಸರಬರಾಜಿಗೆ ಬೋಟ್ ಆಧಾರವಾಗಿದೆ. ಮೊಣಕಾಲು ಮುಳುಗುವಷ್ಟು ನೀರು ತುಂಬಿದೆ. ಸಂಜೆ ವೇಳೆಗೆ ನೀರಿನ ಹರಿವು ಹೆಚ್ಚಾಗಿದೆ. ಸುಮಾರು 44 ಎಕರೆಯುಳ್ಳ ಜಕ್ಕೂರು ಕೆರೆ ಕೋಡಿ ಬಿದ್ದಿದೆ. ಜಕ್ಕೂರು ಕೆರೆಯಿಂದ ಬಂದ ನೀರು ರಾಚೇನಹಳ್ಳಿ ಕೆರೆಗೆ ಹೋಗ್ಬೇಕು. ಆದರೆ, ಸಂಶೋಧನಾ ಕೇಂದ್ರದಲ್ಲೇ ನೀರು ನಿಂತಿದೆ. ಲ್ಯಾಬ್ ಒಳಗೆ ನೀರು ನುಗ್ಗಿ ಸಾಕಷ್ಟು ಹಾನಿ ಆಗಿದೆ. ಲಕ್ಷಾಂತರ ರೂಪಾಯಿ ಬೆಲೆಯ ಸಾಮಾಗ್ರಿಗಳು ನೀರು ಪಾಲು ಆಗಿದೆ. ಸುಮಾರು 400ಕ್ಕೂ ಹೆಚ್ಚು ಸಿಬ್ಬಂದಿಗಳು, ನೂರಾರು ಸಂಶೋಧನಾ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ಇದೇ ಮೊದಲ ಬಾರಿಗೆ ಇಷ್ಟು ಪ್ರಮಾಣದ ನೀರು ಹರಿದು ಬಂದಿದೆ.
ಕೇಂದ್ರೀಯ ವಿಹಾರ್ ಅಪಾರ್ಟ್ಮೆಂಟ್ನಲ್ಲಿ ನೀರಿನ ಪ್ರಮಾಣ ಕೊಂಚ ಇಳಿಕೆ ಆಗಿದೆ. ಸಂಜೆ ಆಗ್ತಿದ್ದಂತೆ ನೀರಿನ ಮಟ್ಟದಲ್ಲಿ ಇಳಿಕೆ ಆಗಿದೆ. ಹೀಗಿದ್ರೂ ಸಂಪೂರ್ಣವಾಗಿ ನೀರು ಖಾಲಿಯಾಗಲು ಎರಡು ದಿನ ಬೇಕು ಎಂದು ಹೇಳಲಾಗಿದೆ. ಈ ನಡುವೆ ಕೆಲ ಕುಟುಂಬಗಳು ಮನೆಗಳಿಂದ ಸಂಬಂಧಿಕರ ಮನೆಗೆ ಸ್ಥಳಾಂತರಗೊಂಡಿದ್ದಾರೆ. ರಾತ್ರಿ ಮಳೆಯಾದ್ರೆ ಮತ್ತೆ ನೀರು ಹೆಚ್ಚಾಗುವ ಆತಂಕ ಇದೆ. ಹೀಗಾಗಿ ಮನೆಗಳಿಗೆ ಬೀಗ ಹಾಕಿ ಕೆಲವ್ರು ತೆರಳುತ್ತಿದ್ದಾರೆ.
ಟಾಟಾ ನಗರದ ಸುತ್ತಮುತ್ತಲಿನ ಪ್ರದೇಶಗಳು ಸಣ್ಣ ಗುಂಡಿಗಳಂತಾಗಿದೆ. ಮನೆಯೊಳಗೆಲ್ಲ ನೀರು ನುಗ್ಗಿದೆ. ಮನೆಯ ಮುಂದೆ ಕೆರೆಯಂತೆ ನೀರು ತುಂಬಿಕೊಂಡಿದೆ. ಕಾಂಪೌಂಡ್ ಒಳಗೆ ನೀರು ನುಗ್ಗಿದೆ. ರಸ್ತೆಯಿಂದ ಸ್ವಲ್ಪ ತಗ್ಗು ಪ್ರದೇಶದಲ್ಲಿ ಇರುವ ಕಾರಣ ಕೆರೆ ನೀರು ಸ್ವಿಮ್ಮಿಂಗ್ ಫೂಲ್ನಂತೆ ಆವಾರಿಸಿಕೊಂಡಿದೆ.
ಇದನ್ನೂ ಓದಿ: ಕಾರ್ತಿಕ ಮುಗಿಯುವವರೆಗೂ ಮಳೆ ನಿಲ್ಲೋದಿಲ್ಲ ಎಂದು ಭವಿಷ್ಯ ನುಡಿದ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ಸ್ವಾಮೀಜಿ
ಇದನ್ನೂ ಓದಿ: ಮಳೆಯಿಂದ ಹಾನಿ: 24 ಗಂಟೆಯಲ್ಲೇ ರೈತರಿಗೆ ಪರಿಹಾರ ನೀಡಲು ಬಸವರಾಜ ಬೊಮ್ಮಾಯಿ ಸೂಚನೆ