ಕಾರ್ತಿಕ ಮುಗಿಯುವವರೆಗೂ ಮಳೆ ನಿಲ್ಲೋದಿಲ್ಲ ಎಂದು ಭವಿಷ್ಯ ನುಡಿದ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ಸ್ವಾಮೀಜಿ

ರಾಜ್ಯದಲ್ಲಿ ಇನ್ನೂ ಇದೆ ಮಳೆ ಕಾಟ. ಕಾರ್ತಿಕ ಮುಗಿಯುವವರೆಗೂ ಮಳೆ ನಿಲ್ಲೋದಿಲ್ಲ ಎಂದು ಧಾರವಾಡದಲ್ಲಿ ಕೋಡಿಮಠದ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಇನ್ನು ಮಳೆ ಹೆಚ್ಚಾಗುವ ಲಕ್ಷಣ ಇದೆ. ಕಾರ್ತಿಕ ಕಳೆಯುವವರೆಗೂ ಮಳೆ ಇರುತ್ತದೆ. -ಕೋಡಿಮಠದ ಸ್ವಾಮೀಜಿ ಭವಿಷ್ಯ

ಕಾರ್ತಿಕ ಮುಗಿಯುವವರೆಗೂ ಮಳೆ ನಿಲ್ಲೋದಿಲ್ಲ ಎಂದು ಭವಿಷ್ಯ ನುಡಿದ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ಸ್ವಾಮೀಜಿ
ಕೋಡಿಮಠದ ಡಾ. ಶಿವಾನಂದ ಶಿವಯೋಗಿ ಸ್ವಾಮೀಜಿ

ಧಾರವಾಡ: ತಮ್ಮ ಭವಿಷ್ಯ ವಾಣಿಯಿಂದ ಹೆಸರುವಾಸಿಯಾಗಿರುವ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ಸ್ವಾಮೀಜಿ ಮತ್ತೊಮ್ಮೆ ಭವಿಷ್ಯ ನುಡಿದಿದ್ದಾರೆ. ರಾಜ್ಯದಲ್ಲಿ ಎದುರಾಗಿರುವ ವರುಣನ ಅಬ್ಬರದ ಬಗ್ಗೆ ಭವಿಷ್ಯ ನುಡಿದಿದ್ದಾರೆ.

ರಾಜ್ಯದಲ್ಲಿ ಇನ್ನೂ ಇದೆ ಮಳೆ ಕಾಟ. ಕಾರ್ತಿಕ ಮುಗಿಯುವವರೆಗೂ ಮಳೆ ನಿಲ್ಲೋದಿಲ್ಲ ಎಂದು ಧಾರವಾಡದಲ್ಲಿ ಕೋಡಿಮಠದ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಇನ್ನು ಮಳೆ ಹೆಚ್ಚಾಗುವ ಲಕ್ಷಣ ಇದೆ. ಕಾರ್ತಿಕ ಕಳೆಯುವವರೆಗೂ ಮಳೆ ಇರುತ್ತದೆ. ಸದ್ಯ ಪ್ರಕೃತಿ ವಿಕೋಪ ಆಗಿದೆ. ಏನೂ ಮಾಡಲು ಆಗುವುದಿಲ್ಲ. ಅನಾಹುತಗಳು ಹೆಚ್ಚಾಗುವ ಸಾಧ್ಯತೆ ಇದೆ. ಸಂಕ್ರಾಂತಿವರೆಗೂ ಮಳೆ ಇರುತ್ತೆ ಎಂದು ಭವಿಷ್ಯ ನುಡಿದಿದ್ದಾರೆ. ಆದ್ರೆ ರಾಜಕೀಯ ಭವಿಷ್ಯ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ರು.

ಇನ್ನು ಈ ಹಿಂದೆ ಮುಂದಿನ ಕಾರ್ತಿಕ ಮಾಸದವರೆಗೆ ಜಲಗಂಡಾತರ ಇದೆ. ಕೊರೊನಾ ಇನ್ನೂ ಹೆಚ್ಚಾಗಲಿದೆ. ಆದಾಗ್ಯೂ ದೈವ ಕೃಪೆಯಿಂದ ಒಳ್ಳೆಯ ದಿನಗಳು ಬರಲಿವೆ ಎಂದು ಕೋಡಿ ಮಠದ ಶ್ರೀ ಶಿವಾನಂದ ಶ್ರೀಗಳು ಭವಿಷ್ಯ ನುಡಿದಿದ್ದರು.

ಅಶುಭ ನುಡಿಗಳು ಈಗ ಬೇಡ. ಕುಂಭದಲ್ಲಿ ಗುರುಗ್ರಹ ಅಂದ್ರೆ ತುಂಬುವವು ಕೆರೆ ಕಟ್ಟೆ. ಜಲಗಂಡಾಂತರ ಇನ್ನೂ ಇದೆ. ನೂತನ‌ ಸಿಎಂ ಬಗ್ಗೆ ಈಗಲೇ ಏನನ್ನು ಹೇಳಬಾರದು. ಏನನ್ನು ಅಶುಭ ನುಡಿಯಬಾರದು. ಕಾರ್ತಿಕ ಮಾಸ ಕಳೆದ ನಂತರ ಹೇಳುತ್ತೇನೆ ಎಂದು ಕೋಲಾರ ತಾಲ್ಲೂಕು ಲಕ್ಷ್ಮೀಸಾಗರ ಗ್ರಾಮದಲ್ಲಿ ಕೋಡಿ ಮಠದ ಶ್ರೀ ಶಿವಾನಂದ ಶ್ರೀಗಳು ಹೇಳಿದ್ದರು.

ಇದನ್ನೂ ಓದಿ: ಪತ್ನಿಯೊಂದಿಗೆ ವಿಶ್ವ ಪರ್ಯಟನೆಗೆ ಹೆಸರುವಾಸಿಯಾಗಿದ್ದ ಕೇರಳದ ಟೀ ಮಾರಾಟಗಾರ ನಿಧನ

Click on your DTH Provider to Add TV9 Kannada